ಫೆ.26 ಭಾನುವಾರ ರಂದು ನಡೆಯಲಿರುವ ಶ್ರೀ ಸಂತಾಸೇವಾಲಾಲ್ ಜಯಂತಿ ಕಾರ್ಯಕ್ರಮಕ್ಕೆ ಶುಭಕೋರುವವರು ಗೀತಾಬಾಯಿ ಮತ್ತು ಮಕ್ಕಳು.

by | 18/02/23 | ಜೀವನಶೈಲಿ

ಚಳ್ಳಕೆರೆ ಜನ ಧ್ವನಿವಾರ್ತೆಫೆ.17 ದೇಶದ ಬಂಜಾರ ಸಮುದಾಯದ ಏಕೈಕ ಸಂತ ಸೇವಾಲಾಲ್ ಅವರ 284 ನೇಜಯಂತ್ಯೋತ್ಸವ ಫೆ. 26 ರಂದು ಬಿಸಿನೀರು ಮುದ್ದಪ್ಪ ಸರಕಾರ ಪ್ರೌಢಶಾಲೆಯ ಆವರಣದ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಬಂಜಾರ ಸಮುದಾಯದ ಮುಖಂಡೆ ಗೀತಾ ಬಾಯಿ ಹಾಗೂ ಮಗ ಗುತ್ತಿಗೆದಾರ ಸುನಿಲ್ ಮನವಿ ಮಾಡಿಕೊಂಡಿದ್ದಾರೆ.ಶ್ರೀಸಂತಾಸೇವಾಲಾಲ್ ಜಯಂತಿಗೆ ಬರುವ ಗಣ್ಯರಿಗೆ ಹಾಗೂ ಸಮತ್ತ ನಾಗರೀಕರಿಗೆ ಶುಭಕೋರಿದ್ದಾರೆ.

ಈ ಸಂತರ ಬಗ್ಗೆ ಅನೇಕ ಐತಿಹ್ಯಗಳಿವೆ. 1739ರಲ್ಲಿ ನ್ಯಾಮತಿ ತಾಲ್ಲೂಕಿನ (ಹಿಂದೆ ಹೊನ್ನಾಳಿ) ಸೂರಗೊಂಡನಕೊಪ್ಪದಲ್ಲಿ ಭೀಮಾನಾಯ್ಕ ಮತ್ತು ಧರ್ಮಿಣಿ ಮಾತೆ ದಂಪತಿಯ ಮಗನಾಗಿ ಜನ್ಮತಾಳಿದ ಸಂತ ಸೇವಾಲಾಲ್ ಸೂರಗೊಂಡನಕೊಪ್ಪದಲ್ಲಿ ಅನೇಕ ಪವಾಡಗಳನ್ನು ನಡೆಸಿದ್ದಾರೆ.

ಬಾಲಕನಾಗಿ ಬೆಳೆಯುತ್ತಿದ್ದಾಗ ಚಿನ್ನಿಕಟ್ಟೆ ಸುತ್ತಮುತ್ತ ಗೋವುಗಳನ್ನು ಮೇಯಿಸಲು ಹೋಗುತ್ತಿದ್ದಾಗಲೇ ಸಹಪಾಠಿಗಳೊಂದಿಗೆ ಆಟವಾಡುತ್ತ ಪವಾಡಗಳನ್ನು ತೋರುತ್ತಿದ್ದರು. ಬಂಡಿಯನ್ನು ನಗಾರಿಯನ್ನಾಗಿ ಬಾರಿಸುವುದು, ಕೆಸರನ್ನು ಹುಗ್ಗಿ ಪಾಯಸವನ್ನಾಗಿಸುವುದು, ನೀರನ್ನು ತುಪ್ಪ ಮಾಡಿ ಯಜ್ಞ ಮಾಡುತ್ತಿದ್ದರು ಎನ್ನುವ ಪ್ರತೀತಿ ಇದೆ. ದೇವಿ ಮರಿಯಮ್ಮ ಅವರಿಂದ ದೊರೆತ ದಿವ್ಯಶಕ್ತಿಯನ್ನು ಬಂಜಾರರು ಸೇರಿ ಅಲೆಮಾರಿ ಜೀವನ ನಡೆಸುವ ಸಮುದಾಯಗಳನ್ನು ಉದ್ಧರಿಸಲು ಬಳಸಿದ ಸಂತ ಇವರು ಎಂಬ ಕಥೆಗಳು ಚಾಲ್ತಿಯಲ್ಲಿವೆ. ಮಹಾರಾಷ್ಟ್ರದ ಪೌರಾಗಢದಲ್ಲಿ (ಪೌರಾದೇವಿಯ ಸ್ಥಳ) ಸೇವಾಲಾಲರು ಐಕ್ಯರಾದರು ಎಂದು ಇತಿಹಾಸ ಹೇಳುತ್ತದೆ.

ವಿಷೇಶ
ತಾಲೂಕಿನ ವಿವಿಧ ತಾಂಡಗಳ ಅವಿವಾಹಿತ ಕನ್ಯೆಯರು ದಿನನಿತ್ಯದ ಹಲವು ಜಂಜಾಟಗ ಮಧ್ಯೆಯೂ ಶ್ರೀ ಸಂತಸೇವಾಲಾಲ್, ಮರಿಯಮ್ಮ ದೇವಿಗೆ ಪ್ರಿಯವಾದ ತೀಜ್ ಗೋಧಿ ಬಿತ್ತನೆ ಆಚರಣೆಯ ಸಮಯದಲ್ಲಿ ತಾಂಡಗಳ ಮನೆಗಳಲ್ಲಿ ಯಾರು ಮಾಂಸ ಹಾರ ತಯಾರಿಸುವುದಿಲ್ಲ , ಆಹಾರದಲ್ಲಿ ಉಪ್ಪು, ಹುಳಿ ಸೇವೆನೆ ಮಾಡದೆ ಭಕ್ತಿಯಿಂದ ಬಿದರಿನ ಪುಟ್ಟಿಯಲ್ಲಿ ಗೋದಿ ಸಸಿಯನ್ನು ಬೆಳೆದು ಜಯಂತಿ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಲು ವಿಶೇಷ ತಯಾರಿ ಮಾಡಿದ್ದಾರೆ.
ಶ್ರೀ ಸಂತಸೇವಾಲಾಲ್ ಹಾಗೂ ಮರಿಯಮ್ಮದೇವಿಗೆ ಇಷ್ಟವಾದ ಗೋದಿ ಬೆಳೆಯನ್ನು ಒಂಭತ್ತು ದಿನಗಳು ಶ್ರದ್ದಾ ಭಕ್ತಿಯಿಂದ ಪ್ರತಿದಿನ ಬೆಳಗ್ಗೆ ಉಪವಾಸ ವೃತಾಚಾರಣೆ ಮಾಡಿ ಬಿದಿರಿನ ಬುಟ್ಟಿಗಳಲ್ಲಿ ಗೋಧಿ ಮತ್ತು ನವ ಧಾನ್ಯಗಳನ್ನು ಬಳಸಿ ಕೊನೆಯ ದಿನದಂದು ಹೊಸ ಬಟ್ಟೆಗಳನ್ನು ಧರಿಸಿ ಭಕ್ತಿಯಿಂದ ಸಂವೃದ್ಧಿಯಾಗಿ ಬೆಳೆದ ಗೋಧಿ ಬುಟ್ಟಿಗಳನ್ನು ಪೂಜಿಸಿ ನಂತರ ತಲೆಯ ಮೇಲೆ ಹೊತ್ತು ವಿವಿಧ ರೀತಿಯ ವಾದ್ಯ. ಕರತಾಳಗಳೊಂದಿಗೆ ಗ್ರಾಮದ ಸುತ್ತ ಮೆರವಣಿಗೆ ಮಾಡಿ ನಂತರ ಪೂಜೆ ಸಲ್ಲಿಸಿ ಪ್ರಸಾದದ ರೂಪದಲ್ಲಿ ಗೋಧಿ ಬೆಳೆಯನ್ನು ಎಲ್ಲರಿಗೂ ಹಂಚಿ ಉಳಿದಿದ್ದನ್ನು ಕೆರೆಗೆ ವಿಸರ್ಜನೆ ಮಾಡುತ್ತಾರೆ.
ಬಂಜಾರಸಮುದಾದಮುಖಂಡೆ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಬಾಯಿ ಜನಧ್ವನಿಯೊಂದಿಗೆ ಮಾತನಾಡಿ ತೀಜ್ ಹಬ್ಬ ಆಚರಣೆ ಹಾಗೂ ಶ್ರೀ ಸಂತಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಈ ಪದ್ದತಿಯನ್ನು ರೂಡಿಸಿಕೊಂಡು ಬರಲಾಗುತ್ತಿದೆ. ಬುಟ್ಟಿಯಲ್ಲಿ ಶ್ರದ್ದಾ ಭಕ್ತಿಯಿಂದ ಬೆಳೆದ ಗೋಧಿ ಹಾಗೂ ರಾಗಿ, ಭತ್ತ ನವಣೆ, ಸಜ್ಜೆ, ಉರುಳಿ, ಅವರೆ, ತೊಗರಿ, ಉದ್ದು, ನವಧಾನ್ಯಗಳ ಬೆಳೆ ಸಮೃದ್ದಿಯಾಗಿ ಬಂದರೆ ಆ ವರ್ಷ ಮಳೆ ಬೆಳೆ ಚನ್ನಾಗಿ ಆಗುತ್ತದೆ ಜತೆಗೆ ಅತಿವೃಷ್ಠಿ, ಅನಾವೃಷ್ಠಿ , ಬರಗಾಲ, ರೋಗ ರುಜಿನಗಳು ಬರುವುದಿಲ್ಲ ಎಂಬುದು ತಾಂಡದ ಜನರ ಇಂದಿಗೂ ಮನೆ ಮಾತನಾಡಿದೆ ಎಂದು ತಿಳಿಸಿದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page