ಚಳ್ಳಕೆರೆ ಜನಧ್ವನಿ ವಾರ್ತೆ ಅ.28. ನಗರದಲ್ಲಿ ಶನಿವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ನಡೆದ ಭಾವ ಚಿತ್ರ ಮೆರವಣಿಗೆ ಸಮಾಜದ ಬಾಂಧವರು ವಿವಿಧ ಕಲಾ ತಂಡಗಳ ಸಮ್ಮುಖದಲ್ಲಿ ಸಡಗರ – ಸಂಭ್ರಮದಿಂದ ವಾಲ್ಮೀಕಿ ಜಯಂತಿ ಅದ್ಧೂರಿ ಆಚರಣೆ ಮಾಡಲಾಯಿತು.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ವಾಲ್ಮೀಕಿ ಸಮುದಾಯ. ವಿವಿಧ ವಾಲ್ಮೀಕಿ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಗರದ ವಾಲ್ಮೀಕಿ ವೃತ್ತದಿಂದ ಆರಂಭವಾದ ಮೆರವಣಿಗೆಗೆ ಶಾಸಕರಾದ ಟಿ.ರಘುಮೂರ್ತಿ. ಕೆ.ಸಿ.ವೀರೇಂದ್ರಪ್ಪಿ ವಿಶೇಷ ಪೂಜೆ ಸಲ್ಲಿಸಿ ವಾಲಅದ್ಧೂರಿ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು.ವಾಧ್ಯ ಹಾಗೂ ಡಿಜೆ ಸದ್ದಿಗೆ ತಾಲೂಕಿನ ವಿವಿಧ ಗ್ರಾಮೀಣ ಹಾಗೂ ನಗರದ ಮಹಿಳೆಯರು, ಯುವಕರು ಹಾಗೂ ಸುಡುವ ಬಿಸಿಲು ಲೆಕ್ಕಿಸದೆ ರಾರಾರುಕ್ಕಮ್ಮ ಸೇರಿದಂತೆ ವಿವಿಧ ಹಾಡುಗಳ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ವಿವಿಧ ಪಕ್ಷದ ರಾಜಕಾರಣಿಗಳನ್ನು ಅಭಿಮಾನಿಗಳೊಂದಿದೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು. ನಗರದ ಮುಖ್ಯ ರಸ್ತೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ವಾಲ್ಮೀಕಿ ಭಾವ ಚಿತ್ರದೊಂದಿಗೆ ಪೋಟೊಗಳಿರುವ ಪ್ಲೆಕ್ಸ್ ಹಾಗೂ ಬಂಡಿಗಗಳು ರಾರಾಜಿಸುತ್ತಿದ್ದವು



ಮೆರವಣಿಗೆಯಲ್ಲಿ ಬಿಜೆಪಿ.ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು ಜನರಪ್ರತಿನಿಧಿಗಳು, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಹಿಸಿದ್ದರು.
ವಾಲ್ಮೀಕಿ ಪ್ರತಿಮೆಯ ಬಳಿ ಸೆಲ್ಫಿ ಹಾಗೂ ಪೋಟೊ ತೆಗೆಸಿಕೊಳ್ಳಲು ಜನರು ಮುಂದಾಗಿದ್ದರು.

0 Comments