ಶಿವಮೊಗ್ಗ ಇ-ತ್ಯಾಜ್ಯವನ್ನು ಸಂಪತ್ತಾಗಿ ಬದಲಾಯಿಸಬೇಕು : ನ್ಯಾ.ಸುಭಾಷ್ ಅಡಿ.

by | 15/12/23 | ಆರೋಗ್ಯ


ಶಿವಮೊಗ್ಗ, ಡಿಸೆಂಬರ್ 15:
ವೈಜ್ಞಾನಿಕ ರೀತಿಯಲ್ಲಿ ಇ-ತ್ಯಾಜ್ಯವನ್ನು ನಿರ್ವಹಿಸದಿದ್ದರೆ ಭವಿಷ್ಯವಿಲ್ಲ. ಆದ್ದರಿಂದ ಇ-ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಬದಲಾಯಿಸಿಕೊಂಡು ಸಂಪತ್ತಾಗಿಸಬಹುದು ಎಂದು ಎನ್.ಜಿ.ಟಿ-ಎಸ್.ಎಲ್.ಸಿ ಛೇರ್ಮನ್‍ರಾದ ಸುಭಾಷ್ ಅಡಿ ತಿಳಿಸಿದರು.
ಡೂ ಮೈಂಡ್ಸ್ ಫೌಂಡೇಷನ್, ಪರಿಸರ ಅಧ್ಯಯನ ಕೇಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವರು ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಇ-ತ್ಯಾಜ್ಯ ದಿನದ ಅಂಗವಾಗಿ ‘ ತ್ಯಾಜ್ಯ ನಿರ್ವಹಣೆಯ ಅವಶ್ಯಕತೆಗಳು, ಉದ್ಯಮಶೀಲತೆಯ ಅವಕಾಶಗಳು’ ಕುರಿತು ಇಂದು ಜೆಎನ್‍ಎನ್‍ಸಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೈಗಾರಿಕೀಕರಣ, ನಗರೀಕರಣ ಹಾಗೂ ಆಧುನೀಕರಣದಿಂದಾಗಿ ಇ-ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದೆ. ಅನೇಕ ವಿಕೋಪಗಳು, ಹವಾಮಾನ ಬದಲಾವಣೆ, ಪರಿಸರ ಮಾಲಿನ್ಯವು ಮನುಷ್ಯ ಜೀವನ ದುಸ್ತರ ಮಾಡಿದೆ. ದೆಹಲಿಯಲ್ಲಿ ಒಂದು ಮಗು ದಿನಕ್ಕೆ ವಾಯು ಮಾಲಿನ್ಯದಿಂದ 25 ಸಿಗರೇಟ್‍ನಿಂದ ಹೊರಹೊಮ್ಮುವಷ್ಟು ಹೊಗೆ ಕುಡಿಯುತ್ತಿದೆ.
ಪ್ರತಿವರ್ಷ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ವಸ್ತುಗಳ ಬಳಕೆ ಹೆಚ್ಚುತ್ತಿದೆ. ಜೊತೆಗೆ ಕಾಲಕಾಲಕ್ಕೆ ಅವು ಅಪ್‍ಡೇಟ್ ಆಗುತ್ತಾ ಇರುತ್ತವೆ. ಎಲ್ಲ ಕ್ಷೇತ್ರಗಳಲ್ಲಿ ಎಲೆಕ್ಟ್ರಿಕ್ ಉಪಕರಣಗಳು ಆವರಿಸಿದ್ದು, ಅವುಗಳು ನಮ್ಮ ಜೀವನದ ಒಂದು ಭಾಗವೇ ಆಗಿ ಹೋಗಿವೆ. ಇಂತಹ ಗ್ಯಾಡ್ಜೆಟ್‍ಗಳಲ್ಲಿ ಅನೇಕ ಹಾನಿಕಾರಕ ಮೆಟಲ್, ವಸ್ತುಗಳಿದ್ದು ಇವು ನೇರವಾಗಿ ಪರಿಸರ ಮತ್ತು ಮಾನವನ ಮೇಲೆ ಪರಿಣಾಮ ಬೀರುತ್ತವೆ.
ಜನರ ನಡವಳಿಕೆ ಬದಲಾಗಬೇಕು : ಮಾಲಿನ್ಯ ನಿಯಂತ್ರಣ, ಪ್ಲಾಸ್ಟಿಕ್ ನಿಷೇಧದ ಕುರಿತು ಕಾಯ್ದೆಗಳು ಬಂದವು. ಆದರೆ ಮುಖ್ಯವಾಗಿ ಜನರ ನಡವಳಿಕೆಯಲ್ಲಿ ಬದಲಾವಣೆ ಆಗಬೇಕು. ಕಸವನ್ನು ವಿಂಗಡಿಸಿ ನೀಡಬೇಕು. ಪ್ಲಾಸ್ಟಿಕ್ ಬಾಟಲ್ ನಿರಾಕರಿಸಬೇಕು. ಇ-ವಸ್ತುಗಳ ಕಡಿಮೆ ಬಳಕೆ, ಮರು ಬಳಕೆ ಆಗಬೇಕು. ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಕೆ, ಬೀರ್ ಬಾಟಲಿ ಬಳಕೆ ನಿಲ್ಲಬೇಕು. ಬಾಟಲಿ ಬದಲು ಟಿನ್ ಬಳಕೆಯಾಗಬೇಕು.
ನಮ್ಮ ಊರು, ನಗರ ಸ್ವಚ್ಚ ಮತ್ತು ಸುಂದರವಾಗಬೇಕೆಂದು ಜನರು ಮನಸ್ಸು ಮಾಡಿ ಎಲ್ಲರೂ ಕೈಜೋಡಿಸಿದಾಗ ನಿರ್ವಹಣೆ ಸಾಧ್ಯ. ಇ ವಸ್ತುಗಳು ರೆಡ್ಯುಸ್-ರಿ ಯೂಸ್-ರಿಸೈಕಲ್ ಆಗಬೇಕು. ಅಧಿಕೃತ ಮರುಬಳಕೆದಾರರ ಮೂಲಕ ನಿರ್ವಹಣೆ ಆಗಬೇಕು. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಬಗ್ಗೆ ಅಧ್ಯಯನದಲ್ಲಿ ತೊಡಗಬೇಕು. ನವೀನ ವಿಚಾರಗಳೊಂದಿಗೆ ಮುಂದೆ ಬರಬೇಕು. ಅನೇಕ ಸ್ಟಾರ್ಟ್‍ಟಪ್‍ಗಳು ಆರಂಭವಾಗುತ್ತಿದ್ದು ‘ವೇಸ್ಟ್ ನ್ನು ವೆಲ್ತ್’ ಆಗಿಸಬೇಕೆಂದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಬೆಂಗಳೂರಿನ ಐಐಡಬ್ಲ್ಯುಎಂ ಕಾರ್ಯ ನಿರ್ವಾಹಕ ನಿರ್ದೇಶಕಿ ಬಿನೀಶಾ ಪಿ ಮಾತನಾಡಿ, ಪ್ರತಿನಿತ್ಯ ನಾವು ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಅವಲಂಬಿತರಾಗಿದ್ದೇವೆ. ದೇಶದಲ್ಲಿ ಶೇ.97 ಮನೆಗಳು ವಿದ್ಯುದೀಕರಣಗೊಂಡಿವೆ. 2022 ರಲ್ಲಿ 16 ಲಕ್ಷ ಟನ್‍ಗಿಂತ ಹೆಚ್ಚು ಇ-ವೇಸ್ಟ್ ಉತ್ಪಾದನೆಯಾಗಿದೆ. ಸುಮಾರು 200 ವರ್ಷಗಳಲ್ಲಿ 1 ಸಾವಿರ ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ನಾವು ದಿನನಿತ್ಯದ ಬದುಕಿನಲ್ಲಿ ಬಳಸಿದ್ದೇವೆ. 2050 ರ ವೇಳೆ ಜಗತ್ತಿನಲ್ಲಿ ವಾರ್ಷಿಕವಾಗಿ 120 ಮಿನಿಯಲ್ ಟನ್‍ಗಳಷ್ಟು ಇ-ವೇಸ್ಟ್ ಉತ್ಪಾದನೆ ಆಗುವ ಅಂದಾಜಿದೆ. ಆದ್ದರಿಂದ ಇ-ವೇಸ್ಟ್ ನಿರ್ವಹಣೆ ತುರ್ತಾಗಿದೆ.
ಎಲೆಕ್ಟ್ರಿಕ್, ಪ್ಲಾಸ್ಟಿಕ್ ಇತರೆ ಇ-ತ್ಯಾಜ್ಯಕ್ಕೆ ಕಾರಣವಾಗುವ ವಸ್ತುಗಳನ್ನು ನಿರಾಕರಿಸಬೇಕು, ಕಡಿಮೆ ಮಾಡಬೇಕು, ಮರು ಬಳಕೆ ಮಾಡಬೇಕು. ಇ-ತ್ಯಾಜ್ಯ ನಿರ್ವಹಿಸಿ ಉತ್ತಮ ಉದ್ಯಮವನ್ನಾಗಿಸಿಕೊಳ್ಳುವ ಅವಕಾಶಗಳು ಇದ್ದು, ಮುಂಬರುವ ದಿನಗಳಲ್ಲಿ ತ್ಯಾಜ್ಯ ಮರುಬಳಕೆ ಉದ್ಯಮ ಮುಂಚೂಣಿ ವಲಯವಾಗುವುದು ಎಂದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಜೆಎನ್‍ಎನ್‍ಸಿಇ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ ಪಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ವರ್ಷ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚುತ್ತಾ ಇದ್ದು, ಇ-ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಲಿದ್ದು ಈ ನಿಟ್ಟಿನಲ್ಲಿ ಅಧ್ಯಯನಗಳು ಆಗಬೇಕೆಂದರು.
ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕ ಜನಾರ್ಧನ ಜಿ ಎಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡೂ ಮೈಂಡ್ಸ್ ಫೌಂಡೇಷನ್‍ನ ನವೀನ್ ಹೆಚ್‍ಎಸ್ ಸಂಸ್ಥೆಯ ಕಾರ್ಯಚಟುವಟಿಕೆ ಬಗ್ಗೆ ತಿಳಿಸಿದರು.
ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ರಮೇಶ್ ಡಿ ನಾಯ್ಕ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ಎನ್, ಬೋಧಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Latest News >>

ಮಹಿಳಾ ನಿಲಯದಲ್ಲಿ ನವ ದಾಂಪತ್ಯಕ್ಕೆ ಕಾಲಿಟ್ಟ ದಿವ್ಯ ಮತ್ತು ನಾಗರಾಜ್ ಮಂತ್ರ ಮಾಂಗಲ್ಯದ ಮೂಲಕ ಸರಳವಾಗಿ ನಡೆದ ಮದುವೆ ಬೀಗರಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು

ದಾವಣಗೆರೆ; ಫೆ.21 ರಾಷ್ಟ್ರಕವಿ ಕುವೆಂಪುರವರ ಮಂತ್ರ ಮಾಂಗಲ್ಯ ಧಾರಣೆಯಂತೆ ಮಹಿಳಾ ನಿಲಯದ ದಿವ್ಯ ಎಂ ಇವರ ಮದುವೆಯು ಚಿತ್ರದುರ್ಗ ತಾಲ್ಲೂಕಿನ...

ಚೌಡೇಶ್ವರಿ ಜಾತ್ರೆಯಲ್ಲಿ ಬುಡಕಟ್ಟು ಸಂಸ್ಕೃತಿಯ ಅನಾವರಣ ಸಂಭ್ರಮದ ಹಿರೆಕೆರೆ ಕಾವಲು ಚೌಡೇಶ್ವರಿ ಜಾತ್ರಾ ಮಹೋತ್ಸವ

ನಾಯಕನಹಟ್ಟಿ : ನಾಯಕನಹಟ್ಟಿ ಸಮೀಪದ ಹಿರೆಕೆರೆ ಕಾವಲಿನಲ್ಲಿ ನೆಲೆಸಿರುವ ಬುಡಕಟ್ಟು ಸಮುದಾಯಗಳ ಆರಾಧ್ಯ ದೈವ ಕಾವಲು ಚೌಡೇಶ್ವರಿ ದೇವಿಯ ಜಾತ್ರಾ...

ತಾಲೂಕಿನ ಎಲ್ಲಾ ಗ್ರಾಮಗಳಿಗೂ ವಿವಿಸಾಗರ ನೀರು ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ರಿಂದ ಭರವಸೆ

ಹಿರಿಯೂರು: ತಾಲ್ಲೂಕಿನ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಿಗೂ ವಾಣಿವಿಲಾಸ ಸಾಗರ...

ಬಯಲು ಸೀಮೆಯ ಜೋಡಿತ್ತಿನ ಗಾಡಿ ಸ್ಪರ್ಧೆಗೆ ಚಾಲೆನೆ ನೀಡಿದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತನಹಟ್ಟಿ ಗೌಡ್ರು

ನಾಯಕನಹಟ್ಟಿ:: ಜೋಡಿತ್ತಿನ ಗಾಡಿ ಸ್ಪರ್ಧಾಳುಗಳು ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಟೇಲ್ ಜಿ ಎಂ...

ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ದೂರು , ಮಾಧ್ಯಗಳಲ್ಲಿ ಸುದ್ದಿ ಬಂದರೆ ಆಯಾ ಅಧಿಕಾರಳೇ ನೇರೆ ಹೊಣೆ ಗಾರರು ಎಂದು ಶಾಸಕ ಹಾಗೂ ಸಣ್ಣ ಕೈಗಾರಿಗಳ ಅಭಿವೃದ್ಧಿನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ತಾಕೀತು.

ಚಳ್ಳಕೆರೆ ಫೆ.19 ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ದೂರು , ಮಾಧ್ಯಗಳಲ್ಲಿ ಸುದ್ದಿ ಬಂದರೆ ಆಯಾ ಅಧಿಕಾರಳೇ ನೇರೆ ಹೊಣೆ ಗಾರರು...

ಸಂಭ್ರಮದಿಂದ ಜರಗಿದ ಚಿಲುಮೆ ರುದ್ರ ಸ್ವಾಮಿಯ ರಥೋತ್ಸವ.

ಚಳ್ಳಕೆರೆ: ತಾಲ್ಲೂಕಿನ ನಾಗಗೊಂಡನಹಳ್ಳಿ ಸಮೀಪದ ವೇದಾವತಿ ನದಿಯ ತಟದಲ್ಲಿರುವ ಶಿವಯೋಗಿ ಶ್ರೀ ಗುರು ಚಲುಮೆ ರುದ್ರ ಸ್ವಾಮಿಗಳವರ ಜೀವೈಕ್ಯ...

ಮಲ್ಲೂರಹಟ್ಟಿಯಲ್ಲಿ ಸಂಭ್ರಮದ ಶ್ರೀ ಬನಶಂಕರಿ ಜಾತ್ರೆ ಜಾನಪದ ಕಲಾತಂಡಗಳೊಂದಿಗೆ ಸಂಭ್ರಮದ ಆಚರಣೆ*

ನಾಯಕನಹಟ್ಟಿ. ಸಮೀಪದ ಮಲ್ಲೂರಹಟ್ಟಿ ಗ್ರಾಮದಲ್ಲಿ ಶ್ರೀ ಬನಶಂಕರಿ ದೇವಿಯ ಜಾತ್ರೆ ವಿಜೃಂಭಣೆಯಿಂದ ಆಚರಿಸಲಾಯಿತು. ಎಂದು ಶ್ರೀ ಬಾಳೇ ಬಂದಮ್ಮ...

ಕುಡಿಯುವ ನೀರು ಸಮಸ್ಯೆ ನಿರ್ವಹಣೆಗೆ ಸಹಾಯವಾಣಿ ಪ್ರಾರಂಭ

ಚಿತ್ರದುರ್ಗ ಫೆ.17 ಜಿಲ್ಲೆಯಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ, ತ್ವರಿತವಾಗಿ ಸ್ಪಂದಿಸುವಂತಾಗಲು...

ಜಿಲ್ಲಾಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಮಕ್ಕಳಲ್ಲಿರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಬಾಲವಿಕಾಸ ಅಕಾಡೆಮಿ ಕಾರ್ಯ ಉತ್ತಮ

ಚಿತ್ರದುರ್ಗ ಫೆ.17: ಮಕ್ಕಳಲ್ಲಿರುವ ಸೂಪ್ತ ಪ್ರತಿಭೆ ಹೊರಹಾಕುವ ನಿಟ್ಟಿನಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ಜಿಲ್ಲೆಯಲ್ಲಿರುವ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page