ಶೋಷಿತರ ಜಾಗೃತಿಗಾಗಿ ಜ‌.28ರಂದು ಕೋಟೆ ನಾಡಿನಲ್ಲಿ ರಾಜ್ಯ ಸಮಾವೇಶ

by | 14/01/24 | ಸುದ್ದಿ


ಚಳ್ಳಕೆರೆ ಜ.14 ರಾಜ್ಯದಲ್ಲಿ ಅಹಿಂದ ಸಮುದಾಯಗಳು ಒಗ್ಗಟ್ಟಾಗಿ ನಡೆದು ರಾಜಕೀಯ ಆರ್ಥಿಕ ಸಾಮಾಜಿಕವಾಗಿ ಬಲಾಢ್ಯವಾಗಲು ಇದು ಸಕಾಲವಾಗಿದ್ದು ಜ. 28ರಂದು ಭಾನುವಾರ ಶೋಷಿತರ ಜಾಗೃತಿಗಾಗಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ರಾಜ್ಯ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮುದಾಯದಗಳು ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದು ಚಿತ್ರದುರ್ಗ ಲೋಕಸಭೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜೆಜೆ ಹಟ್ಟಿ ತಿಪ್ಪೇಸ್ವಾಮಿ ಕರೆ ನೀಡಿದರು.

ನಗರದ ಗೊಲ್ಲ ಸಮುದಾಯದ ಹಾಸ್ಟೆಲ್ ಆವರಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ತಳ ಸಮುದಾಯಗಳು ಹಿಂದಿನಿಂದಲೂ ಅತ್ಯಂತ ಶೋಚನೀಯ ಸ್ಥಿತಿಯನ್ನು ಎದುರಿಸುತ್ತಿದ್ದು ಮೇಲ್ವರ್ಗದ ಕುತಂತ್ರದಿಂದಾಗಿ ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗದೆ ಸಾವಿರಾರು ವರ್ಷಗಳಿಂದ ಸಂಕಷ್ಟವನ್ನು ಅನುಭವಿಸಿದವು ಡಾ. ಬಿಆರ್ ಅಂಬೇಡ್ಕರ್ ರವರ ಸಂವಿಧಾನದಿಂದ ಕಳೆದ 70 ವರ್ಷಗಳಿಂದ ವಿದ್ಯೆ ಉದ್ಯೋಗ ಅಧಿಕಾರ ಅಂತಸ್ತು ಸಮಾನತೆಗಳನ್ನು ಪಡೆದು ದೇಶದ ಮೂಲ ನಿವಾಸಿಗಳು ಪ್ರಗತಿಯತ್ತ ಮುನ್ನಡೆಯುತ್ತಿದ್ದಾರೆ ಇನ್ನಾದರೂ ಅವಕಾಶ ವಂಚಿತ ಸಮುದಾಯದ ಮುಖಂಡರು ಹಾಗೂ ಜನತೆ ಎಚ್ಚೆತ್ತುಕೊಂಡು ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಬಲ ಪ್ರದರ್ಶಿಸಬೇಕಿದೆ ತಮ್ಮ ಹಕ್ಕನ್ನು ಪಡೆಯುವ ಸುಸಂದರ್ಭ ಒದಗಿ ಬಂದಿದ್ದು ಅಂದಿನ ದಿನ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸಮುದಾಯದ ಜನರನ್ನು ಗ್ರಾಮೀಣ ಪ್ರದೇಶಗಳಲ್ಲಿ ಪ್ರೇರೇಪಿಸಿ ಕರೆ ತರಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಎಚ್ಎಸ್ ಸೈಯದ್ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಿಂದ ಇಂದು ಮುಸ್ಲಿಂ ಸಮುದಾಯ ಉಸಿರಾಡುತ್ತಿದೆ ಇಲ್ಲದಿದ್ದರೆ ಇಂದಿಗೂ ಸಹ ಭಯಭೀತರಾಗಿ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು ದೇವರ ದಯೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಹಿಂದ ಸಮುದಾಯಗಳ ಏಳಿಗೆಗಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದು ಅವರ ಕೈ ಬಲ ಪಡಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಮುಸ್ಲಿಂ  ಕ್ರೈಸ್ತ ಮಡಿವಾಳ ವಿಶ್ವಕರ್ಮ ಕುರುಬ ಉಪ್ಪಾರ ಬಲಿಜ ಗೊಲ್ಲ ಸಮುದಾಯಗಳು ಸೇರಿದಂತೆ ಇನ್ನಿತರ ಎಲ್ಲಾ ಹಿಂದುಳಿದ ಸಮುದಾಯಗಳು ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಕೋಟೆ ನಾಡಿನಲ್ಲಿ ಐತಿಹಾಸಿಕ ಶೋಷಿತ ಸಮುದಾಯಗಳ ಜಾಗೃತಿಗಾಗಿ ರಾಜ್ಯ ಸಮಾವೇಶವನ್ನು ಆಯೋಜಿಸಲಾಗಿದ್ದು ಎಲ್ಲ ಸಮುದಾಯಗಳು ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಹಕ್ಕುಗಳನ್ನು ಪಡೆದುಕೊಳ್ಳಲು ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಆರ್ ಪ್ರಸನ್ನ ಕುಮಾರ್ ಮಾತನಾಡಿ ಅವಕಾಶ ವಂಚಿತ ಜಾತಿಗಳಿಗೆ ಮೀಸಲಾತಿ ನೀಡಿ ಸಾಮಾಜಿಕ ಸಮಾನತೆ ಸಾರಿದ ಕರ್ನಾಟಕ ಅಗ್ರಗಣ್ಯ ರಾಜ್ಯ ವಾಗಿದ್ದು ಹಲವು ಹಿಂದುಳಿದ ವರ್ಗಗಳ ಆಯೋಗಗಳು ವೈಜ್ಞಾನಿಕ ಅಧ್ಯಯನ ನಡೆಸಿ ಮೀಸಲಾತಿ ಜಾರಿಯಾಗಿದೆ ಆದರೆ ಬಲಾಡ್ಯರು ಶೋಷಿತರ ಪಾಲನ್ನು ಕಬಳಿಸುತ್ತಿರುವುದು ಶೋಚನೀಯಾವಾಗಿದೆ ಆದ್ದರಿಂದ ಹೆಚ್ ಕಾಂತರಾಜ್ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಸ್ವೀಕರಿಸಿ ಸಾರ್ವಜನಿಕರ ಚರ್ಚೆಗೆ ಬಿಟ್ಟು ವರದಿಯನ್ನು ಅಂಗೀಕರಿಸಿ ಜಾರಿಗೊಳಿಸಬೇಕು ಕೇಂದ್ರ ಸರ್ಕಾರವು ಜಾತಿವಾರು ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಮಾಡಿಸಬೇಕು ಶೇಕಡ 10ರಷ್ಟು ಮೀಸಲಾತಿ ರದ್ದು ಪಡಿಸುವಂತೆ ಒತ್ತಾಯಿಸಬೇಕು ಮಹಿಳಾ ಮೀಸಲಾತಿ ಕಾಯ್ದೆಯನ್ನು ಕೂಡಲೇ ಜಾರಿ ಮಾಡಬೇಕು ರಾಜಕೀಯ ಮೀಸಲಾತಿಯನ್ನು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಬೇಕು ಇಂತಹ ಹಲವು ಬೇಡಿಕೆಗಳು ತಳ ಸಮುದಾಯ ಗಳಿಗೆ ಈಡೇರಬೇಕಾಗಿರುವುದರಿಂದ ಈ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಎಲ್ಲ ಸಮುದಾಯಗಳ ಕರ್ತವ್ಯವಾಗಿದೆ ಹೀಗಾಗಿ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು‌.

ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂಜೆ ರಾಘವೇಂದ್ರ ಸಿ ಬಾಬು ನೇತಾಜಿ ಆರ್ ಪ್ರಸನ್ನ ಹೆಚ್ ಎಸ್ ಸೈಯದ್ ಮುಜೀಬ್ ಉಲ್ಲ ಬಿ ವಿ ಸಿರಿಯಣ್ಣ ಸೇರಿದಂತೆ ಹಲವು ಸಮುದಾಯಗಳ ಮುಖಂಡರುಗಳು ಭಾಗವಹಿಸಿದ್ದರು.

Latest News >>

ಶ್ರೀ ಅಗ್ನಿಬನ್ನಿರಾಯಸ್ವಾಮಿ ಜಯಂತಿ: ಸರಳ ಆಚರಣೆ

ಚಿತ್ರದುರ್ಗ ಮಾರ್ಚ್28: ಚಿತ್ರದುರ್ಗ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಶ್ರೀ ಅಗ್ನಿಬನ್ನಿರಾಯಸ್ವಾಮಿ ಜಯಂತಿ...

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಭೇಟಿ. ನೀಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ.

ನಾಯಕನಹಟ್ಟಿ:. ಕಳೆದ ಐದು ವರ್ಷದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಶೂನ್ಯ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ಎನ್....

ಕುಡಿಯುವ ನೀರಿನ ತೊಂದರೆ ಉದ್ಭವಿಸುವ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ ಖಾಸಗಿ ಬೋರ್‍ವೆಲ್ ಹಾಗೂ ಟ್ಯಾಂಕರ್‍ಗಳನ್ನು ಗುರುತಿಸಿ

ಚಿತ್ರದುರ್ಗ ಮಾ.27: ಚಿತ್ರದುರ್ಗ ತಾಲ್ಲೂಕಿನ ಕುಡಿಯುವ ನೀರಿನ ತೊಂದರೆ ಉದ್ಭವಿಸುವ ಗ್ರಾಮಗಳ ಪಟ್ಟಿಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು...

ಗ್ರಾಮೀಣ ಭಾಗದಲ್ಲಿ‌ಕುಡಿಯುವ ನೀರಿನ ಸಮಸ್ಯೆ ಹಾಗೂ ಕಾರ್ಮಿಕರು ಗುಳೆ ಹೋಗದಂತೆ ನರೇಗಾ ಕೂಲಿ ಕೆಲಸ ನೀಡುವಂತೆ ತಾಪಂ ಇಒ ಲಕ್ಷ್ಮಣ್.

ಚಳ್ಳಕೆರೆ ಮಾ.27. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಾಪಂ ಇಒ ಲಕ್ಷ್ಮಣ್...

ವೃದ್ಧ ದಂಪತಿಗಳು ಬೀದಿಯಲ್ಲಿ ಬಿಕ್ಷೆ.- ಮನೆಗೆ ಕಳಿಸಿ ಎರಡೊತ್ತು ಊಟದ ವ್ಯವಸ್ಥೆ ಕಲ್ಪಿಸುವ ಸಿಡಿಪಿಒ ಹರಿಪ್ರಸಾದ್.

ಚಳ್ಳಕೆರೆ ಮಾ.27. ಸಾಕಿ ಸಲುಹಿದ ತಂದೆ ತಾಯಿಗಳು ವೃದ್ದರಾದ ಮೇಲೆ ಹೆತ್ತವರವನ್ನು ನೋಡಿಕೊಳ್ಳದೆ ಬೀದಿಗೆ ಬಿಟ್ಟಿರುವ ದಾರುಣ ಕರುಣಾಜಕ...

ತೀವ್ರತರ ಖಾಯಿಲೆಯಿಂದ ಬಳಲುವ ಶಿಕ್ಷಕರು, ದೈಹಿಕ ಅಂಗವಿಕಲತೆಯುಳ್ಳ ಶಿಕ್ಷಕರು, ಗರ್ಭಿಣ ಯರು ನವಜಾತ ಶಿಶುವುಳ್ಳ ಶಿಕ್ಷಕಿಯರನ್ನು ಚುನಾವಣೆ ಕರ್ತವ್ಯಕ್ಕೆ ನೆಮಕ ಮಾಡಿಕೊಳ್ಳದಂತೆ ಮನವಿ.

ಚಿತ್ರದುರ್ಗ ಮಾ.27 ಮುಂಬರುವ ಲೋಕಸಭಾ ಚುನಾವಣೆಗೆ ದೈಹಿಕ ಅಂಗವಿಕಲ ಶಿಕ್ಷಕರು, ಗರ್ಭಿಣ ಯರು, ನವಜಾತ ಶಿಶು ಹೊಂದಿರುವ ಶಿಕ್ಷಕಿಯರು ಹಾಗೂ...

ನಗರದ 6ನೇ ವಾರ್ಡ್ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ಸಮಸ್ಯೆಗಳ ಆಗರವಾಗಿದೆ : ಯುವ ಮುಖಂಡ ಜಿ. ದಾದಾಪೀರ್

ಹಿರಿಯೂರು: ನಗರದ ವೇದಾವತಿ ನದಿಗೆ ಹೊಂದಿಕೊಂಡಿರುವ 6ನೇ ವಾರ್ಡ್ ನಲ್ಲಿ ಅತ್ಯಂತ ಬಡವರು ಬೀದಿ ಬದಿ ವ್ಯಾಪಾರಸ್ಥರು, ಅಲ್ಪಸಂಖ್ಯಾತರು ಹೆಚ್ಚಿನ...

ಹಟ್ಟಿತಿಪ್ಪೇಶನ ರಥೋತ್ಸವಕ್ಕೆ ಹೋಗುವ ಭಕ್ತರಿಗೆ ಉಚಿತ ಮಜ್ಜಿಗೆ ವಿತರಣೆ.

ಚಳ್ಳಕೆರೆ ಮಾ.26 ನಗರದ ನೆಹರು ವೃತ್ತದಲ್ಲಿ ಸ್ನೇಹ ಬಳಗದವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂಸ ಉಚಿತ ಮಜ್ಜಿಗೆ ಹಾಗೂ ನೀರು ವಿತರಣೆ ಮಾಡಿದರು....

ನಗರದ ಮಹಿಳೆಯರು ಪಾದಯಾತ್ರೆ ಮೂಲಕ ಹಟ್ಟಿತಿಪ್ಪೇಶನ ದರ್ಶನ.

ಚಳ್ಳಕೆರೆ 25, ಸೌಹಾರ್ದತಾ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ಅಂಗವಾಗಿ ಚಳ್ಳಕೆರೆ ಟೌನ್ ಗಾಂಧಿನಗರದ ಮಹಿಳೆಯರು ಸ್ವಾಮಿ ಯ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page