ಸಾಮಾನ್ಯ ಹೆಣ್ಣುಮಗಳು ಯಾವುದೇ ಯುದ್ದ ಕಲೆ ತಿಳಿಯದಿದ್ದರೂ, ವೀರಾವೇಶದಿಂದ ಹೋರಾಡಿ ಶತ್ರುಗಳಿಂದ ತನ್ನ ನಾಡನ್ನು ಕಾಪಾಡಿದ ವೀರ ವನಿತೆ ಒನಕೆ ಓಬವ್ವಳ ಚರಿತ್ರೆಯನ್ನು ಇಂದು ಎಲ್ಲರೂ ಸ್ಮರಿಸಬೇಕು ಶಾಸಕ ಟಿ.ರಘುಮೂರ್ತಿ .

by | 11/11/23 | ಚರಿತ್ರೆ

ಚಳ್ಳಕೆರೆ ಜನಧ್ವನಿ ವಾರ್ತೆ ನ.11 ಸಾಮಾನ್ಯ ಹೆಣ್ಣುಮಗಳು ಯಾವುದೇ ಯುದ್ದ ಕಲೆ ತಿಳಿಯದಿದ್ದರೂ, ವೀರಾವೇಶದಿಂದ ಹೋರಾಡಿ ಶತ್ರುಗಳಿಂದ ತನ್ನ ನಾಡನ್ನು ಕಾಪಾಡಿದ ವೀರ ವನಿತೆ ಒನಕೆ ಓಬವ್ವಳ ಚರಿತ್ರೆಯನ್ನು ಇಂದು ಎಲ್ಲರೂ ಸ್ಮರಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.


ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯಾ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಛಲವಾದಿ ಸಂಘ ಛಲುವಾಧಿ ಸಮದಾಯದವತಿಯಿಂದ ಆಯೋಜಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಓಬವ್ವ ಅವರು ಕನ್ನಡ ಸ್ತ್ರೀಯರಲ್ಲಿ ಹೆಮ್ಮೆಯ ಸಂಕೇತವಾಗಿ ಪರಿಗಣಿಸಲ್ಪಟ್ಟಿದ್ದಾರೆ. ಹೈದರಾಲಿಯ ಸೈನಿಕರನ್ನು ಸೋಲಿಸಿದ ಕಿಂಡಿಯನ್ನು ಒನಕೆ ಓಬವ್ವನ ಎಂದು ಕರೆಯಲಾಗುತ್ತದೆ ಈಗಿನ ಮಹಿಳೆಯರು ಓಬವ್ವನ ದೈರ್ಯ ಮಾಡಿದರೆ ಯಾರೂ ಮಹಿಳೆಯರ ಮೇಲೆ ದೌರ್ಜನ್ಯ ಮಾಡಲು ಸಾಧ್ಯವಾಗಯವುದಿಲ್ಲ ಎಂದು ತಿಳಿಸಿದರು.
ನಾನು ಭದ್ರವಾತಿಯಲ್ಲಿ 1972 ನೇ ಸಾಲಿನಲ್ಲಿ 4 ನೇ ತರಗತಿ ವ್ಯಾಸಂಗ ಮಾಡುವಾಗ ದಿ.ವಿಷ್ಣುವರ್ಧನ್ ನಟಿಸಿರುವ ಕೋಟೆ ನಾಡಿ ಒನಕೆ ಓಬವ್ವನ ಸಿನಿಮಾ ನೋಡಿ ಹೈದಾರಿ ಸೈನಿಕರು ಕೋಟೆ ಒಳಗೆ ನುಸುಳಿ ಬರುತ್ತಿರುವುದನ್ನು ಒನೆಕೆಯಿಂದ ಒಬ್ಬರನ್ನು ಸದೆ ಬಡಿದು ರಾಸಿ ರಾಸಿ ಸೈನಿಕರ ಮೃತದೇಹಳ ದೃಶ್ಯ ಇನ್ನು ನನ್ನ ಕಣ್ಮುಂದೆ ಕೋಟೆ ನಾಡು ರಕ್ಷಣೆಯ ಇತಿಹಾಸದ ದೃಶ್ಯಗಳು ಬರುತ್ತಿವೆ ಎಂದು ಹಳೆಯ ನೆನೆಪು ಮೆಲುಕು ಹಾಕಿದರು.
ವೀರ ವನಿತೆ ಓಬವ್ವ ಕೇವಲ ಛಲಾವಾದಿ ಸಮುದಾಯಕ್ಕೆ ಸೀಮಿತವಲ್ಲ ಇಡೀ ರಾಜ್ಯಕ್ಕೆ ಸೇರಿದವರು. ಚಿತ್ರದುರ್ಗ ಕೋಟೆಯ ಕಾವಲುಗಾರ ಮುದ್ದಲೆ ಹನುಮಂತಪ್ಪನ ಹೆಂಡತಿಯಾದ ಓಬವ್ವ ಯಾವುದೇ ಯುದ್ದ ಕಲೆ ತಿಳಿಯದಿದ್ದರೂ, ಕೋಟೆಯ ಮೇಲೆ ಆಕ್ರಮಣ ಮಾಡುತ್ತಿದ್ದ ಶತ್ರು ಸೈನ್ಯದ ಮೇಲೆ ಕೇವಲ ಒನಕೆಯನ್ನು ಹಿಡಿದು ಸಾವಿರಾರು ಶತ್ರು ಸೈನಿಕರ ಕೊಂದು ಕೋಟೆಯ ರಕ್ಷಣೆ ಮಾಡಿದಳು. ಸಿನಿಮಾದ ದೃಶ್ಯದಲ್ಲಿ ತೋರಿಸಿರುವಂತೆ ಓಬವ್ವಳ ಇತಿಹಾಸ ಅಷ್ಟಕ್ಕೇ ಸೀಮಿತವಲ್ಲ. ಚರಿತ್ರೆಯ ಪುಟಗಳನ್ನು ತೆಗೆಯುತ್ತಾ ಹೋದಂತೆ ಓಬವ್ವ ಯಾರು, ಅವರ ಜಯಂತಿಯನ್ನು ಇಂದು ಏಕೆ ಆಚರಿಸಬೇಕು ಎನ್ನುವುದು ಅರಿವಾಗುತ್ತದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಶ್ರೀರಾಮರೆಡ್ಡಿ ವಿಶೇಷ ಉಪನ್ಯಾಸ ನೀಡುತ್ತಾ ಚಿತ್ರದುರ್ಗದ ಒನಕೆ ಓಬ್ಬವ್ವ ತೋರಿಸದ ಶೌರ್ಯ ಬೇರೆ ಯಾರು ತೋರಲಾರರು, ಯಾರಿಗೂ ತಿಳಿಯದೆ ತಕ್ಷಣ ಬಂದ ಶತ್ರು ಸೈನಿಕರ ಬಗ್ಗೆ ಗಂಡನಿಗೆ ಹೇಳದೆ, ಮನೆಯಲ್ಲಿ ಇದ್ದ ಒನಕೆಯನ್ನೇ ಆಯುಧವನ್ನಾಗಿ ಮಾಡಿಕೊಂಡು ತನ್ನ ರಾಜ್ಯ ರಕ್ಷಣೆಗೆ ಹೋರಾಡಿ ತಾಯಿ ನಾಡಿಗಾಗಿ ಮಡಿದ ಓಬವ್ವ ಸ್ರೀ ಕುಲದ ಸ್ವಾಭಿಮಾನದ ಸಂಕೇತವಾಗಿದ್ದಾರೆ,ಸಮಾಜಕ್ಕೆ ಕೊಡುಗೆ ನೀಡಿದ ಮಹಾನೀಯರ ಜಯಂತಿಗಳು ಸತ್ವಯುತವಾಗುವ ಬದಲು ಶಕ್ತಿಯುತವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಮೊದಲು ಜಿಲ್ಲಾ ಉಸ್ತುವರಿ ಸಚಿವ ಡಿ.ಸುಧಾಕರ್ ನಗರದ ತಾಲೂಕು ಕಚೇರಿಗೆ ಭೇಟಿ ನೀಡಿ ಒಬ್ಬವ್ವನ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಓಬವ್ವನ ಜಯಂತಿಗೆ ಶುಭಕೋರಿ ಜಿಲ್ಲಾ ಕೇಂದ್ರದಲ್ಲಿ ನಡೆಯುವ ಒನಕ್ಕೆ ಓಬವ್ವ ಜಯಂತಿ ಕಾರ್ಯಕ್ಕೆ ತೆರಳಿದರು.


ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಮಾಜಿ ತಾಪಂ ಸದಸ್ಯರಾದ ನಿಜಲಿಂಗಪ್ಪ, ಜಯರಾಂ ಮಾತನಾಡಿದರು.
ನಗರಸಭೆ ಸದಸ್ಯರಾದ ವೀರಭದ್ರಪ್ಪ, ರಮೇಶ್ ಗೌಡ, ಛಲುವಾದಿ ಸಂಘದ ಅಧ್ಯಕ್ಷ ಓಬಣ್ಣ,ಮಾರುತಿ,ಓಂಕಾರಮೂರ್ತಿ,ಲಿಂಗಪ್ಪ,ರಾಮಕೃಷ್ಣಪ್ಪ,ಕೆಂಚಣ್ಣ, ಹನುಮಂತಪ್ಪ,ಮಂಜುಳ್ಳಮ್ಮ,ದೇವರಾಜ್, ಚಿದಾನಂದಪ್ಪ, ಎಸ್.ಲಕ್ಷ್ಮಣ,ರವೀಂದ್ರಪ್ಪ,ನರಸಿಂಹಮೂರ್ತಿ, ಪಶುಸಂಗೋನೆ ಸಹಾಯಕ ನಿರ್ದೇಶಕ ಡಾ.ರೇವಣ್ಣ ಪೌರಾಯುಕ್ತ ಚಂದ್ರಪ್ಪ, ಕಸಬಾ ಆರ್ ಐ ಲಿಂಗೇಗೌಡ,ಶಿರಸ್ಥೆದಾರ್ ಗಿರೀಶ್, ಗ್ರಾಮಲೆಕ್ಕಾಧಿಕಾರಿ ಪ್ರಕಾಶ್ ನಗರಸಭೆ ಸದಸ್ಯರಾದ ವೀರಭದ್ರಪ್ಪ, ರಮೇಶ್ ಗೌಡ, ಜಿಪಂ ಡಿವೈಎಸ್ ಪಿ ರಾಜಣ್ಣ, ಪಿಎಸ್ ಐ ಶಿವರಾಜ್, ನಿವೃತ್ತ ಪ್ರೊ.ಟಿ.ನಾಗರಾಜ್. ಇತರರಿದ್ದರು.
ಓಬಮ್ಮನ ಭಾವಚಿತ್ರದೊಂದಿಗೆ ಸಾರೋಟದಲ್ಲಿ ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ವಿವಿಧ ಕಲಾ ತಂಡ ವಾದ್ಯಗಳೊಂದಿಗೆ ಮೆರೆವಣಿಗೆ ಮಾಡಲಾಯಿತು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *