ವೈವಿಧ್ಯ

ನಗರದ ಶ್ರೀಕಾಳಿಕಾ ದೇವಿ ಅಮ್ಮನವರ ಕಡೆ ಕಾರ್ತಿಕ ಮಹೋತ್ಸವಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.


ಹಿರಿಯೂರು :
ನಗರದ ದಕ್ಷಿಣ ಕಾಶಿ ತೇರುಮಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನೆಲೆಸಿರುವ ಶ್ರೀಕಾಳಿಕಾದೇವಿ ಅಮ್ಮನವರ ಕಡೆ ಕಾರ್ತಿಕ ಮಹೋತ್ಸವ ಪೂಜಾ ಕಾರ್ಯಕ್ರಮವು ಶುಕ್ರವಾರದಂದು ಅದ್ದೂರಿಯಾಗಿ ನೆರವೇರಿಸಲಾಯಿತು ಎಂಬುದಾಗಿ ದೇವಸ್ಥಾನದ ಪ್ರಧಾನ ಅರ್ಚಕರಾದ ಹೆಚ್.ವಿ.ನಾಗರಾಜ್ ಆಚಾರಿ ಅವರು ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಅಂಗವಾಗಿ ಕಾಳಿಕಾ ಮಾತೆಗೆ ಅಭಿಷೇಕ, ಅರ್ಚನೆ, ಲೋಕಕಲ್ಯಾಣಾರ್ಥವಾಗಿ ವಿಶೇಷಪೂಜೆ ಕಾರ್ಯಕ್ರಮ ಹಾಗೂ ಸಂಜೆ ದೀಪೋತ್ಸವ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಸಲಾಯಿತು.
ಈ ಕಡೇ ಕಾರ್ತಕೋತ್ಸವ ಕಾರ್ಯಕ್ರಮಕ್ಕೆ ನೂರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾಳಿಕಾದೇವಿ ಅಮ್ಮನವರ ಪೂಜಾ ವಿಧಿವಿಧಾನಗಳನ್ನು ಪೂರೈಸಿ, ಅಮ್ಮನವರ ಕೃಪೆಗೆ ಪಾತ್ರರಾದರಲ್ಲದೆ, ಪ್ರಸಾದವನ್ನು ಸ್ವೀಕರಿಸಿ, ಭಕ್ತಿಪ್ರದರ್ಶಿಸಿದರು.

ಗಣಪ ಹೋದ ಜೋಕುಮಾರಸ್ವಾಮಿ ಮನೆ ಮನೆಗೆ ಮಹಿಳೆಯ ಪುಟ್ಟಿಮೇಲೆ ಬಂದ…


ಚಳ್ಳಕೆರೆ ಜನಧ್ವನಿ ವಾರ್ತೆ ಸೆ.25 ಗಣೇಶ ಹಬ್ಬದ ನಂತರ ಜೋಕುಮಾರಸ್ವಾಮಿಯನ್ನು ಹೊತ್ತ ಮಹಿಳೆಯರು ಸಾಮಾನ್ಯವಾಗಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮನೆ ಮನೆಗೆ ಬರುವುದು ಕಾಣಬಹುದಾಗಿದೆ.


ಮನೆ ಮನೆಗೆ ಸಮೃದ್ಧಿ ಹೊತ್ತು ತರುವ ಜೋಕುಮಾರಸ್ವಾಮಿ ರಾಜ್ಯಾದ್ಯಂತ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಇಲ್ಲಿ ಗಣೇಶ ಚತುರ್ಥಿಯ ನಂತರ ಕಾಣಿಸಿಕೊಳ್ಳುವ ಪ್ರಮುಖ ಆಚರಣೆಗಳಲ್ಲಿ ಜೋಕುಮಾರಸ್ವಾಮಿಯೂ ಒಂದು.ಗಣೇಶ ಚತುರ್ಥಿಯ ಐದನೇ ದಿನ ಅಂದರೆ, ಅಷ್ಟಮಿಯ ದಿನ ಮೂಲಾನಕ್ಷತ್ರದಲ್ಲಿ ಜೋಕುಮಾರಸ್ವಾಮಿಯ ಜನನವಾಗುತ್ತದೆ. ಗಂಗಾಮತಸ್ಥರು ಮನೆತನದವರು ಹೊಲದಿಂದ ಮಣ್ಣು ತಂದು ಬಡಿಗೇರ ಮನೆಯಲ್ಲಿ ಜೋಕುಮಾರಸ್ವಾಮಿಯ ಮೂರ್ತಿಯನ್ನು ಮಾಡಿಸುತ್ತಾರೆ. ನಂತರ ಏಳು ದಿನಗಳ ಕಾಲ ಆ ಮೂರ್ತಿಯನ್ನು ಗಂಗಾಮತಸ್ಥರು ಮನೆತನದವರು ಏಳು ಊರುಗಳಿಗೆ ತಗೆದುಕೊಂಡು ಹೋಗುತ್ತಾರೆ. ಅದರಲ್ಲೂ ಪ್ರಮುಖವಾಗಿ ರೈತರ ಮನೆಗೆ ಜೋಕುಮಾರಸ್ವಾಮಿಯನ್ನು ಹೊತ್ತುಕೊಂಡು ಹೋಗಲಾಗುತ್ತದೆ. ಜೋಕುಮಾರನನ್ನು ಹೊತ್ತು ಬರುವ ಮಹಿಳೆಯರು .


ಜೋಕುಮಾರಸ್ವಾಮಿಗೆ ಕಾಲುಗಳಿಲ್ಲದ ಕಾರಣ ಮಹಿಳೆಯರು ಬುಟ್ಟಿಯಲ್ಲಿ ಹೊತ್ತು ತಿರುಗುತ್ತಾರೆ. ಜೋಕುಮಾರ ಸ್ವಾಮಿಯನ್ನು ಹೊತ್ತು ತಂದ ಮಹಿಳೆಯರು ಮನೆ ಮನೆಗೆ ಭೇಟಿ ನೀಡುತ್ತಾರೆ. ಮನೆಯ ಮುಂದೆ ಬಾಗಿಲಲ್ಲಿ ಜೋಕುಮಾರಸ್ವಾಮಿ ಮೂರ್ತಿ ಇಟ್ಟು ಅವನ ಕುರಿತು ಜಾನಪದ ಹಾಡು ಹೇಳುತ್ತಾರೆ. ಜೋಕು­ಮಾರನನ್ನು ಜನಪದರು ತಮ್ಮ ಹಾಡುಗಳಲ್ಲಿ ಹೀಗೆ ಹೇಳುತ್ತಾರೆ

‘ಅಡ್ಡಡ್ಡ ಮಳೆ ಬಡಿದು, ದೊಡ್ಡ ದೊಡ್ಡ ಕೆರಿ ತುಂಬಿ, ಗೊಡ್ಡುಗಳೆಲ್ಲಾ ಹೈನಾಗಿ ಜೋಕುಮಾರ…

ರೈತರ ದೇವತೆ ಎನ್ನುವಲ್ಲಿ ಹಾಡುವ ಹಾಡು ಹೀಗಿದೆ,

‘ಹಾಸ್ಯಾಸಿ ಮಳಿ ಬಡಿದು ಬೀಸಿ ಬೀಸಿ ಕೆರೆ ತುಂಬಿ, ಬಾಸಿಂಗದಂತ ತೆನೆಬಾಗಿ ಗೌಡರ ರಾಶಿಯ ಮ್ಯಾಲೆ, ಸಿರಿ ಬಂದು ಜೋಕಮಾರ….

“ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ್ ಗುಡ್ಡಗಳೆಲ್ಲ ಹಸಿರಾಗಿ ಜೋಕುಮಾರ, ಹಾಸ್ಯಾಸಿ ಮಳಿ ಬಡಿದು, ಬೀಸಿ ಬೀಸಿ ಕೆರೆತುಂಬಿ ಬಾಸಿಂಗದಂತ ತೆನೆಬಾಗಿ ಜೋಕುಮಾರ.ಈ ವೇಳೆ ಮನೆಯವರು ಜೋಕುಮಾರಸ್ವಾಮಿಗೆ ಜೋಳ, ಅಕ್ಕಿ ಮೆಣಸಿನಕಾಯಿ, ಹಾಗೂ ತರಕಾರಿ ಸೇರಿದಂತೆ ವಿವಿಧ ಧಾನ್ಯಗಳನ್ನು ನೀಡುತ್ತಾರೆ. ಈ ರೀತಿ ಧಾನ್ಯ ನೀಡಿದ ಮಹಿಳೆಯರಿಗೆ ಜೋಕುಮಾರಸ್ವಾಮಿ ಹೊತ್ತ ಮಹಿಳೆಯರು ಕಾಡಿಗೆ ಮತ್ತು ಅಂಬಲಿಯನ್ನು ನೀಡುತ್ತಾರೆ. ಈ ಕಾಡಿಗೆಯನ್ನು ಮನೆಯ ಬಾಗಿಲಿಗೆ ಹಚ್ಚುವುದು ,ರೈತರು ಜಮೀನುಗಳಿಗೆ ಚರಗ ಚೆಲ್ಲುತ್ತಾರೆ. ಅಂಬಲಿಯನ್ನು ಜಮೀನಿಗೆ ಚರಗ ಚೆಲ್ಲುವುದರಿಂದ ಉತ್ತಮ ಬೆಳೆ ಬರುತ್ತದೆ ಎಂಬುದು ಜನರ ನಂಬಸಮೃದ್ಧಿಯನ್ನು ಹೊತ್ತು ತರುವ ಜೋಕುಮಾರಸ್ವಾಮಿ :ಪ್ರಸ್ತುತ ಮಳೆಯಿಲ್ಲದ ಕಾರಣ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜೋಕುಮಾರಸ್ವಾಮಿ ಕೈಲಾಸಕ್ಕೆ ಹೋಗಿ ಮಳೆಯಿಲ್ಲದ ರೈತರ ಸಂಕಷ್ಟವನ್ನು ಪಾರ್ವತಿ ಪರಮೇಶ್ವರನಿಗೆ ತಿಳಿಸುತ್ತಾನೆ. ಬಳಿಕ ಭೂಲೋಕದಲ್ಲಿ ಮಳೆ ಬೆಳೆ ಉಂಟಾಗುತ್ತದೆ ಎಂಬುದು ನಂಬಿಕೆ. ಇಂದೀಗೂ ಜನರಲ್ಲಿ ನಂಬಿಕೆ ಇದೆ.


ಜೊತೆಗೆ ಮದುವೆಯಾಗದವರಿಗೆ ಮದುವೆ, ಮಕ್ಕಳಾಗದವರಿಗೆ ಸಂತಾನಭಾಗ್ಯವನ್ನು ಜೋಕುಮಾರಸ್ವಾಮಿ ಕಲ್ಪಿಸುತ್ತಾನೆ. ಈ ರೀತಿ ಬೇಡಿಕೊಂಡವರು ಜೋಕುಮಾರ ಸ್ವಾಮಿಗೆ ತೊಟ್ಟಿಲು, ಲಿಂಗದಕಾಯಿ ಮತ್ತು ಉಡುದಾರ ನೀಡುತ್ತಾರೆ. ಅಲ್ಲದೆ ಜೋಕುಮಾರಸ್ವಾಮಿ ಬಾಯಿಗೆ ಬೆಣ್ಣೆ ಸವರಲಾಗುತ್ತದೆ. ಈ ರೀತಿ ಬೆಣ್ಣೆ ಸವರಿದರೆ ಮನೆಯಲ್ಲಿ ಹಸುಗಳು ಹಾಲು ಹೆಚ್ಚು ನೀಡುತ್ತವೆ ಎಂಬುದು ಜನರ ನಂಬಿಕೆಯಾಗಿದೆ.
ಜೋಕುಮಾರ ಎಂದರೆ ಶಿವ ಪುತ್ರ ಕುಮಾರಸ್ವಾಮಿ. ನಾಡ ಜನಪದರು ತಮ್ಮ ಪ್ರೀತಿಯ ದೈವವಾದ್ದರಿಂದ ಆತನನ್ನು ಮುದ್ದಿನ ಕುಮಾರಸ್ವಾಮಿ ಎಂದು ಬಣ್ಣಿಸಲಾಗುತ್ತದೆ. ‘ ಜೋಕುಮಾರ’ ಎಂದು ಕರೆಯಲಾಗುತ್ತದೆ. ಪಾರ್ವತಿಪುತ್ರ ಗಣಪತಿಯು ಭೂಲೋಕಕ್ಕೆ ಬಂದು ಹೋದ ಬಳಿಕ ಕೈಲಾಸದಿಂದ ಧರೆಗೆ ಬರುತ್ತಾನೆ ಶಿವಪುತ್ರ ಕುಮಾರಸ್ವಾಮಿ ಅಥವಾ ಷಣ್ಮುಖ. ಲೋಕಪ್ರಭುವಾದ ಪರಮೇಶ್ವರ ಶಿವನ ಮೊದಲ ಮಗ ಗಣಪತಿಯು ಪ್ರಭುತ್ವದ ಪ್ರತೀಕವಾದರೆ ಕಿರಿಯ ಮಗ ಕುಮಾರಸ್ವಾಮಿಯು ತನ್ನ ಲೋಕಾನುಗ್ರಹ ಬುದ್ಧಿಯಿಂದ ಜನಪದರ ದೈವವಾದನು.

ಗಣಪತಿಯು ಶಿಷ್ಟದೇವತೆಯಾದರೆ ಷಣ್ಮುಖನು ಜನಪದರ ದೈವವಾದನು. ತಮ್ಮ ಕಷ್ಟಕ್ಕೆ ಕರಗಿ ಶಿವಕಾರುಣ್ಯವನ್ನು ಲೋಕಕ್ಕೆ ಉಣಬಡಿಸಿದ ಕುಮಾರಸ್ವಾಮಿಯನ್ನು ಜನಪದರು ಪ್ರೀತಿಯಿಂದ ‘ ಜೋಕುಮಾರ’ ಎಂದು ಕರೆದು, ಗೌರವಿಸುತ್ತಾರೆ.

ಗಣೇಶ ಸವಿಸವಿಯಾದ ಭೋಜನ ಸವಿದು ಹೋದರೆ, ಜೋಕಮಾರಸ್ವಾಮಿ ಮನೆ ಮನೆಗೆ ಸುತ್ತಿ ಜನರು ಪಡುವ ಕಷ್ಟಗಳನ್ನು ನೋಡಿ ಅವುಗಳನ್ನು ಶಿವನಿಗೆ ತಿಳುಸುತ್ತಾನೆ. ಜೋಕುಮಾರ ಸ್ವಾಮಿ ಹೋದ ನಂತರ ಮಳೆಯಾಗುತ್ತದೆ ಎಂಬುದು ಜನರ ನಂಬಿಕೆ.
7 ದಿನಗಳ ಕಾಲ ಜೋಕುಮಾರನನ್ನು ಹೊತ್ತು ಸಾಗುವ ಮಹಿಳೆಯರು ನಂತರ ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳರೂ ಬಟ್ಟೆಗಳನ್ನು ಒಗೆಯುವಂತಿಲ್ಲ. ಜೋಕುಮಾರನನ್ನು ಬಿಸಾಕಿದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ ಎಡೆ ತೋರಿಸಿ “ದಿನ” ಮಾಡಿ ಮುಗಿಸಿ ತಮ್ಮ ಕಾಯಕ ಪ್ರಾರಂಭಿಸುತ್ತಾರೆ.


ಪ್ರತೀ ವರ್ಷ ನಾವು ಜೋಕುಮಾರಸ್ವಾಮಿ ಹಬ್ಬವನ್ನು ಆಚರಿಸುತ್ತೇವೆ. ಗ್ರಾಮದ ಹೊರಗಿರುವ ಕೆರೆಗಳಿಂದ ಮಣ್ಣನ್ನು ತರುವ ಮಹಿಳೆಯರು ನಂತರ ಅದರಿಂದ ಜೋಕುಮಾರಸ್ವಾಮಿ ಮೂರ್ತಿಯನ್ನು ಸಿದ್ಧಪಡಿಸುತ್ತಾನೆ. ಸ್ನಾನ ಮಾಡಿ ಮೂರ್ತಿಯನ್ನು ಬುಟ್ಟಿಯಲ್ಲಿಟ್ಟುಕೊಂಡು 7 ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಧಾನ್ಯಗಳನ್ನು ಸಂಗ್ರಹಿಸುತ್ತಾರೆಂದು ಆಚರಣೆ ಕುರಿತು ಜೋಕುಮಾರಸ್ವಾಮಿಯನ್ನ ಒತ್ತು ತಂದ ಮಹಿಳೆಯರು ಮಾಹಿತಿ ನೀಡಿದ್ದಾರೆ.

ಮಳೆ ಬೆಳೆಗಾಗಿ ಗೌರಸಮುದ್ರ ಮಾರಮ್ಮದೇವಿಗೆ ವಿಶೇಷ ಪೂಜೆ ನಿಕಟಪೂರ್ವ ತಹಶೀಲ್ದಾರ್ ಎನ್.ರಘುಮೂರ್ತಿ.

ಚಳ್ಳಕೆರೆ ಸೆ.,8. ಮಳೆಗಾಗಿ ಗೌರಸಮುದ್ರಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೂಜಾ ಕರ್ಯಕ್ರಮ ನೆರವೇರಿಸಿದ ನಂತರ ನಿಕಟಪೂರ್ವ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ತಾಲೂಕಿನ ರೈತರು ಬಡವರ ಬಾದಾಮಿ ಎಂದೇ ಖ್ಯಾತಿ ಪಡೆದಿರುವ ವಾಣಿಜ್ಯ ಬೆಳೆಯಾದ ಶೇಂಗಾವನ್ನೇ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕಿನಲ್ಲಿ ಅತಿ ಹೆಚ್ಚು ರೈತರು ಬಿತ್ತನೆ ಮಾಡಿದ್ದು ಮಳೆಯಿಲ್ಲದೆ ಬೆಳೆ ಒಣಗಲು ಪ್ರಾರಂಭಿಸಿದ್ದು ಇದರಿಂದ ರೈತರು ಹಾಕಿದ ಬಂಡವಾಳ ಕೈಸೇರದೆ ಸಾಲದು ಸುಳಿಗೆ ಸಿಲುಕುವಂತಾಗಿದ್ದು ಮಳೆ ಬಾರದೆ ತಾಲೂಕಿನಲ್ಲ ಬರದ ಛಾಯೆ ಮೂಡಿದ್ದು ರೈತರ ಹಾಗೂ ತಾಲೂಕಿನ ಸಮಸ್ತ ಜನರಿಗೆ ಲೋಕ ಕಲ್ಯಾಣ ಹಾಗೂ ಮಳೆಗಾಗಿ ಗೌರಸಮುದ್ರ ಮಾರಮ್ಮ ದೇವಿಗೆ ಗೌರಸಮುದ್ರ ಗ್ರಾಪಂ ವತಿಯಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಲಾಗಿದೆ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷ ಓಬಣ್ಣ ಮಾತನಾಡಿ ತಾಲೂಕು ಆಡಳಿತ ಹಾಗೂ ಶಾಸಕ ಎನ್. ವೈ.ಗೋಪಾಲಕೃಷ್ಣ ಇವರ ಅಧ್ಯಕ್ಚತೆಯಲ್ಲಿ ಸೆ.18 ರಿಂದ ಮೂರು ದಿನಗಳ ಕಾಲ ನಡೆಯುವ ಜಾತ್ರೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದು ಕುಡಿಯುವ ನೀರು. ಬೆಳಕು. ಸ್ವಚ್ಚತೆ. ಜಾತ್ರೆಗೆ ಬರುವ ಭಕ್ತರಿಗೆ ವಿಶೇಷ ಬಸ್ ವ್ಯವಸ್ಥೆ ರಸ್ತೆ ಅಭಿವೃದ್ಧಿ ದೇವಿಯ ಜಾತ್ರೆಗೆ ಬರುವ ಭಕ್ತರಿಗೆ ಸಕಲ ಸಿದ್ದರೆ ತಯಾರಿ ಮಾಡಿಕೊಳ್ಳಲಾಗಿದೆ ಸಮೃದ್ಧಿ ಮಳೆ ಬೆಳೆಗಾಗಿ ಶ್ರಾವಣ ಶುಕ್ರವಾರ ಗ್ರಾಮಪಂಚಾಯಿತಿ ವತಿಯಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ತಿಳಿಸಿದರು ಗ್ರಾಮ ಪಂಚಾಯತಿ ಸದಸ್ಯರಾದ ಶಶಿಕುಮಾರ ಗೋಪಾಲಣ್ಣ ತಿಮ್ಮಾರೆಡ್ಡಿ ಮತ್ತು ಇತರೆ ಗ್ರಾಮ ಪಂಚಾಯತಿ ಸದಸ್ಯರು ಸಮಸ್ತ ಭಕ್ತಾದಿಗಳು ಉಪಸ್ಥಿತರಿದ್ದರು

ದಾರ್ಶನಿಕರ ಜಯಂತಿಗಳ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಚರಣೆ ಮಾಡುವ ಎಲ್ಲಾ ಕಾರ್ಯಕ್ರಮಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತಾಗಬೇಕು ಶಾಸಕ ಟಿ.ರಘುಮೂರ್ತಿ.


ಚಳ್ಳಕೆರೆ ಜನಧ್ವನಿ ವಾರ್ತೆ ಮಾ.೧೨
ನಮ್ಮ ನಾಡು, ನುಡಿಯ ಬಗ್ಗೆ ಬರಿ ಅಭಿಮಾನವಿದ್ದರೆ ಸಾಲದು ನಾಡಿಗಾಗಿ ನಾವು ತ್ಯಾಗ ಮತ್ತು ಸೇವೆ ಸಲ್ಲಿಸಬೇಕು ಇಂತಹ ಕಾರ್ಯಕ್ರಮದಲ್ಲಿ ನಿರೀಕ್ಷೆಗಿಂತ ಕಡಿಮೆ ಜನರು ಭಾಗವಹಿಸದೆ ಇರುವ ಬಗ್ಗೆ ಶಾಸಕ ಟಿ.ರಘುಮೂರ್ತಿ ವಿಷಾದ ವ್ಯಕ್ತಪಡಿಸಿದರು.

ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಬಯಲು ರಂಗಮಂದಿರಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ನಾಲ್ಕನೇತಾಲೂಕು ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಭಾಗವಹಿಸಿ ಮಾತನಾಡಿದರು.ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಚರಣೆ ಮಾಡುವ ದಾರ್ಶನಿಕ ಜಯಂತಿಗಳ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಚರಣೆ ಮಾಡುವ ಎಲ್ಲಾ ಕಾರ್ಯಕ್ರಮಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತಾಗ ಬೇಕು. ಚುವಾವಣೆ ಸಂದರ್ಭದಲ್ಲಿ ರಾಜಕೀಯ ಉದ್ದೇಶಕ್ಕಾಗಿ ಸಮಾವೇಶಗಳಿಗೆ ಜನ ಸೇರಿಸುತ್ತಾರೆ ಆದರೆ ಕನ್ನಡ ನಾಡು ನುಡಿ, ಜಲ ಉಳಿವಿಗಾಗಿ ಹಮ್ಮಿಕೊಳ್ಳುವ ಮಹತ್ವದ ಕನ್ನಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಕನ್ನಡಾಭಿಮಾನಿಗಳು, ವಿವಿಧ ಸಂಘಟನೆಗಳು, ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.

ಕನ್ನಡ ಸಾಹಿತ್ಯದ ಕೃಷಿ ಬೆಳವಣಿಗೆಗೆ ಕೇವಲ ಸಂಘಟನೆ ಸಾಲದು. ಬದಲಾಗಿ ದೊಡ್ಡ ಪರಂಪರೆ ಬೆಳೆಯಬೇಕಾಗಿದೆ. ಕನ್ನಡ ನಮ್ಮೆಲ್ಲರ ಜೀವಾಳವಾಗಿದ್ದು, ಭಾರತದ ಸಂಸ್ಕ್ರತಿ ಕನ್ನಡದ ಮೇಲೆ ನಿಂತಿದೆ. ಭಾಷೆಯಲ್ಲಿ ಮೇಲು-ಕೀಳು ಎಂಬುದಿಲ್ಲ. ಉಳಿದ ಭಾಷೆಗಳನ್ನು ಗೌರವಿಸುವ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು ಎಂದು ತಿಳಿಸಿದರು.

ನಿಕಟಪೂವರ್ಗ ತಾಲೂಕು ಸಮ್ಮೇಳನಾಧ್ಯಕ್ಷ ಹಾಗೂ ನಿವೃತ್ತ ಪ್ರಾಚಾರ್ಯ ಶಿವಲಿಂಗಪ್ಪ ಮಾತನಾಡಿ ಬಳ್ಳಾರಿ ಚಿತ್ರದುರ್ಗ ಬರದ ನಾಡು ಅತಿ ಕಡಿಮೆ ಮಳೆ ಬೀಳುವ ಪ್ರದೇಶ, ಹಿಂದುಳಿದ ಜಿಲ್ಲೆಗಳು ಎಂದು ಎನಿಸಿಕೊಂಡಿದ್ದು ವಿಶೇಷ ಅನುದಾನದಡಿಯಲ್ಲಿ ಕಲ್ಯಾಣ ಕರ್ನಾಟ ಎಂದು ಹೇಗೆ ಅಭಿವೃದ್ಧಿಯಾಗಿದೆಯೋ ಅದೇ ರೀತಿ ಚಿತ್ರದುರ್ಗ, ಬಳ್ಳಾರಿ ಎರಡು ಜಿಲ್ಲೆಗಳನ್ನು ೩೭೧ ಜೆ ಅಡಿಯಲ್ಲಿ ಜಾರಿಗೆ ತರುವ ಮೂಲಕ ಪರಶುರಾಂಪುರ ತಾಲೂಕು ಕೇಂದ್ರ, ನಿರುದ್ಯೋಗ ಹೋಗಲಾಡಿಸಲು ಉದ್ಯೋಗ ಸಂಸ್ಥೆ, ಡಿಆರ್ ಡಿಒ, ಸೇರಿದಂತೆ ಕೇಂದ್ರದ ಸಂಸ್ಥೆಗಳು ಸ್ಥಾಪನೆಯಾಗಿದ್ದು ಸ್ಥಳಿಯರಿಗೆ ಉದ್ಯೋಗ ಕಲ್ಪಿಸ ಬೇಕು, ರಾಣಿಕೆರೆ ಪೀಡರ್ ಚಾನಲ್ , ಕೆರೆ ಗಳು ಅಭಿವೃದ್ಧಿ, ಗಡಿ ಭಾಗದ ಶಾಲೆಗಳ ಅಭಿವೃದ್ಧಿ ಪಡಿಸಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ನೆಪವೊಡ್ಡಿ ಅವುಗಳನ್ನು ಮುಚ್ಚುವ ಕೆಲಸ ತೆರೆಮರೆಯಲ್ಲಿ ನಡೆಯುತ್ತಿದೆ ಸರಕಾರಿ ಶಾಲೆಗಳನ್ನು ಮುಚ್ಚದಂತೆ ಅಭಿವೃದ್ಧಿ ಪಡಿಸಬೇಕು ಎಂದು ತಿಳಿಸಿದರು.
ಸಮ್ಮೇಳನಾಧ್ಯಕ್ಷ ಕಲಮರಹಳ್ಳಿ ಡಾ.ಮಲ್ಲಿಕಾರ್ಜುನ ಮಾತನಾಡಿ ಕನ್ನಡ ಭಾಷೆಗೆ ಸೌಂದರ್ಯವಿದೆ. ಭಾಷೆಯನ್ನು ಗೌರವಸುವುದು ಎಂದರೆ ಆ ಭಾಷೆಯನ್ನು ಮಾತನಾಡುವ ಜನರನ್ನು ಗೌರವಿಸಿದಂತೆ. ನಮ್ಮ ಜಿಲ್ಲೆ ಅದರಲ್ಲೂ ಚಳ್ಳಕೆರೆ ತಾಲೂಕು ಹಲವಾರು ತಳಕಿನ ವೆಂಕಣ್ಣಯ್ಯ, ಜಾನಪದ ಸಿರಿಯಜ್ಜಿ, ಬೆಳೆಗೆರೆ ಕೃಷ್ಣಶಾಸ್ತಿç ಸೇರಿದ ಹಲವು ಸಾಹಿತಿಗಳ ಜನ್ಮ ಸ್ಥಳವಾಗಿದ್ದು ಕನ್ನಡ ಭವನ, ನಾಡೋಜ ದಿ.ಸಿರಿಯಜ್ಜಿಯ ಸ್ಮಾರಕ,ಶತಮಾನ ಕಂಡ ಶಾಲೆಗಳನ್ನು ಉನ್ನತೀಕರಿಸಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದು, ಜಾರಿಯಲ್ಲಿರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಬರಡು ಸೀಮೆಯನ್ನು ಹಸಿರು ವಲಯವನ್ನಾಗಿಸುವುದು, ತಾಲೂಕಿನ ಬಡ ಕುಟುಂಬದ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಅರಣ್ಯ ಕೃಷಿ ಪದ್ದತಿ, ಸೇರಿದಂತೆ ಹಲವು ಯೋಜೆಗಳನ್ನು ಜಾರಿಗೊಳಸಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಮಾತನಾಡಿ ತಾಲೂಕು ಕನ್ನಡ ಸಾಹಿತ್ಯ ೪ ನೇ ಸಮ್ಮೇಳನ ಕಾರ್ಯಕ್ಕೆ ಸುಮಾರು ೨ ಸಾವಿರ ಕನ್ನಡಾಭಿಮಾನಿಗಳ ನಿರೀಕ್ಷೆಯಿತ್ತು ಆದರೆ ನಿರೀಕ್ಷೆಯಂತೆ ಬಾರದೆ ಇರುವುದು ವಿಷಾಧನೀಯ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಭಾಗವಹಿಸಿ ಎಲ್ಲಾರಿಗೂ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಯಶಸ್ವಿಗೆ ಸಹಕರಿದವರು ಅಭಿನಂಧನೆಗಳನ್ನು ತಿಳಿಸಿದರು.
ಕಾರ್ಯಕ್ರಕ್ಕೂ ಮುನ್ನ ಬೆಳಗ್ಗೆ ೭ ಗಂಟೆಗೆ ತಹಶೀಲ್ದಾರ್ ರೇಹಾನ್ ಪಾಷ ರಾಷ್ಟçಧ್ವಜರೋಹಣ ನೆರವೇರಿಸಿದರು, ನಗರಸಭೆ ಅಧ್ಯಕ್ಷೆ ಸುಮಕ್ಕ ನಾಡಧ್ವಜರೋಹಣ, ತಾಲೂಕು ಅಧ್ಯಕ್ಷ ಪರಿಷತ್ ಧ್ವಜರೋಹಣ, ಸಾಹಿತಿ ಮರಿಕುಂಟೆ ತಿಪ್ಪಣ್ಣ ಬೆಳಗೆರೆ ಕೃಷ್ಣ ಶಾಸ್ತಿçಯವರ ಮಹಾಧ್ವರವನ್ನು ಉದ್ಘಾಟಿಸಿದರು ನಂತರ ಚಳ್ಳಕೆರೆಮ್ಮ ದೇವಸ್ಥಾನ ಬಳಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕಲಮರಹಳ್ಳಿ ಡಾ.ಮಲ್ಲಿಕಾರ್ಜುನ ಇವರನ್ನು ಸಾರೋಟದಲ್ಲಿ ವಿವಿಧ ಕಲಾ ತಂಡಗಳೊAದಿಗೆ ಪ್ರಮುಖ ಬೀದಿಗಳನ್ನುಮೆರವಣಿಗೆ ಮೂಲಕ ಕಾರ್ಯಕ್ರಮದ ವೇಧಿಯತ್ತ ಕರೆ ತಂದರು.


ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಸ್ಥಾಯಿಸಮಿತಿ ಅಧ್ಯಕ್ಷೆ ಎಂ.ಜೆ,ರಾಘವೇAದ್ರ, ಸಾಹಿತಿ ಮಿರಸಾಬಿಹಳ್ಳಿ ಶಿವಣ್ಣ, ಮಾಜಿ ಗಡಿನಾಡು ಅಧ್ಯಕ್ಷ ರಾಮಚಂದ್ರಪ್ಪ,ನಾಟಕ ಅಕಾಡಮೆ ಮಾಜಿ ಸದಸ್ಯ ಪಿ.ತಿಪ್ಪೇಸ್ವಾಮಿ, ಕ.ಸ,ಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ,ಡಾ.ಎA.ಮAಜಣ್ಣ, ಸಾಹಿತಿ ಟಿ.ಜೆ.ತಿಪ್ಪೇಸ್ವಾಮಿ , ಪಾಪಣ್ಣ, ತಹಶೀಲ್ದಾರ್ ರೇಹಾನ್ ಪಾಷ, ತಾಪಂ ಇಒ ಹೊನ್ನಯ್ಯ, ನೌಕರರ ಸಂಘದ ಅಧ್ಯಕ್ಷ ಲಿಂಗೇಗೌಡ, ಮೋದೂರು ತೇಜ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ಹಾಗೂ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರ ಸಾಹಿತಿ , ಕವಿಗಳಿಗೆ ಸನ್ಮಾನಿಸಿ ಗೌರವಿಸಿದರು.

ಶ್ರೀಗೌರಸಮುದ್ರಮಾರಮ್ಮ ದೇವಸ್ಥಾನದಲ್ಲಿ ಸಡಗರ ಸಂಭ್ರಮದಿಂದ ಗುಗ್ಗರಿ ಹಬ್ಬಕ್ಕೆ ಚಾಲನೆ


ಚಳ್ಳಕೆರೆ ಜನಧ್ವನಿ ವಾರ್ತೆ ಫೆ28.ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಸಮುದಾಯಗಳ ತವರೂರು ಎಂಬ ಖ್ಯಾತಿಗೆ ಚಳ್ಳಕೆರೆ ತಾಲುಯಕು ಹೆಸರಾಗಿದೆ. ಆಧುನಿಕತೆಯ ಭರಾಟೆ ನಡುವೆಯೂ ಈ ಬುಡಕಟ್ಟು ಸಂಸ್ಕೃತಿ ಇನ್ನೂ ಜೀವಂತವಾಗಿದೆ.

ಚಳ್ಳಕೆರೆ ತಾಲೂಕಿನ ಮಧ್ತಕರ್ನಾಟಕ ಆರಾಧ್ಯದೈವ ಎಂಬ ಹೆಗ್ಗಳಿಕೆಗೆ ಖ್ಯಾತಿ ಪಡೆದ ಗೌರಸಮುದ್ರ ಗ್ರಾಮದ ಶ್ರೀ ಗೌರಸಮುದ್ರಮಾರಮ್ಮ ದೇವಿಯ ಗುಗ್ಗಿ ಹಬ್ಬಕ್ಕೆ ಮಂಗಳವಾರ ದೇವಸ್ಥಾನವನ್ನು ತಳಿರು.ತೋರಣಗಳಿಂದ ಶೃಂಗಾರಗೊಳಿಸಿ ಗ್ರಾಮದ ಜ‌ನರು ಭಯ.ಭಕ್ತಿ.ಶ್ರದ್ಧೆಯಿಂದ ತಮ್ಮ ಜಮೀನಿನಲ್ಲಿ ಬೆಳೆದ ಉರಳಿ. ಈರುಳ್ಳಿ
ಬೆಳ್ಳುಳ್ಳಿ. ತರಕಾರಿ ಸೇರಿದಂತೆ. ದವಸ ಧಾನ್ಯಗಳನ್ನು ದೇವಸ್ಥಾನಕ್ಕೆ ತಂದು ಒಪ್ಪಿಸುತ್ತಾರೆ ಇಡೀ ರಾತ್ರಿ ಭಜನೆ ಮಾಡುತ್ತ ರೈತರು
ಸಾರ್ವಜನಿಕರು ನೀಡಿದ ಕಾಳು.ತರಕಾರಿಯನ್ನು ಮಡಿಯಿಂದ ಬೇಯಿಸಲು ಪ್ರಾರಂಭಿಸುತ್ತಾರೆ
ವಿಡೀ ಗ್ರಾಮ ಹಬ್ಬದ ವಾತಾವರದಿಂದ ದೇವಿಯ ಗುಗ್ಗರಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಮನೆದೇವರ ಹೆಸರಲ್ಲಿ ನಡೆಯೋ ಈ ಹಬ್ಬದಲ್ಲಿ ದವಸ ದಾನ್ಯಗಳ ಪೂಜೆ ಮಾಡಿ ನೈವೈದ್ಯ ಸಲ್ಲಿಸೋದು ಇಲ್ಲಿನ ಭಕ್ತರ ವಾಡಿಕೆ. ವರ್ಷಕ್ಕೊಮ್ಮೆ ನಡೆಯೋ ಗುಗ್ಗರಿ ಹಬ್ಬ ಕಣ್ತುಂಬಿಕೊಳ್ಳಲು ಸುತ್ತಲೂ ನೆರೆದಿರುವ ಜನರು, ಭಕ್ತಿಯಿಂದ ದೇಇಗೆ ಪೂಜೆ ಸಲ್ಲಿಸುತ್ತಾರೆ. ಭಕ್ತರು,
https://janadhwani.in/wp-content/uploads/2023/02/Screenshot_20230228_205650-1024x563.pngight=”352″ mp4=”https://janadhwani.in/wp-content/uploads/2023/02/VID-20230228-WA0071.mp4″][/video]
ಈ ಭಾಗದಲ್ಲಿ ವಿವಿಧ ಬುಡಕಟ್ಟು ಸಾಂಸ್ಕೃತಿಕ ಹಬ್ಬಗಳ ಆಚರಣೆ. ಭವ್ಯ ಪರಂಪರೆ ಇಂದಿಗೂ ನಡೆಯುತ್ತಲೇ ಬಂದಿದೆ, ಈ ಪರಂಪರೆಗೆ ಗ್ರಾಮದಲ್ಲಿ ನಡೆಯೋ ಗುಗ್ಗರಿ ಹಬ್ಬವೇ ಸಾಕ್ಷಿ. ಗುಗ್ಗರಿ ಹಬ್ಬ ಪುರಾತನ ಕಾಲದಿಂದಲೂ ಹಿರಿಯರ ಸಮ್ಮುಖದಲ್ಲಿ ನಡೆಯುತ್ತಲೇ ಬಂದಿದೆ.
ಗ್ರಾಮದಲ್ಲಿ ಶ್ರೀಗೌರಸಂದ್ರ ಮಾರಮ್ಮ ದೇವಿಯ ಭವ್ಯ ಮೆರವಣಿಗೆಯಲ್ಲಿ ತಂದು, ವಿಶೇಷ ಪೂಜೆ ಸಲ್ಲಿಸುತ್ತಾರೆ.
ಶ್ರೀಮಾರಮ್ಮ ದೇವಸ್ಥಾನದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ವಿವಿಧ ಗ್ರಾಮಗಳಿಂದ ನೂರಾರು ಭಕ್ತರು ಬಂದು ಭಾಗವಹಿಸುತ್ತಾರೆ ಹಲವಾರು ದವಸ ದಾನ್ಯಗಳನ್ನ ಪೂಜಿಸುವ ವಾಡಿಕೆ ಇದ್ದು, ಇದರಲ್ಲಿ ಹುರುಳಿ ಕಾಳು ವಿಶೇಷ ಸ್ಥಾನ ನೀಡುತ್ತಾ ಬಂದಿದ್ದಾರೆ. ಅದರಂತೆ ಇಲ್ಲಿನ ಭಕ್ತರು ಹುರುಳಿ ಧಾನ್ಯಕ್ಕೆ ಮೊದಲ ವಿಶೇಷ ಪೂಜೆ ಸಲ್ಲಿಕೆ ಮಾಡುವುದು ಮತ್ತೊಂದು ವಿಶೇಷ.
ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಸಂಸ್ಕೃತಿಯ ಸಂಭ್ರಮಾಚರಣೆಗಳು ಇನ್ನೂ ಜೀವಂತವಾಗಿವೆ.ಎಂಬುದಕ್ಕೆ ಪೂರ್ವಜರು ನಡೆಸಿಕೊಂಡು ಬಂದ ಆಚರಣೆಗಳೂ ಇಂದಿಗೂ ಜೀವಂತವೇ ಸಾಕ್ಷಿ

ಶ್ರೀಗಾದ್ರಿಪಾಲನಾಯಕನ ಹೊಳೆ ಪೂಜೆ ಮುಗಿಸಿ ಸ್ವಗ್ರಾಮದತ್ತ ಸಾಲು ಸಾಲು ಬಂಡಿ ಎತ್ತುಗಳೊಂದಿಗೆ ಮರಳುತ್ತಿರುವುದು

ಚಳ್ಳಕೆರೆ ಜಮಧ್ವನಿ ವಾರ್ತೆ ಫೆ.7.
ಮ್ಯಾಸ ಬೇಡರು ತಮ್ಮ ಕುಲದ ಸಾಂಸ್ಕೃತಿ ವೀರ ದಾಗರಿ ಪಾಲನಾಯಕಸ್ವಾಮಿಯ ಹೊಳೆ ಪೂಜೆಯನ್ನು ಶ್ರದ್ದೆ ಭಕ್ತಿಯಿಂದ ಆಚರಿಸಲಾಯಿತು.
ಚಿತ್ರದುರ್ಗ ತಾಲ್ಲೂಕು ಹಾಯ್ಕಲ್ ಮಜುರೆ ಗ್ರಾಮ ಕೋಟೆಹಟ್ಟಿಯ ಶ್ರೀ ಗಾದ್ರಿಪಾಲನಾಯಕಸ್ವಾಮಿಯ ದೇವರ ಎತ್ತುಗಳೊಂದಿಗೆ ಎತ್ತಿನಗಾಡಿ, ಟ್ರಾಕ್ಟರ್, ಸೇರಿದಂತೆ ವಿವಿಧ ವಾಹನಗಳೊಂದಿಗೆ ಸೋಮವಾರ ತಾಲೂಕಿನ ದೊಡ್ಡೇರಿ ಗ್ರಾಮದ ಸಮೀಪದ ಗರಣಿ ಹಳ್ಳದಲ್ಲಿ ಹೊಳೆಪೂಜೆಗೆ ಶ್ರೀ ಗಾದ್ರಿಪಾಲಯನಾಯಕ ಹಾಗೂ ಕಣಿವೆ ಮಾರಮ್ಮ ದೇವಿಯೊಂದಿಗೆ ಪಾದಯಾತ್ರೆ ಮೂಲಾಕನೂರಾರು ಭಕ್ತರು ಬಂದು ದೊಡ್ಡೇರಿ ಸಮೀಪ ವಾಸ್ತವ್ಯಮಾಡಿ ಗಂಗಾ ಪೂಜೆ ನೆರವೇರಿಸಿಕೊಂಡು ಮಂಗಳವಾರ ಹಾಯ್ಕಲ್ ಜನಧ್ಸವನಿಮೀಪದ ಕೋಟೆಹಟ್ಟಿಯ ಗ್ರಾದ್ರಿಪಾಲಯಕದೇವಸ್ಥಾನದ ಕಡೆ ಸುಮಾರು ೩ ಕಿ.ಮೀ ದೂರದವರಿಗೆ ಸಾಲು ಸಾಲು ಬಂಡಿಗಳೊAದಿಗೆ ದೇವರ ಉತ್ಸವಹ ಮರಳಿತು.
ಗಾದ್ರಿಪಾಲಯಕ ಗುಗ್ಗರಿ ಹಬ್ಬದ ಅಂಗವಾಗಿ ಪ್ರತಿವರ್ಷ ನಡೆಯುತ್ತಿದ್ದ ಆದರೆ ಕೊರನಾ ಸೋಂಕಿನ ಹಿನ್ನೆಲೆಯಲ್ಲಿ ಎರಡು ವರ್ಷ ದೇವರನ್ನು ಹೊಳೆಪೂಜೆಗೆ ಹೊರಡಿಸಿರಲ್ಲಿ ಈ ಬಾರಿ ಉತ್ತಮಮಳೆ ಬೆಳೆ ಯಾಗಲಿ ಎಂದು ಲೋಕಕಲ್ಯಾಣಕ್ಕಾಗಿ ದೇವರನ್ನು ಹೊಳೆ ಪೂಜೆ ಮಾಡಿಕೊಂಡು ಹೋಗು ದೇವಸ್ಥಾನದ ಆವರಣದಲ್ಲಿ ಗುಗ್ಗರಿ ಹಬ್ಬವನ್ನು ಆಚರಣೆಮಾಡಲಾಗುತ್ತಿದೆ..
ಹೊಳೆಪೂಜೆಯಲ್ಲಿ ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು, ಜಗಳೂರು, ಕೂಡ್ಲಿಗಿ ಸೇರಿದಂತೆ ವಿವಿಧ ಕಡೆಗಳಿಂದ ಗುಡಿಕಟ್ಟೆ ಯಜಮಾನರು, ಅಣ್ಣ-ತಮ್ಮಂದಿರು, ನೆಂಟರಿಷ್ಟರು ಹೊಳೆಪೂಜೆಗೆ ಬರುವಾಗ ಸಾಲುಸಾಲು ಎತ್ತುಗಳ ಮೆರವಣಿಗೆ ನಯನ ಮನೋಹರವಾಗಿತ್ತು. ಭಕ್ತರು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮಂಗಳವಾರ ಬೆಳಿಗ್ಗೆ ಗಂಗೆಪೂಜೆ ಮುಗಿಸಿಕೊಂಡು ಚಳ್ಳಕೆರೆ ಕುರುಡಿಹಳ್ಳಿ ಹತ್ತಿರ ಮಂಗ್ಲೂರು ಕಾವಲಿನ ಹಳ್ಳಕ್ಕೆ ತಲುಪುವುದು. ಬುಧವಾರ ಬೆಳಿಗ್ಗೆ ಪೂಜೆ ಮುಗಿಸಿಕೊಂಡು ಚಳ್ಳಕೆರೆ ಸೋಮಲಬಂಡೆ ಹತ್ತಿರ ಇರುವ ಶ್ರೀ ಬೋರೇದೇವರ ಗುಡಿ ಹತ್ತಿರ ತಲುಪುವುದು. ನಂತರ ಅಲ್ಲಿಂದ ಗುರುವಾರ ಬೆಳಗ್ಗೆ ಪೂಜೆ ಮಾಡಿಸಿಕೊಂಡು ಸ್ವಗ್ರಾಮ ಕೋಟೆಹಟ್ಟಿಗೆ ತಲುಪುವುದು.
ಸದರಿ ಕಾರ್ಯಕ್ರಮವನ್ನು ಶ್ರೀ ಗಾದ್ರಿಪಾಲನಾಯಕ ಗುಡಿಕಟ್ಟೆ ಯಜಮಾನರಾದ ಶ್ರೀ ಕ್ಯಾಸಕ್ಕಿ ಪಾಪಯ್ಯ, ಶ್ರೀ ನಾಮಲ ಪಾಲಯ್ಯ, ಕಿಲಾರಿ ಯಜಮಾನರಾದ ಸಂಗೇನಹಳ್ಳಿ ಓಬಯ್ಯ, ಪೂಜಾರಿ ಯಜಮಾನರಾದ ಕಾಕಿ ಓಬಯ್ಯ ಇತರರಿದ್ದರು.

ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರಾ ಪೂರ್ವ ಸಿದ್ಧತಾ ಸಭೆ ಜಾತ್ರೆಗೆ ಅನುಕೂಲವಾಗುವಂತೆ ಶಾಶ್ವತ ಯೋಜನೆಗಳ ಅನುಷ್ಠಾನ ಸಂಕಲ್ಪ -ಸಚಿವ ಬಿ. ಶ್ರೀರ

ಚಿತ್ರದುರ್ಗ ಫೆ.4:
ಮಧ್ಯ ಕರ್ನಾಟಕದ ಪ್ರಸಿದ್ಧ ಕ್ಷೇತ್ರ ನಾಯಕನಹಟ್ಟಿ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಪ್ರತಿ ವರ್ಷವು ಜಾತ್ರೆ ಆಯೋಜನೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳುವ ಬದಲಿಗೆ ಶಾಶ್ವತ ಯೋಜನೆಗಳನ್ನು ಅನುಷ್ಠಾನ ಮಾಡಲು ಸಂಕಲ್ಪ ಮಾಡಬೇಕು ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಅಧಿಕಾರಿಗಳಿಗೆ ಹೇಳಿದರು.
ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದ ಶ್ರೀಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನದ ಒಳಮಠದ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2023ನೇ ಸಾಲಿನ ದೊಡ್ಡ ರಥೋತ್ಸವದ ಜಾತ್ರಾ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ರೀತಿಯ ಮೂಲಸೌಕರ್ಯಗಳ ಕೊರತೆಯಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದರು.
ಶ್ರೀಗುರುತಿಪ್ಪೇರುದ್ರಸ್ವಾಮಿ ಮಹೋತ್ಸವವು ಮಾರ್ಚ್ 03 ರಿಂದ 13 ರವರೆಗೆ ನಡೆಯಲಿದ್ದು, ದೊಡ್ಡ ರಥೋತ್ಸವವು ಮಾರ್ಚ್ 10 ರಂದು ನಿಗಧಿಯಾಗಿದೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮೂಲಸೌಲಭ್ಯಗಳ ಕೊರತೆ ಎದುರಾಗಬಾರದು. ಕುಡಿಯುವ ನೀರು, ರಸ್ತೆ, ಆರೋಗ್ಯ, ನೈರ್ಮಲ್ಯ ಸೇರಿದಂತೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆಯಿಂದ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತ್ರಾ ಮಹೋತ್ಸವಕ್ಕೆ 3 ರಿಂದ 4 ಲಕ್ಷ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ. ಕುಡಿಯುವ ನೀರು, ವಸತಿ, ಸಾರಿಗೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ನೀರಿನ ಅಗತ್ಯತೆಗಾಗಿ 40 ಟ್ಯಾಂಕರ್‍ಗಳನ್ನು ಒದಗಿಸಬೇಕು, ಕುಡಿಯುವ ನೀರು ಪೂರೈಸುವ ನೀರಿನ ಮೂಲಗಳ ಗುಣಮಟ್ಟದ ಬಗ್ಗೆ ಪರೀಕ್ಷೆ ನಡೆಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದ ಜಿಲ್ಲಾಧಿಕಾರಿಗಳು, ಈ ಬಾರಿಯ ಜಾತ್ರೆಯನ್ನು ಎಲ್ಲರ ಸಹಕಾರ ಹಾಗೂ ಸಮನ್ವಯದಿಂದ ಅದ್ಧೂರಿಯಾಗಿ ವ್ಯವಸ್ಥಿತವಾಗಿ, ಸುಗಮವಾಗಿ ಜಾತ್ರೆ ನಡೆಸೋಣ, ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಚಿಕ್ಕಕೆರೆ ಜಾಲಿ ತೆರವಿಗೆ ಸಂಕಲ್ಪ: ಜಾತ್ರೆಗೆ ಆಗಮಿಸುವ ಭಕ್ತಾದಿಗಳ ಪಾಕಿರ್ಂಗ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು 600 ಎಕರೆ ವಿಸ್ತೀರ್ಣದ ಚಿಕ್ಕಕೆರೆಯಲ್ಲಿ ಬೆಳೆದ ಗಿಡಗಂಟಿ, ಜಾಲಿ ತೆರವಿಗೆ ಸಚಿವ ಶ್ರೀರಾಮುಲು ಸಂಕಲ್ಪ ಮಾಡಿದರು. ಒಂದು ತಿಂಗಳಲ್ಲಿ ಜಾಲಿ ತೆಗೆಸಬೇಕು. ಸ್ವತಃ ಎರಡು ದಿನಗಳ ಕಾಲ ಜಾಲಿ ತೆಗೆಯುವ ಕೆಲಸದಲ್ಲಿ ಶ್ರಮವಹಿಸುತ್ತೇನೆ. 10 ರಿಂದ 15 ಜೆಸಿಬಿಗಳನ್ನು ನಾನೇ ನೀಡುತ್ತೇನೆ ಹಾಗೂ ಸ್ವಚ್ಛವಾದ ಕೆರೆಯಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗುವುದು ಎಂದು ಅವರು ಹೇಳಿದರು.
ಸಚಿವರ ಸಂಕಲ್ಪ ಮೆಚ್ಚಿದ ಗ್ರಾಮಸ್ಥ ರವಿಶಂಕರ್ ಇಂತಹ ಸತ್ಕಾರ್ಯಕ್ಕೆ ತಾವು ರೂ. 1 ಲಕ್ಷ ನೀಡುವುದಾಗಿ ಘೋಷಿಸಿದರು.
ಜಾತ್ರಾ ಮಹೋತ್ಸವಕ್ಕೆ 200 ವಿಶೇಷ ಬಸ್: ನಾಯಕನಹಟ್ಟಿ ಜಾತ್ರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ 200 ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಚಿತ್ರದುರ್ಗ, ಚಳ್ಳಕರೆ, ಬಳ್ಳಾರಿ, ದಾವಣಗೆರೆ ನಗರಗಳಿಂದ ಬಸ್‍ಗಳು ಕಾರ್ಯಾಚರಣೆ ನಡೆಸಲಿವೆ. ಚಿತ್ರದುರ್ಗ 100, ದಾವಣಗೆರೆ 50, ಬಳ್ಳಾರಿಯಿಂದ 30 ಬಸ್‍ಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹೇಳಿದರು. ಸರ್ಕಾರಿ ಬಸ್‍ಗಳ ಜೊತೆ ಖಾಸಗಿ ಬಸ್‍ಗಳ ಓಡಾಟಕ್ಕೂ ಅನುವು ಮಾಡಿಕೊಡಲಾವುದು ಎಂದು ಸಚಿವ ಶ್ರೀರಾಮುಲು ಹೇಳಿದರು.
ಮುಕ್ತಿ ಬಾವುಟ ಹರಾಜಿಗೆ ಕಠಿಣ ನಿಯಮ ರೂಪಿಸಿ: ಕಳೆದ ಬಾರಿ ಜಾತ್ರೆ ಸಂದರ್ಭದಲ್ಲಿ ಮುಕ್ತಿಬಾವುಟದ ಯಶಸ್ವಿ ಹರಾಜುದಾರರು ಇದುವರೆಗೂ ಪೂರ್ಣ ಮೊತ್ತ ಪಾವತಿಸಿಲ್ಲ. ಹೀಗಾಗಿ ರಥೋತ್ಸವ ಸಂದರ್ಭದಲ್ಲಿನ ಮುಕ್ತಿ ಬಾವುಟದ ಹರಾಜಿಗೆ ಸಂಬಂಧಪಟ್ಟಂತೆ ಕಠಿಣ ನಿಯಮಾವಳಿ ರೂಪಿಸಬೇಕು. ಯಶಸ್ವಿ ಹರಾಜು ದಾರರಿಂದ ಮುಂಗಡವಾಗಿ ಚೆಕ್ ತೆಗದುಕೊಳ್ಳಬೇಕು. ಹರಾಜು ಕೂಗಿ ಹಣ ಪಾವತಿಸದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ತಿಪ್ಪೇಶ್ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರು ಸಭೆ ನಡೆಸಿ ಅಭಿಪ್ರಾಯ ಪಡೆದು ಸೂಕ್ತ ನಿಯಮ ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಈ ಭಾಗದಲ್ಲಿ ಕಳದ 5 ವರ್ಷಗಳ ಪಟ್ಟಣ ಸಂಕರ್ಪ ಕಲ್ಪಿಸುವ ರಸ್ತೆ ಹಾಗೂ ಸೇತುವೆ ಕಾಮಗಾರಿ ನಡೆಯುತ್ತಿದೆ. ಇದರಿಂದ ಪಟ್ಟಣಕ್ಕೆ ಆಗಮಿಸುವವರಿಗೆ ತೊಂದರೆಯಾಗುತ್ತಿದೆ. ಇಲಾಖೆಯವರು ಪ್ರತಿ ವರ್ಷವೂ ಸಬೂಬು ಹೇಳುತ್ತಾರೆ. ನಮಗೆ ಸಾಕಾಗಿದೆ. ಇಲಾಖೆ ವತಿಯಿಂದ ರಸ್ತೆ ಮಾಡದಿದ್ದರೆ, ನಾವೇ ಚಂದಾ ಎತ್ತಿ ರಸ್ತೆ ನಿರ್ಮಿಸುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಸಭೆಯಲ್ಲೆ ಸಾರ್ವಜನಿಕರು ಅಕ್ರೋಶ ವ್ಯಕ್ತತಪಡಿಸಿದರು. ಇದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು, ರಸ್ತೆಯಲ್ಲಿ ಅಪಘಾತವಾದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು. ತಾತ್ಕಾಲಿಕವಾಗಿ ರಸ್ತೆಯನ್ನು ಡಾಂಬರೀಕರಣಗೊಳಿಸಿ ಸರಿಪಡಿಸಿ, ಜಾತ್ರೆ ನಂತರ ಶಾಶ್ವತ ಕಾಮಗಾರಿ ಕೆಲಸ ಶುರು ಮಾಡಿ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ದೇಗುಲದ ಸಮೀಪದಲ್ಲೇ ಪಾಕಿರ್ಂಗ್ ವ್ಯವಸ್ಥೆ ಮಾಡಿ: ಭಕ್ತಾಧಿಗಳಿಗೆ ಅನುಕೂಲವಾಗುವಂತೆ ದೇಗುಲದ ಸಮೀಪದಲ್ಲಿಯೇ ಪಾಕಿರ್ಂಗ್ ವ್ಯವಸ್ಥೆ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಳೆದ ವರ್ಷ ದೂರದಲ್ಲಿ ಪಾಕಿರ್ಂಗ್ ವ್ಯವಸ್ಥೆ ಮಾಡಿದ್ದರಿಂದಾಗಿ ವಯೋವೃದ್ಧರು, ಮಹಿಳೆ, ಮಕ್ಕಳು, ಗರ್ಭಿಣಿಯರು ರಥೋತ್ಸವ ವೀಕ್ಷಣೆಗೆ ತೆರಳಲು ತುಂಬಾ ತೊಂದರೆ ಅನುಭವಿಸಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಈ ಬಾರಿ ದೇಗುಲದ ಸಮೀಪದಲ್ಲಿಯೇ ಪಾರ್ಕಿಗ್ ವ್ಯವಸ್ಥೆ ಮಾಡಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದರು.
ಜಾತ್ರೆ ಒಳಗಾಗಿ ಪಟ್ಟಣ ಸಂಪರ್ಕಿಸುವ ರಸ್ತೆಗಳನ್ನು ತಾತ್ಕಾಲಿಕ ಸರಿಪಡಿಸಬೇಕು. ಇದುವರೆಗೂ ಕ್ರಮಬದ್ಧವಾಗಿ ಜಾತ್ರೆ ಮಹೋತ್ಸವ ಆಯೋಜಿಸಲಾಗಿದೆ. ಕಳೆದ ಬಾರಿ ಎದುರಿಸಿದ ತೊಂದರೆಗಳನ್ನು ಈ ಬಾರಿ ಪರಿಹರಿಸಬೇಕು ಎಂದು ಸಚಿವ ಶ್ರೀರಾಮುಲು ಹೇಳಿದರು.
ರಸ್ತೆ ಗುಂಡಿ ಮುಚ್ಚಲು ಸೂಚನೆ: ರಥ ಬೀದಿ ರಸ್ತೆ ಸೇರಿದಂತೆ ಪಟ್ಟಣಕ್ಕೆ ಆಗಮಿಸುವ ಎಲ್ಲ ರಸ್ತೆ ಮಾರ್ಗಗಳಲ್ಲಿ ಬಿದ್ದಿರುವ ಗುಂಡಿಯನ್ನು ತಕ್ಷಣವೇ ಮುಚ್ಚುವ ಕೆಲಸ ಮಾಡಬೇಕು. ರಸ್ತೆಯ ಪಕ್ಕದಲ್ಲಿರುವ ಜಾಲಿಯನ್ನು ತೆರವುಗೊಳಿಸಬೇಕು, ನಗರದಾದ್ಯಂತ ಬೀದಿದೀಪದ ವ್ಯವಸ್ಥೆ ಆಗಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ತಾಕೀತು ಮಾಡಿದರು.
7 ಕಡೆ ಚೆಕ್ ಫೆÇಸ್ಟ್, ಪಾಕಿರ್ಂಗ್: ಜಾತ್ರಾ ಮಹೋತ್ಸವ ಅಂಗವಾಗಿ 7 ಕಡೆ ಚೆಕ್ ಪೆÇೀಸ್ಟ್ ಹಾಗೂ ಪಾಕಿರ್ಂಗ್ ಸ್ಥಾಪಿಸಲಾಗುವುದು. 30 ಕಡೆ ಸಿಸಿ ಟಿವಿ ಕ್ಯಾಮೆರಾ, 3 ಕಡೆ ವಾಚ್ ಟವರ್, 22 ಕಡೆ ಸಹಾಯವಾಣಿ ಕೇಂದ್ರ ಸ್ಥಾಪನೆ, ಡಿವೈಎಸ್‍ಪಿ, ಸಿಪಿಐ, ಪಿಎಸ್‍ಐ, ಕಾನ್ಸ್‍ಟೇಬಲ್ ಸೇರಿದಂತೆ 2550 ಜನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಚಳ್ಳಕೆರೆ ತಹಶೀಲ್ದಾರ್ ರೆಹಮಾನ್ ಪಾಷಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್, ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಪ್ಪ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರಾದ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.

ಭೀಮಾ ಕೋರೆಗಾಂವ್‌ ವಿಜಯಸ್ತಂಭದ ಇತಿಹಾಸ ನಾವೆಲ್ಲರೂ ಅರಿಯುವುದು ಅವಶ್ಯ ಎಂದು ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ಭೀಮಾ ಕೋರೆಗಾಂವ್‌ ವಿಜಯಸ್ತಂಭದ ಇತಿಹಾಸ ನಾವೆಲ್ಲರೂ ಅರಿಯುವುದು ಅವಶ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲಾ ಆವರದ ಬಯಲು ರಂಗಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ವಿವಿದ ದಲಿತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಭೀಮಾ ಕೋರೆಗಾಂವ್‌ ವಿಜಯದ ವರ್ಷಾಚರಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
1818ರಂದು ನಡೆದ ಕೋರೆಗಾಂವ್‌ ಯುದ್ಧದ ವಿಜಯೋತ್ಸವ ನಗರದಲ್ಲಿ ಪ್ರತಿವರ್ಷ ಆಚರಿಸುವ ಮೂಲಕ ಕೋರೆಗಾಂವ್‌ ವಿಜಯೋತ್ಸವದ ಇತಿಹಾಸ ಈ ಭಾಗದ ಜನತೆಗೆ ತಿಳಿಸಲು ಭೀಮಾ ಕೋರೆಗಾಂವ್‌ ವಿಜಯಸ್ತಂಭ ಮಾದರಿ ನಿರ್ಮಾಣ ಮಾಡಿ ಇತಿಹಾಸ ಯುವ ಜನಾಂಗಕ್ಕೆ ತಿಳಿಸುತ್ತಿರುವುದು ಹೆಮ್ಮೆ ವಿಷಯವಾಗಿದೆ ಎಂದರು.

ನಗರಸಭೆ ಸದಸ್ಯ ವೀರಭದ್ರಪ್ಪ ಮಾತನಾಡಿ ನಮ್ಮೆಲ್ಲರ ಸ್ವಾಭಿಮಾನದ ಸಂಕೇತ, ಚಾರಿತ್ರಿಕ ಅರಿವನ್ನು ಮೂಡಿಸಿದವರು ಡಾ| ಬಿ.ಆರ್‌. ಅಂಬೇಡ್ಕರ್‌. ಪ್ರತಿಯೊಂದು ಕಾರ್ಯಕ್ರಮಗಳು ಆತ್ಮಾವಲೋಕನ ಮಾಡಿಕೊಳ್ಳುವ ಸಭೆಯಾಗಬೇಕು. ಭೀಮಾ ಕೋರೆಗಾಂವ್‌ ವಿಜಯಸ್ತಂಭ ಕೋರೆಗಾಂವ್‌ ಇತಿಹಾಸವನ್ನು ಅರಿಯಬೇಕು. ಆಗ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಜಿಪಂ ಸದಸ್ಯ ಪ್ರಕಾಶ್ ಮೂರ್ತಿ.ಮಾಜಿ ನಗರಸಭೆ ಉಪಾಧ್ಯಕ್ಷ ವಿಜಯಕುಮಾರ್ ಉಮೇಶ್ ಚಂದ್ರ ಬ್ಯಾನರ್ಜಿ.ಮಾತನಾಡಿದರು.ನಗರಸಭೆ ಅಧ್ಯಕ್ಚೆ ಸುಮಕ್ಕ. ಸದಸ್ಯ ರಮೇಶ್ ಗೌಡ. ಕೃಷ್ಣಮೂರ್ತಿ.ಬೀಮನಕೆರೆ ಶಿವಮೂರ್ತಿ.ಮೈತ್ರಿದ್ಯಾಮಣ್ಣ. ಬೀಮಣ್ಣ.ಭದ್ರಿ. ಸೇರಿದಂತೆ ಜನಧ್ವನಿ ವಾರ್ತೆ ಡಿ.31

You cannot copy content of this page