ಹಿರಿಯೂರುರೇಷ್ಮೆಇಲಾಖೆಯನ್ನ ಈಗ ಇರುವ ಸ್ಥಳದಲ್ಲಿಯೇ ಮುಂದುವರೆಸಲು ರೈತಮುಖಂಡ ಹೊರಕೇರಪ್ಪ ಒತ್ತಾಯ

by | 23/02/23 | ಪ್ರತಿಭಟನೆ

ಹಿರಿಯೂರು ಫೆ.23
ಹಿರಿಯೂರು ತಾಲ್ಲೂಕಿನಲ್ಲಿ ಅತೀ ಹೆಚ್ಚು ರೇಷ್ಮೆ ಬೆಳೆಗಾರರಿದ್ದು, ರೇಷ್ಮೆ ಇಲಾಖೆ ಕಚೇರಿಯು ನಗರದ ತಾಲ್ಲೂಕು ಕಚೇರಿ ಪಕ್ಕದಲ್ಲಿದ್ದು, ಕಚೇರಿಯು ರೈತರಿಗೆ ತುಂಬಾ ಉಪಯುಕ್ತವಾದ ಸ್ಥಳದಲ್ಲಿರುತ್ತದೆ, ಈ ಕಚೇರಿಯನ್ನು ಹಾಲಿ ಇರುವ ಸ್ಥಳದಲ್ಲಿಯೇ ಮುಂದುವರೆಸಿಕೊಂಡು ಹೋಗಬೇಕು ಎಂಬುದಾಗಿ ರೈತಸಂಘದ ಜಿಲ್ಲಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಒತ್ತಾಯಿಸಿದರು.
ತಾಲ್ಲೂಕು ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಹಿರಿಯೂರು ನಗರದ ರೇಷ್ಮೆ ಇಲಾಖೆ ಕಚೇರಿಯನ್ನು ಹಾಲಿ ಇರುವ ಸ್ಥಳದಲ್ಲಿಯೇ ಮುಂದುವರೆಸುವಂತೆ ಒತ್ತಾಯಿಸಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ದಿವಾಕರ್ ರವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ತಾಲ್ಲೂಕು ಕಚೇರಿ ಪಕ್ಕದಲ್ಲೇ ರೇಷ್ಮೆ ಇಲಾಖೆ ಕಚೇರಿಯಿದ್ದು, ಇದಕ್ಕೆ ಹೊಂದಿಕೊಂಡಂತೆ ಪಿ.ಎಲ್.ಡಿಬ್ಯಾಂಕ್, ಸಬ್ ರಿಜಿಸ್ಟರ್ ಕಚೇರಿ, ಟ್ರಜರಿಇಲಾಖೆ, ಅರಣ್ಯ ಇಲಾಖೆ, ತಾಲ್ಲೂಕು ಪಂಚಾಯಿತಿ, ಸ್ಟೇಂಟ್ ಬ್ಯಾಂಕ್ ಆಫ್ ಇಂಡಿಯಾ, ಪ್ರಗತಿ ಗ್ರಾಮೀಣ ಬ್ಯಾಂಕ್, ಸೇರಿದಂತೆ ಅನೇಕ ಕಚೇರಿಗಳಿವೆ

ಅಲ್ಲದೆ ಪ್ರತಿದಿನ ತಾಲ್ಲೂಕು ಕಚೇರಿ ಸೇರಿದಂತೆ ಇತರೆ ಕಚೇರಿಗಳಿಗೆ ಬರುವ ರೈತರಿಗೆ ಉಪಯುಕ್ತವಾದ ಸ್ಥಳದಲ್ಲಿ ರೇಷ್ಮೆ ಇಲಾಖೆ ಕಚೇರಿ ಇರುವುದರಿಂದ ರೈತರ ದೈನಂದಿನ ಚಟುವಟಿಕೆಗಳಿಗೆ ತುಂಬಾ ಉಪಯುಕ್ತವಾಗಿದ್ದು, ತಾಲ್ಲೂಕಿನ ರೇಷ್ಮೆ ಬೆಳೆಗಾರರ ರೈತರ ಹಿತದೃಷ್ಟಿಯಿಂದ ಸಹಾಯಕ ರೇಷ್ಮೆ ನಿರ್ದೇಶಕರ ಕಚೇರಿಯನ್ನು ಸದರಿ ಸ್ಥಳದಲ್ಲಿಯೇ ಮುಂದುವರೆಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಬಿ.ಓ.ಶಿವಕುಮಾರ್, ಚೇತನ್ ಯಳನಾಡು, ಮೇಟಿಕುರ್ಕೆ ತಿಪ್ಪೇಸ್ವಾಮಿ, ದೇವರಕೊಟ್ಟ ರಂಗಸ್ವಾಮಿ, ಬುರುಜನರೊಪ್ಪ ತಿಪ್ಪೇಸ್ವಾಮಿ, ರೇಷ್ಮೆ ಬೆಳಗಾರರ ಸಂಘದ ಅಧ್ಯಕ್ಷರಾದ ಕುಮಾರ ಎಂ.ಡಿ.ಕೋಟೆ, ಗೌ.ಅಧ್ಯಕ್ಷರಾದ ಸಿದ್ಧಪ್ಪ, ಮಲ್ಲೇಣುಅಜಯಕುಮಾರ್, ನಾಗರಾಜ್, ಮಂಜುನಾಥ್, ಸೇರಿದಂತೆ ಅನೇಕ ರೈತಮುಖಂಡರು ಹಾಗೂ ರೇಷ್ಮೆ ಬೆಳೆಗಾರರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *