ಚಳ್ಳಕೆರೆ (ನ.24). ರಸ್ತೆ ತೆರವುಗೊಳಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದಿಂದ ಶುಕ್ರವಾರ ಬೆಳಗ್ಗೆ 11 ಗಂಟೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಂಡೆ. ಚಳ್ಳಕೆರೆ ತಾಲೂಕಿನ ಪರಶುರಾಂಪುರ ಕಾವಲು ಬಳಿ ರೈತರ ಜನೀನುಗಳಿಗೆ ಹೋಗುವ ದಾರಿಗೆ ಅಡ್ಡಿ ಪಡಿಸುತ್ತಿರುವ ಬಗ್ಗೆ ಕಂದಾಯ ಇಲಾಖೆಗೆ ಸಾಕಷ್ಟು ಬಾರಿ ಮನವಿ ನೀಡಿದರೂ ಸಹ ದಾರಿ ಬಿಡಿಸಲು ಅಧಿಕಾರಿಗಳು ಇಚ್ಚಾ ಶಕ್ತಿ ತೋರುತ್ತಿಲ್ಲ ದಾರಿಯಿಲ್ಲದೆ ರೈತರು ಜಮೀನುಗಳಿಗೆ ಹೋಗಲು ಅಡ್ಡಿಯಾಗಿದ್ದು ದಾರಿ ತೆರವುಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಅಖಂಡ ಕರಚನಾಟಕ ರಾಜ್ಯ ರೈತ ಸಂಘದಿಂದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಅಖಂಡ ಕರ್ನಾಟ ರಾಜ್ಯ ರೈತ ಸಂಘದ ಸಂಸ್ಥಾಪಕ ಸೋಮಗುದ್ದು ರಂಗಸ್ವಾಮಿ ತಿಳಿಸಿದ್ದಾರೆ.
0 Comments