ಶಾಲೆಯ ಹಾಜರಾತಿ ಪುಸ್ತಕ್ಕೆ ಸಹಿ- ಮೆಟ್ರೋ ಪೋರ್ಟ್ ಸೂಪರ್ ಮಾರ್ಕೇಟ್ ನಲ್ಲಿ ವ್ಯಾಪಾರ ಮಾಡುವ ಶಿಕ್ಷಕ- ಶಿಕ್ಷಣ ಇಲಾಖೆ ಮೌನ…?.

by | 01/04/24 | ತನಿಖಾ ವರದಿ

ಚಳ್ಳಕೆರೆ ಜನಧ್ವನಿ ವಾರ್ತೆ ಏ.1 ಶಾಲೆಗೆ ಕರ್ತವ್ಯಕ್ಕೆ ಹಾಜರಾಗದೇ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿ ಸಂಬಳ ಪಡೆಯುತ್ತಿದ್ದ ಶಿಕ್ಷಕನ ಕಳ್ಳಾಟವನ್ನು ಜನಧ್ವನಿ ನ್ಯೂಸ್ ಬಟಾಬಯಲು ಮಾಡಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಗ್ರಾಪಂ ವ್ಯಾಪ್ತಿಯ ವೀರದಿಮ್ಮನಹಳ್ಳಿ ಸಮೀಪದ ಬೋರಪ್ಪನಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿ ಶಾಲೆಯ ಶಾಲೆಯಲ್ಲಿ 1ರಿಂದ 4 ನೇತರಗತಿಯಲ್ಲಿ ಒಟ್ಟು 21 ವಿದ್ಯಾರ್ಥಿಗಳಿದ್ದು ಮುಖ್ಯ ಶಿಕ್ಷಕ ಸೇರಿ ಇಬ್ಬರು ಶಿಕ್ಷರಿದ್ದು ಶಿಕ್ಕಕರೊಬ್ಬರು ಹಾಜರಾತಿಗೆ ಸಹಿ ಹಾಕಿ ಚಕ್ಕರ್ ಹೊಡೆಯುವುದು ಹಾಗೂ ಶಾಲೆಗೆ ಯಾವಾಗಲೋ ಬಂದು ಹೋಗುವುದು ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ಆರೋಪದ ಮೇರೆಗೆ ಜನಧ್ವನಿ ನ್ಯೂಸ್ ಸೋಮವಾರ ಬೆಳಗ್ಗೆ ಸುಮಾರು 12 ಗಂಟೆ ಸಮಯದಲ್ಲಿ ಶಾಲೆಗೆ ಭೇಟಿ ನೀಡಿದಾಗ ಮುಖ್ಯ ಶಿಕ್ಷರೊಬ್ಬರು ಕರ್ತವ್ಯವದಲ್ಲಿರುವುದು ಕಂಡು ವಿಚಾರಿಸಿದಾಗ ಉತ್ತರ ನೀಡಲು ತಡವರಿಸಿದ್ದಾರೆ.
ಸಹ ಶಿಕ್ಷಕ ಮಹೇಶ್ ಶಾಲೆಗೆ 11 ಗಂಟೆಯಾದರೂ ಬಾರದೆ ಇರುವುದನ್ನು ಪ್ರಶ್ನೆ ಮಾಡಿದಾಗ ಮುಖ್ಯ ಶಿಕ್ಷಕ ಬರುತ್ತಾರೆ ತಡವಾಗಿ ಬರುತ್ತಾರೆ ಈ ಬಗ್ಗೆ ಇಲಾಖೆಗೆ ಸಾಕಷ್ಟು ಬಾರಿ ಮಾಹಿತಿ ನೀಡಲಾಹಿದೆ ಶಿಕ್ಷಕ ಮಹೇಶ್ ಈ ಶಾಲೆಗೆ 26-5-22 21 ಕರ್ತವ್ಯಕ್ಕೆ ಹಾಜರಿಯಾಗಿರುತ್ತಾರೆ ಎಂದು ಮಾಹಿತಿ ನೀಡಿದರು.
ಒಬ್ಬ ವಿದ್ಯಾರ್ಥಿಯನ್ನು ಕೇಳಿದಾಗ ಬರುತ್ತಾರೆ ಬಂದು ಹಾಜರಾತಿಗೆ ಸಹಿ ಹಾಕಿ ಹೋಗುತ್ತಾರೆ ಎಂಬ ಉತ್ತರ ನೀಡುತ್ತಾರೆ.
ಬೋರಪ್ಪನಹಟ್ಟಿ ಗ್ರಾಮದಲ್ಲಿ ಬುಡಕಟ್ಟು ಸಂಸ್ಕೃತಿಯ ಹಿಂದುಳಿದ ಎಸ್ಟಿ ಸಮುದಾಯದವರಾಗಿದ್ದು ಕೂಲಿ ನಾಲಿ ಮಾಡಿ ವ್ಯಾಸಂಗ ಮಾಡಲು ಮಕ್ಕಳನ್ನು ಕಳಿಸುತ್ತಾರೆ ಅಕ್ಷರ ಜ್ಞಾನ ಕಲಿಸ ಬೇಕದಾ ಶಿಕ್ಷಕ ಮಹೇಶ್ ಚಕ್ಕರ್ ಹೊಡೆದು ಹಾಜರಾತಿಗೆ ಸಹಿಹಾಕಿ ನಗರದ ಮೆಟ್ರೋ ಫೊರ್ಟ್ ಸೂಪರ್ ಮಾರ್ಕೆಟ್ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಾರೆ ಎಂದು ಸಾರ್ಜನಿಕರು ದೂರಿದ್ದಾರೆ.
ರಿಯಾಲಿಟ್ ಚೆಕ್ ಮಾಡಲು ನಗರದ ಎಸ್ ಬಿ ಎಂ ಬ್ಯಾಂಕ್ ಶಾಖೆಯ ಮೇಲಿರುವ ಮೆಟ್ರೋ ಪೋರ್ಟ್ ಸೂಪರ್ ಮಾರ್ಕೇಟ್ ಅಂಗಡಿಗೆ ಭೇಟಿ ನೀಡಿದಾಗ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ.


ಶಿಕ್ಷಕ ಮಹೇಶನ ಪತ್ನಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯೆ ಅಧ್ಯಕ್ಷೆಯಾಗಿ ಹತ್ತು ವರ್ಷ ಅವಧಿಯಲ್ಲಿ ಸಿ.ಆರ್.ಪಿ ಯಾಗಿ ಹಾಗೂ ವಿವಿಧ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುವಾಗಲೂ ಸಹ ಪಾಠ ಮಾಡದೆ ರಾಜಕೀಯ ಪ್ರಭಾವದಿಂದ ಶಾಲೆಗೆ ಚಕ್ಕರ್ ಹೊಡೆದು ಹಾಜರಾತಿಗೆ ಸಹಿ ಹಾಕಿ ವೇತನ ಪಡೆಯುತ್ತಿರುವುದನ್ನೇ ಈಗಲೂ ಸಹ ಮುಂದುವರೆಸಿಕೊಂಡು ಬರುತ್ತಿದ್ದು ಹಾಜರಾತಿಗೆ ಸಹಿ ಹಾಕಿ ಚಕ್ಕರ್ ಹೊಡೆದು ವ್ಯಾಪಾರ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದ್ದರೂ ಸಹ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೋ ಒತ್ತಡಕ್ಕೆ ಮಣಿದು ಮೌನಕ್ಕೆ ಜಾರಿರುವುದು ಅನುಮಾನಕ್ಕೆ ಎಡೆಮಾಡಿದೆ.

ಶಿಕ್ಷಣ ಕ್ಷೇತ್ರಕ್ಕೆ ಒತ್ತು. ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ ಇಂಜಿನಿಯರಿಂಗ್ ಕಾಲೇಜು. ಸರಕಾರಿ ಉಪಕರಣಗಳ ತರಬೇತಿ ಕೇಂದ್ರ. ಶಾಲಾ ಕಾಲೇಜುಗಳ ಹೈಟೆಕ್ ಸುಸಜ್ಜಿತ ಕಟ್ಟಡಗಳು ಸುಸಜ್ಜಿತ ವಸತಿ ಶಾಲಾ ಕಟ್ಟಡಗಳು.ವಸತಿ ನಿಲಯ ಕಟ್ಟಡಗಳನ್ನು ನಿರ್ಮಿಸಿ ಬಡ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ದೊರೆಯಲಿ ಎಂದು ಹಣದ ಹೊಳೆ ಹರಿಸಿದ್ದಾರೆ ಆದರೆ ಕೆಲ ಶಿಕ್ಷಕರು ಮಾತ್ರ ಮಕ್ಕಳಿಗೆ ಅಕ್ಷರ ಜ್ಞಾನ ಹೇಳಿಕೊಡುವ ಬದಲು ಹಾಜರಾತಿ ಹಾಕಿ ಚಕ್ಕರ್ ಹೊಡೆದು ವ್ಯಾಪಾರ ಮಾಡಿತ್ತಿರುವುದು ಶಿಕ್ಷಣ ಇಲಾಖೆಗೆ ಕಪ್ಪು ಚುಕ್ಕಿಯಾಗಿದೆ.

ಕೆ ,ಸಿ ಎಸ್ ಆರ್ ನಿಯಮ ಉಲ್ಲಂಘನೆ,
KCSR ನಿಯಮಗಳನ್ವಯ ಯಾವೊಬ್ಬ ಸರಕಾರಿ ವೇತನ ಪಡೆಯುವ ನೌಕರನೇ ಆಗಲಿ ಖಾಸಗಿ ವ್ಯವಹಾರ ಮಾಡುವಂತಿಲ್ಲ ಆದರೆ ಚಳ್ಳಕೆರೆ ತಾಲೂಕಿನ ಶಿಕ್ಷಣ ಇಲಾಖೆಯ ಆಡಳಿತದ ವೈಪಲ್ಯದಿಂದ ತರಗತಿಕೊಣೆಗಳಲ್ಲಿ ಇರಬೇಕಾದ ಶಿಕ್ಷಕರು ಸೇವಾ ನಿಯಮಗಳನ್ನು ಗಾಳಿಗೆ ತೂರಿ ರಾಜರೋಷವಾಗಿ ಕರ್ತವ್ಯದ ಅವಧಿಯಲ್ಲಿ ಇತರೆ ವ್ಯವಹಾರಗಳಲ್ಲಿ ತೊಡಗಿದ್ದಾರೆ ಇದಕ್ಕೆ ತಾಜಾ ಉದಾಹರಣೆಯಾಗಿದೆ.
ಈಗಾಲಾದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕತ್ಯವ್ಯ ಲೋಪ ಎಸಗುವ ಶಿಕ್ಷಕರಿಗೆ ಶ್ರೀ ರಕ್ಷೆಯಾಗುವ ಬದಲು ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸುವರೇ ಕಾದು ನೋಡ ಬೇಕಿದೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page