ಹೆರಿಗೆಯೂ ಇಲ್ಲ, ತುರ್ತುವಾಹನ ಸೌಲಭ್ಯವಿಲ್ಲದೆ ಆಟೋದಲ್ಲೇ ಗರ್ಭಿಣಿ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದ ಅಮಾನವೀಯ ಘಟನೆ ನಡೆದಿದೆ.

by | 22/05/23 | ಆರೋಗ್ಯ


ಚಳ್ಳಕೆರೆ ಜನಧ್ವನಿ ವಾರ್ತೆ ಮೇ 22
ಹಣ ನೀಡಲಿಲ್ಲವೆಂದು ಹೆರಿಗೆ ಮಾಡಿಸಲು ಮುಂದಾಗದ ಇರುವುದರಿಂದ ತುಂಬು ಗರ್ಭಿಣಿಯನ್ನು ಆಟೋದಲ್ಲೇ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದ ಅಮಾನವೀಯ ಘಟನೆಯೊಂದು ಸೋಮವಾರ ಚಳ್ಳಕೆರೆ ನಗರದಲ್ಲಿ ನಡೆದಿದೆ.

‌‌‌‌ ಚಳ್ಳಕೆರೆ ನಗರದಿಂದ ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ಆಟೋದಲ್ಲಿ ಗರ್ಭಿಣಿ ಮಹಿಳೆಯನ್ನು ಕರೆದುಕೊಂಡು ಹೋಗುತ್ತಿರುವುದು
ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಜಿ,ದೇವರಹಳ್ಳಿ ಗ್ರಾಮದ ಸುಮರಾಣಿ(26) ಸೋಮವಾರ ಮಧ್ಯಹ್ನಾನ 2 ಗಂಟೆಸುಮಾರಿನಲ್ಲಿ ಸರಕಾರಿ ಹೆರಿಗೆ ವೈದ್ಯರಿಗೆ ಸೇರಿದ ಖಾಸಗಿ ಹೆರಿಗೆ ಆಸ್ಪತ್ರೆ ಎನ್ನಲಾದ ಆಸ್ಪತ್ರೆಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ತೋರಿಸಲು ಬಂದಿದ್ದಾರೆ.
ಇದು ಹೆರಿಗೆ ನೋವಾಗಿರುವುದರಿಂದ 38 ಸಾವಿರ ರೂ ಆಗುತ್ತದೆ ಹಣ ಕಟ್ಟಿದರೆ ಹೆರಿಗೆ ಮಾಡಿಸುವುದಾಗಿ ಪ್ರಸೂತಿ ಹಾಗೂ ಸ್ತಿçà ರೋಗ ತಜ್ಞೆ ಡಾ.ಶಮಾಪರ್ವೀನ್ ತಿಳಿಸಿದರು. ಮೇಡಂ ನಮ್ಮ ಬಳಿ ಈಗ ಅಷ್ಟು ಹಣ ಇಲ್ಲ ಸರಕಾರಿ ಆಸ್ಪತ್ರೆಗೆ ಹೋಗುತ್ತೇವೆ ಎಂದು ಹೇಳಿ ನಗರದ ಸಾರ್ವಜನಿಕ ಹೆರಿಗೆ ಆಸ್ಪತ್ರೆಗೆ ಬಂದಾಗ ಅಲ್ಲಿನ ಆರೋಗ್ಯ ಸಹಾಯಕಿಯರು ವೈದ್ಯರಿಗೆ ದೂರವಾಣಿ ಕರೆ ಮಾಡಿ ಹರಿಗೆಗೆ ಬಂದಿದ್ದಾರೆ ಎಂದು ತಿಳಿಸಿದಾಗ ಅವರಿಗೆ ಹೆರಿಗೆ ಮಾಡಿಸಲು ಆಸ್ಪತ್ರೆಗೆ ಸೇರಿಸಿಕೊಳ್ಳ ಬೇಡಿ ಹಾಗೂ ಅಂಬ್ಯೂಲೆನ್ಸ್ ವಾಹನ ಸಹ ಮಾಡಿಕೊಡಬೇಡಿ ಎಂದು ತಿಳಿಸಿದರು.ಇತ್ತ ಹೆರಿಗೆ ನೋವು ಕಾಣಿಸಿಕೊಂಡಿದೆ ಚಳ್ಳಕೆರೆಯಿಂದ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಆಟೋದಲ್ಲೇ ಗರ್ಭಿಣಿ ಮಹಿಳೆಯನ್ನು ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಗರ್ಭಿಣಿ ಪೋಷಕರು ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡರು.
. ಗರ್ಭಿಣಿ ತಾಯಿ ಬೋರಮ್ಮ ಹೆರಿಗೆ ವೈದ್ಯರ ಹಾಗೂ ಅವ್ಯವಸ್ಥೆ ಬಗ್ಗೆ ಆಕ್ರೋಶ ಹೊರಹಾಕಿರುವುದು
ಸರಕಾರಿ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಡಾ.ಶಮಾಪರ್ವೀನ್ ಪತ್ರಿಕೆ ಸಂಪರ್ಕಿಸಿದಾಗ ಜಿ.ದೇವರಹಳ್ಳಿ ಗ್ರಾಮದ ಸುಮರಾಣೀ ಮದುವೆಯಾಗಿ ಸುಮಾರು 10 ವರ್ಷಕಳೆದರೂ ಮಕ್ಕಳಾಗಿರಲಿಲ್ಲ ಒಮ್ಮೆ ಬಂದು ನಮ್ಮಬಳಿ ಸಲಹೆ ಕೇಳಿದರು ಆಗನಾನು ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪ್ರಾರಂಭಿಸಿದೆ ಚಿಕಿತ್ಸೆ ನೀಡಿದಾಗ ಗರ್ಭಿಣಿಯಾದರೂ ಈ ದಿನ ಹೊಟ್ಟೆನೋವು ಎಂದು ಬಂದಿದ್ದರೂ ಸರಕಾರಿ ಆಸ್ಪತ್ರೆಯಲ್ಲಿ ಈದಿನ ಅರವಳಿಕೆ ತಜ್ಞ ಡಾ. ಓಂಕಾರಮೂರ್ತಿ ರಜೆ ಇರುವುದರಿಂದ ಜಿಲ್ಲಾ ಆಸ್ಪತ್ರೆಗೆ ಹೋಗಿ ಎಂದಿದ್ದೇನೆ ಆದರೆ ಸರಕಾರಿ ಆಸ್ಪತ್ರೆಯಲ್ಲಿ ಸೇರಿಸಿಕೊಳ್ಳಬೇಡಿ, ಜಿಲ್ಲಾಸ್ಪತ್ರೆಗೆ ಹೋಗಲು ಅಂಬ್ಯುಲೆನ್ಸ್ ಕಳಿಸ ಬೇಡಿ ಎಂದು ಸಿಬ್ಬಂದಿಗೆ ಹೇಳಿಲ್ಲ ಅವರದೇ ಸ್ವಂತ ಆಟೋವಾಗಿರುವುದರಿಂದ 108 ಕ್ಕೆ ಕರೆಮಾಡದೆ ಹೋಗಿದ್ದಾರೆ. ಕರ್ತವ್ಯದಲ್ಲಿದ್ದ ಆರೋಗ್ಯ ಸಿಬ್ಬಂದಿಗಳು 108 ಕ್ಕೆ ಕರೆ ಮಾಡಿದ್ದಾರೆ ಬರುವಷ್ಟರಲ್ಲಿ ಅವರು ಆಟೋದಲ್ಲಿ ಹೋಗಿದ್ದರು ಎಂಬ ಮಾಹಿತಿಯನ್ನು ತಿಳಿಸಿದರು.

ಗರ್ಭಿಣಿ ತಾಯಿ ಬೋರಮ್ಮ ಮಾತನಾಡಿ ಪತ್ರಿ ತಿಂಗಳು ತಪಾಸಣೆಗೆ ಬಂದಾಗ 3 ರಿಂದ 4 ಸಾವಿರ ಬಿಲ್ ಮಾಡುತ್ತಿದ್ದಾರೆ ಇಂದು 8 ತಿಂಗಳಿಗೆ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ ಈ ದಿನ ಹೆರಿಗೆ ನೋವು ಬಂದಿದೆ ಎಂದು ವೈದ್ಯರ ಬಳಿ ಬಂದರೆ 38 ಸಾವಿರ ರೂ ನೀಡಿದರೆ ಮಾತ್ರ ಹೆರಿಗೆ ಮಾಡಿಸುತ್ತೇನೆ ಎಂದು ಹೇಳಿದ್ದರಿಂದ ಅನಿವಾರ್ಯವಾಗಿ ಜಿಲ್ಲಾಸ್ಪತ್ರೆಗೆ ಆಟೋದಲ್ಲೇ ಹೆರಿಗೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು.


ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಎಂದು ಹೇಳುತ್ತಾರೆ ಇಲ್ಲಿನವೈದ್ಯರು ಖಾಸಗಿ ಆಸ್ಪತ್ರೆಗಳನ್ನಿಟ್ಟುಕೊಂಡು ಹಣ ಮಾಡುತ್ತಿದ್ದಾರೆ ಒಂದು ಹೆರಿಗೆ ಆಗುವಷ್ಟರಲ್ಲಿ ಕನಿಷ್ಟ50ರಿಂದ 70 ಸಾವಿರ ಹಣ ಬೇಕು ಬಡವರು ,ಕೂಲಿ ಕಾರ್ಮಿಕರು ಸಾಲಸೂಲ ಮಾಡಿ ಹೆರಿಗೆ ಮಾಡಿಸುವ ಪರಿಸ್ಥಿತಿ ಬಂದಿದೆ ನಮ್ಮ ಮಗಳಿಗೆ ಆದ ಪರಿಸ್ಥಿತಿ ಮತ್ತೆ ಯಾರಿಗೂ ಆಗದಂತೆ ಸಂಬAಧಪಟ್ಟ ಅಧಿಕಾರಿಗಳು ನೋಡಿಕೊಳ್ಳ ಬೇಕಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸAಬಂಧಪಟ್ಟ ಜಿಲ್ಲಾ ಆರೋಗ್ಯಾಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
WhatsApp Audio 2023-05-22 at 6.05.21 PM
ಗರ್ಭಿಣಿ ಮಹಿಳೆಯ ಕುಟುಂಬರಸ್ಥರು ಜನಧ್ವನಿ ಮೀಡಿಯಾದೊಂದಿಗೆ ಮಾತನಾಡಿರುವುದು.

Latest News >>

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಸಹಾಯವಾಣಿ ಆರಂಭ

ಚಿತ್ರದುರ್ಗ ಮೇ.30: ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ-2024ರ ಸಂಬಂಧ ಶಿಕ್ಷಕರು ಮತ ಚಲಾಯಿಸಲು ಮತದಾರರಿಗೆ ಸಹಾಯ ಮಾಡಲು ಮತದಾರರ...

ಜೆಜೆಎಂ ಕಾಮಗಾರಿ ಪರಿಶೀಲಿಸಿದ ಜಿ.ಪಂ ಸಿಇಒ ಸೋಮಶೇಖರ್

ಮೊಳಕಾಲ್ಮೂರು ಮೇ.30: ಮೊಳಕಾಲ್ಮರು ತಾಲ್ಲೂಕಿನ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕೊಂಡಾಪುರ ಗ್ರಾಮ ಹಾಗೂ ಅಶೋಕ ಸಿದ್ದಾಪುರ ಗ್ರಾಮ...

ಕಾರ್ಮಿಕರಿಗೆ ರಾಜಕೀಯ ತಿಳುವಳಿಕೆ ಬರುವವರೆಗೂ ಜೀವನದಲ್ಲಿ ಬದಲಾವಣೆ ಸಾಧ್ಯವಿಲ್ಲ: ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಪತ್ತರ್

ಚಳ್ಳಕೆರೆ: ಕಾರ್ಮಿಕರಿಗೆ ರಾಜಕೀಯ ತಿಳುವಳಿಕೆ ಬರುವವರೆಗೂ ಅವರ ಜೀವನದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ...

ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಬಹಳ ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಪ್ರದೇಶವನ್ನು ಕಂದಾಯ ಗ್ರಾಮಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಕಾರ್ತಿಕ್.

ಚಳ್ಳಕೆರೆ ಜನಧ್ವನಿಮೆ30 ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಬಹಳ ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಪ್ರದೇಶವನ್ನು...

ಮಗು ಇದೇ ಏಗಪ್ಪ ಕೂಲಿಕೆಲಕ್ಕೆ ಹೋಗೋದು ಎಂಬ ಚಿಂತೆ ಬಿಡಿ ಕೂಸಿನ‌ಮನೆ ಬಿಡಿ ಕೆಲಸಕ್ಕೆ ಹೋಗಿ ಎಂದು ತಾಪಂ ಇಒ‌ ಲಕ್ಷ್ಮಣ್.

ಚಳ್ಳಕೆರೆ ಮೇ.30 ಮಗು ಇದೇ ಏಗಪ್ಪ ಕೂಲಿಕೆಲಕ್ಕೆ ಹೋಗೋದು ಎಂಬ ಚಿಂತೆ ಬಿಡಿ ಕೂಸಿನ‌ಮನೆ ಬಿಡಿ ಕೆಲಸಕ್ಕೆ ಹೋಗಿ ಎಂದು ತಾಪಂ ಇಒ‌ ಲಕ್ಷ್ಮಣ್...

ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ಎಂ.ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆ.

ನಾಯಕನಹಟ್ಟಿ::ಮೇ28. ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ರಾಜಿನಾಮೆಯಿಂದ ತೆರವಾಗಿದ್ದ ಉಪಧ್ಯಾಕ್ಷ ಸ್ಥಾನಕ್ಕೆ ಮಂಗಳವಾರ ನಡೆದ...

ಬಿಜೆಪಿ ನೇತೃತ್ವದ ಸರ್ಕಾರ ದೇಶದ ಜನರ ಸಂಪತ್ತನ್ನು ಕೆಲವೇ ಶತ ಕೋಟ್ಯಾಧಿಪತಿಗಳಿಗೆ ಧಾರೆ ಎರೆದಿದೆ ಸಿ.ವೈ. ಶಿವರುದ್ರಪ್ಪ

ಚಳ್ಳಕೆರೆ ಮೋದಿ ಸರ್ಕಾರ ದೇಶದ ಕಾನೂನುಗಳನ್ನು ಕಾರ್ಪೊರಿಕ್ ಸಾಗರ ಪ ತಿದ್ದುಪಡಿ ಮಾಡಿ, ಅವುಗಳ ಲಕ್ಷಾಂತರ ಕೋಟಿ ರೂಗಳ ಸಾಲ ಮನ್ನಾ ಮಾಡಿದೆ...

ಯುಪಿ ಯಿಂದ ಬಂದು ಅನಧಿಕೃತವಾಗಿ ಸೆಲೂನ್ ಅಂಗಡಿ ಪ್ರಾರಂಭಿಸುತ್ತಿರುವ ವ್ಯಕ್ತಿಗಳಿಗೆ ಅಂಗಡಿ ಪ್ರಾರಂಭಿಸಲು ಪರವಾನಗಿ ನೀಡದಿರಲು ಮನವಿ

ಹಿರಿಯೂರು : ಉತ್ತರಪ್ರದೇಶ ರಾಜ್ಯದಿಂದ ಹಿರಿಯೂರು ನಗರಕ್ಕೆ ಬಂದು ಅನಧಿಕೃತವಾಗಿ ಸೆಲೂನ್ ಅಂಗಡಿ ಪ್ರಾರಂಭಿಸುತ್ತಿರುವ ವ್ಯಕ್ತಿಗಳಿಗೆ ಅಂಗಡಿ...

ವಿದ್ಯುತ್ ತಂತಿ ಹರಿದು ಬಿದ್ದು ಎಮ್ಮೆ ಸ್ಥಳದಲ್ಲೇ ಸಾವು.

ಚಳ್ಳಕೆರೆ ಮೇ28 ಹಳ್ಳದಲ್ಲಿ ಮೇಯುತ್ತಿದ್ದ ಎಮ್ನೆ ಮೇಲೆ ವಿದ್ಯುತ್ ತಂತಿ ಹರಿದ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹೌದು...

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಕಾವಲುಗಾರರ ನೇಮಿಸಿ

ಚಿತ್ರದುರ್ಗ ಮೇ.27: ಜಿಲ್ಲೆಯ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರಬೇಕು. ಒಂದು ವೇಳೆ ಸಿಸಿ ಕ್ಯಾಮೆರಾಗಳು...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page