ಶಾಸಕ ಸ್ಥಾನಕ್ಕೂ ಮೊದಲು ಕ್ಷೇತ್ರದಲ್ಲಿ ಸುತ್ತಾಡಿ ಜನರ ಸಮಸ್ಯೆ ಅರಿತು ಅಭಿವೃದ್ದಿ ಕನಸ್ಸೋತ್ತು 10 ವರ್ಷಗಳ ಕಾಲ ಶಾಸಕನಾಗಿ ಪ್ರಮಾಣಿಕ ಪ್ರಯತ್ನದಿಂದ ವಿವಿಧ ಕ್ಷೇತ್ರಗಳ ಜತೆ ಸರ್ವೋತೊಮುಖ ಅಭಿವೃದ್ದಿ ಆದ್ಯತೆ ನೀಡಲಾಗಿದೆ ಶಾಸಕ ಟಿ.ರಘುಮೂರ್ತಿ

by | 20/02/23 | ರಾಜಕೀಯ, ಸಾಮಾಜಿಕ

.
ಪರಶುರಾಂಪುರ ಫೆ.20ಪರಶುರಾಮಪುರ
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಜನತೆಯ ಆದರಾಭಿಮಾನಕ್ಕೆ ನಾನು ತಲೆಬಾಗುತ್ತೇನೆ ಎಂದು ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಹೇಳಿದರು
ಗ್ರಾಮದ ಕಲ್ಯಾಣದುರ್ಗ ರಸ್ತೆಯ ಯರಗುಂಟೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ (ರಿ) ಪಿಆರ್‌ಪುರ ಹೋಬಳಿ ಘಟಕದ ವತಿಯಿಂದ ಸೋಮವಾರ ರೈತರಿಗೆ ಹೊಸ ಚೈತನ್ಯ ಕೊಟ್ಟ ನೀರಿನ ಹರಿಕಾರ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ರೈತ ಸಂಘಟನೆಗಳಿAದ ಗೌರವ ಸ್ವೀಕರಿಸಿ ಮಾತನಾಡಿದರು
ಚಳ್ಳಕೆರೆ ತಾಲೂಕಿನಲ್ಲಿ ಕಳೆದ ದಶಕದಿಂದ ಚಳ್ಳಕೆರೆ ನಗರವೂ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮಾನ್ಯ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಹಿಂದೆAದೂ ಕಾಣದ ಅಭಿವೃಧ್ದಿ ಕಾರ್ಯಗಳು ಜರುಗಿವೆ ಇದಕ್ಕೆ ತಾಲೂಕಿನ ರೈತರು ಹೋರಾಟಗಾರರು ಕೂಲಿ ಕಾರ್ಮಿಕರು ವಿವಿಧ ಸಮುದಾಯಗಳ ಮುಖಂಡರ ಸಹಕಾರ ಪ್ರೋತ್ಸಾಹವೇ ಮುಖ್ಯ ಕಾರಣವಾಗಿದೆ ಎಂದರು
ಕರ್ನಾಟಕ ರಾಜ್ಯ ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಗುದ್ದುರಂಗಸ್ವಾಮಿ ಪ್ರಾಸ್ತಾವಿಕ ಮಾತನಾಡಿ ಸಾಧಕರನ್ನ ಜಾತಿ , ಪಕ್ಷಕ್ಕೆ ಹೋಲಿಸದೇ ಗೌರವಿಸುವ ನಮ್ಮಗಳ ಗುಣ. ಶಾಸಕ ಟಿ.ರಘುಮೂರ್ತಿ ಕ್ಷೇತ್ರದ ಅಭಿವೃದ್ಧಿ ಜತೆ ರೈತರ ಜೀವಾನಾಡಿ ವೇದಾವತಿ ನದಿಗೆ ಚೆಕ್‌ಡ್ಯಾಮ್‌ಗಳನ್ನ ನಿರ್ಮಿಸಿ ಹೋಬಳಿ ರೈತರಿಗೆ ಹೊಸ ಚೈತನ್ಯ ಕೊಟ್ಟು ನೀರಾವರಿ ಕೆಲಸಗಳನ್ನೊಳಗೊಂಡು ವಿವಿಧ ಕ್ಷೇತ್ರಗಳಿಗೂ ಹೆಚ್ಚಿನ ಆದ್ಯತೆ ನೀಡಿದ್ದಾರೆ ಹೋಬಳಿ ಕೇಂದ್ರದಲ್ಲಿನ ರೈತ ಸಂಘದ ಖಾಲಿ ನಿವೇಶನದಲ್ಲಿ ಬಾಬಾಗೌಡಪಾಟೀಲರ ಹೆಸರಲ್ಲಿ ಸಭಾಭವನ ನಿರ್ಮಿಸಿಕೊಡಬೇಕು ಗ್ರಾಮದ ಬ್ಯಾರೇಜ್‌ನ ಇಕ್ಕೆಲದಲ್ಲಿನ ರೈತರ ಜಮೀನಿಗೆ ತೆರಳಲು ಅಗತ್ಯವಾಗಿ ರಸ್ತೆ ನಿರ್ಮಿಸಿಕೊಡಬೇಕು ರೈತರ ಬದುಕನ್ನು ಹಸನಾಗಿಸಲು ತಾಲೂಕಿನ ರೈತರ ಅಭಿವೃಧ್ದಿಗೆ ಯೋಜನೆ ರೂಪಿಸಿ ಎಲ್ಲಾ ವರ್ಗದ ರೈತರು ಕೃಷಿ ಚಟುವಟಿಕೆಯಲ್ಲಿ ಖುಷಿಯಿಂದ ಕೈಗೊಳ್ಳುವ ಪರಿಸರವನ್ನುಂಟುಮಾಡಬೇಕು ಎಂದು ಮನವಿ ಮಾಡಿದರು.
ಚಳ್ಳಕೆರೆ ತಾಲೂಕು ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಚಿಕ್ಕಣ್ಣ ಮಾತನಾಡಿ ಆಳುವ ಸರ್ಕಾರಗಳು ಮೊದಲು ಮಠ ಮಾನ್ಯಗಳಿಗೆ ಹಣನೀಡುವುದನ್ನು ನಿಲ್ಲಿಸಿ ರೈತರ ಬದುಕನ್ನು ಹಸನಾಗಿಸಲು ಯೋಜನೆ ರೂಪಿಸಿ ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗಧಿಗೊಳಿಸಬೇಕು ಎಂದರು
ಚಳ್ಳಕೆರೆ ತಾಲೂಕಿನ ಗಡಿಭಾಗ ಪರಶುರಾಮಪುರದ ಇಕ್ಕೆಲದಲ್ಲೇ ಹರಿದು ಹೋಗುತ್ತಿರುವ ವೇದಾವತಿ ನದಿಗೆ ಅಡ್ಡಲಾಗಿ ಬ್ಯಾರೇಜ್, ಚೆಕ್‌ಡ್ಯಾಂಗಳನ್ನು ನಿರ್ಮಿಸಿಕೊಟ್ಟ ಶಾಸಕರು ಈ ಭಾಗದ ಐವತ್ತರಿಂದ ಅರವತ್ತು ಸಾವಿರ ಖುಷ್ಕಿ ಜಮೀನು ನೀರಾವರಿ ಜಮೀನಾಗಿ ಪರಿವರ್ತನೆಯಾಗಿದೆ ಮೈಸೂರು ಅರಸರು ತಮ್ಮ ಅವಧಿಯಲ್ಲೇ ತಮ್ಮ ಮನೆಯಲ್ಲಿನ ಒಡವೆ ವಸ್ತçಗಳನ್ನು ಬೇರೆಯವರಿಗೆ ಅಡವಿಟ್ಟು ಕೆಆರ್‌ಎಸ್, ವಿವಿಸಾಗರವೂ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಕೆರೆ ಕಟ್ಟೆ ಅಣೆಕಟ್ಟುಗಳನ್ನು ನಿರ್ಮಿಸಿ ಜನರ ಬದುಕನ್ನು ಹಸನಾಗಿಸಿದ್ದಾರೆ ಎಂದು ಸ್ಮರಿಸಿದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಮಘಟಕದ ಗೌರವಾಧ್ಯಕ್ಷ ಕೃಷ್ಣಮೂರ್ತಿಸ್ವಾಮಿ ಮಾತನಾಡಿ ಪಿಆರ್‌ಪುರ, ಹಾಗೂ ತಾಲೂಕಿನ ರೈತರು ಸ್ವಪ್ರೇರಣೆಯಿಂದ ಒಗ್ಗೂಡಿ ಕ್ಷೇತ್ರದ ಅಭಿವೃಧ್ದಿ ಹರಿಕಾರ ಟಿ ರಘುಮೂರ್ತಿ ಅವರಿಗೆ ವೇದಾವತಿ ನದಿಯಿರುವ ಪರಶುರಾಮಪುರದಲ್ಲೇ ಗೌರವಿಸಬೇಕು ಎಂಬ ಸಂಕಲ್ಪ ಮಾಡಿ ಸನ್ಮಾನಿಸಿದ್ದಾರೆ ಎಂದು ಶ್ಲಾಘಿಸಿದರು . ಸನ್ಮಾನ ಸ್ವೀಕರಿಸಿ ಶಾಸಕ ಟಿ.ರಘುಮೂರ್ತಿ ಮಾತನಾಡಿ ,ಶಾಸಕನಾಗಿ ನಿರ್ವಹಿಸಿದ ಕೆಲಸವನ್ನ ರೈತ ಸಂಘದವರು ನೆನಸಿದ್ದಾರೆ. ಶಾಸಕ ಸ್ಥಾನಕ್ಕೂ ಮೊದಲು ಕ್ಷೇತ್ರದಲ್ಲಿ ಸುತ್ತಾಡಿ ಜನರ ಸಮಸ್ಯೆ ಅರಿತು ಅಭಿವೃದ್ದಿ ಕನಸ್ಸೋತ್ತು 10 ವರ್ಷಗಳ ಕಾಲ ಶಾಸಕನಾಗಿ ಪ್ರಮಾಣಿಕ ಪ್ರಯತ್ನದಿಂದ ವಿವಿಧ ಕ್ಷೇತ್ರಗಳ ಜತೆ ಸರ್ವೋತೊಮುಖ ಅಭಿವೃದ್ದಿ ಆದ್ಯತೆ ನೀಡಲಾಗಿದೆ. 3 ನೇ ಬಾರಿ ಶಾಸಕನಾಗಲು ಯಾವುದೇ ಆತಂಕವಿಲ್ಲ ಎಂದರು. ಅವರಿಗೆ ವಿವಿಧೆಡೆಯಿಂದ ಆಗಮಿಸಿದ್ದ ರೈತರು ಹೂಹಾರ ಹಾಕಿ ಗೌರವಿಸಿದರು ಸಂದರ್ಭದಲ್ಲಿ ಗ್ರಾಮಘಟಕದ ಗೌರವಾಧ್ಯಕ್ಷ ಕೃಷ್ಣಮೂರ್ತಿಸ್ವಾಮಿ, ಅಧ್ಯಕ್ಷ ನವೀನಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಚೌಳೂರುಪ್ರಕಾಶ, ತಾಲೂಕಾಧ್ಯಕ್ಷ ಚಿಕ್ಕಣ್ಣ, ಗ್ರಾಮ ಘಟಕದ ಉಪಾಧ್ಯಕ್ಷ ಜಂಪಣ್ಣ, ಹನುಮಂತಪ್ಪ, ವೆಂಕಟರಮಣಪ್ಪ, ಶಾಂತಣ್ಣ, ಶಿವಣ್ಣ, ಬಾಷಾ, ರಾಜಣ್ಣ, ಅಣ್ಣಪ್ಪಸ್ವಾಮಿ, ಪರಶುರಾಂ, ಶೇಷಾದ್ರಿ, ಗುರುಸ್ವಾಮಿ, ಶಿವರಂಗಪ್ಪ, ನಿಂಗಣ್ಣ, ತಿಪ್ಪೇಸ್ವಾಮಿ, ರಾಘವೇಂದ್ರ, ಚಂದ್ರಣ್ಣ, ನಾಗೇಂದ್ರ ಹೋಬಳಿ ವ್ಯಾಪ್ತಿಯ ವಿವಿಧ ಘಟಕಗಳ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು
.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *