ಚಳ್ಳಕೆರೆ ಜನಧ್ವನಿ ವಾರ್ತೆ ಮೇ 31 ಮಟ ಮಟ ಮಧ್ಯಹ್ನಾನವೇ ಕಳವು ಪ್ರಕರಣ ನಗರದ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ಹೌದು ಚಳ್ಳಕೆರೆ ನಗರದ ಪಾವಗರಡ ರಸ್ತೆ ಯಾವಾಗಲು ಜನದಟ್ಟಣೆ ಹಾಗೂ ವಾಹನದಟ್ಟಣೆಯಿಂದ ಕೂಡಿದ್ದರೂ ಸಹ ಪಾವಗಡ ರಸ್ತೆ ಜಯರಾಮ ಟಾಕೀಸ್ ಪಕ್ಕ ಮಹಡಿ ನೀಲಾದ್ರಿ ಸ್ಟುಡಿಯೋದಲ್ಲಿ ಅಂಗಡಿ ಬಳಿ ಕಳ್ಳರು ಹೊಂಚು ಹಾಕಿ ಕುಳಿತು ಕೊಂಡಿದ್ದು.ಮಾಲೀಕರುಎಂದಿನಂತೆ ಮನೆಗೆ ಮಧ್ಯಾಹ್ನ ಊಟಕ್ಕೆ ಹೋಗುವ ಗ್ಲಾಸ್ ಡೋರ್ ಲಾಕ್ ಮಾಡಿಕೊಂಡು ಹೋಗಿರುತ್ತಾರೆ
ಇದನ್ನ ಕಂಡ ಕಳ್ಳರು ಗ್ಲಾಸ್ ಡೋರ್ ಒಡೆದು ಒಳ ಪ್ರವೇಶ ಮಾಡಿ ಒಂದು ಫೋಟೋ ಕ್ಯಾಮೆರಾ ಮತ್ತು ಕ್ಯಾಶ್ ಡ್ರಾನಲ್ಲಿದ್ದ 6 ಸಾವಿರು ರೂ ನಗದು ಕದ್ದು ಪರಾರಿಯಾಗಿದ್ದಾರೆ.
ಸ್ಟುಡಿಯೋ ಮಾಲಿಕ ಕುಮಾರ್ ಊಟ ಮಾಡಿ ಬಂದು ಗ್ಲಾಸ್ ಡೋರ್ ತೆಗೆಯಲು ಹೋದಾಗ ಕಳವು ಪ್ರಕರಣ ಪತ್ತೆಯಾಗಿದೆ ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಬೈಕ್ , ಮೊಬಲ್ , ಮನೆಗಳತನ,ಅಂಗಡಿಗಳ ಕಳುವ ಪ್ರಕರಣಗಳು ಹಗಲಿನನ್ನೇ ನಡೆಯುತ್ತಿರುವುದು ಮತ್ತಷ್ಟು ನಗರದ ಜನರಲ್ಲಿ ನಿದ್ದೆಗೆಡುಸುವಂತೆ ಮಾಡಿದೆ.
0 Comments