ಸೋಮವಾರ ಗಂಗಾದೇವತೆಯೊಂದಿಗೆ ಚಳ್ಳಕೆರೆಮ್ಮ ಜಾತ್ರೆಗೆ ಜಾಲನೆ, ಗುರುವಾರ ಸಿಡಿ ಉತ್ಸವ

by | 10/03/24 | ಚರಿತ್ರೆ

ಚಳ್ಳಕೆರೆ ಜನಧ್ವನಿ ವಾರ್ತೆ ಮಾ.10
ಗ್ರಾಮ ದೇವತೆ ಶ್ರೀಚಳ್ಳಕೆರೆಯಮ್ಮನ ದೇವಿಯನ್ನು ತವರು ಮನೆ ದೊಡ್ಡೇರಿ ಗ್ರಾಮಕ್ಕೆ ಗಂಗಾ ಪೂಜೆ ಮಾಡುವುದರೊಂದಿಗೆ ಜಾತ್ರೆಗೆ ಸೋಮವಾರ ಚಾಲನೆ ದೊರೆಯಲಿದೆ.
ಚಳ್ಳಕೇರಮ್ಮ ದೇವಸ್ಥಾನದ ಧರ್ಮದರ್ಶಿಗಳ ನೇತೃತ್ವದಲ್ಲಿ ಆಡಳಿತ ಮಂಡಳಿ ಹಾಗೂ ತಳವಾರರು, ಪೋತರಾಜರರು ಗ್ರಾಮದ ಪುರೋಹಿತರು, ಶಾನಭೋಗರ ಸಮ್ಮುಖದಲ್ಲಿ ಶ್ರೀದೇವಿಯ ಮೆರವಣಿಗೆಯೊಂದಿಗೆ ತವರು ಮನೆ ದೊಡ್ಡೇರಿಗೆ ತೆರಳಿ ಅಲ್ಲಿ ಗಂಗಾ ಪೂಜೆ ನೆರವೇರಿಸಿ ಪುನಃ ಸಂಜೆ ದೇವಸ್ಥಾನಕ್ಕೆ ಮರಳಿ ಬಂದು ಗುಡಿತುಂಬುವ ಮೂಲಕ ಜಾತ್ರಾಗೆ ಚಾಲನೆ ದೊರಲಿದೆ.
ಚಳ್ಳಕೆರೆ ನಗರದಿಂದ ಹೊರಟ ಶ್ರೀಚಳ್ಳಕೆರೆಯಮ್ಮ ದೇವಿಯ ಮೆರವಣಿಗೆಯಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದು, ವಿಶೇಷವಾಗಿ ಪೋತರಾಜರು, ಪುರಂತಪ್ಪ ಹಾಗೂ ದೇವಸ್ಥಾನದ ಆಯಗಾರರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು.
ಶ್ರೀದೇವಿಯ ಮೆರವಣಿಗೆ ಇಲ್ಲಿನ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ಸುಮಾರು 10 ಕಿ.ಮೀ ದೂರದ ದೊಡ್ಡೇರಿ ಗ್ರಾಮದ ಗರಣಿ ಹಳ್ಳಕ್ಕೆ ಹೋಗಿ ಗಂಗಾದೇವತೆ ಮಾಡಿಕೊಂಡು ವಿಶೇಷ ಅಲಂಕಾರದೊಂಗೆ ನಗರಕ್ಕೆ ಮರಳಿ ಗುಡಿ ತುಂಬಲಿದೆ ಜಾತ್ರೆ ಪ್ರಯುಕ್ತ ನಗರದ ಪ್ರಮುಖ ರಸ್ತೆ ನೆಹರು ವೃತ್ತ , ಬಳ್ಳಾರಿ ರಸ್ತೆ ಸೇರಿದಂತೆ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡು ಜಾತ್ರೆಗೆ ಕಳೆ ಕಟ್ಟಿದೆ.

ಮಂಗಳವಾರ ಕೋಣ ಉತ್ಸವ ಬುಧವಾರ ಹಿಟ್ಟಿನ ಆರತಿ, ಬೇವಿನ ಸೀರೆ ಉತ್ಸವ, ಗುರುವಾರ ಮಧ್ಯಾಹ್ನ 3.30ಕ್ಕೆ ದೇವಿಯ ಸಿಡಿ ಉತ್ಸವ ಜರುಗಲಿದೆ.
ಸಿಡಿ ಉತ್ಸವದಲ್ಲಿ ಜಿಲ್ಲೆಯ ಹಾಗೂ ನೆರೆಯ ರಾಜ್ಯದಿಂದ ಜನಸಾಗರ ಹರಿದು ಬರಲಿದೆ.

ಇತಿಹಾಸ
ಚಳ್ಳಕೇರಮ್ಮ ದೇವಿಯನ್ನು ಚಿತ್ರದುರ್ಗದ ಕಡೆಯಿಂದ ಬಂಡಿಯ ಮೇಲೆ ತರಲಾಯಿತು ಎಂಬ ಹಿನ್ನೆಲೆಯಿಂದ್ದು ಹಿಂದೆ ಅಲೆಮಾರಿಗಳಾಗಿದ್ದು ಜನ ತಮ್ಮೊಂದಿಗೆ ತಮ್ಮ ದೇವರನ್ನು ಹೊತ್ತೊಯ್ಯುತ್ತಿದ್ದು ಪೆಟ್ಟಿಗೆ ದೇವರು ಎಂದು ಕರೆಯುತ್ತಿದ್ದರು.ಚಳ್ಳಕೇರಮ್ಮ ಮೂಲರ್ತ ಪೆಟ್ಟಿಗೆಯ ದೆವರೇ ಆಗಿದ್ದು ತಾಲೂಕಿನ ದೊಡ್ಡೇರಿ ಗ್ರಾಮದಿಂದ ವಲಸೆ ಬಂದ ಈಕೆಯನ್ನು ತಂದು ಚಳ್ಳಕೆರೆಗೆ ಪ್ರತಿಷ್ಠಾಪಸಿದಂತೆ ತೋರುತ್ತದೆ. ಚಳ್ಳಕೆರೆ ನೆಲಸಿದ ಕಾರಣ ಈಕೆಗೆ ಸ್ಥಳೀಯ ಜನತೆ ಚಳ್ಳಕೇರಮ್ಮ ಎಂದು ಕರೆಯುತ್ತಾರೆ. ಚಳ್ಳಕೆರೆಯ ಹುಟ್ಟಿನ ನಂತರ ದೇವಿ ಇಲ್ಲಿಗೆ ಬಂದವಳಾದುದ್ದರಿAದ ಚಳ್ಳಕೆರೆಯಮ್ಮ ಎಂಭ ಹೆಸರು ಪಡೆದಿದ್ದಾಳೆ ಎಂಬ ಐತಿಹ್ಯವಿದೆ. ಈ ದೇವಿಯ ಜಾತ್ರೆ ಪದ್ದತಿ ಐದು ವರ್ಷಕೊಮ್ಮೆ ಜಾತ್ರೆ ನಡೆಯುತ್ತಿದೆ. ಜಾತ್ರೆ ವಿಶೇಷ ಕಾರ್ಯಕ್ರಮದೊಂದಿಗೆ ನಡೆಯುತ್ತದೆ.


ಚಳ್ಳಕೆರೆಗೆ ಪುರಾತನ ಹೆಸರು ಓರಗಲ್ಲು ಪಟ್ನ ಎಂದು ಹೆಸರು ಇತ್ತು ಎಂಬ ಐತಿಹ್ಯ ಓರಗಲ್ಲು ರಾಜ ಪರಶುರಾಮ ನಾಯಕರು ದೊಡ್ಡೇರಿಯಲ್ಲಿ ಆಡಳಿವನ್ನು ನಡೆಸುತ್ತಿದ್ದರು ಆ ಸಂದರ್ಭದಲ್ಲಿ ದೇವಿ ಬಂದು ನೆಲೆ ನಿಂತಿದ್ದಳು, ಸಂದರ್ಭದಲ್ಲಿ ಚಳ್ಳಕೆರೆಗೆ ಭಯಂಕರ ಪ್ಲೇಗು ಕಾಯಿಲೆವೊಂದು ಬಂದಾಗ ಚಳ್ಳಕೆರೆಗೆ ಬಂದು ಕಾಯಿಲೆಯನ್ನು ನಿವಾರಿಸಿ ಇಲ್ಲಿಯೇ ನೆಲೆಸಿದಳು ನಂತರ ಓರಗಲ್ಲು ಎಂಬ ಹೆಸರಾಯಿತು.
ಇಂದಿಗೂ ವೈಶ್ಯ ಬ್ಯಾಂಕ್ ಹಿಂದೆ ಇರುವ ಓರಗಲ್ಲು ಇದೆ ಈ ದೇವರ ಹೆಸರನ್ನೇ ಸಂಕ್ಷಿಪ್ತವಾಗಿ ಕಲ್ಲು ಕರಿ, ಚಲ್ಲಕೆರೆ, ಚಲಕಾರಿ, ಚಳಕೆರೆ, ಚಳ್ಳಕೆರೆ, ಎಂದು ಹೆಸರು ಬಂದಿದೆ.
14ನೇ ಶತಮಾನದಲ್ಲಿ ವಿಜಯನಗರ ಆಡಳಿತಕ್ಕೆ ಸೇರಿತ್ತು ೧೫ ನೇ ಶತಮಾನ ನಂತರ ಚಿತ್ರದುರ್ಗ ಪಾಳೇಗಾರರ ಆಡಳಿತಕ್ಕೆ ಸೇರಿತ್ತು ದೊಡ್ಡೇರಿ ಅಂದು ಗಡಿ ಠಾಣೆ, ಠಾಣಾಧಿಕಾರಿ ಕಾಮಗೇತುಲು ವಂಶಸ್ಥ ಕಾಟಪ್ಪನಾಯಕ, ಕಾಟಪ್ಪ ನಾಯಕನ ಮಗನೇ ಹಿರೇಮದಕರಿನಾಯಕ ಕಾಟಪ್ಪನಾಯಕರು ವಾಸಿಸಿದ ಸ್ಥಳ ಹಾಗೂ ಅವರ ಹೆಸರಿನಲ್ಲಿಯೇ ಇರುವ ಇಂದಿನ ಕಾಟಪ್ಪನಹಟ್ಟಿ ಇಲ್ಲಿ ಚಿಕ್ಕದಾದ ಕೋಟೆಯ ಕೊತ್ತಲವು ಸಹ ಚಳ್ಳಕೆರೆ ನಗರದ ಈಶಾನ್ಯದಲ್ಲಿದೆ ಕಾಟಪ್ಪನಾಯಕರ ಮನೆತರದವರೇ ಮದಕರಿನಾಯಕನ ವಂಶಸ್ಥರು ಇಂದಿಗೂ ಕಾಟಪ್ಪನಹಟ್ಟಿಯಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page