ವಾಣಿವಿಲಾಸ ಸಾಗರ ಜಲಾಶಯದ ರಕ್ಷಕಿಯಾದ ಕಣಿವೆಮಾರಮ್ಮ ದೇವಿಯ ಅದ್ದೂರಿ ರಥೋತ್ಸವ ಶುಕ್ರವಾರ ಡ್ಯಾಂ ಬಳಿ ಸಂಭ್ರಮದಿಂದ ನಡೆಯಿತು.

by | 11/05/24 | ಸುದ್ದಿ


ಹಿರಿಯೂರು:
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ಕೆಳಭಾಗದಲ್ಲಿರುವ ನೆಲೆಸಿರುವ ವಾಣಿವಿಲಾಸ ಸಾಗರ ಜಲಾಶಯದ ರಕ್ಷಕಿ ಎಂದೇ ಪ್ರಸಿದ್ದಳಾದ ಕಣಿವೆಮಾರಮ್ಮ ದೇವಿಯ ವೈಭವದ ರಥೋತ್ಸವ ಶುಕ್ರವಾರ ಜಲಾಶಯದ ಬಳಿ ಇರುವ ದೇವಾಲಯದ ಆವರಣದಲ್ಲಿ ಸಡಗರ-ಸಂಭ್ರಮದಿಂದ ನೆರವೇರಿತು.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಣಿವೆ ಮಾರಮ್ಮ ದೇವಿಯ ವಿಗ್ರಹ ಜಲಾಶಯದ ಕಡೆ ಮುಖ ಮಾಡಿ ಅಣೆಕಟ್ಟೆಯನ್ನು ಕಾಲಲ್ಲಿ ಒದ್ದು ಕುಳಿತಿರುವ ಭಂಗಿಯಲ್ಲಿರುವುದರಿಂದ ಈ ಭಾಗದ ಜನರಲ್ಲಿ ಕಣಿವೆ ಮಾರಮ್ಮ ದೇವಿಯು ವಾಣಿ ವಿಲಾಸ ಸಾಗರದ ರಕ್ಷಕಿ ಎಂಬ ನಂಬಿಕೆ ಮನೆಮಾಡಿದೆ. ಎರಡು ಗುಡ್ಡಗಳ ನಡುವಿನ ಪ್ರದೇಶದಲ್ಲಿ ವಾಣಿವಿಲಾಸ ಸಾಗರ ಅಣೆಕಟ್ಟೆ ನಿರ್ಮಿಸಲಾಗಿದೆ
ಎರಡು ಗುಡ್ಡಗಳ ನಡುವಿನ ಕಣಿವೆಯಂತಹ ಪ್ರದೇಶದಲ್ಲಿ ಈ ದೇಗುಲವನ್ನು ನಿರ್ಮಿಸಿರುವ ಕಾರಣ ಈ ದೇವಿಗೆ ಕಣಿವೆಮಾರಮ್ಮ ದೇವಿ ಎಂಬ ಹೆಸರು ಬಂದಿದೆ. ಈ ದೇವಿಯ ದರ್ಶನಕ್ಕೆ ಸ್ಥಳೀಯರಲ್ಲದೆ ನೆರೆಯ ರಾಜ್ಯಗಳಾದ ಆಂದ್ರಪ್ರದೇಶ, ತಮಿಳುನಾಡಿನಿಂದಲೂ ನೂರಾರು ಜನ ಜಾತ್ರೆಗೆ ಬಂದು ತಮ್ಮ ಹರಕೆ ತೀರಿಸುವುದು ರೂಡಿಯಲ್ಲಿದೆ.
ಜಾತ್ರೋತ್ಸವದ ನಿಮಿತ್ತ ಗಂಗಾಪೂಜೆ, ಜಲಧಿ ಉತ್ಸವ, ಹೋಮ, ಸಿಡಿ ಉತ್ಸವ, ಹೋಮ ಹವನ,ಕಳಸ ಪ್ರತಿಷ್ಟಾಪನೆ, ದೇವಿಗೆ ನೈವೇದ್ಯ, ಆರತಿ,ಅನ್ನಸಂತರ್ಪಣೆ ಸೇರಿ ಇತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಹಸಿರು ತೋರಣ ಹಾಗೂ ಬಣ್ಣ-ಬಣ್ಣದ ಬಟ್ಟೆ ಹಾಗೂ ಹೂಮಾಲೆಗಳಿಂದ ಅಲಂಕರಿಸಿದ ರಥದಲ್ಲಿ ದೇವಿಯ ಉತ್ಸವಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು.
ಈ ಸರ್ವಾಲಂಕಾರಗೊಂಡ ರಥಕ್ಕೆ ದೇವಸ್ಥಾನ ಸಮಿತಿ ಹಾಗೂ ಮುಖ್ಯಸ್ಥರಿಂದ ಕಳಸಪೂಜೆ, ಈಡುಗಾಯಿ, ಬಲಿಅನ್ನ, ಕುಂಬಳಕಾಯಿ ಅರ್ಪಣೆ ಮಹಾಮಂಗಳಾರತಿ ನಂತರ ಸಂಜೆ 4 ಗಂಟೆಗೆ ಭಕ್ತರು ತೇರನ್ನು ದೇವಸ್ಥಾನದ ಆವರಣದಿಂದ ಎಳೆದರು. ನೆರೆದಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ಮಂಡಕ್ಕಿ ತೂರಿ ಭಕ್ತಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಸಿಡಿ ಉತ್ಸವ ಸೇರಿದಂತೆ ಅಮ್ಮನವರು ಗುಡ್ಡ ಇಳಿಯುವುದು,ಭರಮಗಿರಿಕೆರೆ ಹಿಂಭಾಗದಲ್ಲಿ ದೊಡ್ಡ ಎಡೆ ಸೇವೆ ಮುಗಿಸಿಕೊಂಡು ಅಮ್ಮನವರು ಗುಡ್ಡ ಹತ್ತುವುದು,ಚಪ್ಪರ ಇಳಿಸುವುದು, ಸಣ್ಣ ಪುಲ್ಲಪ್ಪ ಮನೆ ಅಂಗಳದ ಬೇವಿನ ಮರದ ಬಳಿ ವಿಶೇಷ ಪೂಜೆ ಇತರ ಧಾರ್ಮಿಕ ಕಾರ್ಯಗಳನ್ನು ವಿಧಿ ವಿಧಾನಗಳಿಂದ ನೆರವೇರಿಸಲಾಯಿತು.
ಈ ಜಾತ್ರೋತ್ಸವ ಪ್ರಯುಕ್ತ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಳನ್ನು ಹಮ್ಮಿಕೊಳ್ಳಲಾಗಿದ್ದು ಡೊಳ್ಳು ಕುಣಿತ ವೀರಗಾಸೆ, ರಸಮಂಜರಿ ಸೇರಿದಂತೆ ಇತರ ಧಾರ್ಮಿಕ ಸೊಗಡಿನ ಕಾರ್ಯಕ್ರಮಗಳು ನೆರವೇರಿದವು. ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು.
ಈ ರಥೋತ್ಸವ ಸಂದರ್ಭದಲ್ಲಿ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ದೇಗುಲಕ್ಕೆ ಭೇಟಿ ನೀಡಿ ಈ ಭಾಗದ ಶಕ್ತಿ ದೇವತೆ ಕಣಿವೆ ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಸಕ್ತವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆ-ಬೆಳೆಯಾಗಿ ಜಿಲ್ಲೆಯ ಜನರು ಹಾಗೂ ರೈತರು ಸಮೃದ್ಧಯುತವಾದ ಹಾಗೂ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂಬುದಾಗಿ ಅವರು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ರೈತ ಕಾರ್ಮಿಕ ಸಂಘದ ಮುಖಂಡರು, ದೇವಸ್ಥಾನದ ಸಮಿತಿ ಮುಖ್ಯಸ್ಥರು, ಆದಿಜಾಂಬವ, ಯಾದವ, ತಳವಾರ, ಹಳ್ಳಿಕಾರ್, ವಾಲ್ಮಿಕಿ ವಂಶಸ್ಥರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page