ಸ್ವಾಮಿ ನನಗೆ ಕಪ ಕಟ್ಟಿಕೊಂಡಿದೆ ಉಸಿರಾಟದೊಂದರೆ ಚಿಕಿತ್ಸೆ ಕೊಡಿ ಇಲ್ಲವೆ ಮಾತ್ರೆ ಎಂದು ಅಜ್ಜಿಯೊಬ್ಬಳು ಗೋರದರೆ . ಮಗುವಿಗೆ ಜ್ವರ ಬಂದಿದೆ ಚಿಕಿತ್ಸೆಕೊಂಡಿ ಎಂದು ಸರಕಾರಿ ಆಸ್ಪತ್ರೆ ಬಳಿ ಚಿಕಿತ್ಸೆಗಾಗಿ ಬೇಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ಹೌದು ಇದು ಚಳ್ಳಕೆರೆ ನಗರದಲ್ಲಿ ಏಳನೇ ವೇತನ ಆಯೋಗ ಜಾರಿಗೊಳಿಸುಂತೆ ಸರ್ಕಾರಿ ನೌಕರರು ಮುಷ್ಕರ ಹಮ್ಮಿಕೊಂಡಿರುವುದಕ್ಕೆ ಸರಕಾರಿ ಕಚೇರಿ, ಸಾರ್ವಜನಿಕ ಆಸ್ಪತ್ರೆ ಬೀಗ ಹಾಕಿ ಕರ್ತವ್ಯಕ್ಕೆ ಗೈರಾಗಿರುವುದು ಸಾರ್ವಜನಿಕರಿಗೆ ಬಿಸಿ ಮುಟ್ಟುವಂತೆ ಮಾಡಿದೆ.
ನಗರದ ಸರಕಾರಿ ಆಸ್ಪತ್ರೆ ಬೀಗ ಜಡೀದಿದ್ದು ಒಬ್ಬ ವೈದ್ಯರು ಹಾಗೂ ಆರೋಗ್ಯ ಸಹಾಕರು ಮಾತ್ರ ಬೀಗ ಹಾಕಿಕೊಂಡು ಕರ್ತವ್ಯ ನಿರತ ಸಿಬ್ಬಂದಿಗಳು ತೋಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ತುರ್ತು ಸೇವೆ ವಿಷಸೇವನೆ, ಹೆರಿಗೆ, ಉಸಿರಾಟದ ತೊಂದರೆ, ಅಗ್ನಿದುರಂತ, ಅಪಘಾತ ಇಂತಹ ತುರ್ತು ಚಿಕಿತ್ಸೆಗಳ ಸೇವೆಗಳು ಮಾತ್ರ ಲಭ್ಯವಿದ್ದವು.

ತಾಲೂಕು ಕಚೇರಿಗೆ, ತಾಲೂಕು ಪಂಚಾಯತ್, ಉಪ ನೋಂದಾಣಾಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಸರಕಾರಿ ಕಚೇರಿಗಳಲ್ಲಿ ಜನ ಜಂಗುಳಿAದ ಕೂಡಿರುತ್ತಿದ್ದ ಸರಕಾರಿ ನೌಕಕರು ೭ ನೇ ವೇತನಾಯೋಜ ಜಾರಿಗೊಳಿಸುವಂತೆ ಕರ್ತವ್ಯಕ್ಕೆ ಗೈರು ಹಾಜರಿಯಾಗಿ ಸರಕಾರಿ ಕಚೇರಿಗಳು ರಜೆ ಇರುವುದರಿಂದ ಕಚೇರಿಗಳು ಬಿಕೋ ಎನ್ನುತ್ತಿದ್ದವು,
ರಜೆ ಎಂಬ ಮಾಹಿತಿ ಇಲ್ಲದೆ ಗ್ರಾಮೀಣ ಭಾಗದಿಂದ ವೃದ್ದರು , ಸಾರ್ವಜನಿಕರು ಸರಕಾರಿ ಸೌಲಭ್ಯಗಳನ್ನು ಪಡೆದಯಲು ಕಚೇರಿ ಮುಂದೆ ಕಾದು ಕುಳಿತ ದೃಶ್ಯಗಳು ಕಂದುಬAದವು.
ಕರ್ತವ್ಯಕ್ಕೆ ಹಾಜರಾಗದ ಸರ್ಕಾರಿ ನೌಕರರು ಮುಷ್ಕರ ಆರಂಭಿಸಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಚಿಕಿತ್ಸೆಗೆ ಬಂದ ಸಾರ್ವಜನಿಕರು ಸಾರ್ವಜನಿಕ ಆಸ್ಪತ್ರೆಯ ಬಾಗಿಲು ಮುಚ್ಚಿದ್ದರಿಂದ ಚಿಕಿತ್ಸೆದೊರೆಯದೆ ಬಂದ ದಾರಿಗೆ ಸುಂಕವಿಲ್ಲ ಎಂಬAದ ಖಾಸಗಿ ಆಸ್ಪತ್ರೆಗಳತ್ತ ಎಜ್ಜೆ ಹಾಕಿದರೆ ಹಣವಿಲ್ಲದೆ ಬಡ ಜನರು ಚಿಕಿತ್ಸೆಗಾಗಿ ಆಸ್ಪತ್ರೆ ಮುಂದೆ ಮಕ್ಕಳೊಂದಿಗೆ ಕುಳಿತು ಕೊಂಡಿದ್ದರು.
ಪ್ರತಿದಿನ ಸಮಸ್ಯೆಗಳು ಹೊತ್ತ ತಾಲ್ಲೂಕು ಕಚೇರಿಯು ನೂರಾರು ಜನರು ಆಗಮಿಸುತ್ತಿದ್ದರು, ಇಂದು ಸರ್ಕಾರಿ ನೌಕರರು ಮುಷ್ಕರದಿಂದ ಜನರಿಲ್ಲ ಬೀಕೋ ಎನ್ನುತ್ತಿತ್ತು, ಮತ್ತೊಂದು ಕಡೆ ಮುಷ್ಕರ ಮಾಹಿತಿ ಹರಿಯದೆ ಹಳ್ಳಿಗಳ ಜನರು ಕೆಲಸ-ಕಾರ್ಯಗಳಿಗೆ ತಾಲ್ಲೂಕು ಕಚೇರಿಗೆ ಆಗಮಿಸಿ ಅಧಿಕಾರಿಗಳು ಬರುತ್ತಾರೆ ಎಂದು ಕಾದುಕುಳಿತ ದೃಶ್ಯವಳಿಗಳು ತಾಲ್ಲೂಕು ಕಚೇರಿ ಆವರಣದಲ್ಲಿ ಕಂಡು ಬಂದವು.
0 Comments