ಹೂಳು ತುಂಬಿದ ಚರಂಡಿಗಳು ಸಾಂಕ್ರಮಿಕ ರೋಗ ಭೀತಿಯಲ್ಲಿ ನಾಗರೀಕರು ಚಳ್ಳಕೆರೆ ನಗರಸಭೆ ವಿರುದ್ದ ಅಕ್ರೋಶ.

by | 08/11/23 | ಪರಿಸರ


ಚಳ್ಳಕೆರೆ ನ.8 ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದು, ಗಬ್ಬು ವಾಸನೆಯಿಂದ ಕೂಡಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ನಗರದ ಜನತೆ ಬದುಕುವಂತಾಗಿದೆ.

ಹೌದು ಇದು ಚಳ್ಳಕೆರೆ ನಗರದ ಮುಖ್ಯ ರಸ್ತೆಯಲ್ಲಿ ನಿರ್ಮಿಸಿರುವ ಚರಂಡಿಗಳು ಬಿಲ್ ಗಾಗಿ ಚರಂಡಿಗಳು ಎಂಬಂತಾಗಿವೆ. ನಗರದ ಚಿತ್ರದುರ್ಗ. ಬೆಂಂಗಳೂರು. ಬಳ್ಳಾರಿ ರಸ್ತೆಗಳ ಪಕ್ಕದಲ್ಲಿ ಚರಂಡಿಗಳಿವೆ ಆದರೆ ನೀರು ಹರಿಯಲ್ಲ ಚರಂಡಿಗಳಲ್ಲಿ ತ್ಯಾಜ್ಯದಿಂದ ತುಂಬಿದ್ದು ನಿಂತಲ್ಲೇ ನಿಂತ ಮಲೀನ ನೀರಿನಿಂದ ರಸ್ತೆ ಪಕ್ಕದಲ್ಲಿ ನಿಂತರೆ ಸಾಕ್ ಗೊಬ್ಬುವಾಸನೆ ಬರುತ್ತದೆ ಅನಿವಾರ್ಯ ವಾಗಿ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಇನ್ನು ಬಳ್ಳಾರಿ ರಸ್ತೆ ಹಾಗೂ ಬೆಂಗಳೂರು ರಸ್ತೆ ಅಭಿವೃದ್ಧಿ ಹೆದರಿನಲ್ಲಿ ನಿರ್ಮಿಸಿರುವ ರಸ್ತೆ ಚರಂಡಿಗಳು ಸಾರ್ವಜನಿಕರ ಬಳಕೆಗೆ ಮುನ್ನವೇ ನೂತನ ಚರಂಡಿಯಲ್ಲಿ ಹುಲ್ಲು.ಗಿಡಗೆಂಟೆಗಳು ಬೆಳೆದಿವೆ ಗುತ್ತಿಗೆದಾರರ ಕಳಪೆ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ ಹೊರ ಹಾಕಿದ್ದಾರೆ.
ತಾಲೂಕಿನಲ್ಲಿ ಮಳೆ ಅಭಾವದಿಂದ ಬರಗಾಲವಿದ್ದರೂ ಗುತ್ತಿಗೆದಾರರು ನಿರ್ಮಿಸಿರುವ ಚರಂಡಿಯಲ್ಲಿ ಯಾವುದೇ ನೀರು ಹರಿಸದೆ ಆಪ್ ಬೆಳೆ ಜಬರ್ದಸ್ತಾಗಿ ಬೆಳೆದಿರುವುದು ನೋಡಿದರೆ ಕಾಮಗಾರಿಯ ಕಳಪೆ ಗುಣಮಟ್ಟ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ನಗರದ ಬೆಂಗಳೂರು ರಸ್ತೆ ಅಗಲೀಕರಣ ಕಾರ್ಯ ಈಗಾಗಲೇ ನಡೆಯುತ್ತಿದ್ದು ನೂತನವಾಗಿ ನಿರ್ಮಿಸಿರುವ ಚರಂಡಿ ಸಾರ್ವಜನಿಕರ ಉಪಯೋಗಕ್ಕೆ ಬರುವ ಮುನ್ನವೇ ಚರಂಡಿಯಲ್ಲಿ ಕಸ ಕಡ್ಡಿ ತುಂಬಿ ಆಫ್ ಬೆಳೆ ಬೆಳೆದುಕೊಂಡಿದ್ದು ಕೆಲವು ಕಡೆ ಕೊಳಚೆ ನೀರು ತುಂಬಿಕೊಂಡಿರುವುದರಿಂದ ಸೊಳ್ಳೆ ಕ್ರಿಮಿಕೀಟಗಳ ವಾಸ ಸ್ಥಳವಾಗಿ ಮಾರ್ಪಟ್ಟು ರೋಗರುಜಿನಗಳಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ ನಗರಸಭೆ ಅಧಿಕಾರಿಗಳಾಗಲಿ ಗುತ್ತಿಗೆದಾರರಾಗಲಿ ಇದರ ಕಡೆ ಗಮನಹರಿಸದಿರುವುದು ಆಡಳಿತ ವೈಖರಿಗೆ ಹಿಡಿದ ಕನ್ನಡಿಯಂತಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ನಗರ ನಿವಾಸಿ ಜೆ ಎಸ್ ಆನಂದ್ ತಾಲೂಕು ಆಡಳಿತ ಕೇವಲ ಕಾಟಾಚಾರಕ್ಕೆ ಚರಂಡಿಗಳನ್ನು ನಿರ್ಮಾಣ ಮಾಡುತ್ತಿದ್ದು ಕಳಪೆ ಗುಣಮಟ್ಟದಿಂದ ಕೂಡಿವೆ ದಿನದಿಂದ ದಿನಕ್ಕೆ ನಗರ ಜನಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ನಗರದ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ ಇಂತಹ ಕಳಪೆ ಕಾಮಗಾರಿಗಳಿಂದ ಸಾರ್ವಜನಿಕರಿಗೆ ಯಾವುದೇ ಉಪಯೋಗವಾಗುತ್ತಿಲ್ಲ ಹಾಗೂ ತಾಲೂಕಿಗೆ ಕೆಟ್ಟ ಹೆಸರು ಬರುತ್ತಿದ್ದು ಅರ್ಧಕ್ಕೆ ನಿಂತು ಹೋಗಿರುವ ಕಾಮಗಾರಿಗಳ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನೆ ಮಾಡಿದರೆ ಸರ್ಕಾರದಿಂದ ಬಿಲ್ ಪಾವತಿ ಆಗಿಲ್ಲ ಎಂಬ ರೆಡಿಮೇಡ್ ಉತ್ತರ ನೀಡುತ್ತಾರೆ ಶಾಸಕ ಟಿರಘುಮೂರ್ತಿ ಇಂತಹ ಗುತ್ತಿಗೆದಾರರ ಹಾಗೂ ನಗರಸಭೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ಕಳಪೆ ಕಾಮಗಾರಿಯ ಬಗ್ಗೆ ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಆರ್ ರುದ್ರನಾಯಕ ಮಾತನಾಡಿ ಚಳ್ಳಕೆರೆ ತಾಲೂಕು ಈಗಾಗಲೇ ಸೈನ್ಸ್ ಸಿಟಿ ಎಂದು ಪ್ರಖ್ಯಾತಿ ಪಡೆದಿದ್ದರೂ ನಗರದಲ್ಲಿ ನಡೆಯುತ್ತಿರುವ ರಸ್ತೆ ಹಾಗೂ ಚರಂಡಿ ನಿರ್ಮಾಣದಲ್ಲಿ ಗುಣಮಟ್ಟದಲ್ಲಿ ಕಳಪ ಆಗುತ್ತಿದೆ ಇದರ ಬಗ್ಗೆ ಅಧಿಕಾರಿಗಳು ತಲಕಡಿಸಿಕೊಳ್ಳದೆ ಮೌನ ವಹಿಸಿರುವುದು ನೋಡಿದರೆ ಭ್ರಷ್ಟಾಚಾರ ನಡೆದಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಇಂತಹ ಭ್ರಷ್ಟ ವ್ಯವಸ್ಥೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಕಾರ್ಯಗಳಿಂದ ನಗರಸಭೆ ಸದಸ್ಯರು ನಗರದಲ್ಲಿ ತಲೆ ಎತ್ತಿ ಓಡಾಡಲು ಆಗುತ್ತಿಲ್ಲ  ಕೂಡಲೇ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಚರಂಡಿಯನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕು ಹಾಗೂ ಕಾಲಕಾಲಕ್ಕೆ ನಗರಸಭೆ ಅಧಿಕಾರಿಗಳು ಚರಂಡಿ ಸ್ವಚ್ಛತೆ ಸೇರಿದಂತೆ ಮೂಲಭೂತ ವ್ಯವಸ್ಥೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ಇನ್ನಾದರೂ ತಾಲೂಕು ಆಡಳಿತ ಹಾಗೂ ನಗರಸಭೆ ಇಂತಹ ಕಾಮಗಾರಿಗಳ ಬಗ್ಗೆ ಎಚ್ಚರಿಕೆ ವಹಿಸಿ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಡುವೆ ಸಮನ್ವಯತೆ ಸಾಧಿಸಿಕೊಂಡು ಗುಣಮಟ್ಟದ ಕಾಮಗಾರಿ ಕೈಗೊಳ್ಳುವರೇ ಅಥವಾ ಶಾಸಕರ ಗಮನಕ್ಕೆ ಬರುವವರೆಗೆ ಕಾದು ಕುಳಿತುಕೊಳ್ಳುವರೇ ನೋಡಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *