ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ವಾಹನ ಚಾಲನೆ ತರಬೇತಿ ನೀಡಲಾಗಿದ್ದು ಗ್ರಾಮಗಳಲ್ಲಿ ಸ್ವಚ್ಚತೆ ಬಗ್ಗೆ ಹೆಚ್ಚು ಗಮನಹರಿಸುವಂತೆ ಜಿಪಂ ಸಿಇಒ ಎಂ.ಎಸ್.ದಿವಾಕರ್

by | 20/03/23 | ಆರ್ಥಿಕ

ಚಿತ್ರದುರ್ಗ ಜನಧ್ವನಿ ವಾರ್ತೆ ಮಾ.20 ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ವಾಹನ ಚಾಲನೆ ತರಬೇತಿ ನೀಡಲಾಗಿದ್ದು ಗ್ರಾಮಗಳಲ್ಲಿ ಸ್ವಚ್ಚತೆ ಬಗ್ಗೆ ಹೆಚ್ಚು ಗಮನಹರಿಸುವಂತೆ ಜಿಪಂ ಸಿಇಒ ಎಂ.ಎಸ್.ದಿವಾಕರ್ ಕಿವಿಮಾತು ಹೇಳಿದರು. ನಗರದ ರುಡ್ ಸೆಟ್ ಕೇಂದ್ರದಲ್ಲಿ ಗ್ರಾಪಂ ವ್ಯಾಪ್ತಿ ಮಹಿಳಾ ಸಂಘಗಳಿಂದ ಅಯ್ದ ಸದಸ್ಯರಿಗೆ ಘನತ್ಯಾಜ್ಯ ವಿಲೆವಾರಿ ವಾಹನಗಳಿ ವಾಹನ ತರಬೇತಿ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ತರಬೇತಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಸ್ವಚ್ಛ ಭಾರತ ಮಿಷನ್‌’ ಯೋಜನೆಯಡಿ ಘನ ತ್ಯಾಜ್ಯ ನಿರ್ವಹಣೆ ಅನುಷ್ಠಾನಕ್ಕೆ ಸಂಜೀವಿನಿ ಗ್ರಾಮ ಪಂಚಾಯಿತಿ ಮಹಿಳಾ ಒಕ್ಕೂಟಗಳ ಗುಂಪಿನ ಸದಸ್ಯರಿಗೆ ‘ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆ’ಯಲ್ಲಿ (ರುಡ್ ಸೆಟ್) ತರಬೇತಿ ನೀಡಲಾಗಿದೆ
ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ಮಾಡಿ, ಮಹಿಳಾ ಒಕ್ಕೂಟಗಳ ಗುಂಪಿನ ಸದಸ್ಯರಿಂದಲೇ ನಡೆಸಲು ನಿರ್ಧರಿಸಿದ್ದೇವೆ. ಮನೆ–ಮನೆಗಳಿಂದ ಕಸವನ್ನು ಸಂಗ್ರಹಿಸಿ, ವಿಂಗಡಿಸಿ, ಗೊಬ್ಬರ ಉತ್ಪಾದನೆ ಮಾಡಿ, ಮಾರಾಟ ಮಾಡುವವರೆಗೆ ಎಲ್ಲ ಕೆಲಸಗಳನ್ನು ಮಹಿಳೆಯರೇ ನಿರ್ವಹಣೆ ಮಾಡಲಿದ್ದಾರೆ’ ಮಹಿಳೆಯರಿಗೆ ವಾಹನ ಚಾಲನೆ ಹುದ್ದೆಗಳಿಗೆ ಆಯ್ಕೆಮಾಡಿ ವಾಹನ ತರಬೇತಿ ನೀಡಲಾಗಿದೆ
‘ಪುರುಷ ಚಾಲಕರ ಮೇಲಿನ ಅವಲಂಬನೆ ತಪ್ಪಿಸಲು 18 ರಿಂದ 45 ವರ್ಷದೊಳಗಿನ ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ನೀಡಿ ತರಬೇತಿ ಪಡೆದವರಿಗೆ ಡಿ.ಎಲ್‌ ಕೊಡಿಸಿ, ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಕಲ್ಪಿಸಲಾಗಿದೆ‌ ತರಬೇತಿ ಪಡೆದವರು ಗ್ರಾಮದಲ್ಲಿನ ಮನೆ ಮನೆಗಳಿಗೆ ಹೋಗಿ ಒಣ ಕಸ.ಹಸಿ ಕಸ ವಿಂಗಡಿಸಿ ಘನತ್ಯಾಜ್ಯ ಘಟಕದಲ್ಲಿ ಬೇರ್ಪಡಿಸುವ ಮೂಲಕ ಗ್ರಾಮಗಳ ಸ್ವಚ್ಚತೆಗೆ ಸಹಕರಿಸುವಂತೆ ತಿಳಿಸಿದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *