ಎನ್ ದೇವರಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೇರಿದ ಶ್ರೀ ಕಂಚಿಹೋಬಳಿ ಸ್ವಾಮಿ ಜಾತ್ರೋತ್ಸವ.

by | 02/06/24 | ಸುದ್ದಿ


ನಾಯಕನಹಟ್ಟಿ ::ಜೂನ್ 2. ಎನ್ ದೇವರಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೇರಿದ ಶ್ರೀ ಕಂಚಿ ಹೋಬಳಿ ಸ್ವಾಮಿ ಜಾತ್ರೋತ್ಸವ

ಹೋಬಳಿ ಬುಡಕಟ್ಟು ಸಂಪ್ರದಾಯ ಗ್ರಾಮದ ಆರಾಧ್ಯ ದೈವ ಶ್ರೀ ಕಂಚಿ ಹೋಬಳಿ ಸ್ವಾಮಿ ದೇವರ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಮತ್ತು ಭಾನುವಾರ ಅದ್ದೂರಿಯಾಗಿ ಜರುಗಿತು.


ಶ್ರೀ ಕಂಚಿ ಹೋಬಳಿ ಸ್ವಾಮಿ ಮಹಾಸಂಸ್ಥಾನ ಎನ್ ದೇವರಹಳ್ಳಿ 500 ವರ್ಷಗಳ ಇತಿಹಾಸ ಇರುವಂತ ಈ ಮಹಾ ಸಂಸ್ಥಾನದಲ್ಲಿ ಬುಡಕಟ್ಟು ಸಂಸ್ಕೃತಿಯ ಆಚರಣೆಯ ಶ್ರೀ ಕಂಚಿಹೋಬಳಿ ಸ್ವಾಮಿ ಮೂರು ಗುಡಿಕಟ್ಟಿನ ಅಜ್ಜನ ಅಣ್ಣ-ತಮ್ಮಂದಿರು ಮೊದಲನೇದಾಗಿ ಯಜಮಾನ ವಂಶಸ್ಥರು ದಾಸಯ್ಯನ ವಂಶಸ್ಥರು ಪೂಜಾರಿ ವಂಶಸ್ಥರು ಅವರ ರವರ ಬಿರುದ್ಧಾವಳಿಯ ಬಾಪ್ತುಗಳಂತೆ ಶ್ರೀ ಕಂಚಿ ಹೋಬಳೇಶ್ವರ ಸ್ವಾಮಿ ದೇವರನ್ನು ಆರಾಧನೆ ಮಾಡಿಕೊಂಡು ಬಂದಿದ್ದಾರೆ.
ಕಳೆದ ಸುಮಾರು ವರ್ಷಗಳಿಂದ ಪಾಪಿಮುತ್ತೆ ಹೊಳೆಯಲ್ಲಿ ಶ್ರೀಕಂಚಿಹೋಬಳಿ ಸ್ವಾಮಿ ಗಂಗಾ ಪೂಜೆ ಹೋಮ ಹವನ ಪೂಜೆ ಕೈಂಕಾರ್ಯಗಳನ್ನು ನೆರವೇರಿಸಿ ಅದ್ದೂರಿ ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆದೊಯ್ದು ಗುಡಿ ತುಂಬಿಸಲಾಗುತ್ತದೆ.


ಬಹಳಷ್ಟು ಕೋಮಿನ ಅಣ್ಣತಮ್ಮಂದಿರು ಶ್ರೀದೇವರ ಆರಾಧನೆ ಮಾಡುತ್ತಿದ್ದಾರೆ. ಮೊನ್ನೆ ಗುರುವಾರ ಶಾಸ್ತ್ರವಾಗಿ ನಮ್ಮ ಮಹಾಸ್ವಾಮಿಗಳ ಅಪ್ಪಣೆಯಂತೆ ಶ್ರೀ ಪೆನ್ನುಬಳಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ನೂತನ ಪೂಜಾರಿ ಮತ್ತು ದಾಸಯ್ಯನ ಮುದ್ರಿಕೆ ಮಾಡಿಸುವ ಮುಖಾಂತರ ಇಂದು ಅಧಿಕೃತವಾಗಿ ನೂತನ ಪೂಜಾರಿ ದಾಸಯ್ಯ ಪಟ್ಟಾಭಿಷೇಕವನ್ನು ಮಾಡಲಾಗಿದೆ.

ಶ್ರೀ ಕಂಚಿ ಹೋಳೇಶ್ವರ ಸ್ವಾಮಿಯ ದೇವರಿಗೆ ಸಾಕಷ್ಟು ದಾನಿಗಳು ಮತ್ತು ಗುಡಿಕಟ್ಟಿನ ಅಣ್ಣ-ತಮ್ಮಂದಿರು ದೇವರ ತೂಗು ತೊಟ್ಟಿಲು ಛತ್ರಿ ಗರ್ಭಗುಡಿಗೆ ಕಂಚಿನ ಪದಕ ದಾಸೋಹ ಸೇರಿದಂತೆ ಅನೇಕ ದಾನಿಗಳು ಶ್ರೀ ಸ್ವಾಮಿಗೆ ಭಕ್ತಿಯನ್ನು ಸಮರ್ಪಿಸಿದ್ದಾರೆ ಎಂದು ಕುದಾಪುರ ಎಸ್ ಬಿ ತಿಪ್ಪೇಸ್ವಾಮಿ ದಾವಣಗೆರೆ ಪಬ್ಲಿಕ್ ಬಾಯ್ಸ್ ಪತ್ರಿಕೆಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇನ್ನೂ ಭಾನುವಾರ ಬೆಳಿಗ್ಗೆ ಶ್ರೀ ಕಂಚಿ ಹೋಬಳಿ ಸ್ವಾಮಿಗೆ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಪೂಜಾ ಕೈಂಕಾರ್ಯಗಳನ್ನು ನೆರವೇರಿಸಿ ನಂತರ ಮಣೇವು ಕಾರ್ಯ ನಡೆಯಿತು . ದಾಸೋಹದ ನಂತರ ಜಾತ್ರೆಗೆ ತೆರೆ ಬಿತ್ತು

ಇದೇ ಸಂದರ್ಭದಲ್ಲಿ ಶ್ರೀ ಕಂಚಿಹೋಬಳಿ ಸ್ವಾಮಿಯ ಗುಡಿಕಟ್ಟಿನ ಯಜಮಾನ ವಂಶಸ್ಥರು ಪೂಜಾರಿ ವಂಶಸ್ಥರು ದಾಸಯ್ಯನ ವಂಶಸ್ಥರು ಹಾಗೂ ನೆಂಟರು ಸಮಸ್ತ ಎನ್ ದೇವರಹಳ್ಳಿ ಗ್ರಾಮಸ್ಥರು ಇದ್ದರು

Latest News >>

ನಾಯಕನಹಟ್ಟಿ ಪಟ್ಟಣದ ಕೋಟೆ ಬ್ಲಾಕ್ ಶ್ರೀ ವಿಜಯ ವೀರಭದ್ರ ಗಣಪತಿ ವಿಸರ್ಜನೆ.

ನಾಯಕನಹಟ್ಟಿ:: ಸೆ.19 . ಪ್ರತಿ ವರ್ಷದಂತೆ ಶ್ರೀ ವಿಜಯ ವೀರಭದ್ರ ಸ್ವಾಮಿ ದೇವಾಲಯದಲ್ಲಿ ಕಳೆದ ಐದು ವರ್ಷದಿಂದ ಗಣಪತಿಯನ್ನು ಕೋಟಿ ಬ್ಲಾಕ್...

ರಾಜ್ಯದಲ್ಲಿ ಗೃಹಲಕ್ಷ್ಮಿ,ಗೃಹಜ್ಯೋತಿ, ಶಕ್ತಿಯೋಜನೆಗಳನ್ನ ಜಾರಿಗೊಳಿಸಿದ ನಂತರ ಕಾಂಗ್ರೆಸ್ ಪಕ್ಷದತ್ತ ಮಹಿಳೆಯರ ಒಲವು ಹೆಚ್ಚಿದೆ :ಜಿಲ್ಲಾಉಸ್ತುವಾರಿ ಸಚಿವ ಡಿ.ಸುಧಾಕರ್

ಹಿರಿಯೂರು: ಕರ್ನಾಟಕದಲ್ಲಿ ಮಾಜಿ ಪ್ರಧಾನಿಗಳಾದ ದವಂಗತ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರು ಮಹಿಳಾ ಕಾಂಗ್ರೆಸ್ ಆರಂಭಿಸಿದ ದಿನವನ್ನು...

ಕರ್ನಾಟಕ ರಕ್ಷಣಾ ವೇದಿಕೆ ನಾಯಕನಹಟ್ಟಿ ಹೋಬಳಿಯ ವತಿಯಿಂದ ಕನ್ನಡದ ಮೇರು ನಟ ಡಾ. ವಿಷ್ಣುವರ್ಧನ್ ಅವರ 74ನೇ ವರ್ಷದ ಹುಟ್ಟುಹಬ್ಬ ಆಚರಣೆ

ನಾಯಕನಹಟ್ಟಿ ::ಕರ್ನಾಟಕ ರಕ್ಷಣಾ ವೇದಿಕೆ ನಾಯಕನಹಟ್ಟಿ ಹೋಬಳಿಯ ವತಿಯಿಂದ ಸಾಹಸಸಿಂಹ ವಿಷ್ಣುವರ್ಧನ್ ಅವರ 74ನೇ ವರ್ಷದ ಹುಟ್ಟುಹಬ್ಬ ಆಚರಣೆ...

ನಗರಸಭೆಯಿಂದ ಪ್ಲಾಸ್ಟಿಕ್ ಬಳಕೆಯಿಂದಾಗುವ ಹಾನಿಯನ್ನ ಕುರಿತಂತೆಕಿರುನಾಟಕದ ಪ್ರದರ್ಶನ

ಹಿರಿಯೂರು: ನಗರದಲ್ಲಿ ಪ್ಲಾಸ್ಟಿಕ್ ನ ಬಳಕೆ ಹೆಚ್ಚಾಗುತ್ತಿದ್ದು, ಪರಿಸರಕ್ಕೆ ಮಾರಕವಾದಂತಹ ಪ್ಲಾಸ್ಟಿಕ್ ಗಳ ಬಳಕೆಯನ್ನು ನಿಲ್ಲಿಸಬೇಕೆಂಬ...

ಅ.02 ರವರೆಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕ: ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್

ಚಿತ್ರದುರ್ಗ ಸೆ.18: ಗ್ರಾಮೀಣ ಪ್ರದೇಶದ ಜನರಲ್ಲಿ ನೈರ್ಮಲ್ಯ, ಶುಚಿತ್ವ ಕುರಿತು ಅರಿವು ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷವೂ ಸ್ವಚ್ಚತಾ...

ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಎಣ್ಣೆ ಉತ್ಪನ್ನಗಳ ಜಾಹೀರಾತು ಅಳವಡಿಕೆಗೆ ಅನುಮತಿ

ಚಿತ್ರದುರ್ಗ ಸೆ.18: ಪ್ರಾದೇಶಿಕ ಎಣ್ಣೆಬೀಜ ಬೆಳಗಾರರ ಸಂಘದ ವಾಹನಗಳ ಮೇಲೆ, ಅವರ ಕಂಪನಿಗಳಿಗೆ ಸಂಬಂಧಿಸಿದ ಎಣ್ಣೆ ಉತ್ಪನ್ನಗಳಿಗೆ ಜಾಹೀರಾತು...

10ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ತಾಲ್ಲೂಕಿನ ಧರ್ಮಪುರ ಹೋಬಳಿಯ ಕೋಡಿಹಳ್ಳಿ ಗ್ರಾಮಲೆಕ್ಕಾಧಿಕಾರಿಯ ಬಂಧನ

ಹಿರಿಯೂರು : ಜಮೀನು ಪೋಡಿ ಮಾಡಲು ರೈತರೊಬ್ಬರಿಂದ 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವ ಸಂದರ್ಭದಲ್ಲಿ ದಾಳಿ ನಡೆಸಿದ ಲೋಕಾಯುಕ್ತ...

ಅಂಬಲಗೆರೆ-ಉಪ್ಪಾರಹಟ್ಟಿ ರಸ್ತೆಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದ ಸಚಿವರಾದ ಡಿ.ಸುಧಾಕರ್

ಹಿರಿಯೂರು : ತಾಲ್ಲೂಕಿನಲ್ಲಿ ಗ್ರಾಮೀಣ ಭಾಗಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು,...

ಸಫಾಯಿ ಕರ್ಮಚಾರಿಗಳಿಗೆ ಆರೋಗ್ಯ ತಪಾಸಣೆ ಸ್ವಚ್ಛ ಸ್ವಭಾವ, ಸ್ವಚ್ಛ ಸಂಸ್ಕಾರ ಬೆಳೆಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ: ಡಾ.ಬಿ.ವಿ.ಗಿರೀಶ್

ಚಿತ್ರದುರ್ಗ. ಸೆ.17: ಸ್ವಚ್ಛ ಸ್ವಭಾವ, ಸ್ವಚ್ಛ ಸಂಸ್ಕಾರ ಬೆಳೆಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ...

ರೈತರ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ವಿರೋಧಿಸಿ ಸೆ.6 ರಂದು ಬೃಹತ್ ಪ್ರತಿ ಭಟನೆ ರೆಡ್ಡಿಹಳ್ಳಿವೀರಣ್ಣ

ಚಳ್ಳಕೆರೆ ಸೆ.1 ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರವು ರೈತರಿಗೆ ಯಾವುದೇ ಮಾಹಿತಿ ನೀಡದೆ ವಿದ್ಯುತ್ ಇಲಾಖೆ ಮುಖಾಂತರ ಮೋಸ ಮಾಡಿ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page