ಸಮಾಜಮುಖಿ ಕಾರ್ಯಗಳಲ್ಲಿ ಯುವಕರ ಪಾತ್ರ ಮಹತ್ತರವಾದದ್ದು. ಶಾಸಕರು – ಡಾ.‌ಶ್ರೀನಿವಾಸ್ ಎನ್. ಟಿ.

by | 06/11/23 | ಸುದ್ದಿ

ಕೂಡ್ಲಿಗಿ ನ.6. ಕೂಡ್ಲಿಗಿ ತಾಲೂಕಿನ ನರಸಿಂಹಗಿರಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ವಾಲ್ಮೀಕಿ ರಾಮಾಯಣ ಕಾವ್ಯದಲ್ಲಿ ಬಹು ಸಮಾಜ ಮುಖಿ ಮತ್ತು ಜೀವರ ಪರ ಚಿಂತನೆಗಳಿವೆ. ವಾಲ್ಮೀಕಿ ಸಮುದಾಯದ ಯುವಕರು ನರಸಿಂಹಗಿರಿ ಗ್ರಾಮ ಒಳಗೊಂಡಂತೆ ಸುತ್ತ ಮುತ್ತಲಿನ ಗ್ರಾಮ ಸಮಾಜಗಳಲ್ಲಿ ಜನರಪರ ಮತ್ತು ಜೀವ ಪರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ರೈತರು ಸಂಕಷ್ಟದಲ್ಲಿ ಇರುವುದರಿಂದ ವಾಲ್ಮೀಕಿಯಂತಿಯನ್ನು ಸರಳವಾಗಿ ಆಚರಿಸಿ ಇತರರಿಗೆ ಮಾಧರಿಯಾಗಬೇಕು ಎಂದರು.‌ ಈ ಸಂದರ್ಭದಲ್ಲಿ ನರಸಿಂಹಗಿರಿ ಗ್ರಾಮದ ಮುಖಂಡರಾದ ಎಸ್. ವೆಂಕಟೇಶ, ಎನ್. ಟಿ. ತಮ್ಮಣ್ಣ, ಮಂಜುನಾಥ ಎಮ್. ಪಿ. , ತಮ್ಮಣ್ಣ ಎನ್. ವಿ ಇನ್ನೂ ಮುಂತಾದ ಸಮಸ್ತ ಮುಖಂಡರು , ಮಹಿಳೆಯರು ಮತ್ತು ಯುವಕರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *