ಹಿರೇಹಳ್ಳಿ ಗ್ರಾಮಸ್ಥರಿಗೆ ಡಾ. ಬಾಬು ಜಗಜೀವನ್ ರಾಮ್ ನಿಗಮದ ಸರ್ಕಾರಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ

by | 11/12/23 | ಪ್ರತಿಭಟನೆ


ಚಳ್ಳಕೆರೆ ಡಿ.11 ತಾಲೂಕಿನ ಹಿರೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಚರ್ಮದ ಕರಕುಶಲ ಕೌಶಲ್ಯ ತರಬೇತಿ ಪಡೆದ ಫಲಾನುಭವಿಗಳಿಗೆ ಜೀವನೋಪಾಯ ಮಾಡಲು ಲಿಡ್ಕರ್ ವತಿಯಿಂದ ದೊರೆಯುವ ವಸತಿ, ಸಾಲ, ಮತ್ತು ಸಹಾಯಧನ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಹಿರೇಹಳ್ಳಿ ಗ್ರಾಮ ದಲ್ಲಿ ಸುಮಾರು ಹತ್ತು ಸಾವಿರ ಜನಸಂಖ್ಯೆ ಹೊಂದಿದ್ದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸೇರಿದಂತೆ ಇತರೆ ಜನಾಂಗದವರು ಕೂಡ ವಾಸಿಸುತ್ತಿದ್ದು ಗ್ರಾಮದಲ್ಲಿ ಸುಮಾರು 1957-58ನೇ ಸಾಲಿನಲ್ಲಿ ಬಿ ರಾಚಯ್ಯನವರು ಸಮಾಜ ಕಲ್ಯಾಣ ಮಂತ್ರಿಗಳಾಗಿದ್ದ ಸಮಯದಲ್ಲಿ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ಚರ್ಮದ ಕುಶಲ ಕೈಗಾರಿಕಾ ಸಹಕಾರ ಸಂಘಕ್ಕೆ ಶಂಕು ಸ್ಥಾಪನೆ ಮಾಡಿದ್ದರು ಈ ಕಟ್ಟಡದಲ್ಲಿ ಪರಿಶಿಷ್ಟ ಜಾತಿಯ ಕಾಲೋನಿಯ ನಿರುದ್ಯೋಗಿಗಳಾದ ಸುಮಾರು 130 ಜನರಿಗೆ ಈ ಕಟ್ಟಡದಲ್ಲಿ ಲಿಡ್ಕರ್ ವತಿಯಿಂದ ತರಬೇತಿಯನ್ನು ನೀಡಲಾಗಿತ್ತು ಈ ಕಾಲೋನಿಯ ಬಹಳಷ್ಟು ಕುಟುಂಬಗಳ ಮೂಲ ಕಸುಬು ಚರ್ಮದ ಕಸುಬಾಗಿದ್ದು  ಈಗ ಬಹಳ ಮುಖ್ಯವಾಗಿ ತರಬೇತಿ ಪಡೆದವರಿಗೆ ಜೀವನೋಪಾಯ ಮಾಡಲು ಲಿಡ್ಕರ್ ವತಿಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ಫಲಾನುಭವಿಗಳ ಬೇಡಿಕೆಯಾಗಿದೆ ಅಲ್ಲದೆ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಕ್ಷೇತ್ರಗಳು ಬಹಳ ಹಿಂದುಳಿದ ಕ್ಷೇತ್ರಗಳಾಗಿದ್ದು ಉದ್ಯೋಗವಿಲ್ಲದೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಬರಗಾಲ ತಾಲೂಕು ಕ್ಷೇತ್ರವಾಗಿ ಆಯ್ಕೆಯಾಗಿವೆ ಈಗಾಗಲೇ 2011 2016 2018 ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿಯ ಮುಂದೆ ಶಾಂತಿಯುತವಾಗಿ ಧರಣಿ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಈ ಗ್ರಾಮಕ್ಕೆ ಕಾಯಂ ತರಬೇತಿ ಮತ್ತು ಉತ್ಪಾದನಾ ಕೇಂದ್ರ ಮಂಜೂರು ಮಾಡಬೇಕು ಈ ಬಾರಿ ಇಲಾಖೆಯಿಂದ ಫಲಾನುಭವಿಗಳಿಗೆ ದೊರೆಯುವ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಬೇಡಿಕೆಗಳು: ಹಿರೇಹಳ್ಳಿ ಗ್ರಾಮದ ರಿ.ಸರ್ವೆ ನಂ291ರಲ್ಲಿ ತರಬೇತಿ ಪಡೆದ ಎಲ್ಲಾ ಫಲಾನುಭವಿಗಳಿಗೆ ಲೀಡ್ಕರ್ ವತಿಯಿಂದ ನಿವೇಶನ ಮಂಜೂರು ಮಾಡುವುದು

ಈ ಗ್ರಾಮಕ್ಕೆ ತರಬೇತಿ ಮತ್ತು ಉತ್ಪಾದನಾ ಕೇಂದ್ರ ಮಂಜೂರು ಮಾಡುವುದು

ಸಾಂಸ್ಕೃತಿಕ ಭವನದ ಕಟ್ಟಡ ಕಟ್ಟಲು ಖಾಲಿ ನಿವೇಶನವಿದ್ದು ಸರ್ಕಾರ ಕೂಡಲೇ ಕಾಮಗಾರಿ ಕೈಗೊಳ್ಳಬೇಕು.

ಈ ಸಂದರ್ಭದಲ್ಲಿ ವಕೀಲರಾದ ಆರ್ ರುದ್ರಮನಿ ಗ್ರಾಮ ಪಂಚಾಯಿತಿ ಸದಸ್ಯ ಎಸ್ ರಾಜಣ್ಣ ಎಚ್ ತಿಪ್ಪೇಸ್ವಾಮಿ ಎಸ್ ಮಲ್ಲೇಶಪ್ಪ ತಿಪ್ಪೇಸ್ವಾಮಿ ಎನ್ಎಸ್ ತಿಮ್ಮಣ್ಣ ಶಾಂತಪ್ಪ ಶಿವಲಿಂಗಪ್ಪ ಟಿ ಗುರುಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Latest News >>

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ ರಾಜ್ಯ ಸರಕಾರ

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಲಾಗಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ...

ಇ-ಆಸ್ತಿ ಆಂದೋಲನ ಸದುಪಯೋಗ ಪಡಿಸಿಕೊಳ್ಳುವಂತೆ ಪೌರಾಯುಕ್ತ ಚಂದ್ರಪ್ಪ.

ಸರಕಾರದ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ಸುತ್ತೋಲೆಯಂತೆ ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಇ -ಆಸ್ತಿ ಸೇವೆ ಆಂದೋಲನ ಪ್ರಾರಂಭ ಮಾಡಿದ್ದೆವೆ...

ನೀರಿನ ಅಸಮರ್ಪಕ ಬಳಕೆಯಿಂದ ಬರ ಪ್ರತಿಯೊಬ್ಬರು ಜಲಸಂರಕ್ಷಣೆಗೆ ಒತ್ತು ನೀಡಿ

ಚಿತ್ರದುರ್ಗ ಫೆ.23: ನೀರಿನ ಅಸಮರ್ಪಕ ಬಳಕೆಯಿಂದ ನೀರಿನ ಸಮಸ್ಯೆ ಹಾಗೂ ಬರ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರು ಜಲರಕ್ಷಕರಾಗಿ ಎಚ್ಚೆತ್ತುಕೊಂಡಾಗ...

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ಜೂನ್ ವೇಳೆಗೆ ರೈಲ್ವೇ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ: ವರ್ಷಾಂತ್ಯಕ್ಕೆ ನೇರ ರೈಲು ಕಾಮಗಾರಿ ಆರಂಭ

ಚಿತ್ರದುರ್ಗ. ಫೆ.26: ದಾವಣಗೆರೆ ರಸ್ತೆ ಹಾಗೂ ಕವಾಡಿಗರಹಟ್ಟಿ ಹತ್ತಿರದ ಹೊಳಲ್ಕೆರೆ ರಸ್ತೆಯಲ್ಲಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ಯೋಜನೆ...

ಗೊರವಯ್ಯನ ಕಾರ್ಣಿಕ ನುಡಿ ಸಂಪಾದಿತಲೇ ಪರಾಕ್ ಎಂಬುದನ್ನು ವಿಶ್ಲೇಷಿಸಿ ಹೇಳಿರುವಂತ ಜನರು ಈ ಸಲ ಭಾರೀ ಮಳೆ, ಬೆಳೆ ಚೆನ್ನಾಗಿ ಆಗಿ, ರೈತರ ಬಾಳು ಹಸನಾಗಲಿದೆ ಎಂಬುದಾಗಿ ತಿಳಿಸಿದ್ದಾರೆ.

ವಿಜಯನಗರ: ಜಿಲ್ಲೆಯ ಪ್ರಸಿದ್ಧ ಸುಕ್ಷೇತ್ರ ಶ್ರೀಮೈಲಾರ ಲಿಂಗೇಶ್ವರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಾರ್ಮಿಕ ನುಡಿ ಹೊರ ಬಿದ್ದಿದೆ....

ಫೆ. 29ರಂದು ಜಿಲ್ಲಾ ಮಟ್ಟದ ಸಂತ ಸೇವಾಲಾಲ್ ರವರ 285ನೇ ಜಯಂತಿಫೆ. 29ರಂದು ಜಿಲ್ಲಾ ಮಟ್ಟದ ಸಂತ ಸೇವಾಲಾಲ್ ರವರ 285ನೇ ಜಯಂತಿ ಕಾರ್ಯಕ್ರಮ

ಚಳ್ಳಕೆರೆ: ಸಂತ ಸೇವಾಲಾಲ್ ರವರ 285ನೇ ಜಯಂತಿಯನ್ನು ಫೆ.29ರಂದು ಚಿತ್ರದುರ್ಗ ಜಿಲ್ಲೆಯ ತಾರಾಸು ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ...

ನಿಧಿಗಳ್ಳರ ವಕ್ರದೃಷ್ಠಿಗೆ ಪುರಾತನ ದೇವಾಲಯಗಳು ಶಿಥಿಲ ಅರ್ಚಕ ತಿಪ್ಪೇಸ್ವಾಮಿ.

ಚನ್ನಗಿರಿ ಫೆ.26 ನಿಧಿ ಹಾಗೂ ದೇವಾಲಯಆಸ್ತಿ ಗಾಗಿ ಪುರಾತನ ದೇವಾಲಗಳು ಶಿಥಿಲವಾಸ್ಥೆಗೆ ತಲುಪಿದರು ಸಂಬಂಧ ಪಟ್ಟ ಇಲಾಖೆ ಮೌನಕ್ಕೆ ಜಾರಿದೆ ಎಂಬ...

ಸಮಾಜದಲ್ಲಿ ಸರ್ವಧರ್ಮದ ದಾರ್ಶನಿಕರು ಶಾಂತಿಯ ಸಂದೇಶವನ್ನು ಬೋಧಿಸಿದ್ದಾರೆ: ಶಾಸಕ ಟಿ ರಘುಮೂರ್ತಿ

ಚಳ್ಳಕೆರೆ: ಮಾನವರಾದ ನಾವು ಜಾತಿ ಧರ್ಮಗಳನ್ನು ಗೌರವಿಸುವ ಮುನ್ನ ಮಾನವ ಧರ್ಮವನ್ನು ಗೌರವಿಸುವುದು, ಉತ್ತಮ ಎಂದು ಶಾಸಕ ಹಾಗೂ ಸಣ್ಣ ಕೈಗಾರಿಕೆಗಳ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page