ವಿದ್ಯುನ್ಮಾನ ಮತಯಂತ್ರಗಳು ಭದ್ರತಾ ಕೊಠಡಿಯಲ್ಲಿ ಸುರಕ್ಷತ ಮಾಡಿದ ಅಧಿಕಾರಿಗಳು.

by | 07/04/23 | ಚುನಾವಣೆ-2023


ಚಳ್ಳಕೆರೆ ಜನಧ್ವನಿ ವಾರ್ತೆ ಏ.7
ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾ ಕೇಂದ್ರದಿಂದ ವಿದ್ಯುನ್ಮಾನ ಮತಯಂತ್ರ ಗಳನ್ನು ಭದ್ರತಾ ಕೋಠಡಿಯಲ್ಲಿ ಪೊಲೀಸ್ ಸರ್ಪಗಾವನಲ್ಲಿ ಗುರುವಾರ ಸಂಜೆ ಶೇಖರಣೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಆನಂದ್ ತಿಳಿಸಿದರು..
ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿಅವುಗಳನ್ನು ಪರಿಶೀಲನೆ ನಡೆಸಿ 311 ಬ್ಯಾಲೆಟ್ ಯ್ಯುನಿಟ್, 311 ಕಂಟ್ರೋಲ್ ಯುನಿಟ್ , 337 ವಿವಿ ಪ್ಯಾಟ್‌ಗಳನ್ನು ಜೆಡಿಎಸ್ , ಬಿಜೆಪಿ. ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷದ ಮುಖಂಡರೊAದಿಗೆ ಪರಿಶೀಲನೆ ನಡೆಸಿ ಅವುಗಳನ್ನು ಸರಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ನಿರ್ಮಿಸಿರುವ ವಿದ್ಯುನ್ಮಾನ ಮತಯಂತ್ರಗಳ ಭದ್ರತಾ ಕೊಠಡಿಯಲ್ಲಿ ಮತಯಂತ್ರಗಳನ್ನು ಶೇಖರಿಸಲಾಗಿದ್ದು, ದಿನದ 24ಗಂಟೆಯೂ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಎಲ್ಲಾ ವಿದ್ಯುನ್ಮಾನ ಮತಯಂತ್ರಗಳನ್ನು ಪರಿಶೀಲಿಸಿ ಚಲಾಯಿ ಸುವ ಮತಗಳು ಆಯಾಯ ಅಭ್ಯರ್ಥಿಗಳ ಮತ ಲೆಕ್ಕಕ್ಕೆ ಬರುತ್ತಿದೆಯೇ, ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ತಪಾಸಣೆ ವೇಳೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಹಾಗೂ ಇತರ ರಾಜಕೀಯ ಪಕ್ಷಗಳ ಪ್ರತಿನಿಧಿ, ಅಧಿಕಾರಿಗಳ ಸಮ್ಮುಖದಲ್ಲಿ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಇವಿಎಂ ಗಳ ಕಾರ್ಯಕ್ಷಮತೆಯನ್ನು ಸಾಕ್ಷೀಕರಿಸಿಕೊಳ್ಳಲಾ ಗಿದೆ. ಬಟನ್ ಹಾಗೂ ಬಟನ್ ಲೈಟ್‌ಗಳು ಸರಿಯಾಗಿ ಕೆಲಸ ಮಾಡುತ್ತಿರುವುದನ್ನು ದೃಢಪಡಿಸಿಕೊಂಡಿರುವ ಅಧಿಕಾರಿಗಳು, ಪ್ರತಿಯೊಂದು ಯಂತ್ರದ ಮೇಲೆ ಸರ್ಟಿಫೈ ಮಾಡಿ ಮುದ್ರೆ ಹಾಕಲಾಗಿದೆ ಭದ್ರತಾ ಕೊಠಡಿಯಲ್ಲಿ ಮತಗಟ್ಟೆವಾರು ಇವಿಎಂಗಳನ್ನು ಗುರುತು ಮಾಡಿ ಸುರಕ್ಷಿತವಾಗಿರಿಸಲಾಗಿದೆ.
ಭಾರತ ಚುನಾವಣಾ ಆಯೋಗ ಮಾರ್ಗಸೂಚಿಯನ್ವಯ ಪೊಲೀಸ್ ಭದ್ರತೆಯಲ್ಲಿ ಚುನಾವಣಾ ಅಭ್ಯರ್ಥಿಗಳೆದುರು ಇವಿಎಂಗಳ ಮುದ್ರೆ ತೆರೆದು ಬ್ಯಾಲೆಟ್ ಯೂನಿಟ್ ನಮೂನೆಯನ್ನು ಸೇರಿಸಿ ಮತ್ತೊಮ್ಮೆ ಅವುಗಳ ಕಾರ್ಯವೈಖರಿ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿ ಅವುಗಳ ಕಾರ್ಯವಿಧಾನದ ಬಗ್ಗೆಯೂ ತೋರಿಸಲಾಗುವುದು. ವಿದ್ಯುನ್ಮಾನ ಮತಯಂತ್ರಗಳ ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಿ ಬೀಗಮುದ್ರೆ ಮಾಡಲಾಗುವುದು.

ಭದ್ರತಾ ಕೊಠಡಿಯ ಆವರಣ ಹಾಗೂ ಸುತ್ತ ಮುತ್ತ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಸದ್ಯದಲ್ಲೇ ಒಳ ಹಾಗೂ ಹೊರ ಆವರಣಕ್ಕೆ ಸಿಸಿ ಟಿವಿ ಕ್ಯಾಮರಾ ಅಳವಡಿಸಿ, ಅಲ್ಲಿಯೇ ಇರುವ ಎಲೆಕ್ಟ್ರಿಕಲ್ ಕಂಟ್ರೋಲ್ ರೂಂ ನಲ್ಲಿ ಕ್ಯಾಮರಾದಲ್ಲಿ ಸೆರೆಯಾಗುವ ದೃಶ್ಯಾವಳಿ ಯನ್ನು ವೀಕ್ಷಿಸಿ, ನಿಗಾ ವಹಿಸಲಾಗುವುದು. ಪ್ರತೀದಿನ ಪೊಲೀಸ್ ಅಧಿಕಾರಿಗಳು , ಚುನಾವಣೆ ಅಧಿಕಾರಿಗಳು ಭೇಟಿ ನೀಡಿ ಭದ್ರತಾ ವ್ಯವಸ್ಥೆಯ ಮೇಲ್ವೀಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಒಟ್ಟಾರೆ ವಿಧಾನ ಸಭೆ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಸೌಹಾರ್ಧತೆಯಿಂದ ನಡೆಸಲು ಎಲ್ಲಾ ಅಗತ್ಯ ಮುಂಜಾಗ್ರತ ಕ್ರಮಗಳನ್ನು ವಹಿಸಲಾಗಿದೆ ಎಂದು ತಿಳಿಸಿದರು.
ಭದ್ರತಾ ಕೊಠಡಿಯಲ್ಲಿ ಮತಯಂತ್ರಗಳನ್ನು ಸಂಗ್ರಹಿಸುವಾಗ ಸಹಾಕ ಚುನಾವಣಾಧಿಕಾರಿ ತಹಶೀಲ್ದಾರ್ ರೇಹಾನ್ ಪಾಷ, ಚಳ್ಳಕೆರೆ ಠಾಣೆಯ ಪಿಐ ಆರ್.ಎಫ್, ದೇಸಾಯಿ, ಪಿಎಸ್‌ಐ ಸತೀಶ್ ನಾಯ್ಕ. ಚುನಾವಣೆ ಶಾಖೆಯ ಪ್ರಕಾಶ್, ಶ್ರೀಧರ್, ಭಾಷ. ಓಬಳೇಶ್. ಅರೆಸೇನೆ, ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *