ಸಾಮಾಜಿಕ ಭದ್ರತಾ ಪಿಂಚಿಣಿ ಪಡೆಯಲು ಶಾಸಕರ ಬಳಿ ಬರಬೇಕು ನಿಗಧಿತ ಅವಧಿಯೊಳಗೆ ಸಂಬಳ ಮಾಡಿಕೊಡದೆ ನಿನ್ನ ಬಳಿ ಇಟ್ಟುಕೊಂಡರೆ ಮುಗಿತಾ ಎಂದು ಶಾಸಕ ಟಿ.ರಘು‌ಮೂರ್ತಿ ಗರಂ.

by | 08/11/23 | ಸುದ್ದಿ


ಚಳ್ಳಕೆರೆ ನ.8 ಸಾಮಾಜಿಕ ಭದ್ರತಾ ಪಿಂಚಿಣಿ ಪಡೆಯಲು ಶಾಸಕರ ಬಳಿ ಬರಬೇಕು ನಿಗಧಿತ ಅವಧಿಯೊಳಗೆ ಸಂಬಳ ಮಾಡಿಕೊಡದೆ ನಿನ್ನ ಬಳಿ ಇಟ್ಟುಕೊಂಡರೆ ಮುಗಿತಾ ಎಂದು ಶಾಸಕ ಟಿ.ರಘು‌ಮೂರ್ತಿ ಗರಂ.

ಚಳ್ಳಕೆರೆ ತಾಲೂಕಿನ ಪಗಡಲಬಂಡೆ ಹಾಗೂ ಜಾಜೂರು ಗ್ರಾಪಂ ವ್ಯಾಪ್ತಿಯ ಜನಸಂಪರ್ಕ ಸಭೆಯ ಅಧ್ಯಕ್ಷತೆವಹಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

ತಾಲೂಕಿನಲ್ಲಿ ಬರಗಾಲವಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರು. ಮೇವು ಕೊರತೆಯಾಗದಂತೆ ಮುಂಜಾಗ್ರತೆ ವಹಿಸ ಬೇಳು ಯಾವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದನ್ನು ಗುರುತಿಸಿ ಕೊಳವೆ ಬಾವಿ ಕೊರೆಸಿ ಪೈಪ್ ಲೈನ್ ಮೂಲಕ ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡ ಬೇಕು. ಗ್ರಾಮೀಣ ಭಾಗದಲ್ಲಿರು ಕುಡುವ ನೀರಿನ ಘಟಕಗಳ ದುರಸ್ಥಿ .ಬೀದಿ ದೀಪ.ಸ್ವಚ್ಚತೆ. ಬೆಳೆ ವಿಮೆ.ಬೆಳೆ ಪರಿಹಾರ. ವೃದ್ದರಿಗೆ.ಅಂಗವಿಕರಿಗೆ. ವಿಧವೆ ಸೇರಿದಂತೆ ಸಾಮಾಜಿಕ ಭದ್ರತಾ ಪಿಂಚಿಣಿಗಾಗಿ ಸಣ್ಣ ಪುಟ್ಟ ಸಮಸ್ಯೆಗಳಿಗೆ ಅಲೆದಾಡದಂತೆ. ಸ್ಮಶಾನ ಅಭಿವೃದ್ಧಿ. ರೈತರ ಜಮೀನುಗಳಿಗೆ ಹೋಗುವ ದಾರಿ ಹಾಗೂ ಒತ್ತುವರಿ ತೆರವು.ನಿವೇಶನ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ತಹಶೀಲ್ದಾರ್ ರೇಹಾನ್ ಪಾಷ.ತಾಪಂ ಇಒ ಶಶಿಧರ್. ಸಹಾಯಕ ಕೃಷಿ ನಿರ್ಧೇಶಕ ಡಾ.ಅಶೋಕ್. ತೋಟಗಾರಿಕೆ ಅಧಿಕಾರಿ ವಿರುಪಾಕ್ಷಪ್ಪ .ಸಿಡಿಪಿಒ ಹರಿಪ್ರಸಾದ್. ಬಿಸಿಎಂ ಅಧಿಕಾರಿ ದಿವಾಕರ್. ಎಇಇ ಕಾವ್ಯ.ದಯಾನಂದ್. ಡಾ.ರೇವಣ್ಣ. ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಪಂ ಅಧ್ಯಕ್ಷರು ಸದಸ್ಯರು.ಪಿಡಿಒ ಇತರರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *