ಹೊಸವರ್ಷ ಸಂಭ್ರಮಾಚರಣೆಗೆ ಕೇಕ್ ಹಾಗು ಹೊಸ ಬಟ್ಟೆ ಖರೀದಿಗೆ ಮುಗಿಬಿದ್ದ ಜನರು.

by | 31/12/23 | ಸುದ್ದಿ


ಚಳ್ಳಕೆರೆ : ಹೊಷವರ್ಷ ಸಂಭ್ರಮಾಚರಣೆಗೆ ನಗರದ. ಬೇಕರಿ ಹಾಗೂ ಹೊಸ ಬಟ್ಟೆ ಖರೀದಿ ಬಲು ಜೋರಾಗಿತ್ತು. ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿ ಇದ್ದರು ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಯುವಕ ಯುವತಿಯರು ಹಾಗೂ ವಿದ್ಯಾರ್ಥಿಗಳು ಹೊಸ ವರ್ಷ ಆಚರಣೆಗೆ ಭರದ ಸಿದ್ಧತೆ ನಡೆಸಿದ್ದಾರೆ 2024 ಹೊಸ ವರ್ಷದ ಆಗಮನದ ಹಿನ್ನಲೆಯಲ್ಲಿ ಪಟ್ಟಣದ ವಿವಿಧ ಬೇಕರಿಗಳಲ್ಲಿ ಬಗೆಬಗೆಯ ಕೇಕ್ ಗಳ ತಯಾರಿ ಹಾಗೂ ಮಾರಾಟ ಭರದಿಂದ ಸಾಗಿದ್ದು ಗ್ರಾಹಕರ ಗಮನ ಸೆಳೆಯುತ್ತಿವೆ.ಹೊಸ ವರ್ಷಾಚರಣೆಗೆ ಕೇಕ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದ್ದು ದುಬಾರಿಯಾದರೂ ಪರವಾಗಿಲ್ಲ, ಹೊಸ ವರ್ಷಾಚರಣೆಗೆ ಕೇಕ್ ಬೇಕೆಬೇಕು ಎಂಬಂತಾಗಿದ್ದು ಈಗಾಗಲೇ ಬೇಕರಿಗಳಲ್ಲಿ ನೂರಾರು ಸಂಖ್ಯೆಯ ಕೇಕ್‌ಗಳು ತಯಾರಾಗಿ ಪೈಪೋಟಿಯ ಮೇಲೆ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿವೆ.


ನಗರದ ಬೆಂಗಳೂರು ರಸ್ತೆ ಬಳ್ಳಾರಿ ರಸ್ತೆ ಪಾವಗಡ ರಸ್ತೆ ಹಾಗೂ ಚಿತ್ರದುರ್ಗ ರಸ್ತೆಗಳಲ್ಲಿ ಇರುವ ಬೇಕರಿಗಳಲ್ಲಿ ಹೊಸವರ್ಷದ ಅಂಗವಾಗಿ ತಹರೇವಾರಿ ಕೇಕ್ ಗಳನ್ನು ಪ್ರದರ್ಶಿಸಿರುವುದು.

ನೂತನ ವರ್ಷದ ಸಂಭ್ರಮಾಚರಣೆಯನ್ನು ಕೇಕ್ ಕತ್ತರಿಸಿ ಸಿಹಿ ಹಂಚಿ ಆಚರಿಸುವ ಪರಿಪಾಟವಿದ್ದು ಕಾಲು ಕೆಜಿ ಗಾತ್ರದ ಸಣ್ಣ ಕೇಕ್‌ನಿಂದ ೧೦ಕೆಜಿಯ ಬೃಹತ್ ಗಾತ್ರದ ಕೇಕ್‌ಗಳನ್ನು ಬೇಕರಿಗಳಲ್ಲಿ ಮಾರಾಟಕ್ಕೆ ಸಿದ್ಧಪಡಿಸಲಾಗಿದೆ. ಡಿ.31ರ ರಾತ್ರಿ ಹೊಸ ವರ್ಷಾಚರಣೆಗೆ ಭರದಿಂದ ವ್ಯಾಪಾರ ಸಾಗಿದ್ದು ಜ.1ರಂದೂ ಕೂಡ ಕೇಕ್ ಮಾರಾಟ ಮುಂದುವರಿಯುತ್ತದೆ.ಕೇಜಿ ಕೇಕ್ ಗೆ ರು. 300 ರೂನಿಂದ 1200 ರೂವರೆಗೆ ಮಾರಾಟವಾಗುತ್ತಿದೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಜನರನ್ನು ತೃಪ್ತಿಪಡಿಸುವಲ್ಲಿ ಪಟ್ಟಣದ ವಾಸವಿ ಬೇಕರಿ ರಾಯಲ್ ಬೇಕರಿ ಶ್ರೀನಿವಾಸ ಬೇಕರಿ ಸೇರಿದಂತೆ ಪ್ರತಿಷ್ಠಿತ ಬೇಕರಿಗಳ ಮಾಲೀಕರು ಶುಕ್ರವಾರದಿಂದಲೇ ವಿವಿಧ ಕೇಕ್ ಗಳ ತಯಾರಿ,ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ.


ಹೊಸವರ್ಷದ ಆಚರಣೆಯ ವೇಳೆ ಹೆಚ್ಚಿನ ಕೇಕ್ ಗೆ ಡಿಮ್ಯಾಂಡ್ ಇರುತ್ತದೆ.ಅದಕ್ಕಾಗಿ ಗ್ರಾಹಕರ ಬಯಕೆಗೆ ತಕ್ಕಂತೆ ಕೇಕ್ ಗಳನ್ನು ಸಿದ್ದಪಡಿಸಿ ಮಾರುತ್ತಿದ್ದೇವೆ. ಗ್ರಾಹಕರಿಂದ ಅರ್ಡರ್ ತೆಗೆದುಕೊಂಡು ಕೆಲ ಕೇಕ್ ತಯಾರಿಸಿದರೆ , ಮತ್ತೆ ಕೆಲ ಕೇಕ್ ಗಳನ್ನು ವಿವಿಧ ಮಾದರಿಗಳಲ್ಲಿ ನಾವೇ ತಯಾರಿಸುತ್ತೇವೆ

ಪವಿತ್ರಣ್

ಡಿಲೆಕ್ಸ್ ಓವನ್ ಪ್ರೆಷ್ ಬೇಕರಿ ಮಾಲೀಕ

 

ಫೈನಾಫಲ್, ಅರೇಂಜ್, ಐಸ್ ಕ್ರೀಂ ಕೇಕ್, ಆಪಲ್ ಕೇಕ್, ಚಾಕಲೇಟ್ ಕೇಕ್,ಹನಿಕೇಕ್,ಪ್ಲಂ ಕೇಕ್ ಸೇರಿದಂತೆ ಹಲವು ಬಗೆಯ,ನಾನಾ ತೂಕದ ಕೇಕ್ ಗಳು ಎಲ್ಲಾ ಬೇಕರಿಯಲ್ಲೂ ಸಿದ್ದಪಡಿಸಿದ್ದು, ಮಿಕ್ಕಿಮೌಸ್,ಹೂವಿನಕುಂಡ, ಹೃದಯ, ಗಿಟಾರ್,ಫ್ಲವರ್ ಸೇರಿದಂತೆ ವಿವಿಧ ಆಕೃತಿ ಹಾಗೂ ಬಣ್ಣದಲ್ಲಿ ಜನರು ಹೇಳುವ ಆಕೃತಿಯಲ್ಲಿ ಕೇಕ್ ತಯಾರಿಸಿಕೊಡುತ್ತಾರೆ.ಬೆಂಗಳೂರು ಬೇಕರಿಯ ಧರ್ಮರಾಜ್ ಅವರು ಕಳೆದ ಹತ್ತಾರು ವರ್ಷದಿಂದ ಹೊಸವರ್ಷದ ಆಚರಣೆ ಅಂಗವಾಗಿ ಆಕರ್ಷಕ ಕೇಕ್ ಗಳ ತಯಾರಿ ಮಾಡುತ್ತಿದ್ದು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ ಕೇಕ್ ತಯಾರಿಸಿಕೊಡುತ್ತಾರೆ.

ಜಗದೀಶ್ ರಾಮಾಚಾರಿ

ಗ್ರಾಹಕ

ನಗರದಲ್ಲಿ ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು ರಾತ್ರಿ ಇಡೀ ಗಸ್ತು ತಿರುಗಳು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಸಾರ್ವಜನಿಕರು ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕು ಕಿಡಿಗೇಡಿಗಳು ಅಹಿತಕರ ಘಟನೆಗಳನ್ನು ನಡೆಸಲು ಮುಂದಾದರೆ ನಿರ್ದಾಕ್ಷಣವಾಗಿ ಕ್ರಮ ಕೈಗೊಳ್ಳಲಾಗುವುದು


ಟಿಬಿ ರಾಜಣ್ಣ

ಡಿ ವೈ ಎಸ್ ಪಿ ಚಳ್ಳಕೆರೆ

ಒಟ್ಟಾರೆ ಹೊಸವರ್ಷ ಆಚರಣೆಯಲ್ಲಿ ಕೇಕ್ ವ್ಯಾಪಾರ ಭರಾಟೆಯಿಂದ ಕೂಡಿದ್ದು ಪಟ್ಟಣದ ಪ್ರತಿ ಬೇಕರಿಗಳಲ್ಲಿ ಗ್ರಾಹಕರಿಗಾಗಿ ಕೇಕ್ ಗಳು ಸಿದ್ದಗೊಂಡು ಕಾಯುತ್ತಿವೆ. ಯುವ ಜನತೆ ಮಧ್ಯರಾತ್ರಿ 12 ಗಂಟೆ ವೇಳೆಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತ ಕುಳಿತಿದ್ದು ನಗರದ ಪ್ರತಿಷ್ಠಿತ ಹೋಟೆಲ್ ಗಳು ಡಾಬಾಗಳು ಲೇಔಟ್ ಗಳು ಪಾರ್ಕ್‌ ಗಳು ಸೇರಿದಂತೆ ಹಲವಡೆಗಳಲ್ಲಿ ಸಿದ್ಧತೆಗಳು ಬರದಿಂದ ಸಾಗಿದ್ದು ಮಧ್ಯ ಮಾರಾಟಗಾರರು ಹೋಟೆಲ್ ಮಾಲೀಕರು ಬಟ್ಟೆ ಅಂಗಡಿಯ ಮಾಲೀಕರು ಸೇರಿದಂತೆ ವ್ಯಾಪಾರಸ್ಥರು ಉತ್ತಮ ವ್ಯಾಪಾರದ ನಿರೀಕ್ಷೆಹೊಂದಿದ್ದಾರೆ

Latest News >>

ವೈದ್ಯಕೀಯ ಕ್ಷೇತ್ರ ನೊಬೆಲ್ ವೃತ್ತಿಯಾಗಿದ್ದು,ನಾವು ರೋಗಿಗಳ ಸೇವೆಮಾಡುವಲ್ಲಿ ದೇವರನ್ನ ಕಾಣಬೇಕು. ಬೆಂ.ಗ್ರಾ.ಕ್ಷೇತ್ರದಸಂಸದ ಡಾ.ಸಿ.ಎನ್.ಮಂಜುನಾಥ್

ತುಮಕೂರು : ವೈದ್ಯಕೀಯ ಕ್ಷೇತ್ರ ನೊಬೆಲ್ ವೃತ್ತಿಯಾಗಿದ್ದು ಸಾರ್ವಜನಿಕರು, ರೋಗಿಗಳು ನಮ್ಮನ್ನು ದೇವರಿಗೆ ಹೋಲಿಕೆ ಮಾಡುತ್ತಾರೆ. ನಾವು...

ಹೊಸ ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿದಾರರನ್ನು ವರ್ಗಾಯಿಸಿದಂತೆ ಗ್ರಾಮಸ್ಥರ ಆಗ್ರಹ 

ಚಳ್ಳಕೆರೆ: ತಾಲೂಕಿನ ಜಾಜೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳು ವಾಸಿಸುವ ಕಾಲೋನಿಯ ಪಡಿತರ ಚೀಟಿದಾರರ ಅನುಮತಿ ಪಡೆಯದೆ...

ಪಹಣಿಗೆ ಆಧಾರ್ ಜೋಡಣಿ: ತಿಂಗಳಾಂತ್ಯಕ್ಕೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

ಚಳ್ಳಕೆರೆ ಜು.16 ಪಹಣಿಗೆ ಆಧಾರ್ ಜೋಡಣೆ ಕಾರ್ಯವನ್ನು ಪ್ರಥಮಾಧ್ಯತೆಯಾಗಿ ಪರಿಗಣಿಸಿ, ತಿಂಗಳಾಂತ್ಯಕ್ಕೆ ತಾಲ್ಲೂಕಿನಲ್ಲಿ ಪ್ರಗತಿ ಸಾಧಿಸಬೇಕು...

ನಗರದ ಪಾದಾಚಾರಿಗಳ ರಸ್ತೆ ಮೇಲಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ವೆಂಕಟೇಶ್ ಬಳಿ ದೂರು.

ಚಳ್ಳಕೆರೆ ಜು.16 ಪುಟ್ ಬಾತ್ ನಲ್ಲಿ ಅಕ್ರಮ ಪೆಟ್ಟಿಗೆ ಅಂಗಡಿಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ ಕೂಡಲೆ...

ಗೃಹ ಲಕ್ಷ್ಮೀ ಯೋಜನೆ: ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ

ಚಿತ್ರದುರ್ಗ ಜು.16: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರು ಸಹ ಯೋಜನೆಯ ಸೌಲಭ್ಯ...

ಸಿದ್ದು ಬೆನ್ನಿಗೆ ಇದೆ ದಲಿತ ಶಕ್ತಿ ಟೀಕೆ, ಆರೋಪಗಳಿಗೆ ಎದೆಗುಂದದಿರಿ ಮಾಜಿ ಸಚಿವ ಎಚ್.ಆಂಜನೇಯ ಅಭಯ ಆಂಜನೇಯ ಅವರಿಗೆ ಬೆಳ್ಳಿಗಧೆ ನೀಡಿ ಗೌರವಿಸಿದ ದಲಿತ ಮುಖಂಡರು*

ಚಿತ್ರದುರ್ಗ: ಅಹಿಂದ ವರ್ಗದ ಕಣ್ಮಣಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ನಿರ್ಭಯವಾಗಿ ಕಾರ್ಯನಿರ್ವಹಿಸಬೇಕು. ಈ ಕಾರ್ಯಕ್ಕೆ ಇಡೀ ದಲಿತ...

ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಜನರನ್ನ ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖಪಾತ್ರ ವಹಿಸುತ್ತವೆ:ರಾಜ್ಯಾಧ್ಯಕ್ಷರಾದ ಬಂಗ್ಲೆಮಲ್ಲಿಕಾರ್ಜುನ್

ಹಿರಿಯೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಸಮಾಜದ ಜನರನ್ನು ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ...

ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ ತಂದು ಮನುಕುಲಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಭಗೀರಥ ಗುರುಪೀಠದ ಜಗದ್ಗುರು ಶ್ರೀ ಶ್ರೀ ಡಾ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ

ಪರಶುರಾಮಪುರ ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ...

ಪೀರಲು ದೇವರು ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ

ಹಿರಿಯೂರು: ನಗರದ ಚಿಕ್ಕಪೇಟೆ ಬಳಿ ಇರುವ ಪೀರಲು ದೇವರುಗಳ ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ ನಡೆಯುತ್ತಿದ್ದು...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page