ಸರ್ಕಾರದ ಮೂಲ ಆಶಯ ಶೋಷಿತರು ಮತ್ತು ಬಡವರನ್ನು ಗುರುತಿಸಿ ಇವರಿಗೆ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ತಲುಪಿಸುವಂತೆ ನಿ.ತಹಶೀಲ್ದಾರ್ ಎನ್.ರಘುಮೂರ್ತಿ.

by | 03/09/23 | ಸುದ್ದಿ


ನಾಯಕನಹಟ್ಟಿ ಸೆ.3 ಸರ್ಕಾರಿ ಸೇವೆ ಮಾಡಲು ಅವಕಾಶವಿರುವ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಕಣ್ಣು ಮುಚ್ಚಿದರುಕೂಡ ಶೋಷಿತರ ಮತ್ತು ಬಡವರ ಕಲ್ಯಾಣ ಕಣ್ಮುಂದೆ ಬರಬೇಕು ಮಾಡಿದಷ್ಟು ನೀಡು ಭಿಕ್ಷೆ ಎಂಬ ದಿವ್ಯ ಸಂದೇಶ ನಿಮ್ಮಗಳ ಮೂಲ ಮಂತ್ರವಾಗಬೇಕೆಂದು ಚಳ್ಳಕೆರೆ ನಿಕಟ ಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು

ಅವರು ಇಂದು ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಭಿನಂದ ನೆ ಯನ್ನು ನಾಯಕನಹಟ್ಟಿ ಪಟ್ಟಣದ ತಿಪ್ಪೇರುದ್ರ ಸ್ವಾಮಿ ಒಳ ಮಠದಲ್ಲಿ ತಿಪ್ಪೇರುದ್ರಸ್ವಾಮಿಗೆ ಪೂಜೆ ಮಾಡಿಸುವ ಮೂಲಕ ಸ್ವಾಮಿಯ ಸನ್ನಿಧಿಯಲ್ಲಿ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಭಿವೃದ್ಧಿ ಮತ್ತು ಕರ್ತವ್ಯದ ಕರ್ತವ್ಯದ ದೀಕ್ಷೆ ಪಡೆದು ಸನ್ಮಾನಿಸಿ ಅಭಿನಂದಿಸಲಾಯಿತು

ನಂತರ ಮಾತನಾಡಿದ ತಹಶೀಲ್ದಾರ್ ಎನ್ ರಘು ಮೂರ್ತಿ ಸರ್ಕಾರದ ಮೂಲ ಆಶಯ ಶೋಷಿತರು ಮತ್ತು ಬಡವರನ್ನು ಗುರುತಿಸಿ ಇವರಿಗೆ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಒದಗಿಸುವುದು.

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮತ್ತು ಗಾಂಧೀಜಿಯವರ ಕನಸು ಕೂಡ ಇದೆ ಆಗಿದೆ.

ನೀವು ಮಾಡುವಂತ ಕೆಲಸಗಳು ಜನ ಸಾಮಾನ್ಯರಲ್ಲಿ ಉಳಿದರೆ ನೀವುಗಳು ಕೂಡ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತೀರಾ ಸರ್ಕಾರಿ ಕೆಲಸದ ಜೊತೆಗೆ ಸಾಮಾಜಿಕ ಸೇವೆ ಮಾಡುವ ಅವಕಾಶ ಸಿಗುವುದು ತುಂಬ ವಿರಳ ಅಂತಹ ಸರ್ವಶ್ರೇಷ್ಟವಾದ ಅವಕಾಶ ಸಿಕ್ಕಿರುವುದರಿಂದ ಯಾವುದೇ ಕಾರಣಕ್ಕೂ ದುರುಪಯೋಗ ಮಾಡಿಕೊಳ್ಳದೆ ನೋವಿನಲ್ಲಿರುವ ಜನರಿಗೆ ನೀವುಗಳು ಧ್ವನಿ ಆಗಬೇಕೆಂದು ಹೇಳಿದರು.

ಪಂಚಾಯಿತಿಗಳ ಅಭಿವೃದ್ಧಿ ಚಿಂತನೆಯನ್ನು ಈ ಕ್ಷೇತ್ರದ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಸರ್ ರವರು ಹೊಂದಿದ್ದು ಶಿಕ್ಷಣ ಕುಡಿಯುವ ನೀರು ಮತ್ತು ವಸತಿ ಸೌಲಭ್ಯಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪಣತೊಟ್ಟಿದ್ದಾರೆ.

ಹಾಗಾಗಿ ಅವರೊಂದಿಗೆ ಸಮನ್ವಯ ಮಾಡಿಕೊಂಡು ಎಲ್ಲ ಕೆಲಸಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಬಡವರು ಮತ್ತು ಶೋಷಿತ ವರ್ಗದವರಿಗೆ ಶೇಕಡ ನೂರಕ್ಕೆ ನೂರರಷ್ಟು ತಲುಪಿಸುವ ಹೊಣೆ ನಿಮ್ಮದಾಗಿದೆ ಎಂದು ಹೇಳಿದರು.

ಅಬ್ಬೇನಹಳ್ಳಿ ಪಂಚಾಯತಿ ವ್ಯಾಪ್ತಿಯ 2 ಎರಡು ಗ್ರಾಮದಲ್ಲಿನ ಶಾಲೆಗಳನ್ನು ದಾನಿಗಳ ಸಹಾಯದಿಂದ ಸ್ಮಾರ್ಟ್ ಕ್ಲಾಸ್ ಗಳನ್ನಾಗಿ ಪರಿವರ್ತಿಸಲಾಗುವುದೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದಂತ ಪಾಪಮ್ಮ ಆನಂದಪ್ಪ ಉಪಾಧ್ಯಕ್ಷರಾದಂತ ಶ್ರೀಮತಿಅನಿತಮ್ಮ ಜಯಣ್ಣ ಸದಸ್ಯರುಗಳಾದಂತ. ಪಡ್ಲು ಬೋರಯ್ಯ,ಮತ್ತು ಸುರೇಂದ್ರಪ್ಪ, ಬಿಲ್ ಕಲೆಕ್ಟರ್ ತಿಪ್ಪೇಸ್ವಾಮಿ, ಉಪಸ್ಥಿತರಿದ್ದರು

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *