ನಾಗಮಂಗಲ ಸೆ.8
ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪ ಹೋಬಳಿಯ ಕೊಡ್ಲೆ ಗ್ರಾಮಪಂಚಾಯಿತಿಯ ಘಟ್ಟಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಸುಮಾರು 70.00 ಲಕ್ಷ ರೂ ಗಳ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಹಾಗೂ ಒವರ್ ಹೆಡ್ ಟ್ಯಾಂಕ್ ಗಳ ನಿರ್ಮಾಣದ ಕಾಮಗಾರಿಗಳಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಚಾಲನೆಯನ್ನು ನೀಡಲಾಯಿತು.
ಈ ಕಾಮಗಾರಿಯು ಸುಮಾರು 4203 ಮೀಟರ್ ಗಳ ಉದ್ದವನ್ನು ಒಳಗೊಂಡಿದ್ದು, ನೇರವಾಗಿ ಮನೆಯಿಂದ ಮನೆಗೆ ಪೈಪ್ ಲೈನ್ ಗಳ ಮೂಲಕ ನಳಗಳು ಅಳವಡಿಕೆಯಾಗಲಿವೆ, ಜೊತೆಗೆ ಹೊಸ ಓವರ್ ಹೆಡ್ ಟ್ಯಾಂಕ್ ಗಳ ನಿರ್ಮಾಣ, ಹಳೆಯ ಓವರ್ ಹೆಡ್ ಟ್ಯಾಂಕ್ ರಿಪೇರಿಯನ್ನು ಸಹ ಒಳಗೊಂಡಿದೆ.
ನಿಗದಿತ ಸಮಯದಲ್ಲಿ ಕಾಮಗಾರಿಗಳ ಮುಕ್ತಾಯವನ್ನು ಮಾಡಿ ಮುಗಿಸಬೇಕೆಂದು ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳವ ಮೂಲಕ ರಸ್ತೆಯ ಎರಡು ಬದಿ ಭೂಮಿಯನ್ನು ಅಗಿಯುವಾಗ, ಪೈಪ್ ಲೈನ್ ಜೋಡಿಸುವಾಗ, ರಸ್ತೆಗಳು ಹಾನಿಯಾಗದಂತೆ ಎಚ್ಚರವಹಿಸಿರಿ ಎಂದು ಅಧಿಕಾರಿಗಳಿಗೆ ಸಹ ಹೇಳಿದ್ದೇನೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರು, ಸ್ಥಳೀಯ ಜನ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು, ಮಹಿಳೆಯರು ಸೇರಿದಂತೆ ಮಾಧ್ಯಮ ಮಿತ್ರರು ಹಾಗೂ ಅನೇಕರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments