ಹಿರಿಯೂರು.ನ.19 ನಗರದ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಶ್ರೀ ತೇರುಮಲ್ಲೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಭಾನುವಾರ ಧಾರ್ಮಿಕ ದತ್ತಿ ಇಲಾಖೆ, ತಾಲೂಕು ಆಡಳಿತ ಹಾಗೂ ದೇವಸ್ಥಾನ ಸಮತಿವತಿಯಿಂದ ಗಿರಿಜಾ ಕಲ್ಯಾಣೋತ್ಸವ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಭಾನುವಾರ ಬೆಳಗ್ಗೆ ಯಿಂದಲೇ ದೇವಸ್ಥಾನದಲ್ಲಿ ಗಂಗಾ ಮಾತೆ, ಗಣಪತಿ ಪೂಜೆ, ದೀಪಾರಾಧನೆ,ಪುಣ್ಯಾವಾಚನ,ನಾಂದಿ ಪೂಜೆ, ನವಗ್ರಹರಾಧನೆ, ಕಳಸಾರಾಧನೆ, ಕಂಕಣರಾಧನೆ, ಗಿರಿಜಾ ಕಲ್ಯಾಣಮಹೋತ್ಸವ, ಮಂಗಲ್ಯಧಾರಣೆ,ಹೋಮ ಹವನ, ಮಹಾ ಮಂಗಳರಾತಿ,ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಿರಿಯೂರು ತಾಲೂಕಿನ ಹಿಂದೂಧಾರ್ಮಿಕ ದತ್ತಿ ದೇವಸ್ಥಾನಗಳ ಆವರಣದಲ್ಲಿ ನೆರವೇರಿಸಲಾಯಿತು ಕಾರ್ಯಕ್ರಮದಲ್ಲಿ ತಾಲೂಕು ಆಡಳೀತ, ಧಾರ್ಮಿಕ ದತ್ತಿ ಇಲಾಖೆ, ಹಾಗೂ ಅಪಾರ ಭಕ್ತರು ಪಾಲ್ಗೊಂಡಿದ್ದರು.

0 Comments