ವಿದ್ಯುನ್ಮಾನ ಮತ ಯಂತ್ರಗಳ ಯಾದೃಚ್ಛಿಕರಣ ಪೂರ್ಣ : ವಿಧಾನಸಭಾ ಕ್ಷೇತ್ರವಾರು ಹಂಚಿಕೆ* -ಜಿಲ್ಲಾಧಿಕಾರಿ ಟಿ.ವೆಂಕಟೇಶ್.

by | 20/03/24 | ಲೋಕಸಭಾ ಚುನಾವಣೆ-2024

ಚಿತ್ರದುರ್ಗ ಮಾ.20:ಚುನಾವಣಾ ಆಯೋಗದ ನಿರ್ದೇಶನದಂತೆ ಮೊದಲ ಹಂತದ ವಿದ್ಯುನ್ಮಾನ ಮತ ಯಂತ್ರ, ನಿಯಂತ್ರಣ ಘಟಕ ಹಾಗೂ ಮತ ಖಾತ್ರಿ ಯಂತ್ರಗಳ ತಂತ್ರಾಂಶ ಆಧಾರಿತ ಯಾದೃಚ್ಛಿಕರಣ ಮಾಡಾಗಿದೆ. ವಿಧಾನಸಭಾ ಕ್ಷೇತ್ರವಾರು ಈ ಯಂತ್ರಗಳನ್ನು ಭೌತಿಕವಾಗಿ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.


ಬುಧವಾರ ಮುಂಜಾನೆ ಬೆಳಿಗ್ಗೆ 7 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಸಮಕ್ಷಮದಲ್ಲಿ ತಂತ್ರಾಂಶ ಆಧಾರಿಸಿದ ಯಾದೃಚ್ಛಿಕರಣ(Randomization) ಕಾರ್ಯ ನಡೆಸಿ ಅವರು ಮಾತನಾಡಿದರು.  

ಹೆಚ್ಚುವರಿಯಾಗಿ ಶೇ.25 ರಷ್ಟು ವಿದ್ಯುನ್ಮಾನ ಮತಯಂತ್ರ (ಬ್ಯಾಲೆಟ್ ಯನಿಟ್) ಹಾಗೂ ನಿಯಂತ್ರಣ ಘಟಕಗಳು (ಕಂಟ್ರೋಲ್ ಯುನಿಟ್), ಶೇ.30 ರಷ್ಟು ಹೆಚ್ಚುವರಿ ಮತ ಖಾತ್ರಿ ಯಂತ್ರಗಳ(ವಿವಿಪ್ಯಾಟ್) ಒಳಗೊಂಡಂತೆ ತಂತ್ರಾಂಶ ಆಧಾರಿತ ಯಾದೃಚ್ಛಿಕರಣ ನಡೆಸಲಾಗಿದೆ. ಜಿಲ್ಲೆಯ 6 ವಿಧಾನ ಸಭಾ ಕ್ಷೇತ್ರಗಳಲ್ಲಿ 1661 ಮತಗಟ್ಟೆಗಳಿವೆ. ಈ ಸಂಖ್ಯೆಗೆ ಅನುಪಾತವಾಗಿ 2074 ವಿದ್ಯುನ್ಮಾನ ಮತಯಂತ್ರ ಹಾಗೂ ನಿಯಂತ್ರಣ ಘಟಕಗಳು, 2157 ಮತ ಖಾತ್ರಿ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. 944 ವಿದ್ಯುನ್ಮಾನ ಮತಯಂತ್ರ, 6 ನಿಯಂತ್ರಣ ಘಟಕ ಹಾಗೂ 28 ಮತಖಾತ್ರಿ ಯಂತ್ರಗಳನ್ನು ಹೆಚ್ಚುವರಿಯಾಗಿ ಮೀಸಲು ಇರಿಸಲಾಗಿದೆ. ಸೆಪ್ಟೆಂಬರ್ ಮಾಹೆಯಲ್ಲಿಯೇ ಮತಯಂತ್ರಗಳ ಮೊದಲ ಹಂತದ ಪರಿಶೀಲನೆ ಕಾರ್ಯ ನಡೆಸಲಾಗಿದೆ. ಎಲ್ಲಾ ಯಂತ್ರಗಳು ಸುಸ್ಥಿತಿಯಲ್ಲಿವೆ. ಚುನಾವಣೆ ವೀಕ್ಷಕರ ಸಮ್ಮುಖದಲ್ಲಿ ಎರಡನೇ ಹಂತದ ಯಾದೃಚ್ಛಿಕರಣ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.  


ಮೊಳಕಾಲ್ಮೂರು ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ 285 ಮತಗಟ್ಟೆಗಳಿವೆ. 356 ವಿದ್ಯುನ್ಮಾನ ಮತಯಂತ್ರ ಹಾಗೂ ನಿಯಂತ್ರಣ ಘಟಕ ಹಾಗೂ 370 ಮತ ಖಾತ್ರಿಯಂತ್ರ ಹಂಚಿಕೆ ಮಾಡಲಾಗಿದೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 260 ಮತಗಟ್ಟೆಗಳಿವೆ. 325 ವಿದ್ಯುನ್ಮಾನ ಮತಯಂತ್ರ ಹಾಗೂ ನಿಯಂತ್ರಣ ಘಟಕ ಹಾಗೂ 338 ಮತ ಖಾತ್ರಿಯಂತ್ರ ಹಂಚಿಕೆ ಮಾಡಲಾಗಿದೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 288 ಮತಗಟ್ಟೆಗಳಿವೆ. 360 ವಿದ್ಯುನ್ಮಾನ ಮತಯಂತ್ರ ಹಾಗೂ ನಿಯಂತ್ರಣ ಘಟಕ ಹಾಗೂ 374 ಮತ ಖಾತ್ರಿಯಂತ್ರ ಹಂಚಿಕೆ ಮಾಡಲಾಗಿದೆ.

ಹಿರಿಯೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 287 ಮತಗಟ್ಟೆಗಳಿವೆ. 358 ವಿದ್ಯುನ್ಮಾನ ಮತಯಂತ್ರ ಹಾಗೂ ನಿಯಂತ್ರಣ ಘಟಕ ಹಾಗೂ 373 ಮತ ಖಾತ್ರಿಯಂತ್ರ ಹಂಚಿಕೆ ಮಾಡಲಾಗಿದೆ.

ಹೊಸದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 242 ಮತಗಟ್ಟೆಗಳಿವೆ. 302 ವಿದ್ಯುನ್ಮಾನ ಮತಯಂತ್ರ ಹಾಗೂ ನಿಯಂತ್ರಣ ಘಟಕ ಹಾಗೂ 314 ಮತ ಖಾತ್ರಿಯಂತ್ರ ಹಂಚಿಕೆ ಮಾಡಲಾಗಿದೆ.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 299 ಮತಗಟ್ಟೆಗಳಿವೆ. 373 ವಿದ್ಯುನ್ಮಾನ ಮತಯಂತ್ರ ಹಾಗೂ ನಿಯಂತ್ರಣ ಘಟಕ ಹಾಗೂ 388 ಮತ ಖಾತ್ರಿಯಂತ್ರ ಹಂಚಿಕೆ ಮಾಡಲಾಗಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿರಾ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರಗಳ ಯಾದೃಚ್ಛಿಕರಣ ಕಾರ್ಯ ತುಮಕೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜರುಗಲಿದೆ.
 
ತಂತ್ರಾಶ ಆಧಾರಿತ ಯಾದೃಚ್ಛಿಕರಣ ಕಾರ್ಯದ ಬಳಿಕ, ಕುಂಚಿಗನಾಳ್ ಗ್ರಾಮ ಸಮೀಪದ ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಸಮಕ್ಷಮದಲ್ಲಿ ಮತಯಂತ್ರಗಳ ದಾಸ್ತಾನು ಇರಿಸಿದ ಕೊಠಡಿಗಳ ಬೀಗ ತೆರೆಯಲಾಯಿತು. ನಂತರ ಅವುಗಳನ್ನು ಎತ್ತುವಳಿ ಮಾಡಿ ಭೌತಿಕವಾಗಿ ಯಂತ್ರಗಳ ವಿತರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಸಹಾಯಕ ಚುನಾವಣೆ ಅಧಿಕಾರಿಗಳಾಗಿ ವಿವಿಧ ವಿಧಾನ ಸಭಾಕ್ಷೇತ್ರಗಳಿಗೆ ನೇಮಕವಾಗಿರುವ, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಸನಗೌಡ ಕೋಟೂರ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಬಿ.ಆನಂದ, ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿ ಹೆಚ್.ಎನ್.ಶಿವೇಗೌಡ, ಯೋಜನಾ ನಿರ್ದೇಶಕ ಎಂ.ಮಹೇಂದ್ರಕುಮಾರ್, ಭದ್ರಾ ಮೇಲ್ದಂಡೆ ಯೋಜನೆ ವಿಶೇಷ ಭೂ ಸ್ವಾಧೀನಾಧಿಕಾರಿ ವಿವೇಕಾನಂದ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಡಿ.ಎನ್.ಮೈಲಾರಪ್ಪ, ಯಶವಂತಕುಮಾರ್, ಗೌಸ್‌ಪೀರ್, ಲಕ್ಷ್ಮಮ್ಮ ಉಪಸ್ಥಿತರಿದ್ದರು

Latest News >>

ಯುಗಾದಿ ಹಬ್ಬಕ್ಕೆ ಬಂದವರಿಗೆ ಬೆಂಗಳೂರಿಗೆ ತೆರಳಲು ಬಸ್ಸಿಗಾಗಿ ಸಾರಿಗೆ ಬಸ್ಸು ನಿಲ್ದಾಣದಲ್ಲಿ ಕಾಯುತ್ತಿರುವ ಪ್ರಯಾಣಿಕರು.

ಚಳ್ಳಕೆರೆ ಏ11 ಯುಗಾದಿ ಹಬ್ಬ ಮುಗಿಸಿಕೊಂಡು ಮತ್ತೆ ಬೆಂಗಳೂರಿಗೆ ತೆರಳಲು ಸಾರಿಗೆ ಬಸ್ಸುಗಳ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ....

ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಅಗತ್ಯವಸ್ತುಗಳ ಖರೀದಿ ಬಲು ಜೋರು..

ಚಳ್ಳಕೆರೆ ಚಳ್ಳಕೆರೆ ಏ.8 ಅಗತ್ಯ ವಸ್ತುಗಳ ಬೆಳೆ ಏರಿಕೆ , ಬಿಸಿಲಿನ ತಾಪ ಹಾಗೂ ಬರಗಾಲದ ನಡುವೆಯೂ ರಂಜಾನ್ ಹಾಗೂ ಯುಗಾದಿ ಹಬ್ಬದ ಖರೀದಿ ಭರಾಟೆ...

ಯುಗಾದಿ ಹಾಗೂ ರಂಜಾನ್ ಹಬ್ಬಗಳನ್ನು‌ ಶಾಂತಿ‌ಸೌಹಾರ್ಧತೆಯಿಂದ ಆಚರಿಸಿ ಠಾಣಾಧಿಕಾರಿ ಕೆ.ಕುಮಾರ್.

ಚಳ್ಳಕೆರೆ ಏ.8 ಈ ಬಾರಿ ರಂಜಾನ್ ಹಾಗೂ ಯುಗಾದಿ ಹಬ್ಬಗಳು ಒಟ್ಟಾಗಿ ಬಂದಿದ್ದು, ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಠಾಣಾಧಿಕಾರಿ...

ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಗೆ ಮೇವು ಸಾಗಟ ನಿಷೇಧ ಜಿಲ್ಲಾಧಿಕಾರಿ ವೆಂಕಟೇಶ್.

ಚಿತ್ರದುರ್ಗ ಏ.05: ಚಿತ್ರದುರ್ಗ ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ. ಪ್ರಸ್ತುತ...

ತಾಲೂಕಿನಬರಪರಿಸ್ಥಿತಿ ಎದುರಿಸಲು ಪಿಡಿಒಗಳು ಕಾರ್ಯೋನ್ಮುಖರಾಗಬೇಕು, ಕುಡಿಯುವ ನೀರಿಗೆ ತೊಂದರೆಯಾಗದಂತೆ ನಿಗವಹಿಸಿ ನೋಡಲ್ ಅಧಿಕಾರಿ ರಾಮಾಂಜನೇಯ

ಚಳ್ಳಕೆರೆ: ರಾಜ್ಯ ಸರ್ಕಾರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಈಗಾಗಲೇ ಘೋಷಣೆ ಮಾಡಿರುವುದರಿಂದ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ...

ಜನರ ದಾಹ ತಣಿಸಲು ಅರವಟ್ಟಿಗೆ ಪಟ್ಟಣದ ವಿವಿಧ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು ವಿತರಣೆ. ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎ.ನಸರುಲ್ಲಾ..

ನಾಯಕನಹಟ್ಟಿ:: ಪಟ್ಟಣದ ಹಾಗೂ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಜನರ ದಾಹ ತಣಿಸಲು ಅರವಟ್ಟಿಗೆ ತೆರೆದಿದೆ ಎಂದು ಪಟ್ಟಣ ಪಂಚಾಯತಿ ಮುಖ್ಯ...

ಶುದ್ದ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ : ಏಪ್ರಿಲ್ 02 ಪ್ರಸಕ್ತ ಬೇಸಿಗೆಯಲ್ಲಿ ಚಿತ್ರದುರ್ಗ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ನಿವಾಸಿಗಳಿಗೆ...

ಬರಗಾಲ ನಿರ್ವಾಹಣಾ ಸಭೆಗೆ ಅಧಿಕಾರಿಗಳು ಹಾಜರಿಯಾಗುವಂತೆ ತಹಶೀಲ್ದಾರ್ ರೇಹಾನ್ ಪಾಷ.

ಚಳ್ಳಕೆರೆ ಏ.2. ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗಿದ್ದು ತಾಲೂಕು ಬರಗಾಲ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಏ 3 ಬುಧವಾರ 10 ಗಂಟೆ‌ಗೆ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page