ಶರಣ ಮಾದಾರ ಚನ್ನಯ್ಯ ಚರ್ಮ ಕೈಗಾರಿಕಾ ಮತ್ತು ವಿವಿದೋದ್ದೇಶ ತರಬೇತಿ ಕೇಂದ್ರ ಪ್ರಾರಂಭ ಚರ್ಮ ಕುಶಲಕರ್ಮಿಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ

by | 14/02/23 | ಸುದ್ದಿ

ಚಿತ್ರದುರ್ಗ ಫೆ.14:
ಚರ್ಮ ಕುಶಲಕರ್ಮಿಗಳು ಉತ್ಸಾಹದಿಂದ ತರಬೇತಿ ಪಡೆದು ಚರ್ಮೋತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ, ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಹೇಳಿದರು.
ಇಲ್ಲಿನ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಮತ್ತು ಚೈನ್ನೈನ ಸೆಂಟ್ರಲ್ ಪುಟ್‍ವೇರ್ ಟ್ರೈನಿಂಗ್ ಇನ್ಸೂಟ್ಯೂಟ್ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಶಿವಶರಣ ಮಾದಾರ ಚನ್ನಯ್ಯ ಚರ್ಮ ಕೈಗಾರಿಕಾ ಮತ್ತು ವಿವಿದೋದ್ದೇಶ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಚರ್ಮಕುಶಲಕರ್ಮಿ ಸಮುದಾಯದ ಉದ್ಯೋಗ ಅತ್ಯುನ್ನತವಾದುದು ಹಾಗೂ ಶ್ರೇಷ್ಟವಾದುದು. ಚರ್ಮ ಕುಶಲಕರ್ಮಿಗಳು ಉತ್ಸಾಹದಿಂದ ತರಬೇತಿ ಪಡೆದು ಚರ್ಮೋತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ, ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.
ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಚರ್ಮ ಕೈಗಾರಿಕಾ ಕ್ಷೇತ್ರದಲ್ಲಿ ತರಬೇತಿ ಪ್ರಾರಂಭಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಚರ್ಮ ಕುಶಲಕರ್ಮಿಗಳು ಈ ಸೌಲಭ್ಯಗಳನ್ನು ಪಡೆದು ಸರ್ಕಾರದಿಂದ ನೀಡುವ ಸವಲತ್ತುಗಳನ್ನು ಬಳಸಿಕೊಂಡು ತಮ್ಮ ಜೀವನ ಮಟ್ಟವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಜಿಎಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಹೆಚ್.ನಟರಾಜ್, ಚೆನ್ನೈನ ಸಿಎಫ್‍ಟಿಐ ನಿರ್ದೇಶಕ ಕೆ.ಮುರುಳಿ ಹಾಗೂ ಚರ್ಮ ಕುಶಲಕರ್ಮಿಗಳು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *