ಚಳ್ಳಕೆರೆ ನಗರಸಭೆ ಕಚೇರಿಯ ಐದು ಸಿಬ್ಬಂದಿಗಳ ವರ್ಗಾವಣೆ ಬೆನ್ನಲ್ಲೇ ಇನ್ನು ಹತ್ತು ಜನರ ವರ್ಗಾವಣೆ ಪಟ್ಟಿಯಲ್ಲಿದ್ದಾರಂತೆ…?

by | 03/11/23 | ಜನಧ್ವನಿ

ಚಳ್ಳಕೆರೆ ಜನಧ್ವನಿ ವಾರ್ತೆ ನ.3.ನಗರಭೆ ಕಚೇರಿಯಲ್ಲಿನ ಸಾರ್ವಜನಿಕರ ಕೆಲಸ ವಿಳಂಭ ದೋರಣೆಯಿಂದ ಜನಸಂಪರ್ಕ ಸಭೆಯಲ್ಲಿ ನಗರಸಭೆ ಕಚೇರಿ ಸಿಬ್ಬಂದಿಗಳ ವಿರುದ್ದು ದೂರಿನ ಸುರಿಮಳೆ ಗೈದ ಬೆನ್ನಲ್ಲೇ ಬಹಳ ದಿನಗಳ ಕಾಲ ಕಚೇರಿಯಲ್ಲಿದ್ದ ಐದು ಜನ ಸಿಂಬಂದಿಗಳ ವರ್ಗಾವಣೆ ನಂತರ ನಗರದಲ್ಲಿ ಪರ ವಿರೋದ ಸ್ವರ ಕೇಳಿ ಇನ್ನು ಬಹಳ ದಿನಗಳಿಂದ ಉಳಿದ ಸಿಬ್ಬಂದಿಗಳನ್ನೂ ಸಹ ವರ್ಗಾವಣೆ ಮಾಡ ಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಬೆನ್ನಲ್ಲೇ ಇನ್ನು ಹತ್ತು ಜನ ಸಿಬ್ಬಂದಿಗಳ ವರ್ಗಾವಣೆ ಯಾಕ್ತಾರೆ ಎಂಬ ಸುದ್ದಿ ಹಾರಡುತ್ತಿದೆ ವರ್ಗಾವಣೆ ಯಾಕ್ತಾರ ? ಆಗಾದರೆ ಯಾರೆಲ್ಲ ಇದ್ದಾರೆ ? ಎಂಬ ಪ್ರಶ್ನೆಗಳ ಉತ್ತರಕ್ಕೆ ವರ್ಗಾವಣೆ ಪಟ್ಟಿ ಹೊರ ಬಿದ್ದನಂತರವೇ ಗೊತ್ತಾಗ ಬೇಕಿದೆ…
ಸಂಧಾನ ವಿಫಲ. ಶಾಸಕ ಟಿ.ರಘುಮೂರ್ತಿಯವರು ನಗರಸಭೆ ಕಚೇರಿಯಲ್ಲಿ ಅ.9 ರಂದು ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಇ-ಸ್ವತ್ತು ಖಾತೆ. ಖಾತೆ ಬದಲಾವಣೆ ವಿಳಂಬ .ಖಾತೆ ಮಾಡಲು ಲಕ್ಷ ಗಟ್ಟಲೆ ಲಂಚದ ಆರೋಗಳ ಸುರಿಮಳೆಯಿಂದ
ಕೆಲಸ ಮಾಡದ ಸಿಬ್ಬಂದಿಗಳು ನೀವಾಗಿ ನೀವೆ ವರ್ಗಾವಣೆಗೆ ಅರ್ಜಿ ಸಲ್ಲಿಸಿ ಎಂದು ಅಧಿಕಾರಿಗಳ ವಿರುದ್ದ ಕಿಡಿ ಕಾರಿದ ಬೆನ್ನಲ್ಲೇ ನಗರಸಭೆ ಸಿಬ್ಬಂದಿಗಳು ಶಾಸಕರ ಮನೆಗೆ ಹೋಗಿ ಕೆಲವು ತಾಂತ್ರಿಕ ದೋಷದಿಂದ ಕಚೇರಿ ಕೆಲಸ ವಿಳಂಬ ವಾಗಿದೆ ಸರಿಪಡಿಸಿಕೊಳ್ಳುತ್ತೇವೆ ಎಂದು ಶಾಸಕಿಗೆ ಮನವರಿಕೆ ಮಾಡಿ ರಿಕ್ ವೆಸ್ಟ್ ಕೇಳಿದ್ದಾರೆ ಆದರೂ ಸಹ 5 ಜನರ ವರ್ಗಾವಣೆ ಪಟ್ಟಿ ದಿಢೀರ್ ಬಿಡುಗಡೆಯಾದ ಬೆನ್ನಲ್ಲೇ ಇನ್ನು ಹತ್ತು ಜನರ ಪಟ್ಟಿ ಸಿದ್ದಾವಾಗಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ ವರ್ಗಾವಣೆ ಪಟ್ಟಿ ಬಿಡುಗಡೆ ತನಕ ಕಾದು ನೋಡ ಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *