ಮಹಿಳ ಮತ್ತು ಮಕ್ಕಳ ಆಸ್ಪತ್ರೆ
ಚಳ್ಳಕೆರೆ ಜನಧ್ವನಿ ವಾರ್ತೆ ಮೇ25
ಅಲ್ಟ್ರಾ ಸೌಂಡ್ ಸ್ಕ್ಯಾಂನಿಂಗ್ ಸೌಲಭ್ಯ ಇದ್ದು ಇಲ್ಲದಂತಾಗಿದ್ದು ದಿನಿತ್ಯ ಗರ್ಭಿಣಿಯರು ಖಾಸಗಿ ಸ್ಕಾö್ಯನಿಂಗ್ ಸೆಂಟರ್ಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಕ್ಯಾನಿಂಗ್ ಯಂತ್ರದ ಕೊಠಡಿಗೆ ಬೀಜ ಜಡಿದಿರುವುದು.
ಹೌದು ಇದು ಚಳ್ಳಕೆರೆ ನಗರದ ನೂರು ಹಾಸಿಗೆ ಆಸ್ಪತ್ರೆ ಮೇಲ್ದರ್ಜೆಗೇರಿಸಿದ ನಂತರ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಟಿ.ರಘುಮೂರ್ತಿಯವರ ಪರಿಶ್ರಮದಿಂದ ಗರ್ಭಿಣಿ ಮಹಿಳೆಯರು ಖಾಸಗಿ ಆಸ್ಪತ್ರೆಗೆ ಹೆರಿಗೆಗೆ ಹೋಗಬಾರದು ಸರಕಾರಿ ಆಸ್ಪತ್ರೆಯಲ್ಲೇ ಮಾಡಿಸಲು ಸಹಕಾರಿಯಾಗುವಂತೆ ಕಳೆದ ಸುಮಾರು 10 ವರ್ಷಗಳಿಂದ ಲಕ್ಷಾಂತರ ಮೌಲ್ಯದ ಆಲ್ಟಾç ಸೌಂಡ್ ಸ್ಕಾö್ಯನಿಂಗ್ ಸೌಲಭ್ಯ ನೀಡಿದ್ದರು ಅದರ ನಿರ್ವಹಣೆ ಮಾಡದೆ ಹಾಗೂ ತಪಾಸಣೆ ಮಾಡಲು ಸಿಬ್ಬಂದಿ ಕೊರೆಯಿಂದ ಆಲ್ಟಾç ಸೌಂಡ್ ಸ್ಕಾö್ಯನಿಂಗ್ ಯಂತ್ರವನ್ನು ಬಳಕೆ ಮಾಡದೆ ಕೊಠಡಿಯಲ್ಲಿಟ್ಟು ಬೀಗ ಜಡಿದಿರುವುದರಿಂದ ಧೂಳು ಮುಕ್ಕುವಂತಾಗಿದೆ.
ಬೆಚ್ಚಗೆ ಮಲಗಿರುವ ಪುಟ್ಟ ಸ್ಕ್ಯಾನಿಂಗ್ ಯಂತ್ರ
ತಾಯಿಯ ಗರ್ಭದಲ್ಲಿ ಮಗುವಿನ ಬೆಳೆವಣಿಗೆಯ ಬಗ್ಗೆ ಪರೀಕ್ಷೆ ನಡೆಸಲು ಲಕ್ಷಾಂತರ ಮೌಲ್ಯದ ಅಲ್ಟ್ರಾ
ಸೌಂಡ್ ಯಂತ್ರ ಇದ್ದರೂ ಅದು ಚಿಕ್ಕದಾಗಿರುವುದರಿಂದ ಉತ್ತಮ ವರದಿ ಬರುವುದಿಲ್ಲ ಎಂದು ತಬೇತಿ ಪಡೆದ ರೇಡಿಯಾಜಿಲಿಸ್ಟ್ ವೈದ್ಯರಿಲ್ಲದ ಕಾರಣ ಅದನ್ನು ಬಳಕೆ ಮಾಡದೆ ಕೊಠಡಿಯಲ್ಲಿ ಬೆಚ್ಚಗೆ ಮಲಗಿರುವುದರಿಂದ ಚಿಕಿತ್ಸೆ ಬರುವ ಗರ್ಬಿಣಿ ಹಾಗೂ ನೂರಾರು ರೋಗಿಗಳನ್ನು ಸ್ಕಾö್ಯನಿಂಗ್ ಸೆಂಟರ್ಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ.
ತಾಲೂಕಿನ ವಿವಿಧ ಗ್ರಾಮೀಣ ಭಾಗದಿಂದ ಕೂಲಿ ಕಾರ್ಮಿಕರು ಹಾಗೂ ಬಡಕುಟುಂಬದ ಮಹಿಳೆಯರು ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆದೊರೆಯುತ್ತದೆ ಎಂದು ನಂಬಿಕೊAಡು ಮಹಿಳಾ ಮಕ್ಕಳ ಆಸ್ಪತ್ರೆಯಗೆ ಬರುತ್ತಾರೆ. ಇಲ್ಲಿರುವ ಆಲ್ಟಾç ಸೌಂಡ್ ಸ್ಕ್ಯಾನಿಂಗ್ ಯಂತ್ರ ಸರಿಯಾಗಿ ನಿರ್ವಹಿಸದೆ ಇರುವುದರಿಂದ ಖಾಸಗಿ ಸೆಂಟರ್ಗಳಲ್ಲಿ ಮಾಡಿಸಿಕೊಂಡು ಬರಲು ಸಲಹೆ ನೀಡುವುದರಿಂದ ಬಡ ಕುಟುಂಬದ ಗರ್ಭಿಣಿಯರು ಹಾಗೂ ಇತರ ರೋಗಿಗಳು ಸುಮಾರು 800 ರೂ ಗಳಿಂದ ಒಂದು ಸಾವಿರ ರೂ ದುಬಾರಿ ಶುಲ್ಕ ನೀಡಿ ಖಾಸಗಿಯಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಹ್ಯಾಟ್ರಿಕ್ ಗೆಲುವಿನ ಸರದಾರ ಶಾಸಕ ಟಿ.ರಘುಮೂರ್ತಿಯವರು ಬಡ ಕುಟುಂಬಕ್ಕೆ ಸಹಕಾರಿಯಾಗುವಂತೆ ಸುಸಜ್ಜಿತ ಹೈಟೆಕ್ ಸ್ಕಾö್ಯನಿಂಗ್ ಯಂತ್ರ ಹಾಗೂ ರೇಡಿಯಾಲಜಿಷ್ಟ್ ಸೌಲಭ್ಯವನ್ನು ನಗರದ ಮಹಿಳಾ ಮಕ್ಕಳ ಆಸ್ಪತ್ರೆಗೆ ವ್ಯವಸ್ಥೆ ಮಾಡಿಸುವಂತೆ ಗರ್ಭಿಣಿ ಮಹಿಳೆಯರು ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
0 Comments