![](https://janadhwani.in/wp-content/uploads/2024/02/IMG-20240218-WA0229.jpg)
ಚಳ್ಳಕೆರೆ: ತಾಲ್ಲೂಕಿನ ನಾಗಗೊಂಡನಹಳ್ಳಿ ಸಮೀಪದ ವೇದಾವತಿ ನದಿಯ ತಟದಲ್ಲಿರುವ ಶಿವಯೋಗಿ ಶ್ರೀ ಗುರು ಚಲುಮೆ ರುದ್ರ ಸ್ವಾಮಿಗಳವರ ಜೀವೈಕ್ಯ ಗದ್ದುಗೆ ಮಠದ ಮಹಾ ರಥೋತ್ಸವವು ಭಾನುವಾರ ಸಂಜೆ 5 ಗಂಟೆ ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರಗಿತು. ![](https://janadhwani.in/wp-content/uploads/2024/02/IMG-20240218-WA0227.jpg)
ಮುಂಜಾನೆಯಿಂದ ಗದ್ದುಗೆ ಸಮೀಪ ವಿಶೇಷ ಪೂಜೆಗಳು ನಡೆದವು. ಸಾವಿರಾರು ಭಕ್ತರು ಗದ್ದುಗೆ ದರ್ಶನ ಪಡೆದರು. ಬಂದಂತಹ ಭಕ್ತಾದಿಗಳಿಗೆ ದಾಸೋಹ ವಿತರಿಸುವ ಸೇವೆ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಸಂಜೆಯಾಗುತ್ತಿದ್ದಂತೆ ಬಗೆ ಬಗೆಯ ಹೂಗಳಿಂದ ಅಲಂಕರಿಸಿದ ರಥಕ್ಕೆ ಮೊದಲು ಬಲಿಅನ್ನ ಸೇವೆ ಸಲ್ಲಿಸಿದ ಬಳಿಕ ಅಲಂಕೃತವಾದ ಪಲ್ಲಕ್ಕಿಯಲ್ಲಿ ಶ್ರೀ ಸ್ವಾಮಿಯನ್ನ ತಂದು ಕೂರಿಸಲಾಯಿತು. ನಂತರ ನಡೆದ ಪಟ(ಮುಕ್ತಿ ಭಾವುಟದ)ದ ಹರಾಜು ಪ್ರಕ್ರಿಯೆಯಲ್ಲಿ ಭರಮಸಾಗರದ ಸೋಮಶೇಖರಪ್ಪ ಅವರು 45000 ರೂ. ಗಳಿಗೆ ಶ್ರೀ ಸ್ವಾಮಿಯ ಪಟವನ್ನ ತಮ್ಮದಾಗಿಸಿಕೊಂಡರು. ನಂತರ ನೆರೆದ ಸದ್ಭಕ್ತರ ಹರ್ಷೋದ್ಗಾರದ ನಡುವೆ ರಥ ಪ್ರಾರಂಭವಾಯಿತು. ಪಾದಗಟ್ಟೆ ತಲುಪಿ ನಂತರ ಸ್ವಸ್ಥಾನಕ್ಕೆ ಮರಳಿತು. ರಥೋತ್ಸವದಲ್ಲಿ ಮುರುಘಾಮಠದ ಉಸ್ತುವಾರಿ ಬಸವ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕ್ಷೇತ್ರದ ಶಾಸಕ .ರಾಜ್ಯ ಸಣ್ಣ ಕೈಗಾರಿಗಳ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಟಿ. ರಘುಮೂರ್ತಿ, ಮುಖಂಡರಾದ ಸೋಮಶೇಖರ್ ಮಂಡಿಮಠ್, ಬಾಳೆಕಾಯಿ ರಾಮದಾಸ್, ಹುಲಿಕುಂಟೆ ಜಿತೇಂದ್ರ ಸೇರಿದಂತೆ ಶ್ರೀ ಚಿಲುಮೆ ರುದ್ರ ಸ್ವಾಮಿಗಳವರ ಟ್ರಸ್ಟ್ ನ ಪದಾಧಿಕಾರಿಗಳು, ಗ್ರಾ.ಪಂ. ಸದಸ್ಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಟ್ರಾಫಿಕ್ ಸಮಸ್ಯೆಯಾಗದಂತೆ ಪೋಲೀಸ್ ಇಲಾಖೆ ಉತ್ತಮ ಪಾರ್ಕಿಂಗ್ ವ್ಯವಸ್ಥೆ ನಿರ್ವಹಿಸಿದರು. ಎತ್ತಿನ ಗಾಡಿ, ಟ್ರಾಕ್ಟರ್, ಕಾರ್ ಮತ್ತು ಬೈಕ್ ಗಳಲ್ಲಿ ಜನ ಆಗಮಿಸಿದರು.
![](https://janadhwani.in/wp-content/uploads/2024/02/IMG-20240218-WA0226.jpg)
![](https://janadhwani.in/wp-content/uploads/2024/02/IMG-20240218-WA0225.jpg)
![](https://janadhwani.in/wp-content/uploads/2024/02/IMG-20240218-WA0223.jpg)
![](https://janadhwani.in/wp-content/uploads/2024/02/IMG-20240218-WA0222.jpg)
![](https://janadhwani.in/wp-content/uploads/2024/02/IMG-20240218-WA0221.jpg)
![](https://janadhwani.in/wp-content/uploads/2024/02/IMG-20240218-WA0217.jpg)
![](https://janadhwani.in/wp-content/uploads/2024/02/IMG-20240218-WA0215.jpg)
![](https://janadhwani.in/wp-content/uploads/2024/02/IMG-20240218-WA0213.jpg)
![](https://janadhwani.in/wp-content/uploads/2024/02/IMG-20240218-WA0211.jpg)
0 Comments