80 ವರ್ಷ ಮೇಲ್ಪವರಿಗೆ ಹಾಗೂ ವಿಕಲಚೇತನರಿಗೆ ಮನೆಯಲ್ಲೆ ಮತಹಾಕಲು ಅವಕಾಶ ನೀಡಿದ್ದು ನೋಂದಣೆ ಮಾಡಿಕೊಂಡರುವ ಮನೆಯಲ್ಲಿದ್ದು ಮತದಾನಕ್ಕೆ ಸಹಕಾರ ನೀಡುವಂತೆ ಚುನಾವಣಾಧಿಕಾರಿ ಆನಂದ್

by | 29/04/23 | ಚುನಾವಣೆ-2023

ಚಳ್ಳಕೆರೆ ಜನಧ್ವನಿ ವಾರ್ತೆ ಏ29.
ಇದೇ ಮೊದಲ ಬಾರಿಗೆಚುನಾವಣೆ ಆಯೋಗ ರಾಜ್ಯದಲ್ಲಿ 80 ವರ್ಷ ಮೇಲ್ಪವರಿಗೆ ಹಾಗೂ ವಿಕಲಚೇತನರಿಗೆ ಮನೆಯಲ್ಲೆ ಮತಹಾಕಲು ಅವಕಾಶ ನೀಡಿದ್ದು ನೋಂದಣೆ ಮಾಡಿಕೊಂಡರುವ ಮನೆಯಲ್ಲಿದ್ದು ಮತದಾನಕ್ಕೆ ಸಹಕಾರ ನೀಡುವಂತೆ ಚುನಾವಣಾಧಿಕಾರಿ ಆನಂದ್ ತಿಳಿಸಿದ್ದಾರೆ.
ನಗರದ ತಾಲೂಕು ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊAಡರು.
ಈಗಾಗಲೆ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಹೋಗಿ 80ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರು ಮನೆಯಲ್ಲಿ ವಿಶ್ರಾಂತಿ ಹೊಂದಿರುವ 127 ಮತದಾದರು ಮನೆಯಲ್ಲಿ ಮತ ಹಾಕುತ್ತೇವೆ ಎಂದು ನೋಂದಣೆ ಮಾಡಿಕೊಂಡಿದ್ದು ಮೇ.3ರಂದು ಬೆಳಗೆ 7ರಿಂದ ಸಂಜೆ 7 ಗಂಟೆಯವರಿಗೆ ಮತ ಪೆಟ್ಟಿಗೆಯೊಂದಿಗೆ ಅಧಿಕಾರಿಗಳು ನಿಮ್ಮ ಮನಗೆ ಬರಲಿದ್ದು ಅಂದು ಮನೆಯಲ್ಲೇ ಇದ್ದು ಮನತಗಟ್ಟೆ ಅಧಿಕಾರಿಗಳೊಂದಿಗೆ ಸಹಕರಿಸುವ ಮೂಲಕ ಮತದಾರರು ಕಡ್ಡಾಯವಾಗಿ ಮನೆಯಲ್ಲಿದ್ದು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ತಿಳಿಸಿದರು.
ಬೇರೆ ಕ್ಷೇತ್ರದ ಸಿಬ್ಬಂಗಳನ್ನು 5ಮೊಬೈಲ್ ತಂಡಗಳೊಂದಿಗೆ ಮನೆಬಾಗಿಲಿಗೆ ಮೇ.3ರಂದು ಮತಪೆಟ್ಟಿಗೆಯನ್ನು ಮನೆ ಬಾಗಿಲಿಗೆ ಮತಗಟ್ಟೆಯನ್ನು ಅಗತ್ಯ ಕಾನೂನು ಸುವ್ಯವಸ್ಥೆಯಲ್ಲಿ ಗೌಪ್ಯ ಮತದಾನ ಹಾಗೂ ಮನೆಯಲ್ಲಿನ ಮತದಾನದ ಬಗ್ಗೆ ವೀಡಿಯೋ ಚಿತ್ರೀಕರಣ ಮಾಡಲಾಗುವುದು ನಿಮ್ಮ ಮನೆಬಾಗಿಲಿ ಮತಗಟ್ಟೆಯೊಂದಿಗೆ ಬಂದ ಅಧಿಕಾರಿಗಳಿಗೆ ಸಹಕರಿಸಬೇಕು ಅನಿವಾರ್ಯ ಕಾರಣಗಳಿಂದ ಮನೆಯಲ್ಲಿ ಇರಲು ಸಾಧ್ಯವಾಗದವರಿಗೆ ಮೇ.೫ರಂದು ಮತ್ತೊಂದು ಬಾರಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಚುನಾವಣೆಗೆ ನಿಯೋಜನೆಗೊಂಡ 1532 ಸಿಬ್ಬಂದಿಗಳು, 80 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರು ಸೇರಿ 127 ಹಾಗೂ 13 ಅಗತ್ಯ ಸೇವೆ ಇಲಾಖೆಯಲ್ಲಿನ 26 ಮತದಾರರು ಮತ್ತು ಸೈನ್ಯದಲ್ಲಿರುವ 56 ಮತದಾರರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದರು.
ಇನ್ನೂ ಅಗತ್ಯ ಸೇವೆ 13 ಇಲಾಖೆಯಲ್ಲಿ ಬರುವ 26 ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಮೇ.2,3,ಮತ್ತು 4 ರಂದು ತಾಲೂಕು ಕಚೇರಿಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ತಮ್ಮ ಇಲಾಖೆಯಿಂದ ರಜೆ ಪಡೆದುಕೊಂಡು ಮೂರು ದಿನಗಳಲ್ಲಿ ಯಾವುದಾರು ದಿನ ಬಂದು ಬೆಳಗ್ಗೆ 9ರಿಂದ ಸಂಜೆ 5ಗಂಟೆಯೊಳಗೆ ವೋಟ್ ಮಾಡಬಹುದು.ಇತ್ತ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ 56 ಮತದಾರರಿಗೆ ಈಗಾಗಲೇ ಅಂಚೆ ಮೂಲಕ ಬ್ಯಾಲೆಟ್ ಕಳಿಸಿದ್ದು, ಅವರು ತಮ್ಮ ಹಕ್ಕು ಚಲಾಯಿಸಿ ಮೇ.13ರಂದು ಮತ ಎಣಿಕೆ ಮಾಡುವ ಬೆಳಗ್ಗೆ 8ಗಂಟೆಯೊಳಗೆ ತಲುಪುವಂತೆ ಕಳಿಸಬೇಕಿದೆ ಎಂದರು.
ಇನ್ನೂ ಚುನಾವಣೆಗೆ ನಿಯೋಜನೆಗೊಂಡ ಅಕ್ಷರಸ್ಥ ಮತದಾರ ಅಧಿಕಾರಿಗಳ ಮತದಾನವೇ ಸಾಕಷ್ಟು ತಿರಸ್ಕೃತಗೊಳ್ಳುತ್ತಿವೆ. ಕಾರಣ ನಿಯಮ ಪ್ರಕಾರ ಅಂಚೆ ಮತದಾನ ಮಾಡಿರುವುದಿಲ್ಲ.ಇಂತ ತಪ್ಪುಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ನಮೂನೆ-13ಎ ಕವರಿನಲ್ಲಿ ಘೋಷಣಾ ಪತ್ರ ಹಾಕಬೇಕು ಮತ್ತು 13ಬಿ ಕವರಿನಲ್ಲಿ ಅಂಚೆ ಮತದಾನ ಹಾಕಬೇಕು. ಈ ಎರಡು ಕವರ್‌ಗಳನ್ನು 13-ಸಿನಲ್ಲಿ ಹಾಕಿದರೆ ಮಾತ್ರ ನಿಮ್ಮ ಮತ ಮನ್ಯವಾಗುವುದು ಎಂದರು.

ಹಣ ಜಪ್ತಿ

ಸಂಗ್ರಹ ಚಿತ್ರ
ಬಳ್ಳಾರಿ ಕಡೆಯಿಯಿಂದ ಹಿರಿಯೂರು ಮಾರ್ಗವಾಗಿ ಕಾರಿನಲ್ಲಿ ಅಕ್ರಮವಾಗಿ ಹಣ ಸಾಗಾಟ ಮಾಡುದ್ದಿ ಕಾರು ಹಾಗೂ ಇಬ್ಬರವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಬಳ್ಳಾರಿಕಡೆಯಿಂದ ಹಿರಿಯೂರು ಮಾರ್ಗದ ರೋಜಾ ಹೋಟೆಲ್ ಡಾಬ ಬಳಿಯಿರುವ ಚೆಕ್ ಪೋಸ್ಟ್ ಎಸ್‌ಎಸ್‌ಟಿ ತಂಡದ ಅಧಿಕಾರಿ ಡಾ.ತಿಪ್ಪೇರುದ್ರ ಕಾರು ತಪಾಷಣೆ ಮಾಡಿದಾಗ 10.50 ಲಕ್ಷ ರೂ 500 ರೂ ಹಾಗೂ 200 ರೂ ಮಖಬೆಲೆಯ ನೋಟುಗಳನ್ನು ಸೊಂಟದಲ್ಲಿಟ್ಟುಕೊಂಡುರುವುದು ತಪಾಸಣೆಯ ವೇಳೆ ಪತ್ತೆಯಾಗಿದ್ದು ಆರೋಪಿಗಳಾದ ಭಾಷ್ಕರ್ ರೆಡ್ಡಿ ಹಾಗೂ ಶಿವಶಂಕರ ಮೂರ್ತಿ ಎಂಬುವುರನ್ನು ವಶಕ್ಕೆ ಪಡೆದು ಪ್ರಕರಣದಾಖಲಿಸಾಗಿದೆ ಒಂದು ವಾರದೊಗಳೆಗೆ ಜಪ್ತಿ ಮಾಡಿದ ಹಣಕ್ಕೆ ಸೂಕ್ತ ದಾಖಲೆ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ಆನಂದ್ ತಿಳಿಸಿದರು ತಹಸೀಲ್ದಾರ್ ರೇಹಾನಾ ಪಾಷಾ,ಚುನಾವಣೆ ಶಾಖೆಯ ಶ್ರೀಧರ್,ಭಾಷಾ ಇದ್ದರು.

Latest News >>

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಕಾವಲುಗಾರರ ನೇಮಿಸಿ

ಚಿತ್ರದುರ್ಗ ಮೇ.27: ಜಿಲ್ಲೆಯ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರಬೇಕು. ಒಂದು ವೇಳೆ ಸಿಸಿ ಕ್ಯಾಮೆರಾಗಳು...

ಲಕ್ಕೂರ ಆನಂದರ ಸಾಹಿತ್ಯ ಕೃಷಿ ನಾಡಿಗೆ ಪರಿಚಯಿಸಬೇಕಿದೆ: ಹುಲಿಕುಂಟೆ ಮೂರ್ತಿ

ಚಿತ್ರದುರ್ಗ ಮೇ.26 ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಕವಿ, ಬರಹಗಾರ ಆನಂದ್ ಸಿ.ಲಕ್ಕೂರು ಮಾಡಿರುವ ಸಾಹಿತ್ಯ ಕೃಷಿಯನ್ನು...

ಕುಂಚಿಟಿಗರಿಗೆ ಕೇಂದ್ರ OBC ಮೀಸಲಾತಿಗಿಂತ EWS ಮೀಸಲಾತಿ ಉತ್ತಮ -ಎಸ್ ವಿ ರಂಗನಾಥ್.

ಹಿರಿಯೂರು ಇತ್ತೀಚೆಗೆ ಕುಂಚಿಟಿಗ ಸಮಾಜದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿರುವ ಸುದ್ದಿ ಏನೆಂದರೆ ಅದು ಕುಂಚಿಟಿಗರಿಗೆ ಕೇಂದ್ರ ಸರ್ಕಾರದ OBC...

ಹುಚ್ಚವನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದ ಕಾರಣ ಚಾನಲ್ ಒಳಗಡೆ ನೀರಿನಲ್ಲಿ ಇಳಿದು ಸಾಗಬೇಕು ಎಂಬುದು ಗ್ರಾಮಸ್ಥರ ಅಳಲು

ಹಿರಿಯೂರು: ತಾಲ್ಲೂಕಿನ ಹುಚ್ಚವನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗಲು ಸರಿಯಾದ ದಾರಿ ಇಲ್ಲದ ಕಾರಣ ಈ ಊರಲ್ಲಿ ಯಾವುದೇ ವ್ಯಕ್ತಿ ಸತ್ತರೆ ಆ...

ವರಣುನ ಆರ್ಭಟಕ್ಕೆ ನೆಲಕ್ಕುರಿಳೆ ಬೆಳೆ- ಮನೆಗಳಿಗೆ ನುಗ್ಗಿದ ನೀರು-ಹಳ್ಳಕೊಳ್ಳಗೆ ನೀರು..

ಚಳ್ಳಕೆರೆ ಮೇ25 ವರುಣನ ಆರ್ಭಟಕ್ಕೆ ತೋಟಗಾರಿಕೆ ಬೆಳೆಗಳು ನೆಲಕ್ಕುರಿಳಿದರೆ ಮನೆಗಳಿಗೆ ನೀರು ನುಗ್ಗಿದ ಘಟನೆ ಜರುಗಿದೆ. ತಾಲೂಕಿನಾದ್ಯಂತ...

ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ. ₹ 71.41.325 ರೂ ಸಂಗ್ರಹ ಸಂತಾನ ಭಾಗ್ಯ ನೌಕರಿ ಆರ್ಥಿಕ ಆರೋಗ್ಯ ಸಂಪತ್ತು ಕರುಣಿಸುವಂತೆ ಹುಂಡಿಯಲ್ಲಿ ಲಿಖಿತ ಪತ್ರಗಳು‌ ಪತ್ತೆ ..!.

ನಾಯಕನಹಟ್ಟಿ:: ಮೇ.24. ಐತಿಹಾಸಿಕ ನಾಯಕನಹಟ್ಟಿ ಶ್ರೀ ಗುರುತಿಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಹಣದ ಎಣಿಕೆ ಕಾರ್ಯವನ್ನು...

ಸಮಾಜದ ಸಮಗ್ರ ಬೆಳವಣಿಗೆಗೆ ಶಿಕ್ಷಣ ವಲಯ ಅಭಿವೃದ್ಧಿ ಆಗಬೇಕಾಗಿದೆ ಶಾಸಕ ಎನ್ ವೈ ಗೋಪಾಲಕೃಷ್ಣ.

ನಾಯಕನಹಟ್ಟಿ:: ಮೇ.23. ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ....

ತಾಲ್ಲೂಕಿನ ಶುಭೋದಯ ಸೇವಾವೃದ್ದಾಶ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಎಲ್.ಮೂರ್ತಿ ರವರ ಹುಟ್ಟುಹಬ್ಬಆಚರಣೆ: ಮುಖ್ಯಸ್ಥ ತೇಜೋಮೂರ್ತಿ

ಹಿರಿಯೂರು: ಅಭಿಮತ ಪತ್ರಿಕೆಯ ಸಂಪಾದಕರು ಹಾಗೂ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್.ಸಿ.ಸೆಲ್. ಘಟಕ ಅಧ್ಯಕ್ಷರಾದ ಜಿ.ಎಲ್.ಮೂರ್ತಿ...

ಮೌಡ್ಯಗಳಿಂದ ಹೊರಬಂದು ಬುದ್ಧನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ:ಪ್ರೊ.ಸಿಕೆ ಮಹೇಶ್ವರಪ್ಪ ಅಭಿಮತ 

ಚಳ್ಳಕೆರೆ: ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಶಾತವಾಹನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ವಿಜಯ ಸಂಕಲ್ಪ ದಿನಪತ್ರಿಕೆ ವತಿಯಿಂದ ಬುದ್ಧ...

ವಾಣಿವಿಲಾಸಸಾಗರ ಜಲಾಶಯಕ್ಕೆ ತಗ್ಗಿದ ಒಳಹರಿವು ಮುಂಗಾರು ಮಳೆಯಿಂದಾಗಿ 1.65ಅಡಿ ನೀರು ಸಂಗ್ರಹ

ಹಿರಿಯೂರು : ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಪೂರ್ವ ಮುಂಗಾರು ಮಳೆಯಿಂದಾಗಿ 1.65 ಅಡಿ ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page