ಚಳ್ಳಕೆರೆ ಸೆ.4. ಗ್ರಾಮೀಣ ಜನರ ಸಮಸ್ಯೆ ಬಗೆಹರಿಸಲು ಗ್ರಾಮಪಂಚಾಯಿತಿ ಕೇಂದ್ರದಲ್ಲಿ ಜನಸಂಪರ್ಕ ಸಭೆ ಸಭೆಯನ್ನು ಆಯೋಜನೆ ಮಾಡಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮಸ್ಯೆಗಳಿ ಪರಿಹಾರ ಕಂಡುಕೊಳ್ಳುವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು. ಚಳ್ಳಕೆರೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಬುಡ್ನಹಟ್ಟಿ ಹಾಗೂ ನನ್ನಿವಾಳ ಗ್ರಾಮಪಂಚಾಯಿತಿ ಕೇಂದ್ರಗಳಲ್ಲಿ ತಾಲೂಕು ಆಡಳಿತವತಿಯಿಂದ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
ಈಗಾಗಲರ ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಮುಗಿಸಿ ಈಗ ದಿನಕಗಕ್ಕೆ ಎರಡು ಗ್ರಾಮಪಂಯತಿಗಳಲ್ಲಿ ಜನಸಂಪರ್ಕ ಸಭೆಯಲ್ಲಿ ತಾಲೂಕು ಮಟ್ಡದ ಎಲ್ಲಾ ಇಲಾಖೆ ಅಧಿಕಾರಿಗಳನ್ನು ನಿಮ್ಮ ಗ್ರಾಮಕ್ಕೆ ಕರೆಸಲಾಗಿದೆ. ಕುಡಿಯುವ ನೀರು
ಸ್ವಚ್ಚತೆ.ಪವತಿ ಖಾತೆ. ಸಾಮಾಜಿಕ ಭದ್ರತಾ ಪಿಂಚಿಣಿ.ರಸ್ತೆ ವಿವಾದ .ಶಿಕ್ಷಣ.ತೋಗಾರಿಕೆ. ಕೃಷಿ. ಇ.ಸ್ವತ್ ಖಾತೆ ಸೇರಿದಂತೆ ಮೂಲಭೂತ ಸಮಸ್ಯೆಗಳ ಬಗ್ಗೆ ದೂರು ನೀಡಿದರೆ
ಸಂಬಂಧ ಪಟ್ಟ ಅಧಿಕಾರಿಗಳು ನಿಮ್ಮ ಸಮಸ್ಯೆ ಗಳಿಗೆ ಪರಿಹಾರ ನೀಡಲಿದ್ದಾರೆ. ಗ್ರಾಮೀಣ ಜನರು ಕೆಲಸ ಬಿಟ್ಟು ಅನಾವಶ್ಯಕವಾಗಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಹೊತ್ತು ನಗರದ ಕಚೇರಿಗಳಿಗೆ ಅಲೆದಾಡುವುದನ್ನು ಬಿಟ್ಟು ಜಮಸಂಪರ್ಕ ಸಭೆಯಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ತಿಳಿಸಿದರು.
ತಾಪಂ ಇಒ ಹೊನ್ನಯ್ಯ ಮಾತನಾಡಿ ಗ್ರಾಮೀಣ ಜನರು ಕೂಲಿ ಕೆಲಸ ಹುಡುಕಿಕೊಂಡು ನಗರಗಳತ್ತ ಹೋಗದೆ ನಿಮ್ಮ ಗ್ರಾಮದಲ್ಲೇ ನರೇಗಾಯೋಜನೆಯಡಿ ಕೆಲಸ ಮಾಡುವಂತೆ ತಿಳಿಸಿದರು ಗ್ರಾಮೀಣ ಜನರು ವಿವಿಧ ಸರಕಾರಿ ಸೌಲಭ್ಯ ಇ ಸ್ವತ್.ಕುಡಿಯುವ ನೀರು. ಬೀದಿ ದೀಪ. ಸ್ವಚ್ಚತೆ ಜನರಿಗೆ ಸಕಾಲಕ್ಕೆ ತಲುಪಿಸಿದರೆ ಯಾವುದೇ ದೂರುಗಳು ಬರುವುದಿಲ್ಲ ಆದ್ದರಿಂದ ಕಚೇರಿಗೆ ಜನರನ್ನು ಅಲೆದಾಡಿಸದೆ ಕೆಲಸ ಮಾಡಿಕೊಡುವಂತೆ ತಿಳಿದಿದರು.
ಜನಸಂರ್ಕ ಸಭೆಯಲ್ಲಿ ಗ್ರಾಪಂ ಅಧ್ಯಕ್ಷರು. ಸದಸ್ಯರು. ಪೊಲೀಸ್ ಉಪ ಅದೀಕ್ಷಕ ರಾಜಣ್ಣ, ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.
ಸಮಸ್ಯೆಗಳನ್ನು ಹೊತ್ತು ಬಂದ ಜನರನ್ನು ಕಚೇರಿಗೆ ಅಲೆದಾಡಿಸದೆ ಕೆಲಸ ಮಾಡಿಕೊಡುವಂತೆ ಶಾಸಕ ಟಿ.ರಘುಮೂರ್ತಿ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments