ಹಣದುರುಪಯೋಗ ಹರವಿ ಗ್ರಾಪಂ ಸದಸ್ಯರ ಸದಸ್ಯತ್ವ ರದ್ದುಪಡಿಸುವಂತೆ ಕೊಂಚೆಶಿವರುದ್ರಪ್ಪ ಆಗ್ರಹ.

by | 11/12/23 | ತನಿಖಾ ವರದಿ


ಸಿರವಾರ ತಾಲ್ಲೂಕಿನ ಹರವಿ ಗ್ರಾಮ ಪಂಚಾಯಿತಿಯಲ್ಲಿ 2020-21, 2021-22ರ 15ನೇ ಹಣಕಾಸು ಅಡಿಯಲ್ಲಿ ಮಾರ್ಗಸೂಚಿ ಮತ್ತು ನಿಯಮ ಉಲ್ಲಂಘಿಸಿ ಕಾಮಗಾರಿ ನಿರ್ವಹಿಸಿ, ಅಧ್ಯಕ್ಷರು, ಸದಸ್ಯರು ತಮ್ಮ ಸಂಬಂಧಿಕರ ಖಾತೆ ಹಣ ಜಮಾ ಮಾಡಿಕೊಂಡು ನಮ್ಮ ದೂರಿಗೆ ತನಿಖೆ ಮಾಡಿ
ಸಾಬೀತಾಗಿದ್ದು, ಸಂಬಂಧಿಸಿದವರ ಮೇಲೆ 1993ರ ಪ್ರಕರಣ 43(ಎ) ಮತ್ತು 48(4) ಅಡಿಯಲ್ಲಿ
ಕ್ರಮವಹಿಸಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಮಾಡಿ ಸರ್ಕಾರಕ್ಕೆ ಬಾಕಿ ಜಮಾ
ಮಾಡಿಕೊಳ್ಳುವ ಬಗ್ಗೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ (1) ಹನುಮಂತ ಬಾಲಯ್ಯ, ಗ್ರಾ.ಪಂ.ಸದಸ್ಯರುಗಳಾದ (2) ಬಸಪ್ಪ ತಂದೆ ಮುಸುಯ್ಯ (3) ಬಸಮ್ಮ ಗಂಡ ಬಾಲದಂಡ (4) ಹುಸೇನಮ್ಮ ಗಂಡ ಮುದುಕಪ್ಪ (5) ಮಲ್ಲಪ್ಪ ಗಂಡ ದೇವಪ್ಪ (6) ಶಿವಮ್ಮ ಗಂಡ ಹಂಪಯ್ಯ (7) ಅಂಬಣ್ಣ ತಂದೆ ಸಿದ್ದಪ್ಪ (8) ನಾಗರಾಜ ತಂದೆ ಬಸಣ್ಣ (9) ಚನ್ನಮ್ಮ ಗಂಡ ಸೋಮಣ್ಣ (10) ಕಮಲಮ್ಮ ಗಂಡ ಯಲ್ಲಪ್ಪ (11) ಯಂಕಪ್ಪ ತಂದೆ ಮುದುಕಪ್ಪ (12) ಶರಣಬಸವ ತಂದೆ ಪಂಪಣ್ಣ ಈ 12 ಜನ ಚುನಾಯಿತ ಸದಸ್ಯರುಗಳು ಭಾಗಿಯಾಗಿ ಅಧಿಕಾರಿಗಳ
ಶಾಮೀಲಿಯಿಂದ ಸೇರಿ 15ನೇ ಹಣಕಾಸು ಯೋಜನೆಯ ಒಟ್ಟು ಮೊತ್ತ ರೂ.25,39,753-00 ಆಕ್ಷೇಪಣೆಯಲ್ಲಿಟ್ಟಿದ್ದು, ರೂ.87245/- ವಸೂಲಾತಿಗೆ ಆದೇಶಿಸಿರುತ್ತಾರೆ. ಹಾಗೆಯೇ ಇನ್ನುಳಿದ ಬಾಕಿಯು ಸೇರಿ ಐವತ್ತು ಲಕ್ಷ ಮೀರಲಿದ್ದು,
ಲಗತ್ತು-1 ರಂತೆ 1ನೇ ಪುಟದಲ್ಲಿರುವಂತೆ ಆರೋಪಗಳ ವಿವರ ಸಲ್ಲಿಸಿರುತ್ತದೆ. ಲಗತ್ತು-1ರ 2ನೇ ಪುಟದಲ್ಲಿ ಯಾರ ಖಾತೆ ಮೊತ್ತ ಹೋಗಿರುತ್ತದೆ ಎಂಬುದರ ವಿವರ ಸಲ್ಲಿಸಿದೆ. ಲಗತ್ತು-2ರ 3ನೇ ಮಟ್ಟದಲ್ಲಿ ಮತ್ತು 4ನೇ ಪುಟದಲ್ಲಿ ಆರೋಪಿಗಳ ಹೆಸರು ಮತ್ತು ಫಲಾನುಭವಿಗೆ ಮೊತ್ತ ಹೋಗದೆ ಸದಸ್ಯರಿಗೆ ಸಂಬಂಧಿಸಿದವರ ಖಾತೆ ಜಮಾ ಆಗಿರುತ್ತದೆ. ಇದು ಪಂಚಾಯಿತಿ ಅಧಿನಿಯಮ ಉಲ್ಲಂಘನೆಯಾಗಿದ್ದು, ಲೆಕ್ಕಪರಿಶೋಧಕರು ವರದಿ ಸಲ್ಲಿಸಿದ್ದು, ಹಾಗೆಯೇ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ, ಕಲುಬುರಗಿ ಇವರು ಸಹ ದಿನಾಂಕ:18.11.2023 ರಂದು ಪತ್ರ
ಸಂಖ್ಯೆ:ಕಂ/ಪ್ರಾಆಕ/ಜಿಪಂ/139/2021-22 ರಂತೆ ತುರ್ತು ನೋಟಿಸ್ ನೀಡಿ ಕ್ರಮಕೈಗೊಳ್ಳಬೇಕಾಗಿರುತ್ತದೆ ಎಂದುತಿಳಿಸಿರುತ್ತಾರೆ. ಆದಾಗ್ಯೂ ಸದರಿಯವರು ಕ್ರಮಕೈಗೊಳ್ಳದ ಕಾರಣ ಮತ್ತೊಮ್ಮೆ ಲೋಕಾಯುಕ್ತ ದೂರು ಸಲ್ಲಿಸುವ ಪೂರ್ವ ಅಸ್ತಿ ಮುಟ್ಟುಗೋಲು ಮತ್ತು ಹರಾಜು ಮುಖಾಂತರ ಸದಸ್ಯರ ಸದಸ್ಯತ್ವ ರದ್ದು ಮಾಡುವುದರ ಮುಖಾಂತರ ಕಾನೂನು ಕ್ರಮ ಜರುಗಿಸಲು ಮತ್ತು ಪೊಲೀಸ್ ಠಾಣೆಗೆ ದೂರು ನೀಡಿ ಬಂಧಿಸಿ, ಆಸ್ತಿ ಹರಾಜಿಗೆ ಕ್ರಮಕೈಗೊಳ್ಳಲು ತಹಶೀಲ್ದಾರ್‌ರವರಿಗೆ ವಹಿಸಿಕೊಡಬೇಕಾಗಿ ಈ ಮೂಲಕ ಮತ್ತೊಮ್ಮೆ ದೂರು. ದೂರಿನೊಂದಿಗೆ 04 ಪುಟಗಳ ದಾಖಲೆ ಲಗತ್ತಿಸಲಾಗಿದ್ದು ಕೂಡಲೆ ಗ್ರಾಪಂ ಸದಸ್ಯರ ಸದಸ್ಯತ್ವ ರದ್ದು ಪಡಿಸುವಂತೆ ರೈತ ಮುಖಂಡ ಕೊಂಚೆಶಿವರುದ್ರಪ್ಪ ಒತ್ತಾಯಿಸಿದ್ದಾರೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page