ವಿದ್ಯಾರ್ಥಿಗಳಿಗೆ ಗುಣಮಟ್ಟದಶಿಕ್ಷಣದ ಜೊತೆಗೆಮನೆಯಲ್ಲಿ ಆರೋಗ್ಯಕರವಾದವಾತಾವರಣವನ್ನು ಕಲ್ಪಿಸಿಕೊಡಬೇಕು ಬೆಂಗಳೂರುಧರ್ಮಕ್ಷೇತ್ರದಗುರುಶ್ರೇಷ್ಠ ಫಾದರ್ ಫ್ರಾನ್ಸಿಸ್

by | 29/11/23 | ಸುದ್ದಿ


ಹಿರಿಯೂರು :
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಮೌಲ್ಯಯುತ ಶಿಕ್ಷಣ ಕಲಿಸುವ ಮೂಲಕ ಉತ್ತಮ ಸಂಸ್ಕಾರವನ್ನು ಮೂಡಿಸಬೇಕಿದ್ದು, ಈ ನಿಟ್ಟಿನಲ್ಲಿ ಪೋಷಕರು ಮನೆಯಲ್ಲಿ ಆರೋಗ್ಯಕರವಾದ ವಾತಾವರಣವನ್ನು ಕಲ್ಪಿಸಿಕೊಡಬೇಕು ಆಗ ಮಾತ್ರ ಮಕ್ಕಳು ಸಂಸ್ಕಾರವಂತರಾಗಲು ಸಾಧ್ಯವಾಗುತ್ತದೆ ಎಂಬುದಾಗಿ ಬೆಂಗಳೂರು ಮಹಾಧರ್ಮಕ್ಷೇತ್ರದ ಗುರುಶ್ರೇಷ್ಠರಾದ ಫಾದರ್ ಫ್ರಾನ್ಸಿಸ್ ಹೇಳಿದರು.
ನಗರದ ಅಸಂಶನ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉತ್ತಮ ಶಾಲಾಪರಿಸರ, ಉತ್ತಮ ಶಿಕ್ಷಕರು, ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಅಸಂಶನ್ ಶಿಕ್ಷಣ ಸಂಸ್ಥೆಯಂತಹ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವುದು ನಿಜಕ್ಕೂ ನಿಮ್ಮ ಅದೃಷ್ಟವಾಗಿದ್ದು, ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಕೊಡಿಸುತ್ತಿರುವ ನಿಮ್ಮ ಪೋಷಕರಿಗೆ ಮಕ್ಕಳೇ ನೀವು ಧನ್ಯವಾದಗಳನ್ನು ಹೇಳಬೇಕು ಎಂಬುದಾಗಿ ಅವರು ಹೇಳಿದರು.
ವಿದ್ಯಾರ್ಥಿ ಜೀವನದ ಸಮಯ ಅತ್ಯಂತ ಅಮೂಲ್ಯವಾದ ಸಮಯವಾಗಿದ್ದು, ಈ ಸಮಯವನ್ನು ವ್ಯರ್ಥ ಮಾಡದೇ ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಅಭ್ಯಾಸ ಮಾಡುವ ಮೂಲಕ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಮುಂದಾಗಬೇಕು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಂದ ಮಾರ್ಗದರ್ಶನ ಪಡೆದು ಸಾಧನೆಯತ್ತ ಸಾಗಬೇಕು ಎಂದರಲ್ಲದೆ,
ಶಿಕ್ಷಣಸಂಸ್ಥೆಯಲ್ಲಿ ಮಕ್ಕಳಿಗೆ ಬೋಧಿಸುವ ಶಿಕ್ಷಕರು ಮೂರು ಮುಖ್ಯ ವಿಚಾರಗಳನ್ನು ನೆನಪಿನಲ್ಲಿಡಬೇಕು, ಶಿಕ್ಷಕರು ತಾವು ಬೋಧಿಸುತ್ತಿರುವ ಶಾಲೆ, ಬೋಧಿಸುತ್ತಿರುವ ವಿದ್ಯಾರ್ಥಿಗಳು ಹಾಗೂ ಬೋಧಿಸುವ ವಿಷಯವನ್ನು ಪ್ರೀತಿಸುವ ಮೂಲಕ ವಿದ್ಯಾರ್ಥಿ ಕೇಂದ್ರಿತವಾದ ಬೋಧನೆಯನ್ನು ಮಾಡಿ, ಶಿಕ್ಷಣಸಂಸ್ಥೆಯ ಹೆಸರನ್ನು ಿನ್ನು ಎತ್ತರಕ್ಕೆ ಬೆಳೆಸಬೇಕಿದೆ ಎಂಬುದಾಗಿ ಹೇಳಿದರು.
ಎಂಸಿಇಎಸ್ ಶಿವಮೊಗ್ಗ ಕೇಂದ್ರದ ಶಿಕ್ಷಣ ಕಾರ್ಯದರ್ಶಿಗಳಾದ ಫಾದರ್ ವೀರೇಶ್ ವಿ ಮೊರಾಸ್ ಮಾತನಾಡಿ, ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ನೀಡುವ ಗುಣಮಟ್ಟದ ಶಿಕ್ಷಣ ಈ ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು, ಪ್ರತಿಯೊಬ್ಬರ ಜೀವನದಲ್ಲಿ ಮೌಲ್ಯದ ಬದುಕನ್ನು ಬಾಳಲು ಶಿಕ್ಷಣವೇ ನಮಗೆ ದಾರಿದೀಪವಾಗಿದೆ ಎಂಬುದಾಗಿ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ನಾಗೇಂದ್ರ ನಾಯ್ಕ್, ತಾಲ್ಲೂಕು ಪತ್ರಕರ್ತರಸಂಘದ ಅಧ್ಯಕ್ಷರಾದ ಆಲೂರುಹನುಮಂತರಾಯಪ್ಪ, ನಗರಸಭೆ ಸದಸ್ಯೆ ಮೊದಲಮೇರಿ, ಸಂತ ಅನ್ನಮ್ಮ ಕಾಂನ್ವೆಂಟ್ ಶಾಲೆಯ ಸುಪೀರಿಯರ್ ಗಳಾದ ಸಿಸ್ಟರ್ ಎಲ್ಸಮ್ಮ, ಸಿಸ್ಟರ್ ಮೆಟ್ಟಿ, ಇವರುಗಳನ್ನು ಅಸಂಶನ್ ಶಿಕ್ಷಣಸಂಸ್ಥೆ ವತಿಯಿಂದ ಶಾಲು ಹೊದಿಸಿ, ಸನ್ಮಾನಿಸಿ, ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಮಹಾಧರ್ಮಕ್ಷೇತ್ರದ ಗುರುಶ್ರೇಷ್ಠರಾದ ಫಾದರ್ ಫ್ರಾನ್ಸಿಸ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂಸಿಇಎಸ್ ಶಿವಮೊಗ್ಗ ಕೇಂದ್ರ ಶಿಕ್ಷಣ ಕಾರ್ಯದರ್ಶಿ ಫಾದರ್ ವೀರೇಶ್ ವಿ ಮೊರಾಸ್, ಅಸಂಶನ್ ಶಿಕ್ಷಣಸಂಸ್ಥೆಯ ವ್ಯವಸ್ಥಾಪಕರಾದ ಫಾದರ್ ಫ್ರಾಂಕ್ಲಿನ್ ಡಿಸೋಜ ಮತ್ತು ಅಸಂಶನ್ ಇಂಗ್ಲೀಷ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾ ಯರಾದ ಫಾದರ್ ನೆಲ್ಸನ್ ಡಿಸೋಜಾ, ಕನ್ನಡ ಪ್ರೌಢಶಾಲೆ ಮುಖ್ಯೋಪಾಧ್ಯಾ ಯರಾದ ಹೆನ್ರಿ ಕ್ರಾಸ್, ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾ ಯಿನಿ ಸಿಸ್ಟರ್ ಮಾರ್ತಾ, ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾ ಯರಾದ ಸಿಸ್ಟರ್ ವೆರೋನಿಕಾ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಆರಂಭದಲ್ಲಿ ಫಾದರ್ ಫ್ರಾಂಕ್ಲಿನ್ ಡಿಸೋಜ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಶಿಕ್ಷಕ ಜನಾರ್ಧನ್ ವಂದಿಸಿದರು. ಶಿಕ್ಷಕರಾದ ಮೈಲು ಸ್ವಾಮಿ, ಶ್ರೀಮತಿ ಅನಿತಾ ಕಾರ್ಯಕ್ರಮ ನಿರೂಪಿಸಿದರು.

Latest News >>

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ದೇವರ ಎತ್ತುಗಳ ನಿರ್ವಹಣೆಗೆ ಟ್ರಸ್ಟ್ ರಚನೆಗೆ ಪ್ರೇರೇಪಿಸಿ

ಚಿತ್ರದುರ್ಗ ಜೂನ್.14: ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ದೇವರ ಎತ್ತುಗಳು ಹೆಚ್ಚಾಗಿವೆ. ಈ ಜಾನುವಾರುಗಳ ನಿರ್ವಹಣೆಗೆ ಟ್ರಸ್ಟ್...

ಅಂತರಾಷ್ಟ್ರೀಯ ಯೋಗ ದಿನಾಚರಣೆ: ಯೋಗೋತ್ಸವ ಕಾರ್ಯಕ್ರಮ

ಚಿತ್ರದುರ್ಗ ಜೂನ್.14: ಚಿತ್ರದುರ್ಗ ನಗರದ ಮಠದ ಕುರುಬರಹಟ್ಟಿ ಸಮೀಪದ ಎಸ್‍ಜೆಎಂ ವಸತಿ ಶಾಲೆಯಲ್ಲಿ ಶುಕ್ರವಾರ ಜಿಲ್ಲಾ ಆಯುಷ್ ಇಲಾಖೆ,...

ಕುಡಿಯುವ ನೀರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆ ಅವಘಡ ಸಂಭವಿಸಿದಂತೆ ಎಚ್ಚರಿಕೆಯಿಂದ ಕ್ರಮ ವಹಿಸಿ

ಚಿತ್ರದುರ್ಗ ಜೂನ್14: ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಂತಹ ಯಾವುದೇ ಅಹಿತಕರ ಅವಘಡ ಸಂಭವಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ಅಗತ್ಯ...

ಮೃತ ರೇಣುಕಾಸ್ವಾಮಿ ಮನೆಗೆ ಮಾಜಿಉಪಮುಖ್ಯಮಂತ್ರಿ ಗೋವಿಂದಕಾರಜೋಳ,ಮಾಜಿ ಶಾಸಕರಾದ ತಿಪ್ಪಾರೆಡ್ಡಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಚಿತ್ರದುರ್ಗ: ನಗರದ ವಿ.ಆರ್.ಎಸ್ ಬಡಾವಣೆಯಲ್ಲಿರುವ ರೇಣುಕಾ ಸ್ವಾಮಿಯ ಕೊಲೆಯಾದ ಸಂಗತಿ ತಿಳಿದು ಮನಸ್ಸಿಗೆ ಅಘಾತವಾಗಿದ್ದು ಇಂದು ಅವರ ಮನೆಗೆ...

ನಾಲ್ಕು ಸಾವಿರಕ್ಕೂ ಹೆಚ್ಚಿನ ಜನರಿರುವ ಆದಿವಾಲ ಗ್ರಾಮಕ್ಕೆಒಂದು ರುದ್ರಭೂಮಿಯೇ ಇಲ್ಲದಂತಾಗಿದೆ.

ಹಿರಿಯೂರು: ಆದಿವಾಲ ಗ್ರಾಮದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚಿನ ಜನರಿದ್ದಾರೆ. ಆದರೆ ಆ ಗ್ರಾಮದ ಜನರಿಗೆ ಒಂದು ರುದ್ರ ಭೂಮಿಯೇ...

*ಸಫಾಯಿ ಕರ್ಮಚಾರಿಗಳಿಗೆ ಕಾನೂನಾತ್ಮಕವಾಗಿ ಎಲ್ಲ ಸೌಲಭ್ಯಗಳು ಸೀಗಬೇಕು; ವಿಳಂಬ, ತೀರಸ್ಕಾರ ಮಾಡಿದಲ್ಲಿ ಸಂಬಂಧಿಸಿದವರ ಮೇಲೆ ಕ್ರಮ: ರಾಷ್ಟ್ರೀಯ ಸಫಾಯಿ ಕಾರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್

ಧಾರವಾಡ ಜೂನ್.13: ಸಫಾಯಿ ಕರ್ಮಚಾರಿಗಳಾಗಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೆ ರಾಷ್ಟ್ರೀಯ ಮತ್ತು ರಾಜ್ಯ ಸರಕಾರಗಳಿಂದ ಕಾನೂನಾತ್ಮಕವಾಗಿ...

ಅದ್ದೂರಿ ಭಗೀರಥ ಜಯಂತೋತ್ಸವ ಕಾರ್ಯಕ್ರಮ ಉಪ್ಪಾರ ಸಮಾಜದ ಯುವಗೌರವಾಧ್ಯಕ್ಷ ಕನಕದಾಸ್

ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಜೂನ್ 14ರಂದು ಹಿರಿಯೂರು: ತಾಲ್ಲೂಕಿನ ಆಲೂರು ಗ್ರಾಮದಲ್ಲಿ ದಿನಾಂಕ 14-ಜೂನ್-2024 ನೇ ಶುಕ್ರವಾರದಂದು ಶ್ರೀ...

ನೂತನ ಸಂಸದ ಗೋವಿಂದ ವಿವಿಧ ಕ್ಷೇತ್ರಗಳಲ್ಲಿ ಕೃತಜ್ಞತಾ ಸಮಾವೇಶ.

ಚಿತ್ರದುರ್ಗ ಜೂ. 12 ಚಿತ್ರದುರ್ಗದ ನೂತನ ಸಂಸದರಾದ ಗೋವಿಂದ ಕಾರಜೋಳರವರು ತಮ್ಮ ಗೆಲುವಿಗೆ ಶ್ರಮಿಸಿದ ಮತದಾರರು ಮತ್ತು ಬಿಜೆಪಿ ಹಾಗೂ ಜೆಡಿಎಸ್...

ಗ್ರಾಮೀಣ ಮತ್ತು ನಗರ ಕುಂಚಿಟಿಗ ಎಂದುತಾರತಮ್ಯ ಮಾಡದಂತೆ ಸಮಸ್ಥ ಕುಂಚಿಟಿಗರಿಗೆ ಕೇಂದ್ರ ಓಬಿಸಿ ಮೀಸಲಾತಿ ಕಲ್ಪಿಸಲು ಆಗ್ರಹ :ಎಸ್.ವಿ.ರಂಗನಾಥ್

ಹಿರಿಯೂರು: ಕುಂಚಿಟಿಗರಿಗೆ ಗ್ರಾಮೀಣ ಮತ್ತು ನಗರ ಕುಂಚಿಟಿಗ ಎಂದು ತಾರತಮ್ಯ ಮಾಡದಂತೆ ಸಮಸ್ಥ ಕುಂಚಿಟಿಗರಿಗೆ ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page