ಚಿತ್ರದುರ್ಗ ಜಿಲ್ಲೆಯ ಕಡಬನಕಟ್ಟೆ ಗ್ರಾಮದ ಸರ್ಕಾರಿ ಫ್ರೌಡಶಾಲೆಯಲ್ಲಿ ವಿಶ್ವ ಏಡ್ಸ್ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಆಚರಿಸಲಾಯಿತು ಕಾರ್ಯವನ್ನು ಶಾಲಾ ಮುಖ್ಯ ಶಿಕ್ಷಕರಾದ ಹೆಚ್.ಆಂಜನೇಯ ಉದ್ಫಾಟಿಸಿದರು ನಂತರ ವಿಶೇಷ ಉಪನ್ಯಾಸ ನೀಡಿದ ಶಾಲೆಯ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಸಿ.ಆರ್.ಹೇಮಮಾಲಿನಿ ಮಾತನಾಡಿ ಏಡ್ಸ್ ಒಂದು ಮಾರಣಾಂತಿಕ ಖಾಯಿಲೆಯಾಗಿದೆ ಈ ಖಾಯಿಲೆಗೆ ಔಷಧಿ ಇಲ್ಲ ಜಾಗೃತಿ ಎನ್ನುವುದೆ ದಿವ್ಯಔಷಧವಾಗಿದೆ ರೋಗ ಬರುವ ಮುನ್ನವೇ ಜಾಗೃತಿ ವಹಿಸುವುದು ಬಹುಮುಖ್ಯ ಏಡ್ಸ್ ಬಂದ ರೋಗಿಗಳನ್ನು ಕಡೆಗಣಿಸುವುದು ತಪ್ಪು ತಿಳುವಳಿಕೆ ಅವರಿಗೂ ಬದುಕುವ ಹಕ್ಕಿದೆ
ಹೀಗಾಗಿ ಏಡ್ಸ್ ರೋಗಿಗಳಿಗೂ ಸಮಾನತೆ ಕಲ್ಪಿಸಿ ಅವರು ನಮ್ಮೊಳಗೆ ಒಬ್ಬರು ಎನ್ನುವ ಸಂದೇಶವನ್ನು ಸಾರುವ ಸಲುವಾಗಿ ಡಿಸೆಂಬರ್ -1 ರಂದು ವಿಶ್ವ ಏಡ್ಸ್ ದಿನವನ್ನ ಪ್ರಪಂಚದಾದ್ಯಂತ ಆಚರಣೆ ಮಾಡಲಾಗುತ್ತಿದೆ. 2022 ರ ವಿಶ್ವ ಏಡ್ಸ್ ದಿನದ ಘೋಷವಾಕ್ಯ.ಸಾಮಾನ್ಯವಾಗಿ ನಿರಂತರ ಆರೋಗ್ಯದಲ್ಲಿನ ಸಮಸ್ಯೆಗಳನ್ನು ಕಡೆಗಣಿಸುವವರೇ ಹೆಚ್ಚು. ಇನ್ನೂ ಪರೀಕ್ಷೆಗೆ ಒಳಗಾಗಿ ಕಾಯಿಲೆಯ ನಿಖರತೆಯನ್ನು ಪಡೆದುಕೊಳ್ಳುವುದು ದೂರದ ವಿಚಾರ. ಇಂತಹ ತಪ್ಪುಗಳನ್ನು ಮಾಡದಂತೆ ಡಬ್ಲ್ಯೂಹೆಚ್‌ಒ ಜಾಗೃತಿ ಮೂಡಿಸುತ್ತದೆ. ಹೀಗಾಗಿ ಈ ವರ್ಷ “ನಮ್ಮನ್ನು ಪರೀಕ್ಷೆಗೆ ಒಳಪಡಿಸುವುದು: ಎಚ್‌ಐವಿಯನ್ನು ಅಂತ್ಯಗೊಳಿಸಲು ಸಮಾನತೆಯನ್ನು ಸಾಧಿಸುವುದು” ಎಂಬುದು ವಿಶ್ವ ಏಡ್ಸ್ ದಿನದ 2022ರ ವಿಷಯವಾಗಿದೆ. ಈ ವಿಷಯ ಹೊಣೆಗಾರಿಕೆ ಮತ್ತು ಕ್ರಿಯೆಯನ್ನು ಒತ್ತಿಹೇಳುತ್ತದೆ. ಇದು ಈ ರೋಗದ ವಿರುದ್ಧ ಹೋರಾಡುವ ಜನಸಾಮಾನ್ಯರ ನಡುವಿನ ಅಸಮಾನತೆಯನ್ನು ನಿಭಾಯಿಸಲು ನಮ್ಮನ್ನು ಉತ್ತೇಜಿಸುತ್ತದೆ. ತಾರತಮ್ಯದ ಅಸ್ತಿತ್ವ ಎಚ್ಐವಿ ಪರೀಕ್ಷೆ ಮತ್ತು ಚಿಕಿತ್ಸೆಗೆ ಮುಖ್ಯ ಅಡಚಣೆಯಾಗಿದೆ. ಹೀಗಾಗಿ ಏಡ್ಸ ತಡೆಗಟ್ಟುವ ಪ್ರಕ್ರಿಯೆಯಲ್ಲಿ ತೊಡಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರೋತ್ಸಾಹಿಸಿ, ರೋಗ ಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷೆಗೆ ಒಳಪಡಿಸುವ ಮೂಲಕ ಏಡ್ಸ ಮುಕ್ತ ದೇಶವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಶ್ರೀ ಎಚ್ ಆಂಜನೇಯ, ಎಸ್.ಡಿ.ಎಂ.ಸಿ ಸಮಿತಿಯ ಅಧ್ಯಕ್ಷರಾದ ರಾಜಣ್ಣ,ಸದಸ್ಯರಾದ ಮಾರುತಿ,ಶಿಕ್ಷಕರಾದ ಭೀಮಪ್ಪ ನಿರೂಪಿಸಿದರು,ಲೋಕೇಶ್ವರಪ್ಪ, ಮಂಜುನಾಥ, ಹನುಮಂತರೆಡ್ಡಿ, ಮಹಾಲಿಂಗಪ್ಪ, ಸುಧಾ, ಹೇಮಾಮಾಲಿನಿ, ಯಶಸ್ವಿನಿ ಟಿ.ಮಾರುತಿ ಮುಂತಾದವರು ಭಾಗವಹಿಸಿದ್ದರು…
ವಿಶ್ವ ಏಡ್ಸ್ ದಿನಾಚರಣೆ ಔಷಧಿಯಿಲ್ಕ ಜಾಗೃತಿಯೇ ಔಷಧಿ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments