ಚಳ್ಳಕೆರೆ ಮೇ.10 ಹೂಳು ತುಂಬಿದ ಚರಂಡಿಗಳು ಸಾಂಕ್ರಮಿಕ ರೋಗ ಬೀತಿಯಲ್ಲಿ ಗ್ರಾಮಸ್ಥರು. ಹೌದು ಇದು ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಮಪಂಚಾಯಿತಿ ಕೇಂದ್ರ ಸ್ಥಳವಾದ ಗ್ರಾಮದಲ್ಲಿ ಸಾರ್ವಜನಿಕ ತೆರಿಗೆ ಹಣದಲ್ಲಿ ನಿರ್ಮಿಸಿದ ಚರಂಡಿಗಳು ಹೂಳು ತುಂಬಿಕೊಂಡಿದ್ದು ಸರಾಗವಾಗಿ ನೀರು ಹರಿಯದೆ ಸೊಳ್ಳೆಗಳ ಉತ್ಪತ್ತಿ ತಾಣವಾಗಿದ್ದು ಚರಂಡಿಗಳ ಸ್ವಚ್ಚತೆಯಿಲ್ಲದೆ ಗೊಬ್ಬುವಾಸನೆ ಬೀರುತ್ತಿವೆ. ಚರಂಡಿಗಳ ಪಕ್ಕದಲ್ಲೇ ಕುಡಿಯುವ ನೀರಿನ ನಲ್ಲಿಗಳಿವೆ ಕೆಲವುಕಡೆ ಚರಂಡಿಗಳು ಮುಚ್ವಿಹೋಗಿವೆ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದರೂ ಸಹ ಚರಂಡಿಗಳ ಸ್ವಚ್ಚತೆಗೆ ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳು ಇಚ್ಚಾಶಕ್ತಿ ತೋರುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಮುಂಗಾರು ಮಳೆ ಬರುವ ಸೂಚನೆ ಇದ್ದು ಮಳೆ ಬಂದರೆ ನೀರು ಮನೆಗಳಿಗೆ ನುಗ್ಗುವ ಬೀತಿಯೂ ಸಹ ಎದುರಾಗಿದ್ದು ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಚರಂಡಿಗಳ ಸ್ವಚ್ಚತೆಗೆ ಮುಂದಾಗುವರೇ ಕಾದು ನೋಡ ಬೇಕಿದೆ.
0 Comments