GOA No-1 ಹೆಸರನ್ನು ದುರುಪಯೋಗ ಪಡಿಸಿಕೊಂಡ ಗೋಬಲ್ ಇಂಡಸ್ಟ್ರೀಸ್ ಪಾಲುದಾರರು . ವಿತರಕರ ಮೇಲೆ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು.

by | 21/10/23 | ಕ್ರೈಂ

ಚಳ್ಳಕೆರೆ ಅ21 GOA No-1 ಹೆಸರಿನ ಕಂಪನಿ ಹೆಸರಿನ ಮೇಲೆ ಗುಟ್ಕಾ ತಯಾರು ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಅಪಾರ ಪ್ರಮಾಣದ ಗುಟ್ಕಾ, ಗುಟ್ಕಾ ಹಾಗೂ ಯಂತ್ರ ವಶಪಡಿಸಿಕೊಂಡು ಅಕ್ರಮ‌ ಗುಟ್ಕಾ ತಯಾರು ಮಾಡುತ್ತಿದ್ದ ಕಂಪನಿಯ ಮೇಲೆ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಹೌದು ಇದು ಚಳ್ಳಕೆರೆ ನಗರದ ಅಜ್ಜಯ್ಯನ ಗುಡಿ ರಸ್ತೆಯ.ಗೋಬಲ್ ಇಂಡಸ್ಮಿಸ್ ಯಲ್ಲಿ
GOA No-1 ಹೆಸರಿನಲ್ಲಿ ಅಡಿಕೆ ಮತ್ತು ಅದರ ಉತ್ಪನ್ನಗಳನ್ನು ತಯಾರಿ ಮತ್ತು ಮಾರಾಟ ಮಾಡಲು
ಪರವಾನಿಗೆ ಹೊಂದಿದ್ದು ಅವರ ಮಾರಾಟದ ಪೊಟ್ಟಣದ ಮೇಲೆ JM Joshi ರವರ ಭಾವಚಿತ್ರ ಹೊಂದಲು ಟ್ರೇಡ್ ಮಾರ್ಕ್ ಮಾಡಿಸಿದ್ದು,
ನಮ್ಮ ಕಂಪನಿಯ ಟ್ರೇಡ್ ಮಾರ್ಕ್ ಮಾಡಿಸಿರುವ GOA No-1 ಹೆಸರನ್ನು ಬಳಸಿಕೊಂಡು GSTIN No-29AAZFG1264F1ZZ
ಗೋಬಲ್ ಇಂಡಸ್ಮಿಸ್ ಚಳ್ಳಕೆರೆಯ ಡೈರೆಕ್ಟರ್, ಪಾಲುದಾರರು ಮತ್ತು ಇತರೇ ಸಂಭಂದಪಟ್ಟವರು ಹಾಗೂ ವಿತರಕರು ಸೇರಿಕೊಂಡು ನಮ್ಮ
ಕಂಪನಿಯಿಂದ ತಯಾರಾದ ಪಾನ್ ಮಸಲಾ ಮತ್ತು ಇತರೇ ಅಡಿಕೆಯ ಉತ್ಪನ್ನಗಳನ್ನು ಅಕ್ರಮವಾಗಿ ತಯಾರು ಮಾಡಿ ಮಾರಾಟ
ಮಾಡುತ್ತಿರುವುದು ಅಲ್ಲದೇ JM Joshi ರವರ ಭಾವಚಿತ್ರ ವನ್ನು ಸಹ ಮುದ್ರಿಸಿರುವುದು ಇದ್ದು, ಈ ವಿಚಾರ ದಿನಾಂಕ:16.10.2023
ರಂದು ನಮಗೆ ತಿಳಿದುಬಂದಿರುತ್ತೆ. ಇದರಿಂದ ನಮ್ಮ ಕಂಪನಿಯ GOA No-1 ಹೆಸರನ್ನು ದುರುಪಯೋಗ ಪಡಿಸಿಕೊಂಡು, ಮೋಸ
ಮಾಡಿದ್ದಲ್ಲದೇ ನಕಲಿ ಅಡಿಕೆ ಮತ್ತು ಅದರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದದಿಂದ ಸಾರ್ವಜನಿಕರ ಜೀವದ ಮೇಲೆ ಹಾನಿ
ಉಂಟು ಮಾಡುವ ಸಾಧ್ಯತೆಗಳು ಇರುತ್ತದೆ. ಈ ಬಗ್ಗೆ ಮುಂದಿನ ಕ್ರಮ ಜರುಗಿಸುವಂತೆ ದೂರು ನೀಡಿದ ಬೆನ್ನಲ್ಲೇ ದೂರು ಜಾಡು ಇಡಿದ ಪಿಎಸ್ಐ ಶಿವರಾಜ್ ಹಾಗೂ ಸಿಬ್ಬಂದಿ ಶುಕ್ರವಾರ ಸಂಜೆಗೋಬಲ್ ಇಂಡಸ್ಮಿಸ್ ಮೇಲೆ ದಾಳಿ ನಡೆಸಿ GOA No-1 ಹೆಸರನ್ನು ದುರುಪಯೋಗ ಪಡಿಸಿಕೊಂಡ ಗೋಬಲ್ ಇಂಡಸ್ಟ್ರೀಸ್ ಪಾಲುದಾರರು ಮತ್ತು ಇತರೇ ಸಂಭಂದಪಟ್ಟವರು ಹಾಗೂ ವಿತರಕರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಮಾಲು ಸಹಿತ ವಶಪಡಿಸಿಕೊಂಡಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *