ಸೋಮವಾರ ಜನಸಂಪರ್ಕ ಸಭೆ- ನಗರಸಭೆ ಆಡಳೀತ ಯಂತ್ರಕ್ಕೆ ಚುರುಕು ಮುಟ್ಟಿಸುವರೇ … ಶಾಸಕ ಟಿ.ರಘುಮೂರ್ತಿ ಸಾರ್ವಜನಿಕರ ಪ್ರಶ್ನೆ.

by | 27/08/23 | Uncategorized


ಚಳ್ಳಕೆರೆ ಆ.27
ಹ್ಯಾಟ್ರಿಕ್ ಗೆಲುವು ಸಾಧಿಸಿದ ಶಾಸಕರೇ ತುಕ್ಕು ಹಿಡಿದ ನಗರಸಭೆ ಆಡಳೀತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕಿದೆ.
ಸದಾ ಜನಜಂಗುಳಿ, ಸಾಲು ನಿಂತಿರುವ ಜನ, ಅಧಿಕಾರಿಗಳ ಜೊತೆ ಮಾತಿನ ಚಕಮಕಿ, ಜನರಿಂದ ಗಿಜಿಗುಡುವ ಕಚೇರಿಯ ವಿವಿಧ ವಿಭಾಗಗಳು. ಇವೆಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕಂಡು ಬರುವ ದೃಶ್ಯಗಳು. ಆದರೆ ಚಳ್ಳಕೆರೆ ನಗಸರಭೆಯ ವಿಚಾರಕ್ಕೆ ಬಂದರೆ ವ್ಯತಿರಿಕ್ತವಾದ ಸನ್ನಿವೇಶವನ್ನು ನಾವು ಕಾಣಬಹುದು ಅಂದರೆ ಇಲ್ಲಿನ ಸಿಬ್ಬಂದಿ ಕಾರ್ಯ ನಿರ್ವಹಿಸುವ ವಿಧಾನವೇ ಬೇರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ನಗರಸಭೆ ಕಚೇರಿಗೆ ನಗರದ ನಾಗರೀಕರು ಆಸ್ತಿ ತೆರಿಗೆ.ಇ-ಖಾತೆ, ಮನೆ ಕಟ್ಟಲು ಪರವಾನಿಗೆ, ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ನಾಗರೀಕರು ಸಿಬ್ಬಂದಿಗಳ ಬಳಿ ಅಲೆದಾಡಿದರೂ ಕೆಲಸಗಳೇ ಆಗುತ್ತಿಲ್ಲ ಎಂಬ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.
ನಗರದಲ್ಲಿ ನಿವೇಶ ಹಾಗೂ ಆಸ್ತಿ ಮಾರಾಟ ಮಾಡ ಬೇಕಾದರೆ ಇ-ಸ್ವತ್ತು ಮಾಡಿಸಿಕೊಳ್ಳುವುದು ಅತ್ಯಾಗತ್ಯವಾಗಿದೆ ಕಾನೂನು ರೀತಿ ಇ-ಖಾತೆ ಮಾಡಿಸಿಕೊಳ್ಳ ಬೇಕಾದರೆ ಸ್ವತ್ತಿನ ಕಂದಾಯ ಕಟ್ಟುವುದು ಹಾಗು ಇದರ ಶುಲ್ಕು ಒಂದು ನೂರು ಎಂದು ಇದೆ ಆದರೆ ಇಲ್ಲಿ ಸುಮಾರು ಇ-ಸ್ವತ್ತು ಖಾತೆ ಮಾಡಿಸಿಕೊಳ್ಳಲು ಅಗತ್ಯ ದಾಖಲೆಗಳೊಂದಿಗೆ ಬಂದರೂ ಸಹ ತಿಂಗಳು ಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಜನರು ಕಚೇರಿಗೆ ಅಲೆದು ಹೈರಾಣಾಗಿದ್ದಾರೆ ಹಣ ಹಾಗೂ ಮಧ್ಯವರ್ತಿಗಳಿಲ್ಲದೆ ಕಚೇರಿಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪಗಳಾಗಿವೆ.
ಜನನ-ಮರಣ ಪ್ರಮಾಣ ಪತ್ರ, ಇ-ಆಸ್ತಿ ದಾಖಲೆ, ಖಾತೆ ಬದಲಾವಣೆ, ನೀರಿನ ಸಂಪರ್ಕ, ಸ್ವಚ್ಛತೆ, ಬೀದಿದೀಪ, ಮನೆ ಲೈಸನ್ಸ್, ಅಂಗಡಿ ಲೈಸನ್ಸ್, ತೆರಿಗೆ ಪಾವತಿ ಹೀಗೆ ಅನೇಕ ಕೆಲಸಗಳಿಗಾಗಿ ಸಾರ್ವಜನಿಕರು ನಗರಸಭೆಗೆ ಆಗಮಿಸುತ್ತಾರೆ. ಸಕಾಲಕ್ಕೆ ಸರಿಯಾಗಿ ಸಾರ್ವಜನಿಕರಿಗೆ ಕೆಲಸ ಆಗದೆ ಜನರ ಸಮಸ್ಯೆಗಳನ್ನು ಬಗೆಹರಿಸಬೇಕಾದ ನಗರಸಭೆಯೇ ಸಮಸ್ಯೆಗಳ ತಾಣವಾದರೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನಾಮಫಲಕವಿಲ್ಲ
ಕಂದಾಯ ವಿಭಾಗ, ದೂರು ವಿಭಾಗ, ಸಕಾಲ ವಿಭಾಗ, ಇಂಜನಿಯರಿಂಗ್, ಟಪಾಲು, ಕಂಪ್ಯೂಟರ್, ಕುಡಿಯುವ ನೀರು, ಆರೋಗ್ಯ ನಿರೀಕ್ಷಕರ ವಿಭಾಗ ಹೀಗೆ ಇನ್ನು ವಿವಿಧ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಯಾವ ವಿಭಾಗ ಎಲ್ಲಿವೆ, ಅಧಿಕಾರಿಗಳು ಯಾರು ಎಂಬುದು ಕೌಂಟರ್ ನಲ್ಲಿ ವಿಭಾಗಗಳ ನಾಮಫಲವಿಲ್ಲ ಹಾಗೂ ಅಧಿಕಾರಿಗಳು ,ಸಿಬ್ಬಂದಿಗಳು ಕರ್ತವ್ಯದ ವೇಳೆ ಗುರಿತನ ಚೀಟಿಗಳನ್ನು ಹಾಕಿಕೊಳ್ಳದೆ ಇದರುವುದು ಕಚೇರಿ ಸಿಬ್ಬಂದಿಯಾರು,ಸಾರ್ವಜನಿಕರು ಯಾರು ಎಂಬುದು ತಿಳಿಯದಂತಾಗಿದೆ.
ಚರಂಡಿಗಳಲ್ಲಿ ಹೂಳು,
ನಗರದ ಬಹುತೇಕ ವಾರ್ಡ್ಗಳಲ್ಲಿ ರಸ್ತೆಗಳು ಕಿತ್ತು ಹೋಗವೆ , ಪ್ರಮುಖ ರಸ್ತೆಯ ಪಕ್ಕದಲ್ಲಿರುವ ಚರಂಡಿಗಳು ಹೂಳು ತುಂಬಿದ್ದು ಗೊಬ್ಬೆದ್ದು ನಾರುತ್ತಿದ್ದು ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಡೆಯ ಬೇಕಾದ ಅನಿವಾರ್ಯತೆ ಇದೆ. ಅದೇ ರೀತಿ ತ್ಯಾಗರಾಜ ನಗರದ ಪಾರ್ಕ್ ಬಳಿ ಇರುವ ಚರಂಡಿ ಹೂಳು ತುಂಬಿದ್ದು ಗೊಬ್ಬು ವಾಸನೆ ಬಡಿಯುತ್ತಿದ್ದು ಈ ಪಾರ್ಕ್ನಲ್ಲಿ ಪರಿಮಿಡ್ ಧ್ಯಾನ ಮಂದಿರ ಇರುವುದರಿಂದ ಮಹಿಳೆಯರು, ವೃದ್ದರು, ಸೇರಿದಂತೆ ಹಲವರು ಬರುತ್ತಾರೆ ಇಲ್ಲಿನ ಅವ್ಯವ್ಯಸ್ಥೆ ಸರಿಪಡಿಸಲು ನಗರಸಭೆ ಮುಂದಾಗುತ್ತಿಲ್ಲ.
ಹಲವು ಕಡೆ ಕುಡಿಯುವ ನೀರಿನ ಪೈಪ್ ಹೊಡೆದು ಚರಂಡಿ ಪಾಲಾಗುತ್ತಿವೆ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಎಂಬ ಆರೋಪಗಳು ನಾಗರೀಕರಲ್ಲಿ ಕೇಳಿ ಬರುತ್ತಿವೆ.
ವಿರೋಧ ಪಕ್ಷದ ಅಭ್ಯರ್ಥಿಗಳಿಗೆ ಆಹಾರವಾದ ನಗರಸಭೆ
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತಯಾಚನೆ ಮಾಡುವವೇಳೆ ಕ್ಷೇತ್ರ ಎಷ್ಟೇ ಅಭಿವೃದ್ಧಿಯಾಗಿದ್ದರೂ ಸಹ ಶಾಸಕರು ಏನು ಅಭಿವೃದ್ಧಿ ಮಾಡಿದ್ದಾರೆ ನಗರದಲ್ಲಿ ಸ್ವಚ್ಚತೆಯಿಲ್ಲ, ಚರಂಡಿಹೂಳು ತುಂಬಿವೆ. ಕಸ ಎಲ್ಲೆಂದರೆಲ್ಲಿ ಬಿದ್ದಿದೆ. ಬೀದಿ ದೀಪ ಇಲ್ಲ, ಕುಡಿಯುವ ನೀರು ಸರಿಯಾಗಿ ಜನರಿಗೆ ಬಿಡುತ್ತಿಲ್ಲ ಎಂದು ವಿರೋಧ ಪಕ್ಷದ ಅಭ್ಯರ್ಥಿಗಳು ಶಾಸಕರ ವಿರುದ್ದ ಆರೋಪ ಮಾಡಿರುವುದು ಕಂಡು ಬಂದಿದೆ,
ನಗರಸಭೆ ಅಧಿಕಾರಿಗಳು ,ಸಿಬ್ಬಂದಿಗಳು ಹಾಗೂ ಸದಸ್ಯರು ಸರಿಯಾಗಿ ಕೆಲಸ ಮಾಡಿದ್ದರೆ ಶಾಸಕರ ವಿರುದ್ದ ಆರೋಪಗಳು ಕೇಳಿ ಬರುತ್ತಿವೆ
ಸೋಮವಾರ ನಗರಸಭೆಕಚೇರಿಯಲ್ಲಿ ನಡೆಯಲಿರುವ ಜನಸಂಪರ್ಕ ಸಭೆಯಲ್ಲಿ ಶಾಸಕರು ನಗರಸಭೆ ಕಾರ್ಯವೈಕರಿ ಹಾಗೂ ಕಾರ್ಯವಿಳಂಬ ಧೋರಣೆ ಅನುಸರಿಸುವ ಅಧಿಕಾರಿಗಳಿಗೆ, ಸಿಬ್ಬಂದಿಗೆ ಚುರುಕು ಮುಟ್ಟಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *