ಹುಲುಗುಲಕುಂಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಮೃತ ಕಾರ್ಖಾನೆನೀರು ಮರುಬಳಕೆ ಮಾಡುವ ಸಾಧನ ತಯಾರಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ :ಶಿಕ್ಷಣ ಇಲಾಖೆಯಿಂದ ಅಭಿನಂದನೆ

by | 07/10/23 | ವಿಜ್ಞಾನ ತಂತ್ರಜ್ಞಾನ


ಹಿರಿಯೂರು :
ತಾಲ್ಲೂಕಿನ ಹುಲುಗುಲಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅಮೃತ ಇವರು ಇನ್ಸ್ ಸ್ಪೈರ್ ಅವಾರ್ಡ್ ನಲ್ಲಿ ತಯಾರಿಸಿರುವ ಕಾರ್ಖಾನೆ ಗಳಿಂದ ಬಿಡುಗಡೆ ಆಗುವ ಬಣ್ಣದ ನೀರನ್ನು ಸೂರ್ಯನ ನೇರಳಾತೀತ ಕಿರಣಗಳಿಂದ ಶುದ್ಧೀಕರಣ ಮಾಡಿ ಆ ನೀರನ್ನು ಮರುಬಳಕೆ ಮಾಡುವ ಸಾಧನವನ್ನು ತಯಾರಿಸಿದ್ದು ಈ ಮಾದರಿಯು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ ಎಂಬುದಾಗಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.
ತಾಲ್ಲೂಕಿನ ಹುಲುಗಲುಕುಂಟೆ ಗ್ರಾಮದ ಈ ವಿದ್ಯಾರ್ಥಿನಿ ಮನೆಗೆ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ಬಿಆರ್.ಸಿ ತಿಪ್ಪೇರುದ್ರಪ್ಪ, ಚಿತ್ರದುರ್ಗ ಡಯಟ್ ನ ಹಿರಿಯ ಉಪನ್ಯಾಸಕರಾದ ಪ್ರಸಾದ್ , ಹಾಗೂ ಉಪನ್ಯಾಸಕರಾದ ನಿತ್ಯಾನಂದ ಹಾಗೂ ಶಿಕ್ಷಣ ಸಂಯೋಜಕರಾದ ಶಶಿಧರ್ ಇವರುಗಳು ಭೇಟಿ ಮಾಡಿ ವಿದ್ಯಾರ್ಥಿನಿಯನ್ನು ಗೌರವಿಸಿ ಶುಭಹಾರೈಸಿ, ಮಾತನಾಡಿದರು.
ಇದೇ ಸಂದರ್ಭದಲ್ಲಿ ಇನ್ಸ್ ಸ್ಪೈರ್ ಅವಾರ್ಡ್ ನಲ್ಲಿ ವಿದ್ಯಾರ್ಥಿನಿ ಕುಮಾರಿ ಅಮೃತರವರಿಗೆ ಈ ಅದ್ಭುತ ಮಾದರಿಯನ್ನು ತಯಾರಿಸಲು ಸಹಕಾರ ನೀಡಿದ ಶಿಕ್ಷಕಿ ನಾಗಲಕ್ಷ್ಮಿ ಅವರನ್ನು ಶಿಕ್ಷಣ ಇಲಾಖೆ ವತಿಯಿಂದ ಅಭಿನಂದಿಸಿದರಲ್ಲದೆ ಮುಂದಿನ ದಿನಗಳಲ್ಲೂ ಸಹ ನೀವು ಸೃಜನಶೀಲ ವಿದ್ಯಾರ್ಥಿಗಳ ಹೊಸಹೊಸ ಸಂಶೋಧನೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಶಿಕ್ಷಕಿಗೆ ಸೂಚಿಸಿದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *