ಶ್ರೀಗುರು ಹಟ್ಟಿ ತಿಪ್ಪೇಶನ ರಥಕ್ಕೆ2.5 ಕೋಟಿ ರೂ ವಿಮೆ ಅಪಾರ ಜಿಲ್ಲಾಧಿಕಾರಿ ಟಿ.ಜವರೇಗೌಡ

by | 09/03/23 | ಸುದ್ದಿ


ಚಳ್ಳಕೆರೆ ಜನಧ್ವನಿವಾರ್ತೆ ಮಾ.8
ಮಧ್ಯಕರ್ನಾಟಕದ ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ರಥಕ್ಕೆ 2.5 ಕೋಟಿ ಮೊತ್ತದ ವಿಮಾ ಸೌಲಭ್ಯ ಒದಗಿಸಲಾಗಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ವಾರ್ಷಿಕ ಜಾತ್ರೆ ನಿಮಿತ್ತ ದಿ ನ್ಯೂ ಇಂಡಿಯಾ ಅಶ್ಯುರೆನ್ಸ್ ವಿಮಾ ಕಂಪನಿಯ ಅಧಿಕಾರಿಗಳಿಂದ ವಿಮಾ ಪ್ರಮಾಣ ಪತ್ರವನ್ನು ಪಡೆದುಕೊಂಡು ಅವರು ಮಾತನಡಿದರು.
ಮಧ್ಯಕರ್ನಾಟಕದಲ್ಲಿ ಅತೀ ಎತ್ತರದ ರಥ ಎಂಬ ಹೆಗ್ಗಳಿಕೆ ಪಡೆದಿರುವ ಗುರುತಿಪ್ಪೇರುದ್ರಸ್ವಾಮಿ ರಥವನ್ನು ಬೆಲೆಬಾಳುವ ಮರದಿಂದ ನಿರ್ಮಿಸಲಾಗಿದೆ. ಹಾಗೂ ಪ್ರತಿವರ್ಷವೂ ರಥದವನ್ನು ಸಂಪೂರ್ಣವಾಗಿ ಪರಿಶೀಲಿಸಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಥದ ದೈಹಿಕ ಸಾಮರ್ಥ್ಯ ಪ್ರಮಾಣಪತ್ರ ನೀಡಿದ ನಂತರ ರಥೋತ್ಸವಕ್ಕೆ ಸಿದ್ಧಗೊಳಿಸಲಾಗುವುದು. ರಥೋತ್ಸವ ವೇಳೆ ಹಾಗೂ ದಿನನಿತ್ಯ ರಥಕ್ಕೆ ಸಾಕಷ್ಟು ಸುರಕ್ಷತೆ ಒದಗಿಸಲಾಗುತ್ತಿದೆ. ಹೀಗಿದ್ದರೂ ಯಾವುದಾದರೂ ನೈಸರ್ಗಿಕ ಅವಘಡಗಳ ಸಂಭವಿಸಿದರೆ ಮುನ್ನೆಚ್ಚರಿಕೆ ಕ್ರಮವಾಗಿ ವಿಮೆಯನ್ನು ಒದಗಿಸಲಾಗಿದೆ. ಜಾತ್ರೆಗೆ ಈಗಾಗಲೆ ಹಲವು ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಮಾರ್ಚ್ ೧೦ರಂದು ಮಹಾರಥೋತ್ಸವ ನಡೆಯಲಿದೆ ಎಂದರು.
ಚಿತ್ರದುರ್ಗದ ನ್ಯೂ ಇಂಡಿಯ ಅಶ್ಯುರೆನ್ಸ್ ಕಂಪನಿಯ ವ್ಯವಸ್ಥಾಪಕ ಎ.ಎಂ.ಶೇಖರಯ್ಯ ಮಾತನಾಡಿ, “ಸತತ ನಾಲ್ಕನೇ ವರ್ಷವೂ ರಥಕ್ಕೆ ವಿಮೆ ನೀಡಲಾಗುತ್ತಿದ್ದು, ಸದರಿ ವರ್ಷ ರಥಕ್ಕೆ ವರ್ಷದ ಎಲ್ಲ ದಿನಗಳಲ್ಲಿ ಮಳೆ, ಗಾಳಿ, ಬೆಂಕಿ ಸೇರಿದಂತೆ ನೈಸರ್ಗಿಕ ಹಾನಿಗಳಿಂದ ಸಂಭವಿಸಬಹುದಾದ ಅವಘಡಗಳಿಗೆ ರೂ.೨.೫ಕೋಟಿ ವಿಮೆ ನೀಡಲಾಗಿದೆ. ಜತೆಗೆ ಜಾತ್ರೆಗಾಗಿ ರಥವನ್ನು ಕಟ್ಟುವ, ಜಾತ್ರೆಯ ದಿನದಂದು ರಥವನ್ನು ಚಲಾಯಿಸುವ ಸಾಂಪ್ರದಾಯಿಕ ಕುಲಕಸುಬುಗಳ ಬಾಬುದಾರರ ಹೆಸರಿರುವ ಒಟ್ಟು ೮೫ಜನರಿಗೆ ರೂ.೨ಲಕ್ಷ, ಮತ್ತು ರಥೋತ್ಸವದಲ್ಲಿ ಭಾಗವಹಿಸುವ ೨೫ಜನ ಅನಾಮಿಕ ಭಕ್ತರಿಗೆ ತಲಾ ರೂ.೧ ಲಕ್ಷ ವಿಮೆ ಒದಗಿಸಲಾಗುವುದು. ವಿಮೆಗಾಗಿ ದೇವಾಲಯದಿಂದ ರೂ.೫೨,೩೬೪ ಮೊತ್ತವನ್ನು ವಿಮಾಕಂಪನಿಯು ಪಡೆದುಕೊಂಡು ಪ್ರಮಾಣಪತ್ರ ನೀಡಲಾಗಿದೆ” ಎಂದರು.
ಧಾರ್ಮಿಕ ದತ್ತಿ ಇಲಾಖೆ ಮುಜುರಾಯಿ ತಹಶೀಲ್ದಾರ್ ಬಿ.ಎಸ್.ವೆಂಕಟೇಶ್, ವಕೀಲ ಬಿ.ಎಂ.ಅರುಣ್‌ಕುಮಾರ್ ಇದ್ದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page