• ಮುಖಪುಟ
  • ವಿದ್ಯಮಾನ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರರಾಷ್ಟ್ರೀಯ
    • ಇತರೆ ವಿದ್ಯಮಾನ
  • ವಿಶ್ಲೇಷಣೆ
    • ರಾಜಕೀಯ
    • ಆರ್ಥಿಕ
    • ವಿಜ್ಞಾನ ತಂತ್ರಜ್ಞಾನ
    • ಸಾಮಾಜಿಕ
    • ಸಾಂಸ್ಕೃತಿಕ
    • ಇತರೆ – ವಿಶ್ಲೇಷಣೆ
  • ಜನಧ್ವನಿ
  • ಸಾಹಿತ್ಯ-ಕಲೆ
    • ಕಥೆ – ಕವನ
    • ಸಿನಿಮಾ
    • ಪುಸ್ತಕ
    • ರಂಗಭೂಮಿ
    • ಸರಣಿ ಬರಹ
    • ಸಂದರ್ಶನ
  • ವೈವಿಧ್ಯ
    • ಚರಿತ್ರೆ
    • ವಿಡಂಬನೆ
    • ಕಾರ್ಟೂನ್ Speaks
    • ಮಾತೆಂದರೆ ಇದು
    • ಸಂಗ್ರಹ
    • ಅಭಿಪ್ರಾಯ
    • ವೈರಲ್
    • ಇವತ್ತಿನ ಟ್ವೀಟ್
  • ಕ್ರೈಂ
  • ಪ್ರವಾಸೋದ್ಯಮ
  • ಇಂಪ್ಯಾಕ್ಟ್
  • ವೀಡಿಯೊ

ಕಾರ್ಟೂನ್ ಕಾಲಂ

by ಗೋಪನಹಳ್ಳಿಶಿವಣ್ಣ | Nov 9, 2022 | ಕಾರ್ಟೂನ್ Speaks

ಕೊರ್ಲಕುಂಟೆದಯಾನಂದ್...


ಪರಿಶಿಷ್ಟ ಜಾತಿಯಲ್ಲಿ ಪರಿಶಿಷ್ಟ ಪಂಗಡದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸೂಕ್ತ ಸಾಲ ಸೌಲಭ್ಯ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದು ಇದನ್ನು ನಾನು ಸಹಿಸುವುದಿಲ್ಲ ಬ್ಯಾಂಕ್ ಅಧಿಕಾರಿಗಳ ವಿರುದ್ದ ಶಾಸಕ ಟಿ.ರಘುಮೂರ್ತಿ ಗರಂ.

  • ದಾಖಲೆ ಇಲ್ಲದೆ 8 ಕೋಟಿ ಹಣ ಸಾಗಾಟ ಪೊಲೀಸ್ ವಶಕ್ಕೆ.
  • ಉಪವಿಭಾಗ ಕಚೇರಿಯ ಎಸ್‌ಡಿಸಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ನಡೆದಿದೆ.
  • ವಿದ್ಯಾರ್ಥಿಗಳಿಗೆ ಗುಣಮಟ್ಟದಶಿಕ್ಷಣದ ಜೊತೆಗೆಮನೆಯಲ್ಲಿ ಆರೋಗ್ಯಕರವಾದವಾತಾವರಣವನ್ನು ಕಲ್ಪಿಸಿಕೊಡಬೇಕು ಬೆಂಗಳೂರುಧರ್ಮಕ್ಷೇತ್ರದಗುರುಶ್ರೇಷ್ಠ ಫಾದರ್ ಫ್ರಾನ್ಸಿಸ್
  • ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂಜಿನಿಯರಿಂಗ್ ಕಾಲೇಜಿನ ಅತಿಥಿ ಉಪನ್ಯಾಸಕರ ಪ್ರತಿಭಟನೆ
  • ದೊಡ್ಡೇರಿ   ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಣಿತ ಕಲಿಕಾ ಆಂದೋಲನದ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ

Recent Posts

ಹಿಹಿರಿಯೂರಿನಲ್ಲಿ ಶರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಬಿಸಿಯೂಟ ತಯಾರಿಕರಿಗೆ ಆಯೋಜಿದ್ದ ತರಭೇತಿ ಕಾರ್ಯಗಾರವನ್ನು ಸಚಿವ ಡಿ.ಸುಧಾಕರ್ ಉದ್ಘಾಟಿಸಿದರು.

Recent Comments

No comments to show.

ಹೂಳು ತುಂಬಿದ ಚರಂಡಿ ಮೂಗು ಮುಚ್ಚಿ ಓಎಅಡುವ ಸಾರ್ವಜನಿರು

November 2023
M T W T F S S
 12345
6789101112
13141516171819
20212223242526
27282930  
« Oct    
November 2023
M T W T F S S
 12345
6789101112
13141516171819
20212223242526
27282930  
« Oct    
ಚಳ್ಳಕೆರೆ ನಗರದ ಖಾಸಗಿ ಬಸ್ ನಿಲ್ದಾಣಸ ಸಮೀಪದ ಚರಂಡಿ ರುಂಬಿರುವುದು

ಪರಿಶಿಷ್ಟ ಜಾತಿಯಲ್ಲಿ ಪರಿಶಿಷ್ಟ ಪಂಗಡದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸೂಕ್ತ ಸಾಲ ಸೌಲಭ್ಯ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದು ಇದನ್ನು ನಾನು ಸಹಿಸುವುದಿಲ್ಲ ಬ್ಯಾಂಕ್ ವ್ಯವಸ್ಥಾಕರ ವಿರುದ್ದ ಶಾಸಕ ಗರಂ.

ಚಳ್ಳಕೆರೆ ಸೆ.6 ಸರಕಾರ ಗ್ಯಾರೆಂಟಿ ಯೋಜನೆಗಳನ್ನು ಸೆ.30 ರ ಒಳಗೆ ಅರ್ಹ ಫಲಾನುವಿಗಳು ವಂಚಿತರಾಗದಂತೆ ಗುರಿ ಮುಟ್ಟಲು ಅಧಿಕಾರಿಗಳು ಮುಂದಾಗುವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ . ವಿವಿಧ ಬ್ಯಾಂಕ್ ವ್ಯವಸ್ಥಾಪಕರ ವಿವಿಧ ಇಲಾಖೆ ಅಧಿಕಾರಿಗಳಿಗೆ ಆಯೋಜಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ ಐದು ಯೋಜನೆಗಳಿಗೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಫಲಾನುಭವಿಗಳ ಖಾತೆಗೆ ಹಣ ಪಾವಾತಿ ಮಾಡಲಾಗುತ್ತಿದ್ದು ಬಡಕುಟುಂಬ ಹಾಗೂ ಅರ್ಹ ಗೃಹಿಣಿಯರು ಗ್ಯಾರೆಂಟಿ ಯೋಜನೆಗಳಿಂದ ವಂಚಿತರಾಗದಂತೆ ಅಧಿಕಾರಿಗಳು ಮುಂದಾಗ ಬೇಕು. ಯಾವುದೇ ಸರಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಹಾಗೂ ಯೋಜನೆಗಳು ಯಶಸ್ವಿಯಾಗಲು ಅಧಿಕಾರಿಗಳಿಂದ ಮಾತ್ರ ಸಾಧ್ಯ.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ 5 ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನೀಡಿತ್ತು ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಗೊಂಡಿವೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಉತ್ತಮ ಕೆಲಸ ನಿರ್ವಹಿಸಿದ್ದಾರೆ ಆದರೂ ಅನ್ನಭಾಗ್ಯ .ಗೃಹಲಕ್ಷ್ಮಿ .ಗೃಹಜ್ಯೋತಿ. ಯೋಜನೆಗಳು ಶೇ85ರಷ್ಟು ಮಾತ್ರ ಪ್ರಗತಿ ಕಂಡಿವೆ ತಾಲೂಕಿನಲ್ಲಿ ಈ ಯೋಜನೆಗಳ ವ್ಯಾಪ್ತಿಗೆ ಬರುವ ಫಲಾನುಭವಿಗಳು ವಂಚಿತರಾಗಬಾರದು ಸರ್ಕಾರ ಬಡವರಿಗಾಗಿ ಇಂತಹ ಯೋಜನೆಗಳನ್ನು ರೂಪಿಸಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಗರಸಭೆ .ಬೆಸ್ಕಾಂ ಇಲಾಖೆ. ಆಹಾರ ಇಲಾಖೆ. ಬ್ಯಾಂಕ್ ಅಧಿಕಾರಿಗಳು ತಮ್ಮ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ತಂಡಗಳನ್ನು ರಚಿಸಿಕೊಂಡು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲ ಪ್ರತಿ ಮನೆಗಳಿಗೆ ಭೇಟಿ ನೀಡಿ ಯೋಜನೆಗಳಿಂದ ವಂಚಿತರಾಗಿರುವ ಫಲಾನುಭವಿಗಳನ್ನು ಗುರುತಿಸಿ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ವಂಚಿತರಾಗಿದ್ದಾರೆ ಯಾವ ಕಾರಣ ಎಂದು ತಿಳಿದುಕೊಂಡು ಅವುಗಳನ್ನು ಸರಿಪಡಿಸಿ ಯೋಜನೆಗೆ ಒಳಪಡಿಸುವ ಜವಾಬ್ದಾರಿ ಹೊರಬೇಕು ಇದಕ್ಕಾಗಿ ತಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಬೇಕು ಸೆಪ್ಟೆಂಬರ್ 30ರೊಳಗೆ ಶೇಕಡ ನೂರರಷ್ಟು ಗುರಿ ಸಾಧಿಸಲು ಪ್ರಯತ್ನ ಪಡಬೇಕು ಯಾವುದೇ ಕಾರಣಕ್ಕೂ ನೆಪಗಳನ್ನು ಹೇಳದೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದರೆ ಅಂತಹ ಅಧಿಕಾರಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹರಿಪ್ರಸಾದ್ ಮಾಹಿತಿ ನೀಡಿ ಗೃಹಲಕ್ಷ್ಮಿ ಯೋಜನೆಗೆ ತಾಲೂಕಿನಲ್ಲಿ 89 920 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು 78597 ಫಲಾನುಭವಿಗಳಿಗೆ ಯೋಜನೆ ಜಾರಿಗೊಳಿಸಲಾಗಿದೆ ಬಾಕಿ ಉಳಿದಿರುವ 11323 ಫಲಾನುಭವಿಗಳಿಗೆ ಯಾವ ಕಾರಣಕ್ಕೆ ಹಣ ಬಂದಿಲ್ಲ ಎಂಬುದನ್ನು ಪತ್ತೆ ಹಚ್ಚಲಾಗುವುದು 87.41 ರಷ್ಟು ಯೋಜನೆಯಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

ಬೆಸ್ಕಾಂ ಇಲಾಖೆಗೆ ಟಾರ್ಗೆಟ್ : ಬೆಸ್ಕಾಂ ಇಲಾಖೆ ಅಧಿಕಾರಿಗಳು ಲೈನ್ ಮ್ಯಾನ್ ಗಳ ತಂಡ ರಚಿಸಿ ಪ್ರತಿ ಮನೆಗೆ ಭೇಟಿ ನೀಡಿ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳು ನೋಂದಾವಣೆ ಮಾಡಿಕೊಳ್ಳದಿದ್ದರೆ ಅಂತಹವರನ್ನು ಗುರುತಿಸಿ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು ಕುಟೀರ ಜ್ಯೋತಿ ಯೋಜನೆಗೆ ಒಳಪಟ್ಟವರನ್ನು ಗೃಹಜೋತಿ ಯೋಜನೆಯ ಲಾಭ ಪಡೆಯಲು ಇರುವ ಕಾನೂನು ನಿಯಮಗಳನ್ನು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು

ಬ್ಯಾಂಕ್ ವ್ಯವಸ್ಥಾಪಕರಿಗೆ ತರಾಟೆ: ಸಭೆಯಲ್ಲಿ ಪಾಲ್ಗೊಂಡಿದ್ದ ಬ್ಯಾಂಕ್ ವ್ಯವಸ್ಥಾಪಕರಿಗೆ ತರಾಟೆಗೆ ತೆಗೆದುಕೊಂಡ ಶಾಸಕರು ಬ್ಯಾಂಕುಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಪರಿಶಿಷ್ಟ ಪಂಗಡದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸೂಕ್ತ ಸಾಲ ಸೌಲಭ್ಯ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದು ಇದನ್ನು ನಾನು ಸಹಿಸುವುದಿಲ್ಲ ಸಾಲ ನೀಡುವುದಲ್ಲದೆ ವಸೂಲಿ ಮಾಡುವುದು ಬ್ಯಾಂಕ್ ಸಿಬ್ಬಂದಿಯ ಜವಾಬ್ದಾರಿ ಆಗಿರುತ್ತದೆ ಇಲ್ಲಸಲ್ಲದ ನೆಪಗಳನ್ನು ಹೇಳಿ ಸಾಲ ಸೌಲಭ್ಯಗಳಿಂದ ವಂಚನೆಗೆ ಒಳಪಡಿಸುತ್ತಿದ್ದೀರಾ ದೂರವಾಣಿಯ ಮೂಲಕ ಜಿಲ್ಲಾ ಬ್ಯಾಂಕ್ ಲೀಡ್ ವ್ಯವಸ್ಥಾಪಕರಿಗೆ ಮಾತನಾಡಿ ಕೂಡಲೇ ತಾಲೂಕಿನಲ್ಲಿ ಎಲ್ಲಾ ಬ್ಯಾಂಕುಗಳ ಅಧಿಕಾರಿಗಳ ಸಭೆ ನಡೆಸಿ ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪಲು ಇ.ಕೆ ವೈ ಸಿ ಮಾಡಬೇಕು ಹಾಗೂ ಬ್ಯಾಂಕುಗಳಲ್ಲಿನ ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ನಿಮ್ಮ ವಿರುದ್ಧ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನ್ಯಾಯಬೆಲೆ ಮಾಲೀಕರ ಸಮಸ್ಯೆಗೆ ಪರಿಹಾರ: ನ್ಯಾಯಬೆಲೆ ಅಂಗಡಿ ಮಾಲೀಕರು ತಮ್ಮ ವ್ಯಾಪ್ತಿಗೆ ಒಳಪಡುವ ಗ್ರಾಹಕರನ್ನು ಸರ್ಕಾರದ ಯೋಜನೆಗಳನ್ನು ಪಡೆಯಲು ಇರುವ ಅಡೆತಡೆಗಳನ್ನು ನಿವಾರಿಸಬೇಕು ಎಂದರು.ಇದೇವೇಳೆ ನ್ಯಾಯ ಬೆಲೆ ಅಂಗಡಿ ಮಾಲೀಕರು ತೂಕ ಅಳತೆ ವ್ಯತ್ಯಾಸ ಕಮಿಷನ್ ಬಿಡುಗಡೆ ಸೇರಿದಂತೆ ಹಲವು ಸಮಸ್ಯೆಗಳನ್ನು ಶಾಸಕರ ಮುಂದೆ ತೆರೆದಿಟ್ಟರು ಇದಕ್ಕೆ ಉತ್ತರಿಸಿದ ಶಾಸಕರು ನಿಮ್ಮ ಎಲ್ಲ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಳ್ಳಿ ಮುಂದಿನ ಸಭೆಯಲ್ಲಿ ಆಹಾರ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರನ್ನು ಸಭೆಗೆ ಆಹ್ವಾನಿಸಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ತಿಳಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ರಹನ್ ಪಾಷಾ.ಸೇರಿದಂತೆ ನ್ಯಾಯಬೆಲೆ ಅಂಗಡಿಗಳ ಮಾಲೀಕರು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮನ್ನು ಸಂಪರ್ಕಿಸಿ

ವಿಳಾಸ

ಗೋಪನಹಳ್ಳಿ ಶಿವಣ್ಣ .ಬಿಡಿಒ ಕಾಂಪ್ಲೆಕ್ಸ್. ರೂ.5 . ವಾಲ್ಮೀಕಿ ವೃತ್ತ. ಚಳ್ಳಕೆರೆ. ಚಿತ್ರದುರ್ಗ ಜಿ. ಪಿನ್.577522.

ಮೊಬೈಲ್ ನಂ

9482200525 / 6361910410

ಇಮೇಲ್

goshi68@gmail.com
  • Follow
  • Follow
  • Follow
  • Follow
  • Follow

Privacy Policy |

Terms & Conditions

Copyright © 2020 | All Right Reserved | janadhwani.in