ಸಾರ್ವಜನಿಕ ಆಸ್ಪತ್ರೆ ಹಾಗೂ ಸಾರಿಗೆ ಬಸ್ ನಿಲ್ದಾಣದಲ್ಲಿ ಕೀ ಭದ್ರತೆಯಿಲ್ಲದೆ ಬೈಕ್ ನಿಲ್ಲಿಸಿದ್ದ ಸವಾರರಿಗೆ ಬಿಸಿ ಮುಟ್ಟಿಸಿದ ಪೊಲೀಸರು.

by | 08/11/23 | ಜನಧ್ವನಿ


ಚಳ್ಳಕೆರೆ ಜನಧ್ವನಿ ವಾರ್ತೆ ನ.8. ಸಾರ್ವನಜಿಕ ಸ್ಥಳದಲ್ಲಿ ಎಲ್ಲೆಂದರೆಲ್ಲಿ ನಿಲ್ಲಿಸಿ ತಮ್ಮಕೆಲಸಗಳಿಗೆ ಹೋದ ಬೈಕ್ ಮಾಲಿಕರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಹೌದು ಚಳ್ಳಕೆರೆ ನಗರದಲ್ಲಿ ಸಾರ್ವಜನಿಕ ಆಸ್ಪತ್ರೆ, ಸಾರಿಗೆ ಬಸ್ ನಿಲ್ದಾಣ ಸೇರಿಂದಂತೆ ವಿವಿಧ ಸಾರ್ವಜನಿಕ ಸ್ಥಳದಲ್ಲಿ ದ್ವಿಚಕ್ರವಾಹನಗಳನ್ನು ನಿಲುಗಡೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಇದನ್ನೇ ಬಂಡವಾಳ ಮಾಡಿಕೊಂಡ ಬೈಕ್ ಕಳ್ಳರು ನಕಲಿ ಕೀ ಬಳಸಿ ಬೈಕ್ ಗಳನ್ನು ಕಳವು ಮಾಡುತ್ತಿದ್ದರು.
ಅದೇ ರೀತಿ ಮಂಗಳವಾರ ಸಾರ್ವಜನಿಕ ಆಸ್ಪತ್ರೆ, ಸಾರಿಗೆ ಬಸ್ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿ ಹೋಗಿದ್ದವರ ಬೈಕ್ ಗಳಿಗೆ ಪೊಲೀಸರು ಬೇರೆ ಕೀ ಬಳಸಿದರೆ ಬರುವ ಸುಮಾರು 20 ಬೈಕ್ ಗಳನ್ನು ಪೊಲೀಸ್ ಠಾಣಿಗೆ ತಂದ ಘಟನೆ ನಡೆದಿದೆ.
ಕೆಲಸ ಮುಗಿಸಿಕೊಂಡು ಬಂದ ಬೈಕ್ ಸವಾರರು ತಮ್ಮ ಬೈಕ್ ಕಾಣುತ್ತಿಲ್ಲ ಯಾರು ಕದ್ದುಕೊಂಡಿ ಹೋಗಿದ್ದಾರೆ ಎಂದು ಪರದಾಡುತ್ತಿರುವಾಗ ನಿಮ್ಮ ಬೈಕ್ ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ ಎಂಬ ವಿಷಯ ತಿಳಿದ ಬೈಕ್ ಸಾವರರು ಪೊಲೀಸ್ ಠಾಣೆ ಮುಂದೆ ಪೊಲೀಸರ ಬಳಿ ಸಾರ್ ನಾನು ಬೈಕ್ ನಿಲ್ಲಿಸಿ ಆಸ್ಪತ್ರೆಗೆ ಚಿಕಿತ್ಸೆಗೆ ಒಳಗೆ ಹೋಗಿದ್ದೆ, ಸಾರ್ ನಾನು ತುರ್ತು ಕೆಲಸದ ಮೇಲೆ ಚಿತ್ರದುರ್ಗಕ್ಕೆ ಹೋಗಿದ್ದೆ ನಾನು ಗ್ರಾಪಂ ಕಚೇರಿ ಸಿಬ್ಬಂದಿ ಎಂದು ಹೀಗೆ ಹಲವರು ಪೊಲೀಸಿರ ಬಳಿ ಅಳಲು ತೋಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.
ಪೊಲೀಸರ ಬುದ್ದಿ ಮಾತು.
ವಾಹನ ಖರೀದಿ ಮಾಡಲು ಲಕ್ಷಗಟ್ಟಲೆ ಬಂಡವಾಳ ಹಾಕ್ತೀರಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುತ್ತೀರಿ, ವಾಹನಕ್ಕೆ ಸರಿಯಾದ ಬೀಗ ಹಾಕಲ್ಲ ಯಾವುದೇ ಕೀ ಇಟ್ಟರೆ ಬರುತ್ತೆ ಇತ್ತೀಚೆಗೆ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ ಬೈಕ್ ಕಳೆದುಕೊಂಡರೆ ಮತ್ತೆ ದೂರು ಕೊಡಲು ನಮ್ಮಲ್ಲಿ ಬರುತ್ತೀರಿ ದಂಡ ಕಟ್ಟಿ ಮತ್ತೊಮ್ಮೆ ಇಂತಹ ಘಟನೆ ನಡೆಯಬಾರದು ಬೇರೆ ಕೀಗಳಿಗೆ ಬರದಂತೆ ನಿಮ್ಮ ವಾಹನ ಭದ್ರತೆ ಕಾಪಾಡಿಕೊಳ್ಳುವಂತೆ ಬೈಕ್ ಸವಾರರಿಗೆ ಪೊಲೀಸರು ಬುದ್ದಿ ವಾದ ಹೇಳುತ್ತಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *