ಶಾಲೆಗೆ ಹೋಗುತ್ತಾ, ಸ್ನೇಹಿತೆಯದೊಂದಿಗೆ ಆಡಿ ಬೆಳೆಯಬೇಕಾದ ವಯಸ್ಸು ಆದರೆ ಆ ಪುಟ್ಟ ಬಾಲಕಿಗೆ ವಕ್ಕರಿಸಿದ ಮಾರಣಾಂತಿಕ ಖಾಯಿಲೆಯಿಂದ ನರಳುತ್ತಿದ್ದ ಬಡ ಪೋಷಕರ ಮಗಳ ಚಿಕಿತ್ಸೆಗೆ ಮಾಜಿ ಮಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ

by | 10/04/23 | ಆರೋಗ್ಯ, ಕರ್ನಾಟಕ, ಸಾಮಾಜಿಕಜನಧ್ವನಿ ವಾರ್ತೆ ಏ10
ಶಾಲೆಗೆ ಹೋಗುತ್ತಾ, ಸ್ನೇಹಿತೆಯದೊಂದಿಗೆ ಆಡಿ ಬೆಳೆಯಬೇಕಾದ ವಯಸ್ಸು ಆದರೆ ಆ ಪುಟ್ಟ ಬಾಲಕಿಗೆ ವಕ್ಕರಿಸಿದ ಮಾರಣಾಂತಿಕ ಖಾಯಿಲೆಯಿಂದ ನರಳುತ್ತಿದ್ದ ಬಡ ಪೋಷಕರ ಮಗಳ ಚಿಕಿತ್ಸೆಗೆ ಮಾಜಿ ಮಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೌದು ಇದು ಇದು ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಪಂ ವ್ಯಾಪ್ತಿಯ ಕಾಪರಹಳ್ಳಿ ಗ್ರಾಮದ ಬಡಕುಟುಂಬದ ಜಿ.ಟಿ.ಕುಮಾರ್.ತಿಮ್ಮಪ್ಪ ಇವರ ೭ ವರ್ಷದ ಪುತ್ರಿ ಪಲ್ಲವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಮಗುವಿಗಾಗಿ ಈಗಾಗಲೆ ಸಾಕಷ್ಟು ಚಿಕಿತ್ಸೆ ಹಣ ಖರ್ಚು ಮಾಡಿಕೊಂಡು ಹಣವಿಲ್ಲದೆ ಚಿಕಿತ್ಸೆಗಾಗ ಅಲೆದಾಡುತ್ತಿದ್ದರು. ಮಾರಣಾಂತಿಕ ಖಾಯಿಲೆ ಚಿಕಿತ್ಸೆಗೆ ಈಗಾಗಲೆ ಸುಮಾರು 3ರಿಂದ 5 ಲಕ್ಷ ರೂ ಖರ್ಚು ಮಾಡಿ ಚಕಿತ್ಸೆಕೊಡಿಸಿದ್ದು ಮಗಳ ಶಸ್ತçಚಿಕಿತ್ಸೆ ಮಾಡಿಸಲು ಸುಮಾರು 10 ಲಕ್ಷ ರೂಗಳ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದು. ಖಾಯಿಲೆಯಿಂದ ಪುಟ್ಟ ಮಗುವಿನ ಸುಂದರ ಬಾಲ್ಯಕ್ಕೆ ಕೊಡಲಿ ಪೆಟ್ಟು ನೀಡಿದೆ.ಭವಿಷ್ಯದ ಮೇಲೆ ಕರಿನೆರಳು ಆವರಿಸುವಂತೆ ಮಾಡಿತ್ತು.

ರಕ್ತ ಸಂಬಂಧಿ ಖಾಯಿಲೆಯಾದ ಥಲೆಸ್ಸೇಮಿಯಾದಿಂದ ರಕ್ತದ ಸಮಸ್ಯೆ, ಮೂಳೆಯ ಸಮಸ್ಯೆ ಉಂಟಾಗಿ ಮಗು ಪರದಾಡುವಂತಾಗಿದೆ. ಮೊದಲೇ ಕೂಲಿ ನಾಲಿ ಮಾಡಿಕೊಂಡು ಬದುಕುವ ಪೋಷಕರು ಇದರಿಂದ ದಿಕ್ಕೇ ತೋಚದಂತಾಗಿತ್ತು ಪ್ರತೀ ತಿಂಗಳು ಎರಡು ಬಾರಿ ರಕ್ತ ಹಾಗೂ ಬಿಳಿ ರಕ್ತ ಕಣಗಳನ್ನು ಹಾಕಿಸಬೇಕು. ಹೀಗಾಗಿ ಕೂಲಿ ನಾಲಿಯಿಂದ ಜೀವನ ಸಾಗಿಸುವ ಬಡಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿತ್ತು ಅವರ ಬಾಳಿನ ನೆರವಿಗೆ ಮಾಜಿ ಮುಖ್ಯಮಂತ್ರಿಗೆ ಎಚ್.ಡಿ.ಕುಮಾರಸ್ವಾಮಿ ಚಿಕಿತ್ಸೆಕೊಡಿಸಲು ಮುಂದಾಗಿದೆ..
ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಪಂಚರತ್ನ ಯಾತ್ರೆ ಸಮಾರಂಭದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್‌ಕುಮಾರ್ ಪರವಾಗಿ ಕ್ಷೇತ್ರದಲ್ಲಿ ಪ್ರವಾಸಗೊಂಡು ರಾತ್ರಿ ಬಹಿರಂಗಸಭೆಯಲ್ಲಿ ಭಾಗವಹಿಸಿ ಭಾಷಣ ಮಾಡುವಾಗ ಬಾಲಕಿಯ ಕುಟುಂಬಸ್ಥರು ವೇಧಿಕೆ ಮೇಲೆ ಹೋಗಿ ಮಗಳ ಕಾಯಿಲೆ ಹಾಗೂ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿ ಅಳಲು ತೋಡಿಕೊಂಡಿದ್ದಾರೆ ತಕ್ಷಣ ಸ್ಪಂದಿಸಿದ ಕುಮಾರಸ್ವಾಮಿಸೋಮವಾರ ಬೆಳಗ್ಗೆ ಜೆಪಿ ನಗರದಲ್ಲಿರುವ ನಿವಾಸಕ್ಕೆ ಬರುವಂತೆ ತಿಳಿಸಿದ್ದಾರೆ.
ಕಾಪರಹಳ್ಳಿ ಗ್ರಾಮದ ಕುಮಾರಸ್ವಾಮಿ ದಂಪತಿಗಳಿಬ್ಬರು ಸೋಮವಾರ ಬೆಳ್ಳಂ ಬೆಳಗ್ಗೆ 6.30 ಕ್ಕೆ ಸರಿಯಾಗಿ ಎಚ್.ಡಿ.ಕೆ ಮನೆ ಬಳಿ ಹೋಗಿದ್ದಾರೆ ಹೋದ ತಕ್ಷಣ ಮಗು ಹಾಗೂ ಕುಟುಂಬಸ್ಥರನ್ನು ಕಂಡು ವೈಯುಕ್ತಿಕವಾಗಿ 50 ಸಾವಿರ ರೂ ಹಣ ನೀಡಿ ಇಂದಿರಾ ಗಾಂಧಿ ಆಸ್ಪತ್ರೆಯ ವೈದ್ಯರಾದ ಸಂಜಯ್. ಡಾ.ಪೂಜಾ ಇವರಿಗೆದೂರವಾಣಿ ಮೂಲಕ ಕರೆ ಮಾಡಿ ಇಂದಿನಿAದಲೇ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ ಮೇರೆಗೆ ಮಗುವಿಗೆ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಮಗುವಿಗೆ ತಪಾಸಣೆ ನಡೆಸಿ ಚಿಕಿತ್ಸೆ ಪ್ರಾರಂಭಿಸಿರುವುದು ಕುಟುಂಬಸ್ಥರ ಮೊಗದಲ್ಲಿ ಮಂದಹಾಸ ಮೂಡಿಸುವಂತೆ ಮಾಡಿದೆ.;

ರಾಜ್ಯ ಸರ್ಕಾರ ಬಿಪಿಎಲ್ ಯೋಜನೆ ಅಡಿಯಲ್ಲಿ ಉಚಿತ ಶಸ್ತç ಚಿಕಿತ್ಸೆ ಬರಿಸುವ ಯೋಜನೆಯನ್ನು ಜಾರಿಗೆ ತರಲಿ ಎಂದು ಆಗ್ರಹಿಸಿರುವ ಜೆಡಿಎಸ್ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಡ ಕುಟುಂಬದ ಎಷ್ಟೋ ಮಕ್ಕಳಿಗೆ ಚಿಕಿತ್ಸೆಗೆ ನೆರವು ನೀಡುವ ಮೂಲಕ ಸಹಾಯ ಮಾಡುತ್ತಿದ್ದಾರೆ

Latest News >>

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಕಾವಲುಗಾರರ ನೇಮಿಸಿ

ಚಿತ್ರದುರ್ಗ ಮೇ.27: ಜಿಲ್ಲೆಯ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರಬೇಕು. ಒಂದು ವೇಳೆ ಸಿಸಿ ಕ್ಯಾಮೆರಾಗಳು...

ಲಕ್ಕೂರ ಆನಂದರ ಸಾಹಿತ್ಯ ಕೃಷಿ ನಾಡಿಗೆ ಪರಿಚಯಿಸಬೇಕಿದೆ: ಹುಲಿಕುಂಟೆ ಮೂರ್ತಿ

ಚಿತ್ರದುರ್ಗ ಮೇ.26 ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಕವಿ, ಬರಹಗಾರ ಆನಂದ್ ಸಿ.ಲಕ್ಕೂರು ಮಾಡಿರುವ ಸಾಹಿತ್ಯ ಕೃಷಿಯನ್ನು...

ಕುಂಚಿಟಿಗರಿಗೆ ಕೇಂದ್ರ OBC ಮೀಸಲಾತಿಗಿಂತ EWS ಮೀಸಲಾತಿ ಉತ್ತಮ -ಎಸ್ ವಿ ರಂಗನಾಥ್.

ಹಿರಿಯೂರು ಇತ್ತೀಚೆಗೆ ಕುಂಚಿಟಿಗ ಸಮಾಜದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿರುವ ಸುದ್ದಿ ಏನೆಂದರೆ ಅದು ಕುಂಚಿಟಿಗರಿಗೆ ಕೇಂದ್ರ ಸರ್ಕಾರದ OBC...

ಹುಚ್ಚವನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದ ಕಾರಣ ಚಾನಲ್ ಒಳಗಡೆ ನೀರಿನಲ್ಲಿ ಇಳಿದು ಸಾಗಬೇಕು ಎಂಬುದು ಗ್ರಾಮಸ್ಥರ ಅಳಲು

ಹಿರಿಯೂರು: ತಾಲ್ಲೂಕಿನ ಹುಚ್ಚವನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗಲು ಸರಿಯಾದ ದಾರಿ ಇಲ್ಲದ ಕಾರಣ ಈ ಊರಲ್ಲಿ ಯಾವುದೇ ವ್ಯಕ್ತಿ ಸತ್ತರೆ ಆ...

ವರಣುನ ಆರ್ಭಟಕ್ಕೆ ನೆಲಕ್ಕುರಿಳೆ ಬೆಳೆ- ಮನೆಗಳಿಗೆ ನುಗ್ಗಿದ ನೀರು-ಹಳ್ಳಕೊಳ್ಳಗೆ ನೀರು..

ಚಳ್ಳಕೆರೆ ಮೇ25 ವರುಣನ ಆರ್ಭಟಕ್ಕೆ ತೋಟಗಾರಿಕೆ ಬೆಳೆಗಳು ನೆಲಕ್ಕುರಿಳಿದರೆ ಮನೆಗಳಿಗೆ ನೀರು ನುಗ್ಗಿದ ಘಟನೆ ಜರುಗಿದೆ. ತಾಲೂಕಿನಾದ್ಯಂತ...

ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ. ₹ 71.41.325 ರೂ ಸಂಗ್ರಹ ಸಂತಾನ ಭಾಗ್ಯ ನೌಕರಿ ಆರ್ಥಿಕ ಆರೋಗ್ಯ ಸಂಪತ್ತು ಕರುಣಿಸುವಂತೆ ಹುಂಡಿಯಲ್ಲಿ ಲಿಖಿತ ಪತ್ರಗಳು‌ ಪತ್ತೆ ..!.

ನಾಯಕನಹಟ್ಟಿ:: ಮೇ.24. ಐತಿಹಾಸಿಕ ನಾಯಕನಹಟ್ಟಿ ಶ್ರೀ ಗುರುತಿಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಹಣದ ಎಣಿಕೆ ಕಾರ್ಯವನ್ನು...

ಸಮಾಜದ ಸಮಗ್ರ ಬೆಳವಣಿಗೆಗೆ ಶಿಕ್ಷಣ ವಲಯ ಅಭಿವೃದ್ಧಿ ಆಗಬೇಕಾಗಿದೆ ಶಾಸಕ ಎನ್ ವೈ ಗೋಪಾಲಕೃಷ್ಣ.

ನಾಯಕನಹಟ್ಟಿ:: ಮೇ.23. ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ....

ತಾಲ್ಲೂಕಿನ ಶುಭೋದಯ ಸೇವಾವೃದ್ದಾಶ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಎಲ್.ಮೂರ್ತಿ ರವರ ಹುಟ್ಟುಹಬ್ಬಆಚರಣೆ: ಮುಖ್ಯಸ್ಥ ತೇಜೋಮೂರ್ತಿ

ಹಿರಿಯೂರು: ಅಭಿಮತ ಪತ್ರಿಕೆಯ ಸಂಪಾದಕರು ಹಾಗೂ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್.ಸಿ.ಸೆಲ್. ಘಟಕ ಅಧ್ಯಕ್ಷರಾದ ಜಿ.ಎಲ್.ಮೂರ್ತಿ...

ಮೌಡ್ಯಗಳಿಂದ ಹೊರಬಂದು ಬುದ್ಧನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ:ಪ್ರೊ.ಸಿಕೆ ಮಹೇಶ್ವರಪ್ಪ ಅಭಿಮತ 

ಚಳ್ಳಕೆರೆ: ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಶಾತವಾಹನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ವಿಜಯ ಸಂಕಲ್ಪ ದಿನಪತ್ರಿಕೆ ವತಿಯಿಂದ ಬುದ್ಧ...

ವಾಣಿವಿಲಾಸಸಾಗರ ಜಲಾಶಯಕ್ಕೆ ತಗ್ಗಿದ ಒಳಹರಿವು ಮುಂಗಾರು ಮಳೆಯಿಂದಾಗಿ 1.65ಅಡಿ ನೀರು ಸಂಗ್ರಹ

ಹಿರಿಯೂರು : ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಪೂರ್ವ ಮುಂಗಾರು ಮಳೆಯಿಂದಾಗಿ 1.65 ಅಡಿ ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page