ಚಳ್ಳಕೆರೆ ಸೆ.,8. ಮಳೆಗಾಗಿ ಗೌರಸಮುದ್ರಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೂಜಾ ಕರ್ಯಕ್ರಮ ನೆರವೇರಿಸಿದ ನಂತರ ನಿಕಟಪೂರ್ವ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ತಾಲೂಕಿನ ರೈತರು ಬಡವರ ಬಾದಾಮಿ ಎಂದೇ ಖ್ಯಾತಿ ಪಡೆದಿರುವ ವಾಣಿಜ್ಯ ಬೆಳೆಯಾದ ಶೇಂಗಾವನ್ನೇ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕಿನಲ್ಲಿ ಅತಿ ಹೆಚ್ಚು ರೈತರು ಬಿತ್ತನೆ ಮಾಡಿದ್ದು ಮಳೆಯಿಲ್ಲದೆ ಬೆಳೆ ಒಣಗಲು ಪ್ರಾರಂಭಿಸಿದ್ದು ಇದರಿಂದ ರೈತರು ಹಾಕಿದ ಬಂಡವಾಳ ಕೈಸೇರದೆ ಸಾಲದು ಸುಳಿಗೆ ಸಿಲುಕುವಂತಾಗಿದ್ದು ಮಳೆ ಬಾರದೆ ತಾಲೂಕಿನಲ್ಲ ಬರದ ಛಾಯೆ ಮೂಡಿದ್ದು ರೈತರ ಹಾಗೂ ತಾಲೂಕಿನ ಸಮಸ್ತ ಜನರಿಗೆ ಲೋಕ ಕಲ್ಯಾಣ ಹಾಗೂ ಮಳೆಗಾಗಿ ಗೌರಸಮುದ್ರ ಮಾರಮ್ಮ ದೇವಿಗೆ ಗೌರಸಮುದ್ರ ಗ್ರಾಪಂ ವತಿಯಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಲಾಗಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಓಬಣ್ಣ ಮಾತನಾಡಿ ತಾಲೂಕು ಆಡಳಿತ ಹಾಗೂ ಶಾಸಕ ಎನ್. ವೈ.ಗೋಪಾಲಕೃಷ್ಣ ಇವರ ಅಧ್ಯಕ್ಚತೆಯಲ್ಲಿ ಸೆ.18 ರಿಂದ ಮೂರು ದಿನಗಳ ಕಾಲ ನಡೆಯುವ ಜಾತ್ರೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದು ಕುಡಿಯುವ ನೀರು. ಬೆಳಕು. ಸ್ವಚ್ಚತೆ. ಜಾತ್ರೆಗೆ ಬರುವ ಭಕ್ತರಿಗೆ ವಿಶೇಷ ಬಸ್ ವ್ಯವಸ್ಥೆ ರಸ್ತೆ ಅಭಿವೃದ್ಧಿ ದೇವಿಯ ಜಾತ್ರೆಗೆ ಬರುವ ಭಕ್ತರಿಗೆ ಸಕಲ ಸಿದ್ದರೆ ತಯಾರಿ ಮಾಡಿಕೊಳ್ಳಲಾಗಿದೆ ಸಮೃದ್ಧಿ ಮಳೆ ಬೆಳೆಗಾಗಿ ಶ್ರಾವಣ ಶುಕ್ರವಾರ ಗ್ರಾಮಪಂಚಾಯಿತಿ ವತಿಯಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ತಿಳಿಸಿದರು
ಗ್ರಾಮ ಪಂಚಾಯತಿ ಸದಸ್ಯರಾದ ಶಶಿಕುಮಾರ ಗೋಪಾಲಣ್ಣ ತಿಮ್ಮಾರೆಡ್ಡಿ ಮತ್ತು ಇತರೆ ಗ್ರಾಮ ಪಂಚಾಯತಿ ಸದಸ್ಯರು ಸಮಸ್ತ ಭಕ್ತಾದಿಗಳು ಉಪಸ್ಥಿತರಿದ್ದರು
ಮಳೆ ಬೆಳೆಗಾಗಿ ಗೌರಸಮುದ್ರ ಮಾರಮ್ಮದೇವಿಗೆ ವಿಶೇಷ ಪೂಜೆ ನಿಕಟಪೂರ್ವ ತಹಶೀಲ್ದಾರ್ ಎನ್.ರಘುಮೂರ್ತಿ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments