ಚಳ್ಳಕೆರೆ ಜನಧ್ವನಿ ವಾರ್ತೆ ಫೆ.15. ಅಕಾಸ್ಮಿಕವಾಗಿ ಬಿದ್ದ ಬೆಂಕಿಗೆ ಜಾನುವಾರುಗಳಿಗಾಗಿ ಸಂಹ್ರಸಿದ್ದ ಮೇವು ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿರುವುದರಿಂದ ರೈತ ಆತಂಕ್ಕೀಡಾಗಿದ್ದಾನೆ.
ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯ ಬಂಜಿಗೆರೆ ಗ್ರಾಮದ ರೈತ ತಿಪ್ಪೇಸ್ವಾಮಿ ಇವರ ಕಣದಲ್ಲಿ ಸುಮಾರು *6 ಲೋಡು ಶೇಂಗಾ ಮೇವು, 3 ಲೋಡು ಮೆಕ್ಕೆಜೋಳ ಸಪ್ಪೆ , 2ಲೋಡು ಬಿಳಿ ಜೋಳ ಸಪ್ಪೆ .2 ಲೋಡು ಕಡ್ಡಿ ಮೇವು ಹಾಗೂ ಗೋಪಾಲಪ್ಪ ಇವರದು 1 ಲೋಡು ಶೇಂಗಾ ಮೇವಿಗೆ ಮಂಗಳವಾರ ತಡ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಬೆಂಕಿನಂದಿಸುವಷ್ಣರಲ್ಲಿ ಸಂಪೂರ್ಣವಾಗಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕು ಸಂಪೂರ್ಣವಾಗಿ ಬಸ್ಮವಾಗಿರುವುದರಿಂದ ರೈತರಿಗೆ ಈಗ ಜಾನುವಾರಗಳ ಪೋಷಣೆಗೆ ಕಷ್ಟಕರವಾಗಿದ್ದು ಮೇವಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮೇವಿಗೆ ಬೆಂಕಿ ಬಿದ್ದಿರುವುದರಿಂದ ಅಪಾರ ನಷ್ಟವಾಗಿದೆ ಎಂದು ರೈತರಾದ ತಿಪ್ಪೇಸ್ವಾಮಿ ಹಾಗೂ ಗೋಪಾಲಪ್ಪ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಗ್ನಿಶಾಮಕ ದಳಕ್ಕೆ ದೂರವಾಣಿ ಕರೆ ಮಾಡಲಾಗಿತ್ತು ಘಟನೆ ಸ್ಥಳಕ್ಕೆ ಬರುವಷ್ಟರಲ್ಲಿ ಸಂಪೂರ್ಣವಾಗಿ ಬೆಂಕಿಗೆ ಮೇವು ಸುಟ್ಟುಹೋಗಿದೆ.
ಹುಲ್ಲಿನ ಬಣವೆ ಬೆಂಕಿ ಅಪಾರ ನಷ್ಟ ರೈತರ ಜಾನುವಾರು ಸಂಕಷ್ಟಕ್ಕೆ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments