ಶೇ ನೂರು ಮತದಾನ ಗಡಿ ಮುಟ್ಟಲು ಮತದಾರರನ್ನು ಸೆಳೆಯಲು ಸಖಿ ಮತಗಟ್ಟೆಗಳ ಅಲಂಕಾರಗೊಳಿಸಲು ಸಜ್ಜು ಸ್ವೀಪ್ ಸಮಿತಿ ಅಧ್ಯಕ್ಷ ತಾಪಂ ಇಒ ಹೊನ್ನಯ್ಯ

by | 30/04/23 | ಚುನಾವಣೆ-2023


ಚಳ್ಳಕೆರೆ ಜನಧ್ವನಿ ವಾರ್ತೆ ಏ30.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಮತದಾನದ ಗುರಿಯನ್ನು ಹೊಂದಲು ಮತದಾರರನ್ನು ಸೆಳೆಯಲು ಮತಗಟ್ಟೆಗಳನ್ನು ಅಲಂಕೃತಗೊಳಿಸಲು ತಾಲೂಕು ಸ್ವೀಪ್ ಸಮಿತಿ ಸಕಲ ಸಿದ್ದತೆಯಲ್ಲಿ ತೊಡಗಿದೆ.


ಹೌದು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಡಿಮೆ ಮತದಾನ ನಡೆದಿರುವ ಮತಗಟ್ಟೆ ಹಾಗೂ ಅತಿ ಹೆಚ್ಚು ಮಹಿಳಾ ಮತದಾರರು ಹೊಂದಿರುವ 5ಸಖಿ ಮತಗಟ್ಟೆಗಳನ್ನು ಗುರತಿಸಲಾಗಿದೆ, ಮತಟ್ಟೆ ಸಂಖ್ಯೆ (79).ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಟಪ್ಪನಹಟ್ಟಿ, (89). ಉದ್ರು ಹಿರಿಯ ಪ್ರಾಥಮಿಕ ಶಾಲೆ.( 174). ಸರಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆ ಪರಶುರಾಂಪುರ, (188).ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರ, (242). ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಲಿಕುಂಟೆ ಈ ಮತಗಟ್ಟೆಯಲ್ಲಿ ಅತಿ ಹೆಚ್ಚು ಮಹಿಳಾ ಮತದಾರರಿದ್ದು ಈ ಮತಗಟ್ಟೆಯಲ್ಲಿ ಮಹಿಳಾ ಸಿಬ್ಬಂದಿಗಳು ಕೊಠಡಿ ಪಿಂಕ್ ಇಲ್ಲಿನ ಮಹಿಳಾ ಸಿಬ್ಬಂದಿಗಳೂ ಸಹ ಪಿಂಕ್ ಕಲರ್ ಉಡುಗೆ ತೊಟ್ಟಿರುವುದು ವಿಶೇಷವಾಗಿರುತ್ತದೆ.


ನಗರದ (97). ವಿಶ್ವಬಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಕಲಚೇತನ ಮತಗಟ್ಟೆ ಗುರುತಿಸಿದ್ದು ಇಲ್ಲಿ ವಿಕಲಚೇತನ ಮತಗಟ್ಟೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿಲಿದ್ದಾರೆ,
ಒಂದು ಯುವ ಮತದಾರರ ಮತಟ್ಟೆ ಗುರುತಿಸಿದ್ದು ಇಲ್ಲಿನ ಮತಗಟ್ಟೆಯಲ್ಲಿ ಯುವ ನೌಕರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ, ಪರಿಸರಸ್ನೇಹಿ ಮತಗಟ್ಟೆಗಳು ಮೇ 10 ರಂದು ನಡೆಯಲಿರುವ ಮತದಾನಕೇಂದ್ರಗಳು ಭರದಿಂದ ಸಿದ್ದತೆಗೊಳ್ಳುತ್ತಿವೆ.


ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಒ ಹೊನ್ಯಯ್ಯ ಜನಧ್ವನಿ ಡಿಜಿಟಲ್ ಮಾಧ್ಯಮದೊಂದಿಗೆ ಮಾತನಾಡಿ 2023 ವಿಧಾನಸಭಾ ಮೇ 10 ರಂದು ನಡೆಯಲಿರುವ ಚುನಾವಣೆಯನ್ನು ಶಾಂತಿಯುತ-ನ್ಯಾಯಸಮ್ಮತ ಮತ್ತು ಯಶಸ್ವಿಯಾಗಿ ನಡೆಸಲು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಮತದಾನದ ಪ್ರಮಾಣವನ್ನು ಶೇಕಡಾ ನೂರಕ್ಕೆ, ನೂರರಷ್ಟು ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳ ಮೂಲಕ ಮತದಾರರಲ್ಲಿ ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಜಾಗೃತಿ ಮೂಡಿಸಲಾಗಿದೆ.
ಇನ್ನೂ ಮತದಾರರನ್ನು ಮತಗಟ್ಟೆಯತ್ತ ಆಕರ್ಷಿಸಲು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪರಿಸರ ಸ್ನೇಹಿ ಮತಗಟ್ಟೆ, ಸಖೀ ಮತಗಟ್ಟೆ, ಯುವ ಪ್ರೇರಣಾ ಮತಗಟ್ಟೆ,ವಿಶೇಷ ಕಲ್ಪನೆ ಆಧಾರಿತ (ಸಖಿ) ಮಾದರಿ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.


ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾಪಿಸಲಾಗಿದ ಮತಗಟ್ಟೆಗಳು ವರ್ಲಿ ಕಲೆ ಸೇರಿದಂತೆ ಬಗೆ, ಬಗೆಯ ಚಿತ್ರಗಳ ಜೊತೆಯಲ್ಲಿ ಮತದಾನದ ಕುರಿತು ಘೋಷ ವಾಖ್ಯೆಗಳನ್ನು ಒಳಗೊಂಡು ಎಲ್ಲರ ಗಮನ ಸೆಳೆಯುತ್ತಿವೆ. ಪಿಂಕ್ ಬಣ್ಣದಿಂದ ಅಲಂಕೃತಗೊಂಡ ಸಖಿ ಮತಗಟ್ಟೆ, ಹಸಿರು ಬಣ್ಣದಿಂದ ಶೃಂಗಾರಗೊAಡ ಪರಿಸರ ಸ್ನೇಹಿ ಮತಗಟ್ಟೆ, ಯುವ ಮತದಾರರನ್ನು, ವಿಶೇಷ ಚೇತನ ಮತದಾರರನ್ನು ಆಕರ್ಷಿಸುವ ರಂಗು, ರಂಗಿನ ಚಿತ್ತಾರದ ಚಿತ್ರಗಳು, ಗೊಡೆ ಬಹಗಳು ಎಲ್ಲರನ್ನೂ ಕೈ ಬೀಸಿ ಕರೆಯುವಂತಿವೆ. ಇನ್ನೂ ನನ್ನ ಮತ ಮಾರಾಟಕ್ಕಿಲ್ಲಾ, ನಿಮ್ಮ ಮತ ನಿಮ್ಮ ಭವಿಷ್ಯ, ಮತದಾನ ನಮ್ಮ ಹಕ್ಕು, ಕರ್ತವ್ಯ ಎಂಬ ಗೋಡೆ ಬರಹದ ಸಾಲುಗಳು ಮತದಾರರನ್ನು ಜಾಗೃತಗೊಳಿಸುವಂತೆ ಮಾಡಲಾಗಿದೆ.


ಈ ರೀತಿ ಹಲವು ವಿಧದಲ್ಲಿ ಹೆಚ್ಚಿನ ಮತದಾನವಾಗಲು ಪ್ರಯತ್ನ ನಡೆಸಲಾಗುತ್ತಿದೆ. ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಶೇ 100 ರ ಗಡಿ ಮುಟ್ಟಲು ಸರ್ವರೂ ಸಹಕರಿಸಬೇಕು ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಒ ಹೊನ್ನಯ್ಯ ಮನವಿ ಮಾಡಿಕೊಂಡಿದ್ದಾರೆ.
ಪಿಡಿಒ ರಾಮಚಂದ್ರ ಮಾತನಾಡಿ ಈಗಾಗಲೆ ನಗರಂಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ಮತದಾನ ಹೆಚ್ಚಿಸಲು ರಂಗೋಲಿ, ಬೈಕ್ ರ‍್ಯಾಲಿ, ಪ್ರಬಂಧ ಸ್ಪರ್ಧೆ, ಸೆಲ್ಫಿ ಪಾಯಿಂಟ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಿದ್ದಾಪುರ ಗ್ರಾಮದಲ್ಲಿ ಸುಮಾರು 700 ಕ್ಕೂ ಹೆಚ್ಚು ಮಹಿಳಾ ಮತದಾರರ ಸಂಖ್ಯೆ ಇರುವ ಮತಗಟ್ಟೆಯನ್ನು ಸಖಿ ಮತಗಟ್ಟೆ ಎಂದು ಗುರುತಿಸಿ ಮತದಾನ ಹೆಚ್ಚಿಸಲು ಮತದಾರರನ್ನು ಕೈ ಬೀಸಿ ಕರೆಯುವಂತೆ ಬಣ್ಣ ಬಣ್ಣ ಚಿತ್ತಾರದಿಂದ ಅಲಂಕರಿಸಲಾಗಿದೆ ಎಂದು ತಿಳಿಸಿದರು.

Latest News >>

ಸಮಾಜದ ಸಮಗ್ರ ಬೆಳವಣಿಗೆಗೆ ಶಿಕ್ಷಣ ವಲಯ ಅಭಿವೃದ್ಧಿ ಆಗಬೇಕಾಗಿದೆ ಶಾಸಕ ಎನ್ ವೈ ಗೋಪಾಲಕೃಷ್ಣ.

ನಾಯಕನಹಟ್ಟಿ:: ಮೇ.23. ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ....

ತಾಲ್ಲೂಕಿನ ಶುಭೋದಯ ಸೇವಾವೃದ್ದಾಶ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಎಲ್.ಮೂರ್ತಿ ರವರ ಹುಟ್ಟುಹಬ್ಬಆಚರಣೆ: ಮುಖ್ಯಸ್ಥ ತೇಜೋಮೂರ್ತಿ

ಹಿರಿಯೂರು: ಅಭಿಮತ ಪತ್ರಿಕೆಯ ಸಂಪಾದಕರು ಹಾಗೂ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್.ಸಿ.ಸೆಲ್. ಘಟಕ ಅಧ್ಯಕ್ಷರಾದ ಜಿ.ಎಲ್.ಮೂರ್ತಿ...

ಮೌಡ್ಯಗಳಿಂದ ಹೊರಬಂದು ಬುದ್ಧನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ:ಪ್ರೊ.ಸಿಕೆ ಮಹೇಶ್ವರಪ್ಪ ಅಭಿಮತ 

ಚಳ್ಳಕೆರೆ: ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಶಾತವಾಹನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ವಿಜಯ ಸಂಕಲ್ಪ ದಿನಪತ್ರಿಕೆ ವತಿಯಿಂದ ಬುದ್ಧ...

ವಾಣಿವಿಲಾಸಸಾಗರ ಜಲಾಶಯಕ್ಕೆ ತಗ್ಗಿದ ಒಳಹರಿವು ಮುಂಗಾರು ಮಳೆಯಿಂದಾಗಿ 1.65ಅಡಿ ನೀರು ಸಂಗ್ರಹ

ಹಿರಿಯೂರು : ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಪೂರ್ವ ಮುಂಗಾರು ಮಳೆಯಿಂದಾಗಿ 1.65 ಅಡಿ ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ...

ಸಡಗರ ಸಂಭ್ರಮದಿಂದ ಜರುಗಿದ ಶ್ರೀವೀರಭದ್ರಸ್ವಾಮಿ ರಥೋತ್ಸವ..

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 22 ನಗರದ ಜನತೆಯ ಆರಾದ್ಯದೈವ ಶ್ರೀ ವೀರಭದ್ರಸ್ವಾಮಿ ರಥೋತ್ಸವವು ಶ್ರದ್ಧೆ ಭಕ್ತಿ ಸಂಭ್ರಮದಿAದ ಬುಧವಾರ...

ವಾಣಿವಿಲಾಸ ಸಾಗರಕ್ಕೆ ಈ ಮಳೆಯಲ್ಲಿ 3800ಕ್ಯೂಸೆಕ್ ನೀರಿನ ಒಳಹರಿವು ರೈತರ ಮೊಗದಲ್ಲಿ ಸಂತಸ ತಂದಿದೆ

ಹಿರಿಯೂರು: ಈ ಬಾರಿ ಸುರಿದ ಮಳೆಯಿಂದಾಗಿ ಕಡೂರು, ಬೀರೂರು, ಹೊಸದುರ್ಗ ಸೇರಿದಂತೆ ವೇದಾವತಿ ಜಲಾನಯನ ಪ್ರದೇಶದಾದ್ಯಂತ ಸುರಿಯುತ್ತಿರುವ...

ಮಾಡಿದಷ್ಟು ನೀಡು ಬಿಕ್ಷೆ ಕಾಯಕಯೋಗಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಕಟ್ಟಿಸಿದ ಚಿಕ್ಕ ಕೆರೆ- 18 ವರ್ಷಗಳ ನಂತರ ಕೆರೆಗೆ ನೀರು ಈ ಭಾಗರದ ಜನರಲ್ಲಿ ಮಂದಹಾಸ ಮೂಡಿಸಿದ ವರುಣ..

ನಾಯಕನಹಟ್ಟಿ ಮೇ 22 ಸುಮಾರು ವರ್ಷಗಳಿಂದ ನೀರು ಕಾಣದ ಕೆರೆಗೆ ನೀರು ಬರುತ್ತಿರುವ ದೃಶ್ಯ ಕಂಡು ಗ್ರಾಮದ ಜನರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ....

ವಿಶ್ವಕರ್ಮ ಸಮುದಾಯದ ವತಿಯಿಂದ ಪಟ್ಟಣದ ಶ್ರೀ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.

ನಾಯಕನಹಟ್ಟಿ:: ಶ್ರೀ ಕಾಳಿಕಾದೇವಿ ಏಳನೇ ವರ್ಷದ ವಾರ್ಷಿಕ ಸಮಾರಂಭದ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ಜರುಗಿದೆ ಎಂದು ಕಾರ್ಯದರ್ಶಿ...

ಚಿತ್ರದುರ್ಗ ಜಿಲ್ಲೆಯಲ್ಲಿ ವಿಧಾನ ಪರಿಷತ್ ಸ್ಥಾನ ಗಳಿಸುವ ಕಾಂಗ್ರೆಸ್ ಪಕ್ಷದ ಕನಸು ಭಗ್ನವಾಗಲಿದೆ ಶಿಕ್ಷಕ ಮತದಾರರು ನಾಲ್ಕನೇ ಬಾರಿಗೆ ಬೆಂಬಲಿಸಲಿದ್ದಾರೆ: ವೈಎ ನಾರಾಯಣಸ್ವಾಮಿ ವಿಶ್ವಾಸ 

ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಇದುವರೆಗೂ ವಿಧಾನ ಪರಿಷತ್ ಸ್ಥಾನದ ಗೆಲುವಿನ ಬಾಗಿಲು ತೆಗೆಯುವಲ್ಲಿ ವಿಫಲವಾಗಿದೆ ಈ...

ಮೇ 22 ರ ಬುಧವಾರ ಮಧ್ಯಾಹ್ನ 3.30ಕ್ಕೆ ಮುಕ್ತಿ ಬಾವುಟ ಹರಾಜು ನಂತರ ಶ್ರೀವೀರಭದ್ರಸ್ವಾಮಿ ದೊಡ್ಡ ರಥೋತ್ಸವ ಜರುಗಲಿದೆ.

ಚಳ್ಳಕೆರೆ ಮೇ 20ಚಳ್ಳಕೆರೆ ನಗರದ ಆರಾಧ್ಯ ದೈವ ವೀರಭದ್ರಸ್ವಾಮಿ ದೊಡ್ಡ ರಥೋತ್ಸವ ಮೇ 22 ರಂದು ಬುಧವಾರ ಮಧ್ಯಾಹ್ನ 3.30ಕ್ಕೆ ಮುಕ್ತಿ ಬಾವುಟ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page