ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಮಹತ್ವವಾದದ್ದು ಇಸಿಓ ಈರಸ್ವಾಮಿ*

by | 18/11/23 | ಶಿಕ್ಷಣ


ನಾಯಕನಹಟ್ಟಿ:: ಮಗುವೊಂದು ಕಲಿತರೆ ಶಾಲೆಯ ಒಂದು ತೆರೆದಂತೆ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಮಹತ್ವವಾದದ್ದು ಎಂದು ಇಸಿಓ ಈರಸ್ವಾಮಿ ಹೇಳಿದ್ದಾರೆ.

ಅವರು ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರಡಿಹಳ್ಳಿ ಸಮೀಪದ ಹೊಸೂರು ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಕ್ಕಳ ದಿನಾಚರಣೆ ಪ್ರಯುಕ್ತ ಹಾಗೂ ನಾಯಕನಹಟ್ಟಿ ಪಂಚಾಯತಿ ಸದಸ್ಯ ಜೆ ಆರ್ ರವಿಕುಮಾರ್ ನೀಡಿದ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು ಶಾಲೆಯು ಶೈಕ್ಷಣಿಕವಾಗಿ ಮತ್ತು ಭೌತಿಕವಾಗಿ ಆಡಳಿತಾತ್ಮಕವಾಗಿ ಶಾಲೆ ಅಭಿವೃದ್ಧಿ ಹೊಂದುತ್ತದೆ ಕಳೆದ ಮೂರು ನಾಲ್ಕು ತಿಂಗಳಿಂದ ಈ ಶಾಲೆಗೆ ಮುಖ್ಯ ಶಿಕ್ಷಕರಾಗಿ ಎನ್ ಮಹಾಂತೇಶ್ ಆಗಮಿಸಿದ ಮೇಲೆ ಶಾಲೆ ಅಭಿವೃದ್ಧಿಪಥದತ್ತ ಸಾಗುತ್ತಿದೆ. ವಿದ್ಯಾರ್ಥಿಗಳಿಗೆ ಪಟ್ಟಣ ಪಂಚಾಯಿತಿ ಸದಸ್ಯ ಜೆ ಆರ್. ರವಿಕುಮಾರ್ ಅವರಂತಹ ದಾನಿಗಳಿಂದ ಸರ್ಕಾರಿ ಶಾಲೆಗಳ ಪ್ರಗತಿ ಸಾಧ್ಯವಿದೆ ಸಣ್ಣ ಶಾಲೆಯಲ್ಲಿ ಗುರುತಿಸಿ ಕೊಡುಗೆ ನೀಡಿರುವುದು ಶ್ಲಾಘನೀಯ ಎಂದರು.

ಇದೆ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪಾಪಮ್ಮಆನಂದಪ್ಪ ಮಾತನಾಡಿ ನಮ್ಮ ಗ್ರಾಮದ ಶಾಲೆಯ ವಿದ್ಯಾರ್ಥಿಗಳಿಗೆ ಈಗಾಗಲೇ ಕಾಂಪೌಂಡ್ ನಿರ್ಮಿಸಲಾಗಿದೆ ಉದ್ಯಾನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.


ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕೆ ಟಿ ನಾಗಭೂಷಣ್ ,ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸೌಭಾಗ್ಯ, ರಾಮಚಂದ್ರ ಮರಕ್ಕನವರ್ ಅವರನ್ನು ಸನ್ಮಾನಿಸಲಾಯಿತು.

ನಂತರ ಸನ್ಮಾನವನ್ನು ಸ್ವೀಕರಿಸಿ ರೇಖಲಗೆರೆ ವಿಜ್ಞಾನ ಶಿಕ್ಷಕ ಕೆ ಟಿ ನಾಗಭೂಷಣ್ ಮಾತನಾಡಿ ನವಂಬರ್ 14 ಪಂಡಿತ್ ಜವಾಹರ್ ಲಾಲ್ ನೆಹರು ಅವರು ತಮ್ಮ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವಂತೆ ಇಡೀ ಜಗತ್ತಿಗೆ ಸಾರಿದ ಮಹಾನ್ ಚೇತನ್. ನೆಹರು ರವರಿಗೆ ವಿದ್ಯಾರ್ಥಿಗಳೆಂದರೆ ದೇವರ ಸಮಾನ ಮಕ್ಕಳನ್ನ ದೇವರಂತೆ ಅವರು ಕಾಣುತ್ತಿದ್ದರು
ವಿದ್ಯಾರ್ಥಿಗಳು ಶಿಸ್ತು ಒಳ್ಳೆಯ ಗುಣಗಳು ಗುರುಗಳು ಹೇಳಿದ ಪಾಠ ಪ್ರವಚನ ಮತ್ತು ತಂದೆ ತಾಯಿಯನ್ನು ಗೌರವಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಆನಂದಪ್ಪ ಸಿಆರ್‌ಪಿಗಳಾದ ಜಿ.ಪಾಲಯ್ಯ, ಆರ್ ಈಶ್ವರಪ್ಪ, ವಿಶ್ವನಾಥ್, ಎಸ್ ಡಿ ಎಂ ಸಿ ಅಧ್ಯಕ್ಷ ಪಿ ಎಸ್ ರಾಜಣ್ಣ, ಶಾಲೆಯ ಮುಖ್ಯ ಶಿಕ್ಷಕ ಎನ್ ಮಹಾಂತೇಶ್ ಶಿಕ್ಷಕ ವಿಶ್ವನಾಥ್, ಗ್ರಾಮದ ಯುವ ಮುಖಂಡ ಸುರೇಂದ್ರಪ್ಪ, ರವಿಚಂದ್ರ ,ಇದ್ದರು

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *