ಸಾರ್ವಜನಿಕರಿಗೆ ಸ್ಪಂಧಿಸಿ ಕೆಲಸ ಮಾಡದ ಅಧಿಕಾರಿಗಳ ವಿರುದ್ದ ಜಿರ್ಲ್ಲಾಧಿಕಾರಿ ಹಾಗೂ ಸರಕಾರಕ್ಕೆ ಪತ್ರ ಬರೆಯುವುದಾಗಿ ಅಧಿಕಾರಿಗಳ ವಿರುದ್ದ ಶಾಸಕ ಟಿ.ರಘುಮೂರ್ತಿ ಕಿಡಿ .

by | 02/11/23 | ಸುದ್ದಿ


ಚಳ್ಳಕೆರೆ ಜನಧ್ವನಿ ವಾರ್ತೆ ನ.2. ಪದೇ ಪದೆ ಸರಕಾರಿ ಕಚೇರಿಗಳಿಗೆ ಅಲೆದಾಡಿಸುವ ಹಾಗೂ ಸಾರ್ವಜನಿಕರಿಗೆ ಸ್ಪಂಧಿಸಿ ಕೆಲಸ ಮಾಡದ ಅಧಿಕಾರಿಗಳ ವಿರುದ್ದ ಜಿರ್ಲ್ಲಾಧಿಕಾರಿ ಹಾಗೂ ಸರಕಾರಕ್ಕೆ ಪತ್ರ ಬರೆಯುವುದಾಗಿ ಶಾಸಕ ಟಿ.ರಘುಮೂರ್ತಿ ಕಿಡಿ ಕಾರಿದರು.


ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.


ಸಮಸ್ಯೆಗಳಿಲ್ಲದ ಊರುಗಳಿಲ್ಲ , ತಾಲೂಕುಗಳಿಲ್ಲ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಆದರೆ ಇರುವ ವ್ಯವಸ್ಥೆಯಲ್ಲೇ ಸಾರ್ವಜನಿಕರು ಸಣ್ಣಪುಟ್ಟ ಸಮಸ್ಯೆಗಳಿಗೆ ಕಚೇರಿಗಳಿಗೆ ಅಲೆದಾಡಿಸದೆ ಅವರಿಗೆ ಸೌಜನ್ಯದಿಂದ ಮಾತನಾಡಿಸುವ ಮೂಲಕ ನಿಗಧಿತ ಅವಧಿಯೊಳಗೆ ಸಮಸ್ಯೆಗೆ ಪರಿಹಾರ ಒದಗಿಸ ಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ರೈತ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿ ರೈತರು ಬಿತ್ತನೆ ಮಾಡಿದ ಬೆಳೆಗಳು ಅತಿವೃಷ್ಠಿ ಅನಾವೃಷ್ಠಿಗೆ ಸಿಲುಕಿ ಬೆಳೆಗಳು ನಷ್ಟವಾಗಿವೆ . ಅಧಿಕಾರಿಗಳು ವರದಿ ತಯಾರಿಸಿ ಎಂಟು ತಿಂಗಳು ಕಳೆದರೂ ಬೆಳೆನಷ್ಟ ಹಾಗೂ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಬಂದಿಲ್ಲ . ಹಾಲಗೊಂಡನಹಳ್ಳಿ ಗ್ರಾಮದ ಜಮೀನೊಂದರಲ್ಲಿ ಕುಟುಂಬವೊAದು ಗುಡಿಯಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದರೆ ತಾಲೂಕು ಆಡಳಿತ ಖಾಲಿ ಮಾಡಲು ಮುಂದಾಗಿದೆ ತಾಲೂಕು ಕಚೇರಿಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಇಲ್ಲಿ ರಿಯಲ್ ಎಸ್ಟೇಟ್ ಆಗಿದೆ ಎಂದು ತºಶೀಲ್ದಾರ್ ವಿರುದ್ದ ದೂರಿನ ಸುರಿಮಳೆ ಗೈದರು.
ಶಾಸಕ ಟಿ. ರಘುಮೂರ್ತಿ ಮಾತನಾಡಿ ಹಾಲನಗೊಂಡನಹಳ್ಳಿ ಗ್ರಾಮದ ದಲಿತ ಕುಟುಂಬಗಳು ನದಿ ಪಾತ್ರದಲ್ಲಿ ವಾಸು ಮಾಡುತ್ತಿದ್ದರಿಂದ ನದಿಯನೀರು ನುಗ್ಗಿ ಒಬ್ಬ ಅಜ್ಜಿ ಮೃತ ಪಟ್ಟಿರುವುದರಿಂದ ಅವರಿಗೆ ನದಿ ಪಾತ್ರದಿಂದ ಖಾಲಿ ಮಾಡಿ ನಿವೇಶನ ನೀಡಲು ನಾನೇ ಜಿಲ್ಲಾಧಿಕಾರಿಗಳ ಹಾಗೂ ವಿಧಾನ ಸೌಧದಲ್ಲಿ ಹಾಲಿಗೊಂಡನಹಳ್ಳಿ ದಲಿತ ಕುಟುಂಬಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇನೆ ಎಂದು ಕೆ.ಪಿ.ಭೂತಯ್ಯಗೆ ಉತ್ತರ ನೀಡಿದರು.
ಮಿರಸಾಬಿಹಳ್ಳಿ ಗ್ರಾಮದ ಮಹಿಳೆಯರು ನಮಗೆ ನಿವೇಶನವಿಲ್ಲ ನಿವೇಧನ ನೀಡುವಂತೆ ಶಾಸಕರಿಗೆ ಮನವಿ ಮಾಡಿದರು.


ಶಾಸಕ ಟಿ.ರಘುಮೂರ್ತಿ ಮಾತನಾಡಿ ಸ್ಮಶಾನ ಭೂಮಿ ಬಿಟ್ಟು ಹಳ್ಳ, ಕಾಲುವೆ ರಸ್ತೆಯನ್ನು ಮುಚ್ಚಿ ಮೂರು ಎಕರೆ ನಿವೇಶನಕ್ಕೆ ಭೂಮಿ ಮಾಡಿ ಇಲ್ಲವೆ ಸರಕಾರ ನಿಗಧಿ ಪಡಿಸಿದ ಮೌಲ್ಯಕ್ಕೆ ಖಾಸಗಿಯವರಿಂದ ಭೂಮಿ ಖರೀದಿ ಮಾಡಲು ಅವಕಾಶವಿದೆ ಇದು ಯಾವುದೇ ಒಂದು ಗ್ರಾಪಂ ಸೀಮಿತವಲ್ಲ ಎಲ್ಲಾ ಗ್ರಾಪಂ ಪಿಡಿಒಗಳು ಸ್ಮಶಾನ ಹಾಗೂ ನಿವೇಶನಗಳಿಗೆ ಸರಕಾರಿ ಭೂಮಿ ಯಿಲ್ಲದವರು ಖಾಸಗಿ ಜಮೀನು ಖರೀದಿಸಲು ಅವಕಾಶವಿದೆ ಎಂದು ತಿಳಿಸಿದರು.
ಮೈರಾಡೋ ಕಾಲೋನಿಯಲ್ಲಿ ಕಡಿಯುವ ನೀರು ಮೂರು ದಿನಕ್ಕೊಮ್ಮೆ ಬಿಡುತ್ತಾರೆ, ವಿದ್ಯುತ್ ಸಮಸ್ಯೆ ಇದೆ ಎಂದು ಸಭೆ ಗಮನ ಸೆಳೆದರು.
ಚಿಕ್ಕೇನಹಳ್ಳಿ, ಪರಶುರಾಂಪುರ, ಜಡೆಕುಂಟೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ಹೋಗಲು ದಾರಿ ಇಲ್ಲದೆ ರೈತರು ಸಂಕಷ್ಟ ಎದುರಿಸುತ್ತಿದ್ದೇವೆ ನಮ್ಮ ಹೊಲಕ್ಕೆ ದಾರಿ ಬಿಡಿಸಿಕೊಡುವಂತೆ ರೈತರು ಮನವಿ ಮಾಡಿಕೊಂಡರು.
ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ ನಕಾಷೆ ಕಂಡ ದಾರಿ ಇದ್ದರೆ ಬಿಡಿಸಿಕೊಡಲಾಗುವುದು ಪರಶುರಾಂಪುರ ಹಾಗೂ ಕಸಬ ಹೋಬಳಿ ವ್ಯಾಪ್ತಿಯಲ್ಲಿ ಇಂತಹ 11 ಪ್ರಕರಣಗಳಿವೆ ಸ್ಥಳಕ್ಕೆ ಭೇಟಿ ನೀಡಿ ದಾರಿ ಬಿಡಿಸಿ ಬಂದರೂ ಮತ್ತೆ ಬಂದ್ ಮಾಡುತ್ತಾರೆ ಎಂದು ಸಭೆಯ ಗಮನಸೆಳೆದರು.
ತಾಲೂಕಿನ ವಿವಿಧ ಗ್ರಾಮಹಳಲ್ಲಿರೈತರ ಜಮೀನುಗಳಿಗೆ ಹೋಗುವ ದಾರಿ ಇಲ್ಲ ಎಂದು ಅನೇಕ ರೈತರು ರಸ್ತೆ ಬಿಡಿಸಿಕೊಡಿ ಎಂದು ಮನವಿ ಮಾಡಿಕೊಂಡರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಈಗ ಸರಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ ರೈತರ ಜಮೀನುಗಳಿಗೆ ಹೋಗಲು ಕಾಲು ದಾರಿ, ಬಂಡಿ ದಾರಿ, ನಕಾಷೆ ಕಂಡ ದಾರಿಗಳನ್ನು ಮುಲಾಜಿಲ್ಲದೆ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಬಿಡಿಸಿಕೊಡ ಬೇಕು ಅಡ್ಡಿ ಪಡಿಸಿದವರು ಮೇಲೆ ಕಾನೂನು ಕ್ರಮ ಜರುಗಿಸುವಂತೆ ಖಡಕ್ಕಾಗಿ ಸೂಚಿಸಿದರು.
ವೇಡರೆಡ್ಡಿಹಳ್ಳಿ ಗ್ರಾಮದ ರೈತ ಮುಖಂಡ ಬಸವರಡ್ಡಿ ಮಾತನಾಡಿ ಈಗಾಗಲೆ ರಯತರ ಮಳೆಯಿಲ್ಲದೆ ಬೆಳೆಗಳು ಒಣಗಿ ಹೋಗಿವೆ ಯಾರೋ ತಂದು ಬಿಟ್ಟುಹೋದ ಗೂಳಿಗಳ ಹಾವಳಿಗೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಗಳನ್ನು ಹಾಳು ಮಾಡಿದೆ ಇದನ್ನು ಇಡಿಯಲು ಅಧಿಕಾರಿಗಳು ವಿಳಂಭದೋರಣೆ ಮಾಡುತ್ತಿದ್ದಾರೆ ವಿಷಕುಡಿಯುವ ಪರಿಸ್ಥಿತಿ ಇದೆ ಕೂಡಲೆ ಬಿಡಾಡಿ ಕೂಳಿಯನ್ನು ಹಿಡಿದು ಹೊರಸಾಗಿಸುವಂತೆ ಶಾಸಕರ ಗಮನ ಸೆಳೆದರು.


ಪಶು ಸಹಾಯಕ ನಿರ್ಧೆಶಕ ಡಾ.ರೇವಣ್ಣ. ಅರಣ್ಯ ಇಲಾಖೆ ಅಧಿಕಾರಿ ಬಹುಗುಣ ಹಾಗೂ ತಹಶೀಲ್ದಾರ್ ರೇಹಾನ್ ಪಾಷ ಮೂರು ಅಧಿಕಾರಿಗಳು ಮಾತನಾಡಿ ಅರಣ್ಯ ಸಿಬ್ಬಂದಿಗಳೊAದಿಗೆ ಗ್ರಾಮಕ್ಕೆ ಭೇಟಿ ನೀಡಿ ಗೂಳಿಯನ್ನು ಹಿಡಿಯಲು ಮುಂದಾಗ ಅದು ಸಿಗದೆ ಓಡಿಹೋಗುತ್ತಿದೆ ಮತ್ತೆ ಎರಡು ದಿನದ ನಂತರ ಕಾರ್ಯಾಚರಣೆ ಮಾಡಲಾಗುವುದು ಎಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ನಾಳೆಯಿಂದಲ್ಲೇ ಗ್ರಾಮದಲ್ಲಿ ವಾಸ್ತವ್ಯವಿದ್ದು ಗೂಳಿಯನ್ನು ಹಿಡಿದು ಸಾಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸರಕಾರದ ಐದು ಗ್ಯಾರಂಟಗಳಲ್ಲಿ ಅನ್ನ ಭಾಗ್ಯ, ಗೃಹಲಷ್ಮಿಯೋಜನೆಯಡಿಯಲ್ಲಿ ಯಾರೂ ಸೌಲಭ್ಯಗಳಿಂದ ವಂಚಿತರಾಗದAತೆ ಅಧಿಕಾರಿಗಳು ನೋಡಿಕೊಳ್ಳಬೇಕು, ಕುಡಿಯುವ ನೀರು, ಬೀದಿ ದೀಪ, ಸ್ವಚ್ಚತೆ, ಇ-ಸ್ವತ್ತು, ನಿವೇಶನ, ಅಕ್ರಮ ಸಕ್ರಮ, ಪೋಡಿ ದುರಸ್ಥಿ, ಸರ್ವೆ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಜನರನ್ನು ಅಲೆದಾಡಿಸದೆ ಕೆಲಸ ಮಾಡ ಬೇಕು ಇನ್ನು ಒಂದು ತಿಂಗಳ ಅವಧಿಯಲ್ಲಿ ಜಿಲ್ಲಾ ಮಟ್ಟದ ಜಿಲ್ಲಾಡಳಿತದೊಂದಿಗೆ ಜನ ಸಂಪರ್ಕ ಸಭೆಯನ್ನು ಆಯೋಜನೆ ಮಾಡುವಷ್ಟರಲ್ಲಿ ಈ ಸಭೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡಿರ ಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರಸಭೆಯಲ್ಲಿ ನಗರಸಭೆ ಸದಸ್ಯರಾದ ವೀರಭದ್ರಯ್ಯ, ಮಲ್ಲಿಕಾರ್ಜುನ್, ಜಿಪಂ ಉಪಕಾರ್ಯದರ್ಶಿ ತಿಮ್ಮಪ್ಪ, ತಾಪಂ ಇ ಒ ಶಶಿಧರ್, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಸಿಡಿಪಿಒ ಹರಿಪ್ರಸಾದ್, ಬಿಇಒ ಕೆ.ಎಸ್.ಸುರೇಶ್, ತಾಪಂ ಸಹಾಯಕ ನಿರ್ದೇಶಕ ಸಂತೋಷ್ , ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್, ತೋಟಗಾರಿಕೆ ಸಹಾಯಕ ನಿರ್ದೇಶಕ ವಿರುಪಾಕ್ಷಪ್ಪ, ಕುಡಿಯುವ ನೀರು ನೈರ್ಮಲ್ಯ ಎಇಇ ದಯಾನಂದ್, ಪಿಆರ್‌ಡಿ ಎಇಇ ಕಾವ್ಯ,ವೃತ್ತ ನಿರೀಕ್ಷಕ ಕೆ.ಸಮೀವುಲ್ಲ, ಪಿಎಸ್‌ಐ ಸತೀಶ್ ನಾಯ್ಕ ಸೇರಿದಂತೆ ಗ್ರಾಪಂ ಪಿಡಿಒಗಳು, ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಸಮಸ್ಯೆಗಳ ದೂರು ಸಲ್ಲಿಸಲು ಮಹಿಳೆಯರು.ರೈತರು. ಸಾರ್ವಜನಿಕರು ಸರದಿಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬಂತು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *