ನಿಧಿ ಆಸೆ ತೊರಿಸಿ ಹಣ ಪೀಕುತ್ತಿದ್ದ ಕತ್ರನಾಕ್ ದಂಪತಿ ಆರೋಪಿಗಳನ್ನು ಎಡೆಮುರಿಕಟ್ಟಿ ಬಂದಿಸಿ ಕಂಬಿ ಹಿಂದೆ ಕಳಿಸಲು ಚಳ್ಳಕೆರೆ ಪೊಲೀಸರು ಯಶಸ್ವಿ

by | 01/05/23 | ಕ್ರೈಂ

ಚಳ್ಳಕೆರೆ ಜನಧ್ವನಿ ವಾರ್ತೆ ಮೇ.1ನಿಧಿ ಆಸೆ ತೊರಿಸಿ ಹಣ ಪೀಕುತ್ತಿದ್ದ ಕತ್ರನಾಕ್ ದಂಪತಿ ಆರೋಪಿಗಳನ್ನು ಎಡೆಮುರಿಕಟ್ಟಿ ಬಂದಿಸಿ ಕಂಬಿ ಹಿಂದೆ ಕಳಿಸಲು ಚಳ್ಳಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಳ್ಳಕೆರೆ ನಗರದ ಆಶ್ವಿನಿ ಹೊಟೇಲ್‌ನ ಮಾಲೀಕರಾದ ಶಂಕರಪ್ಪ ಇವರ ಹೊಟೇಲ್‌ಗೆ ದಿನಾಂಕ 23-5-2021ರಂದು ಊಟಕ್ಕೆ ಬಂದಿದ್ದಾಗ ಇದ್ದಕ್ಕಿಂತ ದೇವರ ಮೈಮೇಲೆ ಬಂದಂಗೆ ಹೈಡ್ರಾಮವಾಡಿ ನಿಮಗೆ ನಿಧಿ ಸಿಗುತ್ತದೆ ಅದನ್ನು ಪಡೆಯದಿದ್ದರೆ ನಿಮ್ಮ ಮಗನಿಗಾಗಲಿ ಅಥವಾ ನಿಮಗೆ ಮರಣ ಬರುತ್ತದೆ ಎಂದು ಬೀತಿ ಹುಟ್ಟಿಸಿ 21 ದಿನ ಪೂಜೆ ಮಾಡಿದರೆ ಸಾವು ಬರುವುದಿಲ್ಲ ಎಂದು ಬೀತಿ ಹುಟ್ಟಿಸಿ ಪೂಜೆ ಹೆಸರಿನಲ್ಲಿ ದಿನಕ್ಕೆ 10 ಸಾವಿರ ರೂ ನಂತೆ ಒಟ್ಟು 1.80 ಲಕ್ಷ ರೂಗಳನ್ನು ನೀಡಿರುತ್ತಾರೆ.
ವಜ್ರ ಹರಳುಗಳು ಸಿಕ್ಕಿರುತ್ತವೆ. ಅದನ್ನು ಮಾರಟ ಮಾಡಬೇಕು ಹಾಗೂ ಹರಳುಗಳನ್ನು ಜೋಡಿಸಲು ಬಂಗಾರ ಕೊಡಿ ಎಂದು ಹೇಳಿ ಪಿರಾದಿಯವರ ಕಡೆಯಿಂದ 15 ಗ್ರಾಂ, ಬಂಗಾರ, 10ತೊಲ ಬೆಳ್ಳಿ, ವಿವೋ ಕಂಪನಿಯ ಮೊಬೈಲ್‌ನ್ನು ಪಡೆದುಕೊಂಡು ಹೋಗುತ್ತಾರೆ,
ನಂತರ ಪೂಜೆ ಮಾಡಬೇಕೆಂದು ಹೇಳಿ ಹಂತ ಹಂತವಾಗಿ 1.43ಲಕ್ಷ ರೂಪಾಯಿಗಳನ್ನು ಪಡೆದು ಲಾಭ ಪಡೆಯಬೇಕೆಂಬ ದುರುದ್ದೇಶದಿಂದ ನಿಧಿ ದೊರೆಯುತ್ತದೆ ಎಂದು ಸುಳ್ಳು ಹೇಳಿ ನಮ್ಮಿಂದ ಬಂಗಾರ, ಬೆಳ್ಳಿ ಆಭರಣಗಳನ್ನು ಹಾಗೂ ನಗದನ್ನು ಪಡೆದು ನಂಬಿಕೆ ದ್ರೋಹ ಮಾಡಿರುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ
ಚಳ್ಳಕೆರೆ ಪೊಲೀಸ್ ಠಾಣೆ ಮೊ.ನಂ.170/2022ಕಲಂ.420,417ರೆ/ವಿ34 ಐ.ಪಿ.ಸಿ. ರೀತ್ಯ ಪ್ರಕರಣ ದಾಖಲಾಗಿರುತ್ತದೆ.

ಸದರಿ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಲು ಎಸ್ಪಿ ಪರಶುರಾಮ್.ಕೆ, ಐ.ಪಿ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಹ.ಕುಮಾರಸ್ವಾಮಿ . ಚಳ್ಳಕೆರೆ ಉಪಾಧೀಕ್ಷಕ ರಮೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಚಳ್ಳಕೆರೆ ಠಾಣೆಯ
ನಿರೀಕ್ಷಕ ಆರ್.ಎಫ್ ದೇಸಾಯಿರವರ ನೇತೃತ್ವದಲ್ಲಿ ಚಳ್ಳಕೆರೆ ಪೊಲೀಸ್ ಠಾಣೆ ಮಪಿಎಸ್‌ಐ ರವರಾದ ಪ್ರಮೀಳಮ್ಮ ಹಾಗೂ ಸಿಬ್ಬಂದಿಯವರಾದ ಹಾಲೇಶ್, ಗುಮ್ಮ, ಶಿವರಾಜ್, ಶ್ರೀಧರ, ವಸಂತ, ಧರಣ್ಣವರ್, ರವರನ್ನೊಳಗೊಂಡ
ತAಡವನ್ನು ರಚಿಸಿದ್ದು, ಸದರಿ ತಂಡದವರು ಪ್ರಕರಣದ ಆರೋಪಿಯಾದ
ಎ-1 ಮುದ್ದುರಂಗಪ್ಪ ಹವಾಲ್ದಾರ್ ತಂದ ಕೃಷ್ಣಷ್ಟ ಹವಾಲ್ದಾರ್, 53 ವರ್ಷ, ಚೌಡೇಶ್ವರಿ ಹಾಳ ಗ್ರಾಮ, ಸುರಪುರ, ಶಹಾಪುರ
ತಾಲ್ಲೂಕು ಯಾದಗಿರಿ ಜಿಲ್ಲೆ. ಹಾಲಿ ವಾಸ ಮದಕರಿಪುರ ಗ್ರಾಮ, ಚಿತ್ರದುರ್ಗ ತಾಲ್ಲೂಕು
ಎ-2 ಮಧುಮತಿ ಗಂಡ ಮುದ್ದುರಂಗಪ್ಪ ಹವಾಲ್ದಾರ್, 38ವರ್ಷ, ಚೌಡೇಶ್ವರಿ ಹಾಳ ಗ್ರಾಮ, ಸುರಪುರ, ಶಹಾಪುರ ತಾಲ್ಲೂಕು
ಯಾದಗಿರಿ ಚಿಲ್ಲ, ಹಾಲಿ ವಾಸ ಮದಕರಿಪುರ ಗ್ರಾಮ, ಚಿತ್ರದುರ್ಗ ತಾಲ್ಲೂಕು ರವರನ್ನು ವಶಕ್ಕೆ ಪಡೆದು ಸದರಿ ಆರೋಪಿತರಿಂದ
10 ಗ್ರಾಂ ತೂಕದ ಬಂಗಾರದ ಕೊರಳು ಸರ, ಸುಮಾರು 55,೦೦೦/- ರೂ ಮೌಲ್ಯ, 71 ಗ್ರಾಂ ತೂಕದ ಬೆಳ್ಳಿಯ ಕಾಲು ಚೈನ್,
ಸುಮಾರು 3000/- ಮೌಲ್ಯ, ಹಾಗೂ 1 ಲಕ್ಷ ರೂ- ನಗದು ಹಣ, ಹಾಗೂ 1.40 ಲಕ್ಷ ರೂ- ರೂ ಬೆಲೆಯ ಕೆಎ33 ಎಂ-1711
ನAಬರಿನ ವಾಟ ಇಂಡಿಕಾ ವಿನ್ಯಾ ಕಾರ್ ಒಟ್ಟು 2.98 ಲಕ್ಷ ರೂಪಾಯಿ ಬೆಲೆಬಾಳುವ ಮೇಲ್ಕಂಡವುಗಳನ್ನು ಅಮಾನತ್ತು
ಪಡಿಸಿಕೊಂಡಿರುತ್ತದೆ.
ಸದರಿ ಪತ್ತೆ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆರವರು ಶ್ಲಾಘಿಸಿರುತ್ತಾರೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page